700 ಕಿ.ಮೀ..ದೂರದಿಂದ ಬಂದರೂ ನೀಟ್ ಪರೀಕ್ಷೆ ಮಿಸ್ ಮಾಡಿಕೊಂಡ ವಿದ್ಯಾರ್ಥಿ, ಕಾರಣವೇನು ಗೊತ್ತಾ?

in ಕನ್ನಡ ಮಾಹಿತಿ 76 views

ಬಿಹಾರದ ದರ್ಭಂಗಾ ವಿದ್ಯಾರ್ಥಿ ಸಂತೋಷ್ ಕುಮಾರ್ ಯಾದವ್ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್)ಗೆ ಹಾಜರಾಗಲು ಕೋಲ್ಕತ್ತಾಗೆ 700 ಕಿಲೋಮೀಟರ್ ದೂರ ಪ್ರಯಾಣಿಸಿದರು. 24 ಗಂಟೆಗಳಿಗಿಂತ ಹೆಚ್ಚು ಕಾಲ ಪ್ರಯಾಣ ಮಾಡಿದ ಸಂತೋಷ್ ಕುಮಾರ್ ಯಾದವ್, ಈ ವೇಳೆ ಎರಡು ಬಸ್ಸುಗಳನ್ನು ಹಿಡಿದು ಕೊನೆಗೂ ಪರೀಕ್ಷಾ ಕೇಂದ್ರ ತಲುಪಿದರೂ ಅವರು ಪರೀಕ್ಷೆ ಬರೆಯಲು ಸಾಧ್ಯವಾಗಲಿಲ್ಲ. ಏಕೆ ಗೊತ್ತಾ?. ಪರೀಕ್ಷೆಗೆ 10 ನಿಮಿಷ ತಡವಾಗಿ ಹಾಜರಾಗಿದ್ದಕ್ಕೆ ಅವರಿಗೆ ಪರೀಕ್ಷೆ ಬರೆಯಲು ಅವಕಾಶ ಕೊಡಲಿಲ್ಲ. ಹೌದು, ಕೋಲ್ಕತ್ತಾದ ಪೂರ್ವದಲ್ಲಿರುವ ಟೌನ್ಶಿಪ್ ಸಾಲ್ಟ್ ಲೇಕ್ನಲ್ಲಿರುವ ಪರೀಕ್ಷಾ ಕೇಂದ್ರಕ್ಕೆ ಯಾದವ್ಗೆ ಪ್ರವೇಶಿಸಲು ಅವಕಾಶವಿರಲಿಲ್ಲ. ಯಾದವ್ ಅಧಿಕಾರಿಗಳಿಗೆ ಮನವಿ ಮಾಡಿದರೂ ತಡವಾಗಿರುವುದಾಗಿ ಹೇಳಿ ಅವಕಾಶ ನೀಡಲಿಲ್ಲ. ಮಧ್ಯಾಹ್ನ 2 ಗಂಟೆಗೆ ಪರೀಕ್ಷೆ ಆರಂಭವಾಗಿದ್ದು, ಮಧ್ಯಾಹ್ನ 1.40 ರ ಸುಮಾರಿಗೆ ಯಾದವ್ ಕೇಂದ್ರವನ್ನು ತಲುಪಿದರು. ಕೇಂದ್ರಕ್ಕೆ ಪ್ರವೇಶಿಸಲು ಕೊನೆಯ ಗಡುವು ಮಧ್ಯಾಹ್ನ 1.30 ಎಂದು ಹೇಳಲಾಗಿದೆ. ಇದೀಗ ಯಾದವ್ ಅವರು ಒಂದು ವರ್ಷ ಮಿಸ್ ಆಯಿತು ಎಂದು ದುಃಖ ವ್ಯಕ್ತಪಡಿಸಿದ್ದಾರೆ.

Advertisement


ತಾನು ಎದುರಿಸಿದ ಅಗ್ನಿಪರೀಕ್ಷೆಯನ್ನು ವಿವರಿಸಿರುವ ಸಂತೋಷ್ ಕುಮಾರ್ ಯಾದವ್, “ನಾನು ಮುಜಫರ್ಪುರವನ್ನು ತಲುಪಲು ಶನಿವಾರ ಬೆಳಿಗ್ಗೆ 8 ಗಂಟೆಗೆ ದರ್ಭಂಗಾದಲ್ಲಿ ಬಸ್ ಹತ್ತಿದೆ. ಅಲ್ಲಿಂದ ನಾನು ಪಾಟ್ನಾಕ್ಕೆ ಬಸ್ ತೆಗೆದುಕೊಂಡೆ. ಆದರೆ ಮಾರ್ಗದಲ್ಲಿ ಟ್ರಾಫಿಕ್ ಜಾಮ್ ಇತ್ತು. ನನಗೆ ಸುಮಾರು ಆರು ಗಂಟೆಗಳ ಕಾಲ ವಿಳಂಬವಾಯಿತು. ನಾನು ಪಾಟ್ನಾದಿಂದ ರಾತ್ರಿ 9 ಗಂಟೆಗೆ ಮತ್ತೊಂದು ಬಸ್ ತೆಗೆದುಕೊಂಡೆ. ಮಧ್ಯಾಹ್ನ 1.06 ಕ್ಕೆ ಬಸ್ ನನ್ನನ್ನು ಸೀಲ್ಡಾ ನಿಲ್ದಾಣದ ಬಳಿ (ಕೋಲ್ಕತ್ತಾದ) ಇಳಿಸಿತು. ಟ್ಯಾಕ್ಸಿ ಮೂಲಕ ಪರೀಕ್ಷಾ ಕೇಂದ್ರಕ್ಕೆ ಬಂದೆ” ಎಂದು ತಿಳಿಸಿದ್ದಾರೆ.

Advertisement

“ವಿದ್ಯಾರ್ಥಿಗಳು ತೊಂದರೆ ಎದುರಿಸುತ್ತಾರೆ ಎಂದು ನಮಗೆ ತಿಳಿದಿತ್ತು. ಮೆಟ್ರೋ ರೈಲ್ವೆ ವಿದ್ಯಾರ್ಥಿಗಳನ್ನು ಕೋಲ್ಕತ್ತಾದೊಳಗೆ ಸಂಪರ್ಕಿಸಬಹುದು. ಆದರೆ ಇತರ ಜಿಲ್ಲೆಗಳ ಕಥೆ ಏನು?. ವಿದ್ಯಾರ್ಥಿಗಳಿಗೆ ಪ್ರಯಾಣಿಸಲು ಸಹಾಯ ಮಾಡಲು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶನಿವಾರ ರಾಜ್ಯವ್ಯಾಪಿ ಲಾಕ್ ಡೌನ್ ಅನ್ನು ರದ್ದುಗೊಳಿಸಿದರು. ಆದರೆ ಸಾಂಕ್ರಾಮಿಕ ಪರಿಸ್ಥಿತಿಯಿಂದಾಗಿ ಅವರು ಇನ್ನೂ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ”ಎಂದು ಕೋಲ್ಕತ್ತಾ ಶಿಕ್ಷಣ ಸಚಿವ ಮತ್ತು ತೃಣಮೂಲ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಾರ್ಥ ಚಟರ್ಜಿ ಹೇಳಿದರು.

Advertisement

Advertisement

ಮೋಡಿ ಮಾಂತ್ರಿಕರು ಪ್ರಸಿದ್ಧಜ್ಯೊತಿಷಿಗಳಾದ ಶ್ರೀ ಮಂಜುನಾಥ್ ಭಟ್ ಅವರು ಗಂಡ ಹೆಂಡತಿ ಕಲಹ, ಡೈವರ್ಸ ಪ್ರಾಬ್ಲಮ್, ಆಸ್ತಿಯಲ್ಲಿ ಕದನ, ಕೋರ್ಟ್ ಕೇಸ್, ಆರೋಗ್ಯದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಂತಾನ ಫಲ, ಸಾಲ ಭಾದೆ, ಮದುವೆ ವಿಚಾರದಲ್ಲಿ ವಿಘ್ನ , ಅತ್ತೆ ಸೊಸೆ ಕಲಹ, ನಿಮ್ಮ ಮನದಾಳದ ಯಾವುದೇ ಗುಪ್ತ ಸಮಸ್ಯೆ  ಇದ್ದರೆ ಜೀವನದಲ್ಲಿ ಜಿಗುಪ್ಸೆ ಹೊಂದ್ದಿದರೆ ನಿಮ್ಮ ಒಂದೇ ಒಂದು ಫೋನ್ ಕರೆ 9591706765 ನಿಮ್ಮ ಜೀವನವನ್ನೇ ಬದಲಾಯಿಸಿ ಬಿಡುತ್ತದೆ.
ವಿಶೇಷ  ಸೂಚನೆ : ಕೊಳ್ಳೆಗಾಲದ ಮಂತ್ರ ಶಕ್ತಿಯಿಂದ ಸ್ತ್ರೀ- ಪುರುಷ ವಶೀಕರಣ 3 ದಿನಗಳಲ್ಲಿ 100% ಪರಿಹಾರ ಶತಸಿದ್ಧ. ಅಸಾದ್ಯವಾದದ್ದು ಇಲ್ಲಿ ಸಾದ್ಯ.

Advertisement
Share this on...