ಈಶಾನ್ಯ ರಾಜ್ಯದ ಮೊದಲ ಕೊರೊನಾ ರೋಗಿ ಗುಣಮುಖ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಸಾಧ್ಯತೆ

in ಕನ್ನಡ ಮಾಹಿತಿ 46 views

ದೇಶಾದ್ಯಂತ ವೇಗವಾಗಿ ಬೆಳೆಯುತ್ತಿರುವ ಕೊರೊನಾ ವೈರಸ್ ಪ್ರಕರಣಗಳಲ್ಲಿ ಕೆಲವು ಒಳ್ಳೆಯ ಸುದ್ದಿಗಳು ಹೊರಬರುತ್ತಿವೆ. ಇದೀಗ ಈಶಾನ್ಯ ಭಾರತದ ಮೊದಲ ಕೊರನಾ ರೋಗಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಗಿದೆ. ಕಳೆದ ತಿಂಗಳು ಕೊರೊನಾ ವೈರಸ್ ಸೋಂಕಿಗೆ ಒಳಗಾಗಿದ್ದ ಮಣಿಪುರದ 23 ವರ್ಷದ ಯುವತಿಗೆ ಚಿಕಿತ್ಸೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈಶಾನ್ಯ ಭಾರತದಲ್ಲಿ ಕೊರೊನಾದ ಮೊದಲ ಪ್ರಕರಣ ಇದು.

Advertisement

 

Advertisement

Advertisement

 

Advertisement

ಮಾರ್ಚ್ 23 ರಂದು ಇಂಗ್ಲೆಂಡ್ಗೆ ಪ್ರಯಾಣಿಸುತ್ತಿದ್ದ ಮಹಿಳೆ ಕೊರೊನಾ ಸೋಂಕಿಗೆ ಒಳಗಾಗಿದ್ದು, ಜವಾಹರಲಾಲ್ ನೆಹರು ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್’ನ (ಜೆಎನ್ಐಎಂಎಸ್) ಪ್ರತ್ಯೇಕ ವಾರ್ಡ್ಗೆ ದಾಖಲಾಗಿದ್ದರು.  ಮಹಿಳೆಯ ಕೊನೆಯ ಪರೀಕ್ಷಾ ವರದಿ ನಕಾರಾತ್ಮಕವಾಗಿದ್ದು, ಈ ಅಪಾಯಕಾರಿ ವೈರಸ್ನಿಂದ ಆಕೆ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ ಎಂದು ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಎಲ್ ಜಯಂತ್ಕುಮಾರ್ ಸಿಂಗ್ ಹೇಳಿದ್ದಾರೆ.

 

 

ಇದು ಇಡೀ ವೈದ್ಯಕೀಯ ವಿಭಾಗದ ವೈದ್ಯರು ಮತ್ತು ಸಿಬ್ಬಂದಿ, ವಿಶೇಷವಾಗಿ ಜೆಎನ್ಐಎಂಎಸ್ ನ ಒಂದು ದೊಡ್ಡ ಸಾಧನೆಯಾಗಿದೆ ಎಂದು ಸಚಿವರು ಹೇಳಿದ್ದಾರೆ.  ಜವಾಹರಲಾಲ್ ನೆಹರು ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ನಿರ್ದೇಶಕ ಥೋ ಭೀಮೋ ಮಾತನಾಡಿ, ಏಪ್ರಿಲ್ 4 ರಂದು ಅವರ ಮೊದಲ ವರದಿ ನಕಾರಾತ್ಮಕವಾಗಿದೆ. ನಂತರ ಮತ್ತೊಂದು ದೃಢೀಕರಣ ಪರಿಶೀಲನಾ ವರದಿಯೂ ನಕಾರಾತ್ಮಕವಾಗಿದೆ ಎಂದು ಹೇಳಿದ್ದಾರೆ. ಈ ರೀತಿಯಾಗಿ ಆಕೆ ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾಳೆ. ಇಂದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಥೋ ಭೀಮೋ ಅವರು ತಿಳಿಸಿದ್ದಾರೆ.

 

 

ಅಂದಹಾಗೆ ಕೊರೊನಾ ಸೋಂಕು ಭಾರತದಲ್ಲಿ ನಿರೀಕ್ಷೆಗಿಂತ ವೇಗವಾಗಿ ಹರಡುತ್ತಿದೆ. ಇಲ್ಲಿಯವರೆಗೆ, ದೇಶದಲ್ಲಿ 4000 ಕ್ಕೂ ಹೆಚ್ಚು ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ವರದಿಯಾಗಿವೆ. ಇದು ಸಮುದಾಯಕ್ಕೆ ಹರಡುವ ಸಾಧ್ಯತೆಯನ್ನು ಹೆಚ್ಚಿಸುತ್ತಿದೆ. ವೈರಸ್ ಸಮುದಾಯಕ್ಕೆ ಹರಡುವುದನ್ನು ನಿಲ್ಲಿಸದಿದ್ದರೆ, ಅದು ತುಂಬಾ ಅಪಾಯಕಾರಿ. ಆದ್ದರಿಂದ ಇದನ್ನು ನಿಭಾಯಿಸಲು ದೇಶದಲ್ಲಿ ಹೆಚ್ಚಿನ ಕೊರೊನಾ ಪರೀಕ್ಷೆಗಳು ನಡೆಯಲಿವೆ ಎಂದು ಕೇಂದ್ರ ಸರ್ಕಾರ ಘೋಷಿಸಿದೆ.  ಈ ನಡುವೆ ಪ್ರಧಾನಿ ಮೋದಿಯವರ ಪರಿಹಾರ ನಿಧಿಗೆ ಅನೇಕ ಜನರು ದೇಣಿಗೆ ನೀಡುತ್ತಿದ್ದಾರೆ. ಈಗಂತೂ ಇನ್ನೂ ಅನೇಕ ಕಂಪನಿಗಳು, ಸಂಸ್ಥೆಗಳು ಮತ್ತು ವ್ಯಕ್ತಿಗಳು ಕೊರೊನಾ ವೈರಸ್ ವಿರುದ್ಧ ಹೋರಾಡಲು, ಸರ್ಕಾರಕ್ಕೆ ಸಹಾಯ ಮಾಡಲು ಸಹಾಯ ಹಸ್ತ ಚಾಚುತ್ತಿರುವುದನ್ನು ನೀವು ಗಮನಿಸಬಹುದು.

Advertisement
Share this on...