“ಇನ್ನು ಮುಂದೆ ನನ್ನ ಉದ್ಯಮದ ಯಾರ ಹುಟ್ಟುಹಬ್ಬ, ಸಿನಿಮಾ, ಸ್ನೇಹ, ಕಾರ್ಯಕ್ರಮ ಭೇಟಿ, ಹರಟೆ ನನ್ನಿಂದ ಇರುವುದಿಲ್ಲ” – ಜಗ್ಗೇಶ್

in ಮನರಂಜನೆ/ಸಿನಿಮಾ 340 views

ನವರಸನಾಯಕ ಜಗ್ಗೇಶ್ ಆಡಿಯೋ ಲೀಕ್ ವಿವಾದ ಸ್ಯಾಂಡಲ್ ವುಡ್ ನೆಮ್ಮದಿಗೆ ಬೆಂಕಿ ಇಟ್ಟಿದೆ. ರೊಚ್ಚಿಗೆದ್ದಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ಹಿರಿಯ ನಟ ಜಗ್ಗೇಶ್ ವಿರುದ್ಧ ಮುಗಿಬಿದ್ದಿದ್ದಾರೆ. ಈ ಬಗ್ಗೆ ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೂಲಕ ಬೇಸರ, ಅಸಮಾಧಾನ ಹೊರಹಾಕಿದ್ದಾರೆ. ಈಗಾಗಲೇ ಇದು ಮಾಧ್ಯಮಗಳಲ್ಲಿ ಬಹು ದೊಡ್ಡ ಸುದ್ದಿಯಾಗಿದೆ.ಜೊತೆಗೆ ಜಗ್ಗೇಶ್ ವಿಡಿಯೋ ಮೂಲಕ ಪ್ರತಿಕ್ರಿಯೆ ನೀಡುತ್ತಿದ್ದಂತೆ ಈ ವಿವಾದ ಮತ್ತಷ್ಟು ದೊಡ್ಡದಾಗಿದ್ದು, ಪರ ವಿರೋಧ ಚರ್ಚೆಗಳು ನಡೆಯುತ್ತಿದೆ. ಇಬ್ಬರ ನಟರ ನಡುವೆ ಏನೇ ಇರಬಹುದು, ಆದರೆ ಒಬ್ಬ ಹಿರಿಯ ನಟ, 40 ವರ್ಷಗಳಿಂದ ಕಲಾ ಸೇವೆ ಮಾಡಿರುವ ನಟನಿಗೆ ಚಿತ್ರೀಕರಣ ಸ್ಥಳದಲ್ಲಿ ಮುತ್ತಿಗೆ ಹಾಕಿ ಅವಮಾನ ಮಾಡಿದ್ದು ಸರಿಯಲ್ಲ ಎನ್ನುವ ಮಾತುಗಳು ಕೇಳಿಬರುತ್ತಿದೆ. ನವರಸನಾಯಕ ಜಗ್ಗೇಶ್, ದರ್ಶನ್ ಹುಡುಗರ ಕುರಿತು ಮಾತನಾಡಿದ್ದಾರೆ ಎನ್ನುವ ಆಡಿಯೋ ಕ್ಲಿಪ್ ವಿವಾದ ಇನ್ನು ತಣ್ಣಗಾಗಿಲ್ಲ. ಡಿ ಬಾಸ್ ಅಭಿಮಾನಿಗಳನ್ನು ಕೆರಳಿಸಿದ ಈ ಆಡಿಯೋ ಕ್ಲಿಪ್ ವಿವಾದ ಮತ್ತೊಂದು ಹಂತಕ್ಕೆ ಹೋಗಿದ್ದು ಎಲ್ಲರಿಗೂ ಗೊತ್ತೇ ಇದೆ. ಅಂದಹಾಗೆ ತೋತಾಪುರಿ ಚಿತ್ರೀಕರಣಕ್ಕೆಂದು ಸದ್ಯ ಮೈಸೂರಿನಲ್ಲಿ ಬೀಡುಬಿಟ್ಟಿರುವ ಜಗ್ಗೇಶ್ ವಿರುದ್ಧ ಡಿ ಬಾಸ್ ಅಭಿಮಾನಿಗಳು ಮುಗಿಬಿದ್ದಿದ್ದರು.

Advertisement

Advertisement

ಇನ್ನು ಫೆಬ್ರವರಿ 22 ರಂದು ಬೆಳಗ್ಗೆ ಚಿತ್ರೀಕರಣ ಸೆಟ್ ಗೆ ಹೋಗಿದ್ದ ನವರಸ ನಾಯಕ ಜಗ್ಗೇಶ್ ಗೆ ದೊಡ್ಡ ಶಾಕ್ ಎದುರಾಗಿತ್ತು. ಮೇಕಪ್ ಹಾಕಿ ಶೂಟ್ ಗೆ ರೆಡಿಯಾಗಿ ಕುಳಿತಿದ್ದ ಜಗ್ಗೇಶ್ ಅವರನ್ನು ಡಿ ಬಾಸ್ ಅಭಿಮಾನಿಗಳು ಏಕಾಏಕಿ ಮುತ್ತಿಗೆ ಹಾಕಿ ತರಾಟೆ ತೆಗೆದುಕೊಳ್ಳುವ ಮೂಲಕ ಜಗ್ಗೇಶ್ ಗೆ ಶಾಕ್ ನೀಡಿದ್ದರು. ಬಾಸ್ ಅಭಿಮಾನಿಗಳ ಬಗ್ಗೆ ಯಾಕೆ ಹೀಗೆಲ್ಲ ಮಾತನಾಡಿದ್ದೀರಿ, ಮೊದಲು ಕ್ಷಮೆ ಕೇಳಿ ಎಂದು ಪಟ್ಟುಹಿಡಿದ್ದಿದ್ದಾರೆ

Advertisement

 

Advertisement

ಆದರೆ ಶೂಟಿಂಗ್ ಸೆಟ್ ನಲ್ಲಿ ನೆಲದ ಮೇಲೆ ಕುಳಿತಿದ್ದ ಜಗ್ಗೇಶ್ ಅವರನ್ನು ಮುತ್ತಿಗೆ ಹಾಕಿದ್ದ ಅಭಿಮಾನಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ, ಜಗ್ಗೇಶ್ ಅವರಿಗೆ ಮಾತನಾಡಲು ಅವಕಾಶ ಕೊಡದೆ ಎಗರಾಡಿದ್ದಾರೆ.ಅದೇ ಗ್ಯಾಪ್ ನಲ್ಲಿ ಜಗ್ಗೇಶ್ ಮೊಬೈಲ್ ತೆಗೆದು ದರ್ಶನ್ ಗೆ ಕರೆ ಮಾಡಿದರು. ಆದರೆ ಎಷ್ಟೇ ಕಾಲ್ ಮಾಡಿದ್ರು ದರ್ಶನ್ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ. ಗಾಬರಿಯಾದ ಜಗ್ಗೇಶ್ ಅಭಿಮಾನಿಗಳನ್ನು ಸಮಾಧಾನ ಮಾಡಲು ಮುಂದಾದರೂ ಜಗ್ಗೇಶ್ ಮಾತನ್ನು ಕೇಳಿಸಿಕೊಳ್ಳುವ ವ್ಯವದಾನ ಡಿ ಬಾಸ್ ಅಭಿಮಾನಿಗಳಿಗೆ ಇರಲಿಲ್ಲ.ದರ್ಶನ್ ಮತ್ತು ತನ್ನ ವಿರುದ್ಧ ತಂದಿಡಲು ಹೀಗೆ ಮಾಡಿದ್ದಾರೆ ಎಂದು ಜಗ್ಗೇಶ್ ಕುಳಿತಲ್ಲೇ ಸಮರ್ಥನೆ ನೀಡುವ ಪ್ರಯತ್ನ ಮಾಡಿದರೂ ಕೂಡ, ಅಭಿಮಾನಿಗಳು ಸಮಾಧಾನ ಆಗಲಿಲ್ಲ. ಈ ನಡುವೆ ಜಗ್ಗೇಶ್ ವಿರುದ್ಧ ಧಿಕ್ಕಾರ ಕೂಗಿದ್ದರು.

ಈ ವಿವಾದ ಸೃಷ್ಟಿಯಾದ ಬೆನ್ನಲೇ ಜಗ್ಗೇಶ್ ವಿಡಿಯೋ ಮೂಲಕ ಮಾತನಾಡಿದ್ದಲ್ಲದೆ ಮತ್ತೊಂದು ಟ್ವೀಟ್ ಕೂಡ ಮಾಡಿದ್ದಾರೆ.’ಇನ್ಮುಂದೆ ಚಿತ್ರರಂಗದ ಯಾವುದೇ ಕಾರ್ಯಕ್ರಮದಲ್ಲೂ ಭಾಗಿಯಾಗುವುದಿಲ್ಲ ಎಂದು ಜಗ್ಗೇಶ್ ಹೇಳಿದ್ದಾರೆ. ಯಾವುದೇ ಸಂಭ್ರಮದಲ್ಲೂ ತನ್ನ ಹಾಜರಾತಿ ಇರುವುದಿಲ್ಲ’ ಎನ್ನುವ ಬೇಸರದ ಮಾತನ್ನು ನುಡಿದಿದ್ದಾರೆ.ತಮ್ಮ ಟ್ವೀಟ್ ನಲ್ಲಿ ಜಗ್ಗೇಶ್, ‘ಆತ್ಮೀಯರೆ ನನಗೆ ನೀವು ನಿಮಗೆ ನಾನು ಇನ್ನುಮುಂದೆ. ಇನ್ನು ಮುಂದೆ ನನ್ನ ಉದ್ಯಮದ ಯಾರ ಹುಟ್ಟುಹಬ್ಬ, ಸಿನಿಮಾ, ಸ್ನೇಹ, ಕಾರ್ಯಕ್ರಮ, ಭೇಟಿ, ಹರಟೆ ನನ್ನಿಂದ ಇರುವುದಿಲ್ಲ. ಮುಂದೆ ನನ್ನ ಸಿನಿಮಾ ನನ್ನ ಝೀ ಟಿವಿ ಶೋಗೆ ಮೀಸಲು ಬದುಕು. ಕಾರಣ ತುಂಬ ತಾಮಸವಾಗಿದೆ ನಮ್ಮರಂಗ, ದೊಡ್ಡವರು ಬದುಕಿದಾಗಲೆ ಅಪಮಾನಿಸಿ ದೊಡ್ಡವರಾಗುವ ಹುನ್ನಾರ ಪುರುಷರ ಸಾಮ್ರಾಜ್ಯ ಆಗಿದೆ ರಂಗ’ ಎಂದು ಬರೆದುಕೊಳ್ಳುವ ಮೂಲಕ ಬೇಸರ ವ್ಯಕ್ತ ಪಡಿಸಿದ್ದಾರೆ.

ಸದ್ಯ ಜಗ್ಗೇಶ್ ತೋತಾಪುರಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಈಗಾಗಲೇ ಚಿತ್ರೀಕರಣ ನಡೆಯುತ್ತಿದ್ದ ಸ್ಥಳಕ್ಕೆ ದರ್ಶನ್ ಅಭಿಮಾನಿಗಳು ಮುತ್ತಿಗೆ ಹಾಕಿದ್ದರು. ಈ ಘಟನೆಯ ಕುರಿತು ಎಲ್ಲರಿಗೂ ತಿಳಿದೇ ಇದೆ. ಆದರೀಗ ಭುಗಿಲೆದ್ದಿರುವ ವಿವಾದದಿಂದ ಜಗ್ಗೇಶ್ ಅವರಿಗೆ ಚಿತ್ರೀಕರಣದಲ್ಲಿ ಭಾಗಿಯಾಗಲು ಸಾಧ್ಯವಾಗಿಲ್ಲ. ಈ ವಿವಾದ ಎಲ್ಲಾ ತಣ್ಣಗಾದ ಮೇಲೆ ಮತ್ತೆ ಚಿತ್ರೀಕರಣದಲ್ಲಿ ಜಗ್ಗೇಶ್ ಭಾಗಿಯಾಗಲಿದ್ದಾರೆ. ಒಟ್ಟಿನಲ್ಲಿ ನಟ ಜಗ್ಗೇಶ್ ಗೆ ನಿನ್ನೆ ನಡೆದ ಎಲ್ಲಾ ಘಟನೆಗಳಿಂದ ಬೇಸರವಾಗಿದ್ದು ತಮ್ಮ ಬೇಸರವನ್ನು ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡುವ ಮೂಲಕ ಹೊರ ಹಾಕಿದ್ದಾರೆ.

Advertisement