ನಿತ್ಯಾ ಮೆನೆನ್ ನಟನೆ ಬಿಟ್ಟು ಏನು ಮಾಡಲು ಹೊರಟಿದ್ದಾರೆ ನೋಡಿ..!

in ಮನರಂಜನೆ/ಸಿನಿಮಾ 104 views

ಪ್ರತಿಭಾವಂತ ನಟಿ ನಿತ್ಯಾ ಮೆನೆನ್ ತಮ್ಮ ಅತ್ಯುತ್ತಮ ನಟನೆಗೆ ಹೆಸರುವಾಸಿ. ಯಾವುದೇ ಪಾತ್ರ ಕೊಟ್ಟರೂ ಲೀಲಾಜಾಲವಾಗಿ ನಿರ್ವಹಿಸುವ ನಿತ್ಯಾ ಅವರ ವೃತ್ತಿಜೀವನವನ್ನು ಗಮನಿಸಿದರೆ, ಅವರು ಅನೇಕ ಪ್ರಾಯೋಗಿಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ತಮ್ಮ ನಟನಾ ಕೌಶಲ್ಯದಿಂದ ಪ್ರೇಕ್ಷಕರನ್ನು ಮೆಚ್ಚಿಸಿದ್ದಾರೆ.  ಅಂದಹಾಗೆ ನಿತ್ಯಾ ಇದೀಗ ಚಿತ್ರವನ್ನು ನಿರ್ದೇಶಿಸಲು ಆಸಕ್ತಿ ತೋರಿಸುತ್ತಿದ್ದಾರೆ ಎಂಬ ವರದಿ ಕೆಲವು ಮೂಲಗಳಿಂದ ತಿಳಿದುಬಂದಿದೆ. ಹೌದು, ಲಾಕ್ ಡೌನ್ ಸಮಯ ನಿತ್ಯಾ ಅವರಿಗೆ ಸಿನಿಮಾ ಸ್ಕ್ರಿಪ್ಟ್ ಕೆಲಸದ ಮೇಲೆ ಕೇಂದ್ರೀಕರಿಸಲು ಸಹಾಯ ಮಾಡಿದೆ ಎನ್ನಲಾಗಿದೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಸಹ ನಿತ್ಯಾ ಅವರು ಸ್ಕ್ರಿಪ್ಟ್ ಬರೆಯಲು ಪ್ರಾರಂಭಿಸಿದ್ದೇನೆ ಎಂದು ಹೇಳಿದ್ದರು. ಆದರೂ ಇದು ಇನ್ನೂ ಪೂರ್ಣಗೊಂಡಿಲ್ಲ. ಆದರೆ ನಿತ್ಯಾ ಅವರು ಶೀಘ್ರದಲ್ಲೇ ಅಂದರೆ ಒಂದೆರಡು ವರ್ಷಗಳಲ್ಲಿ ನಿರ್ದೇಶನದತ್ತ ಮುಖ ಮಾಡಲಿದ್ದಾರೆ ಎಂದು ಖಚಿತವಾಗಿ ತಿಳಿದಿದೆ.

Advertisement

 

Advertisement


ಪ್ರಸ್ತುತ ನಿತ್ಯಾ ಅವರ ಕೈಯಲ್ಲಿ ಕೆಲವು ಪ್ರಾಜೆಕ್ಟ್’ಗಳು ಇವೆ. ಸದ್ಯ ಮಿಸ್ಕಿನ್ ನಿರ್ದೇಶನದ ಸೈಕೋದಲ್ಲಿ ನಿತ್ಯಾ ನಟಿಸುತ್ತಿದ್ದು, ಅವರ ಮುಂಬರುವ ಚಿತ್ರ ‘ಕೊಲಾಂಬಿ’ ನಿರ್ಮಾಣದ ನಂತರದ ಹಂತದಲ್ಲಿದೆ. ಇತ್ತೀಚೆಗಷ್ಟೇ ನಿತ್ಯಾ ತಮ್ಮ ವಾರ್ಡ್ ರೋಬ್’ನಿಂದ ವಿಶೇಷ ಉಡುಪನ್ನು ಹೊರತೆಗೆದು ಹರಾಜು ಹಾಕಿದ್ದರು. ತಮ್ಮ ಉಡುಪನ್ನು ಹರಾಜು ಮಾಡುವ ಮೂಲಕ ನಿತ್ಯಾ ಕೊರೊನಾ ವೈರಸ್ ಪರಿಹಾರ ಕಾರ್ಯಕ್ಕೆ ನೀಡಿದ್ದರು. ಹರಾಜಿನಿಂದ ಗಳಿಸಿದ ಆದಾಯವನ್ನು ಅವರು ‘ಅರ್ಪಣಂ ಟ್ರಸ್ಟ್’ಗೆ ನೀಡಿದ್ದರು.
ಇತ್ತೀಚೆಗೆ ಬಾಲಿವುಡ್ ಬ್ಲಾಕ್ ಬಸ್ಟರ್ ‘ಮಿಷನ್ ಮಂಗಲ್’ ನಲ್ಲಿ ಕಾಣಿಸಿಕೊಂಡ ನಿತ್ಯಾ, ಈ ವರ್ಷ ತಮ್ಮ ಹೊಸ ಚಿತ್ರಗಳ ಬಗ್ಗೆ ಇನ್ನೂ ಸುದ್ದಿ ನೀಡಿಲ್ಲ. ಕನ್ನಡದ ‘7 0 ಕ್ಲಾಕ್’ ಚಿತ್ರದಿಂದ ಪೋಷಕ ಪಾತ್ರದಲ್ಲಿ ತನ್ನ ನಟನಾ ವೃತ್ತಿಯನ್ನು ಪ್ರಾರಂಭಿಸಿದ ನಿತ್ಯಾ, ಇದುವರೆಗೂ ಕನ್ನಡ, ತೆಲಗು, ತಮಿಳು ಮತ್ತು ಮಳಯಾಳಂ ಚಿತ್ರಗಳಲ್ಲಿ ಪ್ರಧಾನವಾಗಿ ಕೆಲಸ ಮಾಡಿದ್ದಾರೆ.

Advertisement

Advertisement

ತೆಲುಗಿನಲ್ಲಿ ‘ಗುಂಡೆ ಜಾರಿ ಗಲಂತೈಯಿಂದಿ’ ಮತ್ತು ‘ಮಳ್ಳಿ ಮಳ್ಳಿ ಇದಿ ರಾನಿ ರೋಜು’ ಚಿತ್ರಗಳಿಗೆ ಎರಡು ಬಾರಿ ಫಿಲ್ಮ್ ಫೇರ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಜನಿಸಿದ ನಿತ್ಯಾ, ಮಣಿಪಾಲ್ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಪದವಿ ಅಧ್ಯಯನ ಮಾಡಿದ್ದಾರೆ. ಒಮ್ಮೆ ಸಂದರ್ಶನವೊಂದರಲ್ಲಿ ನಿತ್ಯಾ, ನಾನು ನಟಿಯಾಗಲು ಎಂದೂ ಬಯಸಿರಲಿಲ್ಲ, ಆದರೆ ಪತ್ರಕರ್ತೆಯಾಗಬೇಕೆಂಬ ಹಂಬಲವಿತ್ತು ಎಂದು ತಿಳಿಸಿದ್ದರು.

Advertisement
Share this on...