Kannada News :100 ವರ್ಷದ ತಾಯಿಯ ಪೆನ್ ಶನ್ ಹಣ ಪಡೆಯಲು ಈ ಮಹಿಳೆ ಮಾಡಿದ್ದೇನು ತಿಳಿದರೆ ಶಾಕ್ ಆಗ್ತೀರಾ !

in ಕನ್ನಡ ಮಾಹಿತಿ 47 views

ತನ್ನ ತಾಯಿಯ ಪೆನ್ ಶನ್ ಹಣ ಪಡೆಯಲು ಬ್ಯಾಂಕ್ ನವರು ದೈಹಿಕ ಪರೀಕ್ಷೆಯನ್ನು ಮಾಡುವ ಅಗತ್ಯವಿದೆ ಎ‌ಂದು ತಿಳಿಸಿದ ಕಾರಣ 100 ವರ್ಷದ ವಯಸ್ಸಿನ ತಾಯಿಯನ್ನು ಮಂಚದ ಸಮೇತ ಬ್ಯಾಂಕಿಗೆ ಎಳೆದುಕೊಂಡು ಹೋದ ಘಟನೆಯೊಂದು ಒಡಿಶಾದಲ್ಲಿ ನಡೆದಿದ್ದು, ಪ್ರತಿಯೊಬ್ಬರಿಗು ಮನಕುಲುಕುವಂತೆ ಆಗಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ನೋಡದವರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಈ ಘಟನೆ ನೋಡುತ್ತಿದ್ದರೆ ‌ ಮಾನವೀಯತೆ ಎಂಬುದು ಇನ್ನೂ ಉಳಿದಿದೆಯೋ? ಎಂಬ ಪ್ರಶ್ನೆ ಎಲ್ಲರಿಗೂ ಮೂಡುತ್ತದೆ.

Advertisement

Advertisement

ಒಡಿಶಾ ಜಿಲ್ಲೆಯ ನೌಪಾರಾದಲ್ಲಿ ಪುಂಜಮತಿ ದೇಯ್ ಎಂಬ ಮಹಿಳೆಗೆ ೬೦ ವರುಷವಾಗಿದ್ದು, ಆಕೆಯವ ತಾಯಿಗೆ ಇದೀಗ 100 ವರ್ಷವಾಗಿದೆ. ವಯ್ಯಸ್ಸಾಗಿರುವ ಕಾರಣ ಆಕೆ ಹಾಸಿಗೆ ಬಿಟ್ಟು ಮೇಲೇಳು ಸಾಧ್ಯವಿಲ್ಲ.ಪ್ರಧಾನ್ ಮಂತ್ರಿ ಗರಿಬ್ ಕಲ್ಯಾಣ್ ಪ್ಯಾಕೇಜ್ ಅಡಿಯಲ್ಲಿ ಕೋವಿಡ್ -19 ಬಿಕ್ಕಟ್ಟಿನ ವೇಳೆಯಲ್ಲಿ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಏಪ್ರಿಲ್ ನಿಂದ ಜೂನ್ ವರೆಗೆ ಮಹಿಳೆಯರಿಗೆ ಜನ ಧನ್ ಬ್ಯಾಂಕ್ ಖಾತೆದಾರರಿಗೆ ಮಾಸಿಕ 500 ರೂ ಗಳನ್ನು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಪ್ಯಾಕೇಜ್ ಮೂಲಕ ನೀಡಲು ಘೋಷಣೆ ಮಾಡಲಾಗಿತ್ತು. ಅದರಂತೆ ತನ್ನ ತಾಯಿಯ ಖಾತೆಯಲ್ಲಿದ್ದ 1500 ರೂಗಳನ್ನು ವಿತ್ ಡ್ರಾ ಮಾಡಲು ಪುಂಜಮತಿ ಉತ್ಕಲ್ ಬ್ಯಾಂಕಿಗೆ ತೆರಳಿದ್ದರು.

Advertisement

Advertisement

ಆದರೆ ಬ್ಯಾಂಕ್ ಮ್ಯಾನೇಜರ್ ಮಾತ್ರ ಖಾತೆದಾರರನ್ನು ಖಡ್ದಾಯವಾಗಿ ಕರೆ ತರಲೇಬೇಕು, ಅವರ ದೈಹಿಕ ಪರೀಕ್ಷೆ ಮಾಡಿಸಬೇಕು,ಆಗ ಮಾತ್ರ ಹಣ ತೆಗೆಯಲು ಸಾಧ್ಯ ಎಂದಿದ್ದಾರೆ. ಮನೆಯಲ್ಲಿ ಕಡು ಬಡತನ, ಆದ ಕಾರಣ ಹಾಸಿಗೆ ಹಿಡಿದ ತಾಯಿಯನ್ನು ಮಗಳು ಮುಂಜಮತಿ ವಿಧಿಯಿಲ್ಲದೆ ಆಕೆಯನ್ನು ಮಂಚದ ಸಮೇತ ಬ್ಯಾಂಕ್ ಬಳಿಗೆ ಮರುದಿನ ಎಳೆದು ತಂದಿದ್ದಾರೆ. ಅನಂತರ ಬ್ಯಾಂಕ್ ಮ್ಯಾನೆಜರ್ ಆಕೆಯ ಹಣವನ್ನು ವಿತ್ ಡ್ರಾ ಮಾಡಲು ಅವಕಾಶ ನೀಡಿದೆ. ಈ ಘಟನೆಯ ಬಗ್ಗೆ ವಿವರಣೆ ನೀಡಿದ್ದ ಜಿಲ್ಲಾಧಿಕಾರಿ ಮಧುಸ್ಮಿತ ಸಾಹೂ ಇದರಲ್ಲಿ ಅಧಿಕಾರಿಗಳ ತಪ್ಪಿಲ್ಲ‌ ಎಂದು ತಿಳಿಸಿದ್ದಾರೆ.

ಈ ಕುರಿತು ಮಾತನಾಡಿರುವ ಜಿಲ್ಲಾಧಿಕಾರಿಗಳು , ಮ್ಯಾನೇಜರ್ ಮಾರನೇ ದಿನ ಆ ಮಹಿಳೆಯ ಮನೆಗೆ ಬಂದು ಖಾತೆದಾರರ ಬಗ್ಗೆ ಮಾಹಿತಿ ಪಡೆಯುವುದಾಗಿ ತಿಳಿಸಿದ್ದರು, ಆದರೆ ಈ ಮಹಿಳೆ ಅವರ ಮಾತನ್ನು ಲೆಕ್ಕಿಸದೇ, ಅಧಿಕಾರಿಗಳು ಬರುವ ಮುನ್ನವೇ ಅವಳೇ ಬ್ಯಾಂಕ್ ಗೆ ತೆರಳಿದ್ದಾರೆ ಎಂದು ಹೇಳಿದ್ದಾರೆ. ಆದರೆ ಮಹಿಳೆ ಮಂಚ ಸಹಿತ ತನ್ನ ತಾಯಿಯನ್ನು ಬ್ಯಾಂಕ್ ಬಳಿಗೆ ಎಳೆದು ತಂದ ಘಟನೆ ಮಾತ್ರ ಲಾಕ್ ಡೌನ್ ನಲ್ಲಿ ಬಡವರಿಗೆ ಹಣದ ಅಗತ್ಯ ಯಾವ ಮಟ್ಟಕ್ಕೆ ಇದೆ ಎಂಬುದಕ್ಕೆ ಸಾಕ್ಷಿಯಾಗಿದೆ.
All Rights Reserved Namma Kannada.

Advertisement
Share this on...