ಕಿರಿಕ್ ರಾಣಿ ಸಂಯುಕ್ತಾ ಹೆಗ್ಡೆ ಎಲ್ಲಿದ್ದಾರೆ…ಏನು ಮಾಡುತ್ತಿದ್ದಾರೆ…? ಹೊಸ ಫೋಟೊಗಳು ವೈರಲ್..ಯಾವುದು ಗೊತ್ತಾ..?

in ಮನರಂಜನೆ 174 views

ಕಿರಿಕ್ ಹುಡುಗಿ ಎಂದೇ ಹೆಸರಾಗಿರುವ ಸಂಯುಕ್ತಾ ಹೆಗ್ಡೆಯನ್ನು ನೀವು ಮರೆಯಲು ಸಾಧ್ಯವಿಲ್ಲ ಬಿಡಿ. ರಿಶಭ್ ಶೆಟ್ಟಿ ನಿರ್ದೇಶನದಲ್ಲಿ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದ ‘ಕಿರಿಕ್ ಪಾರ್ಟಿ’ ಚಿತ್ರದ ಮೂಲಕ ಸ್ಯಾಂಡಲ್​​ವುಡ್​​​ಗೆ ಎಂಟ್ರಿ ನೀಡಿದ ಹುಡುಗಿಯನ್ನು ಜನರು ಆಕೆ ಮಾಡಿಕೊಂಡ ಕಿರಿಕ್​​​ನಿಂದಲೋ , ಸಿನಿಮಾ ಹೆಸರಿನ ಕಾರಣದಿಂದಲೋ ಕಿರಿಕ್ ಹುಡುಗಿ ಎಂದೇ ಕರೆಯುತ್ತಾರೆ.

Advertisement

 

Advertisement

Advertisement

 

Advertisement

ಸದ್ಯಕ್ಕೆ ಕನ್ನಡ ಸಿನಿಮಾ ಇಂಡಸ್ಟ್ರಿಯಿಂದ ದೂರವಿರುವ ಈ ಕಿರಿಕ್ ರಾಣಿ ಏನು ಮಾಡುತ್ತಿದ್ದಾರೆ ಎಂಬ ಕುತೂಹಲ ಸಿನಿಪ್ರಿಯರಿಗೆ ಇದ್ದೇ ಇರುತ್ತದೆ. ಸದ್ಯಕ್ಕೆ ಈ ನಟಿ ಅಪ್ಪ ಅಮ್ಮನ ಜೊತೆ ಕಾಲ ಕಳೆಯುತ್ತಿದ್ದಾರೆ. ಕೊರೊನಾ ಲಾಕ್​​ಡೌನ್​​​​​​​​​​​ನಿಂದ ಹೊರಗೆ ಎಲ್ಲೂ ಹೋಗದೆ ಮನೆಯಲ್ಲೇ ಉಳಿದುಕೊಂಡಿರುವ ಸಂಯುಕ್ತಾ ಹೆಗ್ಡೆ ಮನೆಯಲ್ಲೇ ಎಂಜಾಯ್ ಮಾಡುತ್ತಿದ್ದಾರೆ.

 

 

ಸಂಯುಕ್ತಾ ತನ್ನ ತಂದೆ ತಾಯಿ ಜೊತೆ ಇರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಈ ನಟಿ ತಂದೆ ತಾಯಿ ಕೂಡಾ ಸಂಯುಕ್ತಾ ಜೊತೆ ಫೋಟೋಗೆ ಪೋಸ್ ಕೊಟ್ಟಿರುವುದನ್ನು ನೀವು ಈ ಪೋಟೋಗಳಲ್ಲಿ ನೋಡಬಹುದು. ಸಂಯುಕ್ತ ತಂದೆ ಹಿಂದೂ ಆಗಿದ್ದು ತಾಯಿ ಕ್ರೈಸ್ತ ಸಮುದಾಯಕ್ಕೆ ಸೇರಿದವರು. ಇವರಿಬ್ಬರದ್ದು ಪ್ರೇಮ ವಿವಾಹ.

 

ಮಗಳನ್ನು ಬಹಳ ಮುದ್ದಾಗಿ ಬೆಳೆಸಿರುವ ಸಂಯುಕ್ತಾ ತಂದೆ ತಾಯಿ ಆಕೆಗೆ ಸಂಪೂರ್ಣ ಸ್ವಾತಂತ್ಯ್ರ ನೀಡಿದ್ದಾರೆ. ‘ಕಿರಿಕ್ ಪಾರ್ಟಿ’ ನಂತರ ಸಂಯುಕ್ತ ‘ಕಾಲೇಜು ಕುಮಾರ’ ಚಿತ್ರದಲ್ಲಿ ನಟಿಸಿದರು. ನಂತರ ಕನ್ನಡದಲ್ಲಿ ಹೆಚ್ಚು ಅವಕಾಶಗಳು ದೊರೆಯದ ಕಾರಣ ತಮಿಳು ಹಾಗೂ ತೆಲುಗಿನತ್ತ ಮುಖ ಮಾಡಿದರು. ಕಿರಿಕ್ ಪಾರ್ಟಿ ತೆಲುಗು ರೀಮೇಕ್ ‘ರ್ರಾಕ್ ಪಾರ್ಟಿ’ ಸಿನಿಮಾದಲ್ಲಿ ಸಂಯುಕ್ತಾ ಹೆಗ್ಡೆ ಕನ್ನಡದಲ್ಲಿ ನಟಿಸಿದ್ದ ಆರ್ಯ ಪಾತ್ರದಲ್ಲೇ ನಟಿಸಿದ್ದಾರೆ. ಇದಾದ ನಂತರ ತಮಿಳಿನ ‘ವಾಚ್​​ಮ್ಯಾನ್’ ಚಿತ್ರದಲ್ಲಿ ನಟಿಸಿದರು. ಕನ್ನಡದ ‘ತುರ್ತು ನಿರ್ಗಮನ’ ಚಿತ್ರದಲ್ಲಿ ಕೂಡಾ ಸಂಯುಕ್ತ ನಟಿಸಿದ್ದಾರೆ.

 

 

ಬಿಗ್​ಬಾಸ್​​​​​​​​​​​​​​​​ ಸೀಸನ್ 5 ಕ್ಕೆ ಕೂಡಾ ಸಂಯುಕ್ತಾ ಹೆಗ್ಡೆ ಗೆಸ್ಟ್ ಕಂಟಸ್ಟಂಟ್ ಆಗಿ ಹೋದರು. ಆದರೆ 5-6 ದಿನಗಳ ನಂತರ ಸಹಸ್ಪರ್ಧಿ ಸಮೀರ್ ಆಚಾರ್ಯ ಮೇಲೆ ಹಲ್ಲೆ ಮಾಡಿದ ಆರೋಪದ ಮೇರೆಗೆ ಬಿಗ್​​ಬಾಸ್​​​​ನಿಂದ ಸಂಯುಕ್ತಾ ಹೆಗ್ಡೆಯನ್ನು ಹೊರಗೆ ಕಳಿಸಲಾಯ್ತು. ಕಾರ್ಯಕ್ರಮವೊಂದರಲ್ಲಿ ಒಮ್ಮೆ ತಾವು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋಗುವುದಾಗಿ ಅವರು ಹೇಳಿಕೊಂಡಿದ್ದರು. ಆದರೆ ಈಗ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

Advertisement
Share this on...