ಮಿಡಿದ ಹೃದಯಗಳು ಸಿನಿಮಾ ಖ್ಯಾತಿಯ ನಟಿ ನಿರೋಷ ಈಗ ಹೇಗಿದ್ದಾರೆ…?

in ಮನರಂಜನೆ/ಸಿನಿಮಾ 223 views

ಮಿಡಿದ ಹೃದಯಗಳು ಚಿತ್ರದಿಂದ ಕನ್ನಡ ಚಿತ್ರ ರಸಿಕರ ಹೃದಯಗಳಿಗೆ ಹತ್ತಿರವಾದ ದಕ್ಷಿಣ ಭಾರತ ಖ್ಯಾತ ನಟಿ ನಿರೋಷ. ರೆಬಲ್ ಸ್ಟಾರ್ ಅಂಬರೀಶ್, ಶ್ರುತಿ ಹಾಗೂ ನಿರೋಷ ಅವರು ನಟಿಸಿದ ಈ ಚಿತ್ರ ಕನ್ನಡ ಪ್ರೇಕ್ಷಕರ ಹೃದಯ ಮಿಡಿಯುವಂತೆ ಮಾಡಿತ್ತು. ನಟ ಶಶಿ ಕುಮಾರ್ ಅವರ ‘ಇಬ್ಬರ ಹೆಂಡಿರ ಮುದ್ದಿನ ಪೋಲಿಸ್’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದರು ನಟಿ ನಿರೋಷ.  ನಿರೋಷ ಅವರು ತಮಿಳಿನ ಖ್ಯಾತ ನಟರಾಗಿದ್ದ ಎಂ. ಆರ್ ರಾಧಾರವರ ಮಗಳು. ತಮಿಳಿನ ಖ್ಯಾತ ನಟಿ ರಾಧಿಕಾ ಅವರ ಸ್ವಂತ ಅಕ್ಕ. ನಿರೋಷ ಜನವರಿ 30, 1971ರಲ್ಲಿ ಶ್ರೀಲಂಕಾದ ಕೊಲಂಬೋದಲ್ಲಿ ಜನಿಸಿದರು. ನಿರೋಷ ಅವರಿಗೂ ತನ್ನ ತಂದೆ ಹಾಗೂ ಅಕ್ಕನಂತೆ ಸಿನಿಮಾಗಳಲ್ಲಿ ನಟಿಸಬೇಕು ಎಂಬ ಆಸೆ ಇತ್ತು. ಸಿನಿಮಾಗಳಲ್ಲಿ ನಟಿಸುವ ಆಸಕ್ತಿ ತೋರಿಸಿದರು. ಸಿನಿಮಾಗಳಲ್ಲಿ ಅವಕಾಶ ಪಡೆಯಲು ನಟಿ ನಿರೋಷ ಫೋಟೋ ಶೂಟ್ ಗಳನ್ನು ಮಾಡಿಸಿಕೊಂಡಿದ್ದರು. ಹೀಗೆ ಒಂದು ದಿನ ನಟಿ ರಾಧಿಕಾ ಅವರು ಕಮಲ್ ಹಾಸನ್ ಅವರ ಜೊತೆ ನಟಿಸುತ್ತಿದ್ದ ಚಿತ್ರವೊಂದರ ಶೂಟಿಂಗ್ ಸಮಯದಲ್ಲಿ ತನ್ನ ತಂಗಿ ನಿರೋಷಳಾ ಫೋಟೋಗಳನ್ನು ನಟ ಕಮಲ್ ಹಾಸನ್ ಅವರಿಗೆ ತೋರಿಸಿದರು.

Advertisement


ನಿರೋಷ ಅವರ ಫೋಟೋಗಳನ್ನು ನೋಡಿ ಕಮಲ್ ಹಾಸನ್ ಯಾರೋ ಈ ಹುಡುಗಿ ತುಂಬಾ ಸುಂದರವಾಗಿದ್ದಾಳೆ. ಈಕೆಯ ಕಣ್ಣುಗಳು ತುಂಬಾ ಅಟ್ರಾಕ್ಟಿವ್ ಆಗಿದೆ. ಯಾರು ಈ ಹುಡುಗಿ ಎಂದು ನಟಿ ರಾಧಿಕಾರವರನ್ನು ಕೇಳಿದರು ಕಮಲ್ ಹಾಸನ್. ಆಗ ರಾಧಿಕಾ ಸರ್ ಇವಳು ನನ್ನ ತಂಗಿ ಯಾವುದಾದರೂ ಸಿನಿಮಾಗಳಲ್ಲಿ ಅವಕಾಶಗಳು ಇದ್ದರೆ ನೋಡಿ ಎಂದು ಹೇಳಿದರು. ನಂತರ ಕಮಲ್ ಹಾಸನ್ ಅವರು ತಮಿಳಿನ ಖ್ಯಾತ ನಿರ್ದೇಶಕ ಮಣಿರತ್ನಂ ರವರಿಗೆ ನಿರೋಷಾ ರವರ ಫೋಟೋಗಳನ್ನು ತೋರಿಸಿದರು.

Advertisement

ಮಣಿರತ್ನಂ ಅವರಿಗೆ ನಿರೋಷ ಇಷ್ಟವಾದರು. ತಮ್ಮ ‘ಘರ್ಷಣಾ’ ಎಂಬ ಸಿನಿಮಾದಲ್ಲಿ ಮಣಿರತ್ನಂ ರವರು ನಿರೋಷಾ ರವರಿಗೆ ಅವಕಾಶವನ್ನು ನೀಡಿದರು. ಹೀಗೆ ಸಿನಿಮಾ ರಂಗಕ್ಕೆ ಬಂದ ನಿರೋಷ ತಮಿಳು, ತೆಲುಗು, ಮಲಯಾಳಂ ಹಾಗೂ ಕನ್ನಡದ ಖ್ಯಾತ ನಟಿಯಾಗಿ ಬೆಳೆದರು. ನಿರೋಷ ಅವರು ಈಗಲೂ ಸಹ ಸಿನಿಮಾ ಹಾಗೂ ಕಿರುತೆರೆಯಲ್ಲಿ ಪೋಷಕ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ತಮಿಳು ನಟ ರಾಮ್ ಕೀ ಎಂಬುವವರನ್ನು ನಿರೋಷ ಮದುವೆಯಾಗಿದ್ದಾರೆ. ತಮಿಳು, ತೆಲುಗಿನಲ್ಲಿ ಹಲವಾರು ಸಿನಿಮಾಗಳಲ್ಲಿ ನಾಯಕ ನಟರಾಗಿ ಅಭಿನಯಿಸಿದ ರಾಮ್ ಕಿ ಅವರು ಇತ್ತೀಚಿಗೆ ತೆಲುಗಿನಲ್ಲಿ ತೆರೆಕಂಡ ಸೂಪರ್ ಡೂಪರ್ ಹಿಟ್ ಆಗಿದ್ದ RX–100 ಚಿತ್ರದ ನಾಯಕನ ತಂದೆಯ ಪಾತ್ರದಲ್ಲಿ ನಟಿಸಿದ್ದರು.

Advertisement

– ಸುಷ್ಮಿತಾ

Advertisement

ಮೋಡಿ ಮಾಂತ್ರಿಕರು ಪ್ರಸಿದ್ಧಜ್ಯೊತಿಷಿಗಳಾದ ಶ್ರೀ ಮಂಜುನಾಥ್ ಭಟ್ ಅವರು ಗಂಡ ಹೆಂಡತಿ ಕಲಹ, ಡೈವರ್ಸ ಪ್ರಾಬ್ಲಮ್, ಆಸ್ತಿಯಲ್ಲಿ ಕದನ, ಕೋರ್ಟ್ ಕೇಸ್, ಆರೋಗ್ಯದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಂತಾನ ಫಲ, ಸಾಲ ಭಾದೆ, ಮದುವೆ ವಿಚಾರದಲ್ಲಿ ವಿಘ್ನ , ಅತ್ತೆ ಸೊಸೆ ಕಲಹ, ನಿಮ್ಮ ಮನದಾಳದ ಯಾವುದೇ ಗುಪ್ತ ಸಮಸ್ಯೆ  ಇದ್ದರೆ ಜೀವನದಲ್ಲಿ ಜಿಗುಪ್ಸೆ ಹೊಂದ್ದಿದರೆ ನಿಮ್ಮ ಒಂದೇ ಒಂದು ಫೋನ್ ಕರೆ 9591706765 ನಿಮ್ಮ ಜೀವನವನ್ನೇ ಬದಲಾಯಿಸಿ ಬಿಡುತ್ತದೆ.
ವಿಶೇಷ  ಸೂಚನೆ : ಕೊಳ್ಳೆಗಾಲದ ಮಂತ್ರ ಶಕ್ತಿಯಿಂದ ಸ್ತ್ರೀ- ಪುರುಷ ವಶೀಕರಣ 3 ದಿನಗಳಲ್ಲಿ 100% ಪರಿಹಾರ ಶತಸಿದ್ಧ. ಅಸಾದ್ಯವಾದದ್ದು ಇಲ್ಲಿ ಸಾದ್ಯ.

Advertisement
Share this on...