ಚಿತ್ರರಂಗದಿಂದ ಕಾಣೆಯಾಗಿದ್ದವರು ಸಿಕ್ಕಿಬಿದ್ದಿರುವುದು ಎಲ್ಲಿ ಗೊತ್ತಾ? ನೀವೇ ನೋಡಿ..

in ಮನರಂಜನೆ 182 views

ಪಡ್ಡೆ ಹುಡುಗರ ನಿದ್ದೆಗೆಡಿಸಿ, ಕನಸಲ್ಲಿ ಕಾಡುವ ಪೋರಿಯಾಗಿ, ಪ್ರತಿಯೊಬ್ಬ ಯುವಕರ ಮನಸಲ್ಲಿ ಮನೆ ಮಾಡಿಕೊಂಡು, ಬೆಳ್ಳಿತೆರೆಯ ರಾಣಿಯಾಗಿ ಮಿಂಚಿ, ಪ್ರೇಕ್ಷಕರಿಗೆ ಮನರಂಜನೆಯನ್ನು ನಾಯಕ ನಟಿಯರು ನೀಡುತ್ತ ಬರುತ್ತಿದ್ದಾರೆ. ಚಿತ್ರದಲ್ಲಿ ನಾಯಕ ಎಷ್ಟು ಮುಖ್ಯನೋ ನಾಯಕಿಯರು ಅಷ್ಟೇ ಮುಖ್ಯ. ಅವರ ಅಂದ ಚಂದವನ್ನು ಕಣ್ಣು ತುಂಬಿಕೊಳ್ಳಲೆಂದೇ ಅದೆಷ್ಟೋ ಮಂದಿ ಚಿತ್ರಮಂದಿರಕ್ಕೆ ಲಗ್ಗೇ ಇಡುತ್ತಾರೆ. ಆದರೇ ಅದೇಕೋ ಏನೋ ನಾಯಕ ನಟರು ಚಿತ್ರರಂಗದಲ್ಲಿ ಬೇರೂರುವಷ್ಟು ನಾಯಕಿಯರು ಉಳಿದುಕೊಳ್ಳುವುದಿಲ್ಲ. ಕೆಲವರು ಕಡಿಮೆ ಅವಧಿಯಲ್ಲೇ ಪ್ರೇಕ್ಷಕರನ್ನು ರಂಜಿಸಿ ನಂತರ ವಿವಾಹವಾಗಿ ದಾಂಪತ್ಯ ಜೀವನದತ್ತ ಹೊರಳುತ್ತಾರೆ. ಇನ್ನುಳಿದವರಂತು ನಾಪತ್ತೆಯಾಗಿಯೇ ಬಿಡುತ್ತಾರೆ. ದಿನ ಉರುಳಿದಂತೆ ಅಭಿಮಾನಿಗಳು ಕೂಡ ಅವರನ್ನು ಮರೆತು ಬಿಡುತ್ತಾರೆ. ಹೀಗೆ ಮರೆಯಾದಂತಹ ನಟಿ ಮಣಿಯರು ಇದೀಗ ಸಿಕ್ಕಿ ಬಿದ್ದಿರುವುದು ಟಿಕ್ ಟಾಕ್ ನಂತಹ ಸೋಶಿಯಲ್ ಮೀಡಿಯಾದಲ್ಲಿ.

Advertisement

Advertisement

ಸಾಕಷ್ಟು ಸಿನಿಮಾಗಳಲ್ಲಿ ನಾಯಕಿಯಾಗಿ ಮಿಂಚಿ ಪಡ್ಡೆ ಹುಡುಗರ ಹಾಟ್ ಫೇವರಿಟ್ ಆಗಿದಂತಹ ನಟಿ ನಿಖಿತಾ ತುಕ್ರಾಲ್​ ಹಾಗೂ ರೇಖಾ ವೇದವ್ಯಾಸ ಅವರನ್ನು ಟಿಕ್​ಟಾಕ್​ ಮತ್ತೆ ಅಭಿಮಾನಿಗಳ ಮುಂದೆ ತಂದು ನಿಲ್ಲಿಸಿದೆ. ಈ ನಟಿಯರು ಒಂದು ಕಾಲದಲ್ಲಿ ಕನ್ನಡ ಸಿನಿರಸಿಕರನ್ನು ಭರ್ಜರಿಯಾಗಿ ರಂಜಿಸಿದ್ದರು. ಅನೇಕ ಸ್ಟಾರ್ ನಟರ ನಟಿಸಿರುವ ಇವರು ಹಿಟ್​ ಚಿತ್ರಗಳನ್ನು ನೀಡಿದ್ದಾರೆ. ಇವರನ್ನು ನೋಡಲು ಅಭಿಮಾನಿಗಳು ಚಿತ್ರಮಂದಿರಗಳಿಗೆ ಹೋಗುತ್ತಿದ್ದರು ಆದರೆ, ನಂತರದ ದಿನಗಳಲ್ಲಿ ವಿವಾಹವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಇವರು, ಇದೀಗ ಸದ್ಯ ಟಿಕ್​ಟಾಕ್​ನಲ್ಲಿ ತಮ್ಮ ಮನರಂಜನೆ ಮುಂದುವರಿಸಿದ್ದಾರೆ.

Advertisement

 

Advertisement

 

View this post on Instagram

 

Good morning everyone have a lovely Sunday. ?#kannadasongs #actress #stayhome

A post shared by Nikita Thukral (@nikkithukral) on


ಇವರ ಸಾಲಿಗೆ ಎವರ್ ಬ್ಯೂಟಿ ಐಂದ್ರಿತ ರೈ ಕೂಡ ಸೇರ್ಪಡೆಯಾಗಿದ್ದು, ದೂದ್ ಪೇಡ ದಿಗಂತ್​ ಅವರನ್ನು ವಿವಾಹವಾದ ಬಳಿಕ ಐಂದ್ರಿತಾ ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವುದು ಕಡಿಮೆಯಾಗಿದೆ.

Advertisement
Share this on...