ಪಿಆರ್​​​ಕೆ ಬ್ಯಾನರ್ ವತಿಯಿಂದ ಹೊಸ ಚಿತ್ರ ಘೋಷಣೆ…ಈ ಚಿತ್ರದ ವಿಶೇಷತೆ ಏನು ಗೊತ್ತಾ…?

in ಸಿನಿಮಾ 76 views

ಪಿಆರ್​​​​​ಕೆ ಪ್ರೊಡಕ್ಷನ್ಸ್​​, ತಾಯಿ ಪಾರ್ವತಮ್ಮ ರಾಜ್​ಕುಮಾರ್ ಹೆಸರಿನಲ್ಲಿ ಡಾ. ಪುನೀತ್ ರಾಜ್​ಕುಮಾರ್ ಸ್ಥಾಪಿಸಿದ ಸಿನಿಮಾ ನಿರ್ಮಾಣ ಸಂಸ್ಥೆ. 20 ಜುಲೈ 2017 ರಂದು ಈ ಸಂಸ್ಥೆ ಆರಂಭವಾಯ್ತು. ಅಂದಿನಿಂದ ಇದುವರೆಗೂ ಪುನೀತ್ ರಾಜ್​​ಕುಮಾರ್ ಪತ್ನಿ ಅಶ್ವಿನಿ, ಈ ಸಂಸ್ಥೆಯ ಜವಾಬ್ದಾರಿ ವಹಿಸಿಕೊಂಡಿದ್ದರೂ ಪತಿ ಪುನೀತ್​ ಜೊತೆ ಚರ್ಚಿಸಿ ಅಶ್ವಿನಿ ಎಲ್ಲಾ ನಿರ್ಧಾರ ತೆಗೆದುಕೊಳ್ಳುತ್ತಿದ್ದರು. ಇದುವರೆಗೂ ಈ ಚಿತ್ರ ನಿರ್ಮಾಣ ಸಂಸ್ಥೆಯಿಂದ 8 ಸಿನಿಮಾಗಳು ತಯಾರಾಗಿವೆ. ಇದೀಗ ಪುನೀತ್ ರಾಜ್​​​ಕುಮಾರ್ ನಮ್ಮೊಂದಿಗೆ ಇಲ್ಲ. ಅಶ್ವಿನಿ ಅವರಿಗೆ ಜವಾಬ್ದಾರಿ ಹೆಚ್ಚಾಗಿದೆ. ಅಪ್ಪು ಅನುಪಸ್ಥಿತಿಯಲ್ಲಿ ಪಿಆರ್​​ಕೆ ವತಿಯಿಂದ ಮತ್ತೊಂದು ಹೊಸ ಸಿನಿಮಾ ಘೋಷಣೆಯಾಗಿದೆ. ಈ ವಿಚಾರವನ್ನು ಸ್ವತ: ಅಶ್ವಿನಿ ಪುನೀತ್ ರಾಜ್​​ಕುಮಾರ್ ತಮ್ಮ ಸೋಷಿಯಲ್ ಮೀಡಿಯಾ ಮೂಲಕ ತಿಳಿಸಿದ್ದಾರೆ.

Advertisement

Advertisement

ಫೋಟೋ ಕೃಪೆ: ಪಿಆರ್​​​​​ಕೆ ಪ್ರೊಡಕ್ಷನ್ಸ್​​ ಫೇಸ್​​​​​ಬುಕ್ ಪೇಜ್​​​​

Advertisement

ಪಿಆರ್​​ಕೆ ಬ್ಯಾನರ್ ಮೂಲಕ ತಯಾರಾಗುತ್ತಿರುವ 9ನೇ ಸಿನಿಮಾಗೆ ಆಚಾರ್​​ & ಕೋ ಎಂದು ಹೆಸರಿಡಲಾಗಿದೆ. ವಿಭಿನ್ನ ಟೈಟಲ್ ಹೊಂದಿರುವ ಈ ಚಿತ್ರ, 60ನೇ ದಶಕದಲ್ಲಿ ಬೆಂಗಳೂರಿನಲ್ಲಿ ನಡೆದ ನೈಜ ಘಟನೆಯೊಂದರ ಆಧಾರಿತ ಸಿನಿಮಾ ಎನ್ನಲಾಗಿದೆ. ಈ ಚಿತ್ರವನ್ನು ಸಿಂಧು ಶ್ರೀನಿವಾಸ್ ಮೂರ್ತಿ ಎಂಬ ಮಹಿಳಾ ನಿರ್ದೇಶಕಿ ನಿರ್ದೇಶಿಸುತ್ತಿರುವುದು ವಿಶೇಷವಾಗಿದೆ. ಅಷ್ಟೇ ಅಲ್ಲ, ಚಿತ್ರಕ್ಕೆ ಬಿಂದು ಮಾಲಿನಿ ಸಂಗೀತ ನಿರ್ದೇಶನ, ಸೃಜನಾಜ್ಮಕ ನಿರ್ಮಾಪಕಿಯಾಗಿ ಡಾನಿಲಾ ಕೊರ್ರಿಯಾ ಸೇರಿ ಅನೇಕ ಮಹಿಳೆಯರು ಸಾಥ್ ನೀಡುತ್ತಿರುವುದು ವಿಶೇಷವಾಗಿದೆ. ಇತ್ತೀಚೆಗೆ ಚಿತ್ರಕ್ಕೆ ಸರಳವಾಗಿ ಮುಹೂರ್ತ ನೆರವೇರಿದೆ. ಚಿತ್ರದ ಬಗ್ಗೆ ಮತ್ತಷ್ಟು ಮಾಹಿತಿಯನ್ನು ಪಿಆರ್​​ಕೆ ಸಂಸ್ಥೆ ಶೀಘ್ರವೇ ಹಂಚಿಕೊಳ್ಳಲಿದೆ.

Advertisement

ಪಿಆರ್​​​ಕೆ ಬ್ಯಾನರ್ ವತಿಯಿಂದ ತಯಾರಾದ ಮೊದಲ ಸಿನಿಮಾ ಕವಲು ದಾರಿ. ಇದಾದ ನಂತರ ಮಾಯಾಬಜಾರ್​​​, ಲಾ, ಫ್ರೆಂಚ್ ಬಿರಿಯಾನಿ, ಒನ್ ಕಟ್ ಟು ಕಟ್, ಫ್ಯಾಮಿಲಿ ಪ್ಯಾಕ್ ಸಿನಿಮಾಗಳು ತಯಾರಾಗಿ ಬಿಡುಗಡೆಯಾಗಿವೆ. ಮ್ಯಾನ್ ಆಫ್​ ದಿ ಮ್ಯಾಚ್​​​​​, O2 ಸಿನಿಮಾಗಳು ಚಿತ್ರೀಕರಣದ ಹಂತದಲ್ಲಿದೆ. ಪಿಆರ್​ಕೆ ಸಂಸ್ಥೆಯ ಹೊಸ ಸಿನಿಮಾಗೆ ಅಭಿಮಾನಿಗಳು ಸೋಷಿಯಲ್ ಮೀಡಿಯಾ ಮೂಲಕ ಶುಭ ಕೋರುತ್ತಿದ್ದಾರೆ. ವಿಭಿನ್ನ ಕಥೆಗಳು, ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪುನೀತ್ ರಾಜ್​ಕುಮಾರ್ ಈ ಚಿತ್ರ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿದರು. ಅದರಂತೆ ಈ ಬ್ಯಾನರ್ ಮೂಲಕ ಅನೇಕ ಹೊಸ ಪ್ರತಿಭೆಗಳು ಬೆಳಕಿಗೆ ಬಂದಿವೆ.

ಪುನೀತ್ ರಾಜ್​​ಕುಮಾರ್ ಚಿತ್ರಗಳ ಬಗ್ಗೆ ಹೇಳುವುದಾದರೆ, ಮಾರ್ಚ್​ 17 ರಂದು ಅಪ್ಪು ಅಭಿನಯದ ‘ಜೇಮ್ಸ್’ ಚಿತ್ರ ಬಿಡುಗಡೆಯಾಗಿತ್ತು. ಡಾರ್ಲಿಂಗ್ ಕೃಷ್ಣ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ‘ಲಕ್ಕಿ ಮ್ಯಾನ್’ ಚಿತ್ರದಲ್ಲಿ ಪುನೀತ್​ ಅತಿಥಿ ಪಾತ್ರದಲ್ಲಿ ನಟಿಸಿದ್ದು ಈ ಸಿನಿಮಾ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಇದರ ಜೊತೆಗೆ ಪುನೀತ್ ಕನಸಿನ ಪ್ರಾಜೆಕ್ಟ್​​​ ‘ಗಂಧದ ಗುಡಿ’ ರಿಲೀಸ್ ಆಗಬೇಕಿದೆ.
-ರಕ್ಷಿತ ಕೆ.ಆರ್​​​​.ಎಸ್

Advertisement
Share this on...