ಅನುಷ್ಕಾ ಶೆಟ್ಟಿಯಿಂದ ನಿರ್ಮಾಪಕರಿಗೆ ತೊಂದರೆ ಆಯ್ತಾ..? ನಿವೇನಂತೀರಾ..?

in ಸಿನಿಮಾ 29 views

ನಟಿ ಅನುಷ್ಕಾ ಶೆಟ್ಟಿ ವಿಭಿನ್ನ ಚಿತ್ರದಲ್ಲಿ ವಿಭಿನ್ನ ಪಾತ್ರ ನಿರ್ವಹಿಸುವ ಮೂಲಕ ಬೆಳ್ಳಿತೆರೆಯ ಮೇಲೆ ಮೋಡಿ ಮಾಡಲು ಸಿದ್ಧತೆ ನಡೆಸಿದ್ದರು. ಆದರೆ ಲಾಕ್ ಡೌನ್ ನಿಂದಾಗಿ ಚಿತ್ರ ತೆರೆಗೆ ಬರುವುದು ಕಷ್ಟಕರವಾಗಿದ್ದು ಇಂತಹ ಸಂದರ್ಭದಲ್ಲಿ ಅನುಷ್ಕಾ ನಿರ್ಮಾಪಕರಿಗೆ ತೊಂದರೆ ನೀಡುತ್ತಿದ್ದಾರೆ ಎನ್ನಲಾಗಿದೆ. ಯಾವ ರೀತಿಯ ತೊಂದರೆ ಅಂತೀರಾ..?

Advertisement

 

Advertisement

Advertisement

 

Advertisement

ಹೇಮಂತ್ ಮಧುಕರ್ ನಿರ್ದೇಶನದಲ್ಲಿ ಅನುಷ್ಕಾ ಶೆಟ್ಟಿ ಪ್ರಧಾನ ಪಾತ್ರದಲ್ಲಿ ನಟಿಸಿರುವ ‘ನಿಶಬ್ದಂ’ ಸಿನಿಮಾ 2020 ರ ಜನವರಿ 30ರಂದೇ ತೆರೆ ಕಾಣಬೇಕಿತ್ತು. ಆದರೆ ಕಾರಣಾಂತರಗಳಿಂದ ಚಿತ್ರದ ಬಿಡುಗಡೆ ದಿನಾಂಕವನ್ನ ಏಪ್ರಿಲ್ 2 ಕ್ಕೆ ಮುಂದೂಡಲಾಗಿತ್ತು. ಇದೀಗ ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಸಿನಿಮಾಗೆ ಬಿಡುಗಡೆ ಭಾಗ್ಯ ಸಿಕ್ಕಿಲ್ಲ. ಈ ಚಿತ್ರ ತೆಲುಗು ಹಾಗೂ ತಮಿಳಿನಲ್ಲಿ ಏಕಕಾಲದಲ್ಲಿ ಚಿತ್ರೀಕರಣಗೊಂಡಿದ್ದು ಸಿನಿಮಾ ಸಂಪೂರ್ಣವಾಗಿ ಅಮೆರಿಕಾದಲ್ಲಿ ಶೂಟ್ ಮಾಡಲಾಗಿದೆ.

 

 

ಹೀಗಾಗಿ ಬಜೆಟ್ ಗಾತ್ರ ಹೆಚ್ಚಾಗಿದೆ. ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೂ ಬಾರಿ ಹಣ ಖರ್ಚಾಗಿದ್ದು ಇದೀಗ ಸಿನಿಮಾ ಬಿಡುಗಡೆ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸಿನಿಮಾ ತಂಡದಲ್ಲಿ ಆತಂಕ ಮನೆಮಾಡಿದೆ. ಲಾಕ್ ಡೌನ್ ಮುಗಿದ ನಂತರ ಪರಿಸ್ಥಿತಿ ಸುಧಾರಿಸಲು ತುಂಬಾ ಸಮಯಬೇಕಾಗುತ್ತದೆ ಮತ್ತೆ ತಡವಾಗುತ್ತೆ. ಹೀಗಾಗಿ OTT ಪ್ಲಾಟ್ ಫಾರ್ಮ್ ಮೂಲಕ ಸಿನಿಮಾ ಬಿಡುಗಡೆಗೆ ನಿರ್ಮಾಪಕರು ನಿರ್ಧರಿಸಿದ್ದಾರೆ. ಆದರೆ ಇದಕ್ಕೆ ಅನುಷ್ಕಾ ಶೆಟ್ಟಿ ಅನುಮತಿ ನೀಡುತ್ತಿಲ್ಲ ಎನ್ನಲಾಗಿದೆ.

 

 

ಅನುಷ್ಕಾ ಶೆಟ್ಟಿಯವರ ನಿಶಬ್ದಂ ಸಿನಿಮಾ ವಿಭಿನ್ನ ಟೈಟಲ್ ಹೊಂದಿದ್ದು ಇದರ ಟ್ಯಾಗ್ ಲೈನ್ ಸಹ ಅಷ್ಟೇ ಕುತೂಹಲ ಮೂಡಿಸಿದೆ. ಸಾಕ್ಷಿ ಎ ಮ್ಯೂಟ್ ಆರ್ಟಿಸ್ಟ್ ಎಂದು ಟ್ಯಾಗ್ ಲೈನ್ ಇದೆ. ಪೋಸ್ಟರ್ ನಲ್ಲಿ ಅನುಷ್ಕಾ ಶೆಟ್ಟಿಯವರು ಸಪ್ಪೆ ಮೋರೆ ಹೊತ್ತು ಪೇಟಿಂಗ್ ಮಾಡುತ್ತಿರುವ ಚಿತ್ರವಿದೆ. ಹಾಗಾದರೆ ಈ ಚಿತ್ರದಲ್ಲಿ ಅನುಷ್ಕಾ ಮೂಗಿಯಾಗಿ ನಟಿಸಿದ್ದಾರಾ..? ಬಿಡುಗಡೆಯಾದ ಮೇಲೆಯೇ ತಿಳಿಯಲಿದೆ. OTT ಪ್ಲಾಟ್ ಫಾರ್ಮ್ ನಲ್ಲಿ ಚಿತ್ರ ಬಿಡುಗಡೆಯಾದರೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಸಾಧ್ಯವಿಲ್ಲ. ನಿರ್ಮಾಪಕರು ಈಗಾಗಲೇ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದ್ದಾರಂತೆ. ಆದರೆ ಅನುಷ್ಕಾ OTT ಯಲ್ಲಿ ಬಿಡುಗಡೆಗೆ ಒಪ್ಪುತ್ತಿಲ್ಲ. ಇದರಿಂದಾಗಿ ನಿರ್ಮಾಪಕರಿಗೆ ತಿಂಗಳಿಗೆ 50 ಲಕ್ಷ ರೂಪಾಯಿ ನಷ್ಟ ಅನುಭವಿಸುತ್ತಿದ್ದಾರಂತೆ.

 

ಅಮೆಜಾನ್ ಪ್ರೈಮ್ ಒಪ್ಪಂದದ ಪ್ರಕಾರ ಅನುಷ್ಕಾ ಶೆಟ್ಟಿಯವರ ಒಪ್ಪಿಗೆ ಹಾಗೂ ಪ್ರಮೋಷನ್ ವಿಡಿಯೋಗಳು ಬೇಕು ಅನುಷ್ಕಾ ಇದಕ್ಕೆ ಸಿದ್ದರಿಲ್ಲ. ಇದರಿಂದಾಗಿ ನಿರ್ಮಾಪಕರಿಗೆ ಆರ್ಥಿಕವಾಗಿ ಹೊರೆಯಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಆದರೆ ನಿರ್ಮಾಪಕರ ಮಗ ಸಹ ಅನುಷ್ಕಾರವರ ಬೆಂಬಲಕ್ಕೆ ನಿಂತಿದ್ದಾರಂತೆ. ಹೀಗೆ OTT ಪ್ಲಾಟ್ ಫಾರ್ಮ್ ನಲ್ಲಿ ಸಿನಿಮಾ ಬಿಡುಗಡೆ ಕುರಿತು ಚರ್ಚೆ ನಡೀತಾ ಇದೆ. ಅನುಷ್ಕ ಬೆಳ್ಳಿತೆರೆಮೇಲೆ ಅಬ್ಬರಿಸಿದ್ದಾರಾ ಅಥವಾ OTT ಪ್ಲಾಟ್ ಫಾರ್ಮ್ ನಲ್ಲ ಕಾದುನೋಡಬೇಕಿದೆ.

– ಸುಷ್ಮಿತಾ

Advertisement
Share this on...