ರಾಜಮೌಳಿಗೆ ಉತ್ತರ ಭಾರತದ ಅಭಿಮಾನಿಗಳು ಇಟ್ಟ ಬೇಡಿಕೆ ಏನು ಗೊತ್ತಾ?

in ಮನರಂಜನೆ 13 views

ಬಾಹುಬಲಿಯ ಭಾರಿ ಯಶಸ್ಸಿನ ನಂತರ ರಾಜಮೌಳಿ ದೇಶದ ಅತ್ಯಂತ ಬೇಡಿಕೆಯ ನಿರ್ದೇಶಕರಲ್ಲಿ ಒಬ್ಬರಾದರು. ಹಲವಾರು ಬಾಲಿವುಡ್ ತಾರೆಯರು ಕೂಡ ಅವರ ನಿರ್ದೇಶನದಲ್ಲಿ ನಟಿಸಲು ಕುತೂಹಲದಿಂದ ಕಾಯುತ್ತಿದ್ದಾರೆ. ಇದೀಗ ಕಳೆದ ಎರಡು ದಿನಗಳಿಂದಲೂ ಹಲವಾರು ಉತ್ತರ ಭಾರತದ ಚಲನಚಿತ್ರ ಪ್ರೇಮಿಗಳು ರಾಜಮೌಳಿ ಅವರಿಗೆ ರಾಮಾಯಣ ಚಿತ್ರ ಮಾಡುವಂತೆ ಕೇಳುತ್ತಿದ್ದು, ರಾಜಮೌಳಿ ಮೇಕ್ ರಾಮಾಯಣ್ ಎಂಬ ಹ್ಯಾಶ್ಟ್ಯಾಗ್ ಟ್ರೆಂಡ್ ಆಗುತ್ತಿದೆ. ಅವರು ಈ ರೀತಿ ಹ್ಯಾಶ್ ಟ್ಯಾಗ್ ಟ್ರೆಂಡ್ ಮಾಡಲು ನಿರ್ದಿಷ್ಟ ಕಾರಣವೂ ಇದೆ. ರಾಜಮೌಳಿ ಅವರ ‘ಬಾಹುಬಲಿ’ ಚಿತ್ರದಿಂದ ಉತ್ತರ ಭಾರತೀಯರು ಮಂತ್ರಮುಗ್ಧರಾಗಿದ್ದು, ರಾಜಮೌಳಿ ಮಹಾಕಾವ್ಯ ರಾಮಾಯಣವನ್ನು ಅವರು ಮುಂದಿನ ಹಂತಕ್ಕೆ ಕೊಂಡೊಯ್ಯುತ್ತಾರೆ ಎಂಬ ವಿಶ್ವಾಸ ಅವರಿಗಿದೆ.

Advertisement

 

Advertisement

Advertisement

ಮಹಾಭಾರತ ಮಹಾಕಾವ್ಯವನ್ನು ನಿರ್ದೇಶಿಸಲು ರಾಜಮೌಳಿ ಅವರು ಸಹ ಆಸಕ್ತಿ ಹೊಂದಿದ್ದು, ಇದು ಅವರ ಕನಸಿನ ಯೋಜನೆ ಎಂದು ಈಗಾಗಲೇ ಹೇಳಿಕೊಂಡಿದ್ದಾರೆ. ತನ್ನ ಕನಸು ಈಡೇರಲು, ಉಳಿದ ಚಿತ್ರಗಳಾದ ‘ಆರ್ಆರ್ಆರ್’ ಮತ್ತು ಮಹೇಶ್ ಬಾಬು ಅವರೊಂದಿಗೆ ಇತರ ಚಿತ್ರಗಳನ್ನು ಮಾಡಲು ರಾಜಮೌಳಿ ಅವರಿಗೆ 2-3 ವರ್ಷ ಸಮಯ ಬೇಕು. ಹಾಗಾಗಿ ರಾಜಮೌಳಿ ಉತ್ತರ ಭಾರತದ ಅಭಿಮಾನಿಗಳ ಪ್ರಸ್ತಾಪವನ್ನು ಪರಿಗಣಿಸಿ, ರಾಮಾಯಣದ ಬಗ್ಗೆ ಚಲನಚಿತ್ರವನ್ನು ಮಾಡುತ್ತಾರೆಯೇ? ಕಾದು ನೋಡಬೇಕಿದೆ.
ಹಾಗೆ ನೋಡಿದರೆ ಕನ್ನಡ ಚಿತ್ರರಂಗದ ಜತೆಗೆ ಆತ್ಮೀಯ ನಂಟು ಇಟ್ಟುಕೊಂಡಿರುವ ರಾಜಮೌಳಿ ಅವರಿಗೆ ಕನ್ನಡದಲ್ಲೇ ಒಂದು ಸಿನಿಮಾ ಮಾಡುವ ಆಸೆಯೂ ಇದೆ. ಅದೂ ಐತಿಹಾಸಿಕ ಸಿನಿಮಾ. ‘ಕನ್ನಡದಲ್ಲಿ ನಾನು ಚಿತ್ರ ಮಾಡುವುದಾದರೆ ದೊಡ್ಡ ಮಟ್ಟದಲ್ಲಿ ಮಾಡುವ ಆಸೆ ಇದೆ. ಮೊದಲಿನಿಂದಲೂ ವಿಜಯನಗರ ಸಾಮ್ರಾಜ್ಯದ ಕೃಷ್ಣದೇವರಾಯನ ಮೇಲೊಂದು ಸಿನಿಮಾ ಮಾಡುವ ಆಸೆ ಇದೆ.

Advertisement

 

 

ಅದೊಂದು ದೊಡ್ಡ ಸಿನಿಮಾ ಆಗುವುದರಲ್ಲಿ ಎರಡು ಮಾತಿಲ್ಲ. ಆದರೆ, ಯಾವಾಗ ಮಾಡುತ್ತೇನೆಂಬುದು ಸದ್ಯಕ್ಕೆ ಯೋಚನೆ ಇಲ್ಲ’ ಎನ್ನುವ ರಾಜಮೌಳಿ ಅವರನ್ನು ಯಾವ ನಿರ್ಮಾಪಕರು ಕನ್ನಡಕ್ಕೆ ಕರೆತರುತ್ತಾರೆಂಬುದು ನೋಡಬೇಕಿದೆ. ರಾಜಮೌಳಿ ಚಿತ್ರರಂಗಕ್ಕೆ ಬಂದು 17 ವರ್ಷಗಳಾಗುತ್ತಿವೆ ಎಂಬುದು ಖುಷಿಯ ವಿಚಾರ. “ಇಷ್ಟು ವರ್ಷಗಳಲ್ಲಿ ನಾನು ಮಾಡಿದ್ದು ಕಡಿಮೆ. ಮಾಡಬೇಕಿರುವುದು ಇನ್ನೂ ಹೆಚ್ಚಿದೆ. ಯಾಕೆಂದರೆ ನಾನು ಎಂದಿಗೂ ಸಿನಿಮಾ ವಿದ್ಯಾರ್ಥಿಯಾಗಿಯೇ ಉಳಿದುಕೊಳ್ಳಬೇಕು ಎಂದುಕೊಂಡಿರುವೆ. ಇಷ್ಟು ದಿನ ನನ್ನ ನಿರ್ದೇಶಕನಾಗಿ ನೋಡಿದ ಪ್ರತಿಯೊಬ್ಬರಿಗೂ ನಾನು ಋಣಿ” ಎಂದು ರಾಜ ಮೌಳಿ ಸಂದರ್ಶನವೊಂದರಲ್ಲಿ ಹೇಳಿದ್ದನ್ನು ನಾವಿಲ್ಲಿ ಸ್ಮರಿಸಿಕೊಳ್ಳಬಹುದು.

Advertisement
Share this on...