ನಿತ್ಯಾ ಮೆನೆನ್ ಈ ಬಟ್ಟೆಯನ್ನು ಹರಾಜಿಗಿಡಲು ನಿರ್ಧರಿಸಿದ್ದು ಏಕೆ ಗೊತ್ತಾ ?

in ಮನರಂಜನೆ 23 views

ಪ್ರತಿಭಾವಂತ ನಟಿ ನಿತ್ಯಾ ಮೆನೆನ್ ಅವರು ತಮ್ಮ ಕಣ್ಣುಗಳ ಮೂಲಕವೇ ಸಾಕಷ್ಟು ಭಾವನೆಗಳನ್ನು ಚಿತ್ರಿಸಬಲ್ಲ ನಟಿ. ಅಂದಹಾಗೆ ನಿತ್ಯಾ ಇದೀಗ ತಮ್ಮ ವಾರ್ಡ್ ರೋಬ್’ನಿಂದ ವಿಶೇಷ ಉಡುಪನ್ನು ಹೊರತೆಗೆದು ಹರಾಜು ಹಾಕುತ್ತಿದ್ದಾರೆ. ಹೌದು, ನಿತ್ಯಾ ಈಗ ತನ್ನ ಉಡುಪನ್ನು ಹರಾಜು ಮಾಡುವ ಮೂಲಕ ಕೊರೊನಾ ವೈರಸ್ ಪರಿಹಾರ ಕಾರ್ಯಕ್ಕೆ ನೀಡಲಿದ್ದಾರೆ. ನಂತರ ಹರಾಜಿನಿಂದ ಗಳಿಸಿದ ಆದಾಯವನ್ನು ‘ಅರ್ಪಣಂ ಟ್ರಸ್ಟ್’ಗೆ ನೀಡಲಿದ್ದಾರಂತೆ. ಇದರಿಂದ ಹಳ್ಳಿಗಳಲ್ಲಿನ ಜನರಿಗೆ ಸಹಾಯವಾಗುತ್ತದೆ. ಈ ಲಾಕ್ ಡೌನ್ ಸಮಯದಲ್ಲಿ ಜನರಿಗೆ ಆರ್ಥಿಕ ನೆರವು ನೀಡಿದಂತಾಗುತ್ತದೆ ಎಂಬುದು ನಿತ್ಯಾ ಅನಿಸಿಕೆ. ಇದು ಕಸ್ಟಮ್ ಮೇಡ್ ಡಿಸೈನರ್ ಡ್ರೆಸ್ ಆಗಿದ್ದು, ವಿಶೇಷವಾಗಿ ನಿತ್ಯಾ ಮೆನೆನ್ ಅವರು ಈ ದಿರಿಸನ್ನು ಲ್ಯಾಕ್ಮಿ ಫ್ಯಾಶನ್ ವೀಕ್ನಲ್ಲಿ ರಾಂಪ್ ಸಮಯದಲ್ಲಿ ಧರಿಸಿದ್ದರು. ಈ ಡ್ರೆಸ್ ಅನ್ನು ನಿತ್ಯಾ ಸ್ನೇಹಿತೆ ಕಾವೇರಿ ಡಿಸೈನ್ ಮಾಡಿದ್ದಾರಂತೆ. ಅಲ್ಲದೆ, ನಿತ್ಯಾ ಸ್ವತಃ ಕೈಬರಹದಿಂದ ಬರೆದ ವೈಯಕ್ತಿಕ ಟಿಪ್ಪಣಿಯನ್ನು ಉಡುಪಿನೊಂದಿಗೆ ಬಿಡ್ಡರ್’ಗಳಿಗೆ ಕಳುಹಿಸಲಿದ್ದಾರೆ.

Advertisement

 

Advertisement

Advertisement

ಮೇ 17 ಭಾನುವಾರ ಸಂಜೆ 4 ಗಂಟೆಗೆ ಹರಾಜು ನೇರವಾಗಿ ಪ್ರಸಾರವಾಗಲಿದೆ. ಆಸಕ್ತರು ತಾವು ಬಿಡ್ ಮಾಡಲು ಬಯಸುವ ಮೊತ್ತವನ್ನು ನೇರವಾಗಿ ಸಂದೇಶದ ಮೂಲಕ ಕಳುಹಿಸಬಹುದು. ಅತಿ ಹೆಚ್ಚು ಬಿಡ್ ಮಾಡಿದವರು ಈ ಉಡುಪನ್ನು ಪಡೆದುಕೊಳ್ಳುತ್ತಾರೆ. ಇತ್ತೀಚೆಗಷ್ಟೇ ಕೊರೊನಾ ಸಾಂಕ್ರಾಮಿಕದಿಂದ ಪಾರಾಗಲು ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ಇರುವಂತೆ ನಿತ್ಯಾ ಒತ್ತಾಯಿಸಿದ್ದರು. ಬಾಲಿವುಡ್ ಬ್ಲಾಕ್ ಬಸ್ಟರ್ ‘ಮಿಷನ್ ಮಂಗಲ್’ ನಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡ ನಿತ್ಯಾ, ಈ ವರ್ಷ ತಮ್ಮ ಹೊಸ ಚಿತ್ರಗಳ ಬಗ್ಗೆ ಇನ್ನೂ ಸುದ್ದಿ ನೀಡಿಲ್ಲ. ಕನ್ನಡದ ‘7 0 ಕ್ಲಾಕ್’ ಚಿತ್ರದಿಂದ ಪೋಷಕ ಪಾತ್ರದಲ್ಲಿ ತನ್ನ ನಟನಾ ವೃತ್ತಿಯನ್ನು ಪ್ರಾರಂಭಿಸಿದ ನಿತ್ಯಾ, ಇದುವರೆಗೂ ಕನ್ನಡ, ತೆಲಗು, ತಮಿಳು ಮತ್ತು ಮಳಯಾಳಂ ಚಿತ್ರಗಳಲ್ಲಿ ಪ್ರಧಾನವಾಗಿ ಕೆಲಸ ಮಾಡಿದ್ದಾರೆ. ತೆಲುಗಿನಲ್ಲಿ ‘ಗುಂಡೆ ಜಾರಿ ಗಲಂತೈಯಿಂದಿ’ ಮತ್ತು ‘ಮಳ್ಳಿ ಮಳ್ಳಿ ಇದಿ ರಾನಿ ರೋಜು’ ಚಿತ್ರಗಳಿಗೆ ಎರಡು ಬಾರಿ ಫಿಲ್ಮ್ ಫೇರ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

Advertisement

 

 

ಬೆಂಗಳೂರಿನಲ್ಲಿ ಜನಿಸಿದ ನಿತ್ಯಾ, ಮಣಿಪಾಲ್ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಪದವಿ ಅಧ್ಯಯನ ಮಾಡಿದ್ದಾರೆ. ಒಮ್ಮೆ ಸಂದರ್ಶನವೊಂದರಲ್ಲಿ ನಿತ್ಯಾ, ನಾನು ನಟಿಯಾಗಲು ಎಂದೂ ಬಯಸಿರಲಿಲ್ಲ, ಆದರೆ ಪತ್ರಕರ್ತೆಯಾಗಬೇಕೆಂಬ ಹಂಬಲವಿತ್ತು ಎಂದು ತಿಳಿಸಿದ್ದರು.

Advertisement
Share this on...