ಬಾಡಿ ಶೇಮಿಂಗ್ ಮಾಡುವವರಿಗೆ ಖಡಕ್ ಉತ್ತರ ಕೊಟ್ಟ ನಿತ್ಯಾ ಮೆನೆನ್ !

in ಮನರಂಜನೆ/ಸಿನಿಮಾ 170 views

ಸೆಲೆಬ್ರಿಟಿಗಳನ್ನು ಟ್ರೋಲ್ ಮಾಡುವುದು ಮತ್ತು ಬಾಡಿ ಶೇಮಿಂಗ್ ಮಾಡುವುದು ಸಾಮಾಜಿಕ ಮಾಧ್ಯಮದಲ್ಲಿ ಸಾಮಾನ್ಯವಾಗಿದೆ. ಇದುವರೆಗೂ ಅನೇಕ ನಟ-ನಟಿಯರು ಟ್ರೋಲಿಗರಿಗೆ ಆಹಾರವಾಗಿದ್ದಾರೆ. ಅಂದಹಾಗೆ ಇತ್ತೀಚೆಗೆ ಪ್ರಮುಖ ವೆಬ್ ಸೈಟ್ ಒಂದರ ಸಂವಾದದಲ್ಲಿ ನಟಿ ನಿತ್ಯಾ ಮೆನೆನ್ ಅಧಿಕ ತೂಕ ಹೊಂದಿದ್ದಕ್ಕಾಗಿ ಟ್ರೋಲ್ ಆಗುವುದರ ಬಗ್ಗೆ ಮಾತನಾಡಿದರು.  ಹಿಂದೆಂದೂ ಬಾಡಿ ಶೇಮಿಂಗ್ ಬಗ್ಗೆ ಮಾತನಾಡದ ನಿತ್ಯಾ ಈಗ ಟ್ರೋಲ್ ಬಗ್ಗೆ ಮಾತನಾಡುತ್ತಾ, “ನನ್ನ ದೇಹವನ್ನು ನೋಡಿ ನನ್ನನ್ನು ಟೀಕಿಸುವವರು, ನನ್ನ ಜೀವನದಲ್ಲಿ ನಾನು ಮಾಡಿದಷ್ಟು ಕೆಲಸ ಮಾಡಿಲ್ಲ. ಜೀವನಶೈಲಿ, ವಂಶವಾಹಿಗಳು, ಆರೋಗ್ಯ ಸಮಸ್ಯೆಗಳು ಮತ್ತು ಇತರ ಕಾರಣಗಳಿಗಾಗಿ ಪ್ರತಿಯೊಬ್ಬರ ತೂಕವು ಭಿನ್ನವಾಗಿರುತ್ತದೆ ಎಂದು ಟ್ರೋಲಿಗರಿಗೆ ತಿಳಿದಿರುವುದಿಲ್ಲ. ನಿಮ್ಮ ತೂಕ ಏಕೆ ಹೆಚ್ಚಾಯ್ತು ಎಂದು ಯಾರೂ ಕೇಳುವುದಿಲ್ಲ. ಇದನ್ನೆಲ್ಲಾ ತಿಳಿಯದ ಜನರು ನಮ್ಮನ್ನು ಟ್ರೋಲ್ ಮಾಡಲು ಬಯಸುತ್ತಾರೆ.

Advertisement

Advertisement

ವಾಸ್ತವವಾಗಿ, ನಾನು ಈ ಎಲ್ಲ ವಿಷಯಗಳ ಬಗ್ಗೆ ಎಂದಿಗೂ ಮಾತನಾಡುವುದಿಲ್ಲ” ಎಂದು ತಿರುಗೇಟು ನೀಡಿದ್ದಾರೆ. ಪ್ರತಿಭಾವಂತ ನಟಿ ನಿತ್ಯಾ ಮೆನೆನ್ ತಮ್ಮ ಅತ್ಯುತ್ತಮ ನಟನೆಗೆ ಹೆಸರುವಾಸಿ. ಯಾವುದೇ ಪಾತ್ರ ಕೊಟ್ಟರೂ ಲೀಲಾಜಾಲವಾಗಿ ನಿರ್ವಹಿಸುವ ನಿತ್ಯಾ ಅವರ ವೃತ್ತಿಜೀವನವನ್ನು ಗಮನಿಸಿದರೆ, ಅವರು ಅನೇಕ ಪ್ರಾಯೋಗಿಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ತಮ್ಮ ನಟನಾ ಕೌಶಲ್ಯದಿಂದ ಪ್ರೇಕ್ಷಕರನ್ನು ಮೆಚ್ಚಿಸಿದ್ದಾರೆ. ಅಂದಹಾಗೆ ನಿತ್ಯಾ ಇದೀಗ ಚಿತ್ರವನ್ನು ನಿರ್ದೇಶಿಸಲು ಆಸಕ್ತಿ ತೋರಿಸುತ್ತಿದ್ದಾರೆ ಎಂಬ ವರದಿ ಕೆಲವು ಮೂಲಗಳಿಂದ ತಿಳಿದುಬಂದಿದೆ. ಹೌದು, ಲಾಕ್ ಡೌನ್ ಸಮಯ ನಿತ್ಯಾ ಅವರಿಗೆ ಸಿನಿಮಾ ಸ್ಕ್ರಿಪ್ಟ್ ಕೆಲಸದ ಮೇಲೆ ಕೇಂದ್ರೀಕರಿಸಲು ಸಹಾಯ ಮಾಡಿದೆ ಎನ್ನಲಾಗಿದೆ.

Advertisement

Advertisement

ಇತ್ತೀಚಿನ ಸಂದರ್ಶನವೊಂದರಲ್ಲಿ ಸಹ ನಿತ್ಯಾ ಅವರು ಸ್ಕ್ರಿಪ್ಟ್ ಬರೆಯಲು ಪ್ರಾರಂಭಿಸಿದ್ದೇನೆ ಎಂದು ಹೇಳಿದ್ದರು. ಆದರೂ ಇದು ಇನ್ನೂ ಪೂರ್ಣಗೊಂಡಿಲ್ಲ. ಆದರೆ ನಿತ್ಯಾ ಅವರು ಶೀಘ್ರದಲ್ಲೇ ಅಂದರೆ ಒಂದೆರಡು ವರ್ಷಗಳಲ್ಲಿ ನಿರ್ದೇಶನದತ್ತ ಮುಖ ಮಾಡಲಿದ್ದಾರೆ ಎಂದು ಖಚಿತವಾಗಿ ತಿಳಿದಿದೆ. ಪ್ರಸ್ತುತ ನಿತ್ಯಾ ಅವರ ಕೈಯಲ್ಲಿ ಕೆಲವು ಪ್ರಾಜೆಕ್ಟ್’ಗಳು ಇವೆ. ಸದ್ಯ ಮಿಸ್ಕಿನ್ ನಿರ್ದೇಶನದ ಸೈಕೋದಲ್ಲಿ ನಿತ್ಯಾ ನಟಿಸುತ್ತಿದ್ದು, ಅವರ ಮುಂಬರುವ ಚಿತ್ರ ‘ಕೊಲಾಂಬಿ’ ನಿರ್ಮಾಣದ ನಂತರದ ಹಂತದಲ್ಲಿದೆ. ಇತ್ತೀಚೆಗೆ ಬಾಲಿವುಡ್ ಬ್ಲಾಕ್ ಬಸ್ಟರ್ ‘ಮಿಷನ್ ಮಂಗಲ್’ ನಲ್ಲಿ ಕಾಣಿಸಿಕೊಂಡ ನಿತ್ಯಾ, ಈ ವರ್ಷ ತಮ್ಮ ಹೊಸ ಚಿತ್ರಗಳ ಬಗ್ಗೆ ಇನ್ನೂ ಸುದ್ದಿ ನೀಡಿಲ್ಲ.

Advertisement
Share this on...