ನಿತ್ಯಾನಂದನ ಹೊಸ ಪ್ರತಿಜ್ಙೆ ಏನು ಗೊತ್ತಾ ? ಕೇಳಿದ್ರೆ ದಂಗಾಗ್ತೀರಾ !!

in ಮನರಂಜನೆ 25 views

ಸಂಸ್ಕೃತಿ ಹಾಗೂ ಧಾರ್ಮಿಕತೆಗೆ ಹೆಸರುವಾಸಿ ನಮ್ಮ ಭಾರತದ ದೇಶ, ನಮ್ಮ ದೇಶದಲ್ಲಿ ಆಚರಿಸುವ ಹಬ್ಬಗಳು, ದೇವರನ್ನು ಆರಾಧಿಸುವ ರೀತಿ ಮತ್ಯಾವ ದೇಶದಲ್ಲೂ ಕಂಡು ಬರುವುದಿಲ್ಲ, ಜನರಿಗೆ ದೇವರ ಮೇಲಿನ ಭಕ್ತಿಗಳಿಗಿಂತ, ಭಯವೇ ಜಾಸ್ತಿ ಅನಿಸುತ್ತದೆ. ದೇವರನ್ನು ಮಡಿಯಿಂದ ಶುದ್ಧ ಮನಸ್ಸಿನಲ್ಲಿ ನಮಿಸುತ್ತಾರೆ. ಇನ್ನು ಈ ಜನರ ಭಕ್ತಿಯನ್ನೇ ಬಂಡವಾಳ ಮಾಡಿಕೊಂಡು ಅದೆಷ್ಟೋ ಮಠದ ಸ್ವಾಮೀಜಿಗಳು, ಕಳ್ಳ ಜ್ಯೋತಿಷಿಗಳು ಹಣ ಲೂಟಿಮಾಡುವದರ ಜೊತೆಗೆ ದೇವರ ಹೆಸರಲ್ಲಿ ಕಾಮದಾಸೆಯನ್ನು ತೀರಿಸಿಕೊಳ್ಳುತ್ತಿದ್ದಾರೆ. ಇನ್ನು ದೇವಮಾನವ ಎಂದು ಘೋಷಣೆ ಮಾಡಿಕೊಂಡು ತಿರುಗಾಡುತ್ತಿರುವ ನಿತ್ಯಾನಂದ ಸದಾ ಸುದ್ದಿಯಲ್ಲಿರುತ್ತಾರೆ. ಈ ಸ್ವಯಂ ಘೋಷಿತ ದೇವಮಾನವ ಏನೇ ಮಾಡಿದರೂ ಸಖತ್ ಸುದ್ದಿಯಾಗಿ ವೈರಲ್ ಆಗುತ್ತದೆ.! ಅಲ್ಲದೆ ದಿನೇ ದಿನೇ ನಿತ್ಯಾನಂದನ ಆಶ್ರಮದಲ್ಲಿ ಕರ್ಮಕಾಂಡಗಳು ಹೆಚ್ಚಾಗುತ್ತಲೇ ಇವೆ. ಈ ಅತ್ಯಾಚಾರ ಆರೋಪಿ ಹಲವು ಆಶ್ರಮಗಳ ನಂತರ ಹೊಸದೊಂದು ದೇಶವನ್ನೇ ಕಟ್ಟಲು ಹೊರಟಿದ್ದ.

Advertisement

 

Advertisement

Advertisement

ಈಕ್ವೆಡಾರ್ ನಲ್ಲಿ ಖಾಸಗಿ ಹಿಮಪ್ರದೇಶವನ್ನು ಖರೀದಿಸಿ, ಇದು ನನ್ನ ದೇಶ ಎಂಬಂತೆ ಬಿಂಬಿಸುತ್ತಿದ್ದ. ಅಲ್ಲದೇ ಇದಕ್ಕಾಗಿ ಧ್ವಜ, ಲಾಂಛನ, ಪಾಸ್‌ಪೋರ್ಟ್‌‌‌‌ಗಳನ್ನು ಸಹ ಸಿದ್ಧಪಡಿಸಿದ್ದ.ಆಂಗ್ಲ ಮಾಧ್ಯಮ ವರದಿ ಪ್ರಕಾರ ಈ ದೇಶಕ್ಕೆ ‘ಕೈಲಾಸ’ ಎಂದು ಹೆಸರಿಟ್ಟಿದ್ದಾನೆ. ಈ ಸುದ್ಧಿ ಯಾವ ಮಟ್ಟಿಗೆ ವೈರಲ್ ಆಗಿತ್ತು ಎಂಬುದು ತಮಗೆ ತಿಳಿದಿದೆ. ಇದೀಗ ಈ ಸ್ವಯಂ ಘೋಷಿತ ದೇವ ಮಾನವ , ಕೋತಿ, ಹಸು, ಸಿಂಹಗಳು ಸಂಸ್ಕೃತ ಮತ್ತು ತಮಿಳಿನಲ್ಲಿ ಮಾತನಾಡಲು ಸಾಧ್ಯವೇ..ಮಾಡಿ ತೋರಿಸುತ್ತೇನೆ ಎಂದು ಪ್ರಮಾಣ ಮಾಡಿದ್ದಾನೆ. ಭಕ್ತರನ್ನು ಉದ್ದೇಶಿಸಿ ಹೇಳಿದ ಈ ಮಾತುಗಳ  ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

Advertisement

 


ಭಕ್ತರನ್ನು ಉದ್ದೇಶಿಸಿ ಮಾತನಾಡಿರುವ ನಿತ್ಯಾನಂದ ಸ್ವಾಮಿಜಿ, ಕೋತಿಗಳು ಸೇರಿ ಹಲವು ಪ್ರಾಣಿಗಳಿಗೆ ಮನುಷ್ಯರಲ್ಲಿರುವ ಅನೇಕ ಒಳ ಅಂಗಗಳು ಇಲ್ಲ. ಆದರೆ, ಆ ಪ್ರಾಣಿಗಳಲ್ಲಿನ ಆಂತರಿಕ ಜಾಗೃತಾವಸ್ಥೆಯನ್ನು ಬೆಳೆಸುವ ಮೂಲಕ ಮಾತನಾಡುವಂತೆ ಮಾಡಬಹುದು. ನಾನು ಇದನ್ನು ವೈಜ್ಞಾನಿಕ, ವೈದ್ಯಕೀಯ ಪರೀಕ್ಷೆ, ಸಂಶೋಧನೆ ಮೂಲಕ ಸಾಬೀತು ಪಡಿಸುತ್ತೇನೆ ಎಂದಿದ್ದಾರೆ.ಪ್ರಾಣಿಗಳು ಮಾತನಾಡುವಂತೆ ಮಾಡಲು ಸಾಫ್ಟ್​ವೇರ್​ ಇದೆ. ಈ ಸಾಫ್ಟ್​ವೇರ್​ ಅನ್ನು ಪರೀಕ್ಷೆ ಮಾಡಿದ್ದೇನೆ. ಚೆನ್ನಾಗಿಯೇ ಕೆಲಸ ಮಾಡುತ್ತದೆ. ಇನ್ನೊಂದು ವರ್ಷದೊಳಗೆ ಸಾಫ್ಟ್​ವೇರ್​ ಅಭಿವೃದ್ಧಿಗೊಳಿಸಿ ಪ್ರಾಣಿಗಳು ಸಂಸ್ಕೃತ, ತಮಿಳು ಮಾತನಾಡುವಂತೆ ಮಾಡುತ್ತೇನೆ ಎಂದು ಆತ್ಮವಿಶ್ವಾಸದಿಂದ ಹೇಳಿದ್ದಾರೆ.

Advertisement
Share this on...