75 ವರ್ಷಗಳಿಂದ ಸಾಗಿದೆ ಮರದ ಕೆಳಗೆ ಈ ಗುರುವಿನ ನಿರಂತರ ಪಾಠ

in ಕನ್ನಡ ಮಾಹಿತಿ 96 views

ಶಿಕ್ಷಕ ಅಥವಾ ಗುರುವಿಗೆ ಭಾರತೀಯ ಸಂಸ್ಕೃತಿಯಲ್ಲಿ ವಿಶೇಷ ಸ್ಥಾನವಿದೆ. ಮಕ್ಕಳ ಅಥವಾ ವಿದ್ಯಾರ್ಥಿಗಳ ಜೀವನದ ಗುರಿ, ಉದ್ದೇಶಗಳ ಬಗ್ಗೆ ಅರಿವು ಮೂಡಿಸಿ, ಅವರ ಸಾಧನೆಗೆ ಮಾರ್ಗದರ್ಶನ ನೀಡಬಲ್ಲ ಜ್ಞಾನಿ ಗುರು. ವಿದ್ಯಾರ್ಥಿಗಳಲ್ಲಿನ ಅಜ್ಞಾನವೆಂಬ ಕತ್ತಲನ್ನು ಹೋಗಲಾಡಿಸಿ, ಸುಜ್ಞಾನ ಎಂಬ ಬೆಳಕಿನತ್ತ ಕರೆದೊಯ್ಯುವ ಬೋಧಕ. ಹೀಗೆ ಗುರು ಎಂಬ ಪದಕ್ಕೆ ಅನ್ವರ್ಥವಾಗಬಲ್ಲ ಶಿಕ್ಷಕರೊಬ್ಬರು ಬರೋಬ್ಬರಿ 75 ವರ್ಷಗಳಿಂದ ನಿರಂತರವಾಗಿ ಮರದ ಕೆಳಗೆ ಪಾಠ ಮಾಡುತ್ತಿದ್ದಾರೆ.ಅಚ್ಚರಿ ಎನಿಸಿದರೂ ಇದು ನಿಜ. ಓಡಿಶಾದ ನಂದಾ ಪ್ರಾಸ್ಟಿ ಎಂಬ ವೃದ್ಧ ಶಿಕ್ಷಕರು ಯಾವುದೇ ಫಲಾಪೇಕ್ಷೆ ಇಲ್ಲದೇ, 75 ವರ್ಷಗಳಿಂದ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದಾರೆ. ಶಾಲಾ ಕೊಠಡಿ ಕೂಡ ಇಲ್ಲ. ಮಕ್ಕಳು ಕುಳಿತುಕೊಳ್ಳಲು ಯಾವುದೇ ವ್ಯವಸ್ಥೆ ಕೂಡ ಇಲ್ಲ. ಆದರೂ ಈ ಗುರುವುವಿನ ಬಳಿ ಮಕ್ಕಳು ಜ್ಞಾನಾರ್ಜನೆಗಾಗಿ ಬರುತ್ತಲೇ ಇದ್ದಾರೆ. ನಿಸ್ವಾರ್ಥವಾಗಿ ನಿರಂತರವಾಗಿ ಮಕ್ಕಳಿಗೆ ತಮ್ಮ ಜ್ಞಾನವನ್ನು ಈ ಗುರು ಧಾರೆಯೆರೆಯುತ್ತಿಲೇ ಇದ್ದಾರೆ. ಹೌದು ಓಡಿಶಾದ ಬರ್ತಾಂಡಾ ಹಳ್ಳಿಯವರಾದ ನಂದಾ ಪ್ರಾಸ್ಟಿ ಎಂಬ ವೃದ್ಧ ಗುರುವೊಬ್ಬರು ಜೈಪುರ ಎಂಬ ಜಿಲ್ಲೆಯಲ್ಲಿ ಕಳೆದ 75 ವರ್ಷಗಳಿಂದ ಮರದ ನೆರಳಲ್ಲಿ ಕುಳಿತು ಮಕ್ಕಳಿಗೆ ಪಾಠ ಹೇಳುತ್ತಿದ್ದಾರೆ.

Advertisement

Advertisement

4ನೇ ತರಗತಿವರೆಗೆ ಪಾಠಗಳನ್ನು ಮಾಡುವ ಈ ಗುರುವಿನ ಸೇವೆಗೆ ಸರ್ಕಾರದಿಂದ ಯಾವುದೇ ನೆರವು ಸಿಕ್ಕಿಲ್ಲ. ವಿದ್ಯಾರ್ಥಿಗಳಿಂದಲೂ ಯಾವುದೇ ಶುಲ್ಕವನ್ನೂ ಇವರು ಪಡೆಯುತ್ತಿಲ್ಲ. 75 ವರ್ಷಗಳ ಈ ಸೇವೆ ಬಗ್ಗೆ ಮಾತನಾಡಿರುವ ಶಿಕ್ಷಕ ನಂದಾ ಪ್ರಾಸ್ಟಿ, ತಾವು ಕೃಷಿ ಭೂಮಿಯಲ್ಲಿ ಕೆಲಸ ಮಾಡುತ್ತಿದ್ದಾಗ ತಮ್ಮ ಹಳ್ಳಿಯ ಅನಕ್ಷರಸ್ತರನ್ನು ಕಂಡು ಬೇಸರವಾಯಿತು. ಅವರಿಗೆ ಸಹಿ ಮಾಡಲು ಬರದೆ ಹೆಬ್ಬೆರಳು ಒತ್ತುತ್ತಿದ್ದರು. ವಿದ್ಯಾಭಾಸವಿಲ್ಲದೇ ಹೀಗೆ ಕಷ್ಟಪಡುತ್ತಿರುವವರನ್ನು ಕಂಡು ಪಾಠ ಹೇಳಿ ಕೊಡುವುವುದಾಗಿ ಹೇಳಿದೆ. ಹಲವರು ಆಸಕ್ತಿ ವಹಿಸಿ ಬಂದರು. ಬಳಿಕ ಅವರ ಮಕ್ಕಳಿಗೆ ಅಕ್ಷರಾಭ್ಯಾಸ ಹೇಳಿಕೊಡಲು ಆರಂಭಿಸಿದೆ.

Advertisement

Advertisement

ಈಗ ನನ್ನ ಮೊದಲ ಬ್ಯಾಚ್ ನ ಮರಿ ಮೊಮ್ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದೇನೆ ಎಂದು ಹೇಳಿದ್ದಾರೆ. ಮಕ್ಕಳು ನಾಲ್ಕನೇ ತರಗತಿವರೆಗೆ ತಮ್ಮ ಬಳಿ ಪಾಠ ಕಲಿತ ಬಳಿಕ ಅವರನ್ನು ಶಿಕ್ಷಣ ಕೇಂದ್ರಗಳಿಗೆ ಕಳುಹಿಸಬೇಕು ಎಂಬುದು ನಂದಾ ಅವರ ಆಸೆ. ಹೀಗೆ ನಿರಂತರವಾಗಿ ಮಕ್ಕಳಿಗೆ ಪಾಠ ಹೇಳಿಕೊಡುತ್ತಿರುವ ನಂದಾ ಅವರಿಗೆ ಹಳ್ಳಿಯ ಮುಖ್ಯಸ್ಥರು ಉತ್ತಮ ಸೌಲಭ್ಯ ಒದಗಿಸಲು ಸಿದ್ಧರಿದ್ದಂತೆ ಆದರೆ ಅದೆಲ್ಲವನ್ನೂ ನಿರಾಕರಿಸಿರುವ ನಂದಾ ಪ್ರಾಸ್ಟಿ, ಮರದ ಕೆಳಗೇ ಕುಳಿತು ಪಾಠ ಮಾಡುವುದಾಗಿ ಹೇಳಿದ್ದಾರಂತೆ. ನಿರಂತರವಾಗಿ ಮಕ್ಕಳಿಗೆ ಜ್ನಾನ ನೀಡುತ್ತಿರುವ ಈ ಗುರುವಿನ ಸೇವೆಗೆ ನಿಜಕ್ಕೂ ಮೆಚ್ಚಲೇಬೇಕು.

ಕೊಲ್ಲೂರು ಮೂಕಾಂಬಿಕಾ ದೇವಿ ಜ್ಯೋತಿಷ್ಯ ಕೇಂದ್ರ
ಶ್ರೀ ಕಾಳಿಮಾತಾ ದೇವಿ ಉಪಾಸಕರಾದ ಪಂಡಿತ್ ಶ್ರೀ ವಾಸುದೇವ ಗುರೂಜಿ ಅವರು ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಶತ್ರು ಕಾಟ ಪ್ರೀತಿಯಲ್ಲಿ ನಂಬಿ ಮೋಸ ಶ್ರೀ ಪುರುಷ ವಶೀಕರಣ ಮಾಟ ಮಂತ್ರ ನಿವಾರಣೆ ಆರೋಗ್ಯ ಹಣಕಾಸು ಮದುವೆ ಸಂತಾನ ಪ್ರೇಮ ವಿವಾಹ ಮನೆಯಲ್ಲಿ ಅಶಾಂತಿ ಗಂಡ ಹೆಂಡತಿ ಕಲಹ ಇತ್ಯಾದಿ ಏನೇ ಸಮಸ್ಯೆ ಇದ್ದರೂ 3 ದಿನದಲ್ಲಿ  ಫೋನಿನ ಮೂಲಕ ಶಾಶ್ವತ ಪರಿಹಾರ. ph : 8970080017 ಇಂದೇ ಕರೆ ಮಾಡಿ.

Advertisement
Share this on...