ಈ ಟಾಪ್ ನಟಿಗೆ ಯಾವ ಹೋಟೆಲ್ ನಲ್ಲೂ ರೂಂ ಕೊಡ್ತಿಲ್ಲ ಕಾರಣ ಏನು ಗೊತ್ತಾ..?

in ಮನರಂಜನೆ 122 views

ಕನ್ನಡ ಸೇರಿದಂತೆ ದಕ್ಷಿಣ ಭಾರತದಲ್ಲಿ ಎಲ್ಲಾ ಭಾಷೆಗಳಲ್ಲಿ ನಟಿಸಿರುವ ಈ ನಟಿ ಭಾರಿ ಬೇಡಿಕೆಯ ಕಲಾವಿದೆ. ಆದರೆ ಸ್ಟಾರ್ ಹೋಟೆಲ್ ನವರು ಈ ನಟಿಗೆ ಸುತಾರಾಂ ರೂಂ ಮಾತ್ರ ಕೊಡಲ್ಲ ಎಂಬ ನಿರ್ಧಾರಕ್ಕೆ ಬಂದಿರುತ್ತಾರೆ ಅಂದರೆ ಅದಕ್ಕೆ ಕಾರಣ ಏನು ಎಂಬ ಪ್ರಶ್ನೆ ಕಾಡುವುದು ಸಹಜ. ಹಾಗಾದರೆ ಈ ನಟಿ ಮಾಡಿದ್ದಾದರು ಏನು..?

Advertisement

 

Advertisement

Advertisement

 

Advertisement

ದಕ್ಷಿಣ ಭಾರತದ ಟಾಪ್ ನಟಿಯಾಗಿರುವ ನಯನತಾರ ಯಾವುದೇ ಶೂಟಿಂಗ್ ಗೆ ಹೋದರೂ ಆಕೆಗೆ ಫೈವ್ ಸ್ಟಾರ್ ಹೋಟೆಲ್ ವ್ಯವಸ್ಥೆ ಮಾಡಲೇಬೇಕು. ಅದು ಅವರ ಕಂಡೀಶನ್ ಗಳಲ್ಲಿ ಒಂದು ಕೂಡ ಇರಬಹುದು. ನಯನತಾರ ನಮ್ಮ ಹೋಟೆಲ್ ನಲ್ಲಿ ತಂಗಿದರೆ ಸಾಕು ಅಂತ ಹೋಟೆಲ್ ನವರು ನೋಡುತ್ತಿರುತ್ತಾರೆ. ಆದರೆ ಹೈದರಾಬಾದ್ ನ ಹೋಟೆಲ್ ಗಳು ಮಾತ್ರ ಈ ನಟಿ ನಮ್ಮ ಹೋಟೆಲ್ ಗೆ ಬಾರದೇ ಇದ್ದರೆ ಸಾಕು ಏನೇ ಆದರೂ ಆಕೆಗೆ ಮಾತ್ರ ರೂಂ ಕೊಡಲ್ಲ ಎಂದು ಹೇಳಿತ್ತಿದ್ದಾರೆ. ಅದಕ್ಕೆ ಕಾರಣ ಏನು ಗೊತ್ತಾ..?

 

 

ನಯನತಾರಾಗೆ ತುಂಬಾ ಶಾರ್ಟ್ ಟೆಂಪರ್. ಆಕೆಗೆ ಸ್ವಲ್ಪ ಕೋಪ ಬಂದರೆ ಸಾಕು ರೂಂ ನಲ್ಲಿರುವ ವಸ್ತುಗಳನ್ನು ಒಡೆದು ಹಾಕಿ ತಾನಿರುವ ಪ್ರದೇಶವನ್ನು ಯುದ್ದ ಭೂಮಿಯಂತೆ ಮಾಡುತ್ತಾರಂತೆ. ಇನ್ನೂ ನಯನತಾರ ರೂಮ್ ಅನ್ನು ಖಾಲಿ ಮಾಡುವಾಗ ವಸ್ತುಗಳು ಎಲ್ಲೆಂದರಲ್ಲಿ ಬಿದ್ದಿರುತ್ತವೆ. ಅದನ್ನು ಕ್ಲೀನ್ ಮಾಡುವುದಕ್ಕೆ ಹೋಟೆಲ್ ನವರಿಗೆ ಕನಿಷ್ಠ ಎರಡು ದಿನ ಬೇಕಂತೆ. ಫೈವ್ ಸ್ಟಾರ್ ಹೋಟೆಲ್ ನವರು ವಿದೇಶಗಳಿಂದ ಬಾರಿ ದುಡ್ಡು ಕೊಟ್ಟು ವಿಶಿಷ್ಟವಾದ ಹಾಗು ವಿಭಿನ್ನವಾದ ವಸ್ತುಗಳನ್ನು ತರಿಸಿ ಆಕರ್ಷಣೆಗಾಗಿ ತಮ್ಮ ಹೋಟೆಲ್ ನಲ್ಲಿ ಇಟ್ಟಿರುತ್ತಾರೆ. ಅದ್ಯಾವುದು ನೋಡದೆ ಕೈಗೆ ಸಿಕ್ಕ ವಸ್ತುಗಳನ್ನು ಬೆಲೆಬಾಳುವ ವಸ್ತುಗಳನ್ನು ಒಡೆದು ಹಾಕುವ ಈ ನಟಿ ನಂತರ ಹಣ ಕಟ್ಟಿದ್ದರು ಅದೇ ರೀತಿ ವಸ್ತುಗಳನ್ನು ಮತ್ತು ಖರೀದಿ ಮಾಡಿ ತರಿಸಲು ತುಂಬಾ ಕಷ್ಟ ಅನ್ನುವುದು ಹೋಟೆಲ್ ನವರ ಅಳಲು.

 

 

ಈ ನಟಿ ತಂಗಿರುವ ಎಲ್ಲಾ ಹೋಟೆಲ್ ಗಳಲ್ಲೂ ಇದೆ ಸ್ಥಿತಿಯಂತೆ. ಹಾಗಾಗಿ ಹೈದರಾಬಾದ್ ನ ಸ್ಟಾರ್ ಹೋಟೆಲ್ ನವರು ಡಿಸ್ಕಸ್ ಮಾಡಿಕೊಂಡು ಯಾವುದೇ ಹೋಟೆಲ್ ನಲ್ಲಿ ರೂಂ ಕೊಡಬಾರದು ಎನ್ನುವ ನಿರ್ಧಾರಕ್ಕೆ ಬಂದಿದ್ದಾರಂತೆ. ಹಾಗಾಗಿ ಹೈದರಾಬಾದಿನಲ್ಲಿ ರೂಂ ಸಿಗದೆ ಈ ನಟಿ ವಾಪಸ್ ಚೆನೈಗೆ ಹೋದ ಪ್ರಸಂಗ ಕೂಡ ನಡೆದಿತ್ತಂತೆ. ಆದರೆ ನಿರ್ದೇಶಕ ವಿಜ್ಞೇಶ್ ಶಿವನ್ ಜೊತೆ ಲವ್ ನಲ್ಲಿ ಬಿದ್ದಮೇಲೆ ನಟಿ ನಯನತಾರಾ ಸ್ವಲ್ಪ ಕಾಮ್ ಆಗಿದ್ದು ಈಗ ಹೋಟೆಲ್ ವಸ್ತುಗಳನ್ನು ಒಡೆದು ಹಾಕುವುದು ಕಡಿಮೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಏನೇ ಆದರೂ ವೃತ್ತಿಜೀವನದಲ್ಲಿ ಹಾಗೂ ವೈಯಕ್ತಿಕ ಜೀವನದಲ್ಲಿ ಹೇಗೆ ಇರಬೇಕು ಎಂದು ನಟಿ ಸೌಂದರ್ಯ ಹಾಗೂ ಅನುಷ್ಕಾ ಶೆಟ್ಟಿ ಅವರನ್ನು ನೋಡಿ ಇತರ ನಟಿಯರು ಕಲಿಯಬೇಕೆನಿಸುತ್ತದೆ.

– ಸುಷ್ಮಿತಾ

Advertisement
Share this on...