ಚಿರು ಸರ್ಜಾ ಸಾವಿನ ನಂತರ ಮತ್ತೊಂದು ಮನಕಲಕುವಂತಹ ಸಾವು !

in ಕನ್ನಡ ಮಾಹಿತಿ 178 views

ಒಮ್ಮೆ ಯೋಚಿಸಿ ನೋಡಿ, ಪತಿಯೂ ಅತಿಯಾಗಿ ಪ್ರೀತಿಸಿದರೆ ಪತ್ನಿಯೂ ಮೋಸ ಮಾಡಿ ಬಿಡುತ್ತಾಳೆ. ಪತ್ನಿ ಅತಿಯಾಗಿ ಪ್ರೀತಿಸುತ್ತಿದ್ದರೆ ಪತಿ ಮೋಸ ಮಾಡುತ್ತಾನೆ.ಅದೇ ಪತಿ ಪತ್ನಿ ಇಬ್ಬರು ಸುಖ ಹಾಗೂ ಜೀವನವನ್ನು ಮಾಡುತ್ತಾ ಒಬ್ಬರಿನೊಬ್ಬರು ಮುಗಿಲೆತ್ತದಷ್ಟು ಪ್ರೀತಿಸುತ್ತಿದ್ದರೆ ದೇವರೆ ಮೋಸ ಮಾಡಿ ಬಿಡುತ್ತಾನೆ. ಈ ಮಾತು ನೂರಕ್ಕೆ ನೂರು ಸತ್ಯ ಅಲ್ಲವೇ. ಇನ್ನು ಸಾಯುವಂತಹ ವಯ್ಯಸ್ಸಾಗಿರುವುದಿಲ್ಲ, ಯಾವುದೇ ರೋಗ ಕಾಯಿಲೆ ಇರುವುದಿಲ್ಲ, ಆದರೂ ಕೂಡ ದೇವರು ಜೊತೆಯಲ್ಲಿರುವ ಜೀವವನ್ನು ಕರೆಸಿಕೊಂಡು ಬಿಡುತ್ತಾನೆ.ಇತ್ತೀಚಿಗಷ್ಟೆ ೩೯ ವರ್ಷದ ಚಿರಂಜೀವಿ ಸರ್ಜಾ ಅವರು ಹೃದಯಾಘಾತದಿಂದ ಮೃತಪಟ್ಟಿದ್ದು, ಘಟನೆಯನ್ನು ಕರುನಾಡ ಜನತೆ ಅರಗಿಸಿಕೊಳ್ಳಲಾಗುತ್ತಲೇ ಇಲ್ಲ. ಇಂತಹ ಸಮಯದಲ್ಲಿಯೇ ಇದೀಗ ಮತ್ತೊಂದು ಮನಕಲಕುವಂತಹ ಘಟನೆಯೊಂದು ನಡೆದಿದ್ದು, 28 ವರ್ಷಕ್ಕೆ ಮತ್ತೊಬ್ಬರಿಗಾಗಿ ಜೀವ ಕಳೆದುಕೊಂಡಿದ್ದಾರೆ ನತದೃಷ್ಟ ಒಬ್ಬರು.

Advertisement

Advertisement

28 ವರ್ಷದ ನಿತಿನ್ ಹಾಗೂ 27 ವರ್ಷದ ಗೀತಾ ಎಂಬುವವರು ದುಬೈ ನಲ್ಲಿ ನೆಲೆಸಿದ್ದರು. ಮೂಲತಃ ಇವರು ಕೇರಳ ರಾಜ್ಯದವರು. ಸುಖ ಸಂಸಾರವನ್ನು ನಡೆಸುತ್ತಿದ್ದ ಈ ದಂಪತಿಗಳಿಗೆ ಇವರ ಪ್ರೀತಿಯ ಫಲವಾಗಿ ಗೀತಾ ಹೊಟ್ಟೆಯಲ್ಲಿ ಮಗು ಹುಟ್ಟುತ್ತಿತ್ತು. ಆಕೆ ತುಂಬು ಗರ್ಭಿಣಿ‌ ಆಗಿದ್ದರು. ಲಾಕ್ ಡೌನ್ ಇದ್ದ ಕಾರಣ ಭಾರತಕ್ಕೆ ಬರಲಾಗದೆ ಈ ಜೋಡಿಗಳು ದುಬೈನಲ್ಲಿಯೇ ಉಳಿದು ಬಿಟ್ಟಿದ್ದರು. ನಂತರ ಒಂದೇ ಭಾರತ್ ಮಿಷನ್ ಅಡಿಯಲ್ಲಿ ಭಾರತಕ್ಕೆ ಮರಳಲು ಮೊದಲ ವಿಮಾನದಲ್ಲಿಯೇ ಇವರಿಗೆ ಅವಕಾಶ ಸಿಕ್ಕಿತು ಆದರೆ ಸದಾ ಮತ್ತೊಬ್ಬರ ಕಷ್ಟಕ್ಕೆ ಮಿಡಿಯುತ್ತಿದ್ದ ನಿತಿನ್ ಕೊರೊನಾ ಸಮಯದಲ್ಲಿ ಅಲ್ಲಿನ ಭಾರತೀಯರ ನೆರವಿಗೆ ನಿಂತಿದ್ದರು. ಅದೇ ಕಾರಣಕ್ಕೆ ನಿತಿನ್ ತನ್ನ ಪತ್ನಿಯ ಜೊತೆಗೆ ಬೇರೊಬ್ಬ ಬಡ ವ್ಯಕ್ತಿಯನ್ನು ಭಾರತಕ್ಕೆ ಮರಳಲು ತನ್ನ ಅವಕಾಶ ಅವನಿಗೆ ಕೊಟ್ಟರು..ಆತನ ಸಂಪೂರ್ಣ ವೆಚ್ಛವನ್ನೂ ನಿತಿನ್ ಅವರೇ ಭರಿಸಿದರು.

Advertisement

 

Advertisement

ನಂತರ ನಿತಿನ್ ಭಾರತಕ್ಕೆ ಮರಳಲು ಅವಕಾಶ ಸಿಗುತ್ತದೆ ಎಂದು ದುಬೈ ಅಲ್ಲಿಯೇ ಉಳಿದು ಪತ್ನಿ ಗೀತಾರನ್ನು ಮಾತ್ರ ಭಾರತಕ್ಕೆ ಕಳುಹಿಸಿದರು. ನಿತನ್ ಅಲ್ಲಿಯೇ ಉಳಿದುಕೊಂಡು ಅಲ್ಲಿನ ಭಾರತೀಯರಿಗೆ ಸಹಾಯ ಮಾಡುತ್ತಿದ್ದರು. ಆದರೆ ವಿಧಿ ಬಹಳ ಕ್ರೂರಿ ಎಂಬಂತೆ ದುಬೈನಲ್ಲಿಯೇ ಉಳಿದ ನಿತಿನ್ ಸೋಮವಾರ ಹೃದಯಾಘಾತದಿಂದ ಮರಣ ಹೊಂದಿದ್ದಾರೆ. ನಿತಿನ್ ಅವರು ಅಧಿಕ ರಕ್ತದೊತ್ತಡ ಹಾಗೂ ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದರು ಎಂದು ಹೇಳಲಾಗುತ್ತಿದೆ. ನಿತಿನ್ ಚಿಕಿತ್ಸೆಯನ್ನೂ ಪಡೆದಿದ್ದರು. ಆದರೆ ಸೋಮವಾರ ಮಲಗಿದ್ದವರು ಏಳಲೇ ಇಲ್ಲ.. ಇನ್ನೇನು ಎರಡು ದಿನದಲ್ಲಿ ಹುಟ್ಟಬೇಕಿದ್ದ ತನ್ನ ಕಂದನ ಮುಖವನ್ನು ನೋಡಲೇ ಇಲ್ಲ.

ನಿದ್ರೆಯಲ್ಲಿಯೇ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಇತ್ತ ಗಂಡ ಇಹಲೋಕ ತ್ಯಜಿಸಿದ ಮರುದಿನವೇ ಗೀತಾ ಮಗುವಿಗೆ ಜನ್ಮ ನೀಡಿದ್ದಾರೆ. ಅಂದು ಗೀತಾ ಜೊತೆಯಲ್ಲಿ ನಿತಿನ್ ಮರಳಿ ಭಾರತಕ್ಕೆ ಬಂದಿದ್ದರೆ ಉಳಿದುಕೊಳ್ಳುತ್ತಿದ್ದರೋ ಏನೋ.. ವಿಧಿ ಎಷ್ಟೂ ಕ್ರೂರಿ ಅಲ್ಲವೇ.. ಪಾಪ ಆ ಪುಟ್ಟ ಕಂದಮ್ಮನ ಮೂಖವನ್ನು ನೋಡಲು ಅವಕಾಶ ಮಾಡಿಕೊಡದೆ ನಿತನ್ ಅವರನ್ನು ಕರೆಸಿಕೊಂಡಿದ್ದಾನೆ.

Advertisement
Share this on...