ಈ ಚಿತ್ರಕ್ಕೆ 25ನೇ ವರ್ಷದ ಹುಟ್ಟುಹಬ್ಬ…ಚಿತ್ರದ ವಿಶೇಷತೆ ಬಗ್ಗೆ ನಿಮಗೆಷ್ಟು ಗೊತ್ತು…?

in ಸಿನಿಮಾ 41 views

ಶಿವರಾಜ್​ಕುಮಾರ್ ಹಾಗೂ ಪ್ರೇಮ ಅಭಿನಯದ ‘ಓಂ’ ಸಿನಿಮಾ ಹಾಗೂ ಆ ಚಿತ್ರದ ಹಾಡುಗಳನ್ನು ಯಾರಿಗೆ ಮರೆಯಲು ಸಾಧ್ಯ..? ಏಕೆಂದರೆ ಈ ಚಿತ್ರ ಮಾಡಿರುವ ದಾಖಲೆ ಅಂತಾದ್ದು. 1995 ಮೇ 19 ರಂದು ಬಿಡುಗಡೆಯಾದ ಈ ಸಿನಿಮಾ ಇದೇ ಮೇ 19 ರಂದು ಅಂದರೆ ಇದೇ ಮಂಗಳವಾರ 25ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದೆ.ಹೌದು, ‘ಓಂ’ ಚಿತ್ರ 19 ರಂದು ಸಿಲ್ವರ್ ಜ್ಯೂಬ್ಲಿ ಆಚರಿಸಿಕೊಳ್ಳುತ್ತಿದೆ. ಪೂರ್ಣಿಮಾ ಎಂಟರ್​​​ಪ್ರೈಸಸ್ ಬ್ಯಾನರ್ ಅಡಿ ತಯಾರಾದ ಈ ಸಿನಿಮಾ 20 ವರ್ಷಗಳವರೆಗೆ ಥಿಯೇಟರ್​​​​​​ನಲ್ಲೇ ಸುಮಾರು 551 ಬಾರಿ ಬಿಡುಗಡೆಯಾಗಿದೆ. ಪ್ರತಿಬಾರಿ ಬಿಡುಗಡೆ ಆದಾಗಲೂ ಸಿನಿಮಾ ಸಾಕಷ್ಟು ಲಾಭ ಕೂಡಾ ಮಾಡಿದೆ. ಬಹುಶ: ಕನ್ನಡ ಚಿತ್ರರಂಗ ಮಾತ್ರವಲ್ಲ, ಇತರ ಭಾಷೆಯಲ್ಲೂ ಯಾವ ಸಿನಿಮಾ ಕೂಡಾ ಇಷ್ಟು ಬಾರಿ ಬಿಡುಗಡೆಯಾಗಿಲ್ಲ. ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಈ ಚಿತ್ರದ ಸಿಲ್ವರ್ ಜ್ಯೂಬ್ಲಿ ಸಂಭ್ರಮ ಲಾಕ್​​​​​ಡೌನ್​​​​ ಕಾರಣ ವಿಜೃಂಭಣೆಯಿಂದ ಆಚರಿಸಲು ಸಾಧ್ಯವಾಗುತ್ತಿಲ್ಲ. ಆದರೆ ಉಪೇಂದ್ರ, ಶಿವಣ್ಣನ ಅಭಿಮಾನಿಗಳು ಆ ದಿನ ಕಾಮನ್ ಡಿಪಿ ಮೂಲಕ ಸಂಭ್ರಮವನ್ನು ಆಚರಿಸುತ್ತಿದ್ದಾರೆ.

Advertisement

 

Advertisement

Advertisement

ಇನ್ನು 1995 ರಲ್ಲಿ ಚಿತ್ರವನ್ನು ಬಿಡುಗಡೆ ಮಾಡುವಾಗ ಚಿತ್ರಕ್ಕೆ ಸೆನ್ಸಾರ್ ಅನುಮತಿ ನೀಡಿರಲಿಲ್ಲ. ಏಕಂದರೆ ಚಿತ್ರದಲ್ಲಿ ಉಪೇಂದ್ರ ಕೆಲವೊಂದು ದೃಶ್ಯಗಳನ್ನು ರಾ ಆಗಿ ತೋರಿಸಿದ್ದರು. ರಕ್ತಪಾತ, ಚುಂಬನದ ದೃಶ್ಯಗಳು ಈ ಚಿತ್ರದಲ್ಲಿ ಇತ್ತು. ಅಲ್ಲದೆ ನಿಜವಾದ ರೌಡಿಗಳಾದ ಜೇಡರಹಳ್ಳಿ ಕೃಷ್ಣ, ಬೆಕ್ಕಿನ ಕಣ್ಣು ರಾಜೇಂದ್ರ, ಕೊರಂಗು ಕೃಷ್ಣ, ತನ್ವೀರ್ ಅಹಮದ್​​​​​​​​​ ತಮ್ಮ ಪಾತ್ರಗಳನ್ನು ತಾವೇ ನಿಭಾಯಿಸಿದ್ದರು. ಅಂತೂ ಕಡೆಗೂ ಸಿನಿಮಾ ಸೆನ್ಸಾರ್​ ಅನುಮತಿ ಪಡೆದು ಬಿಡುಗಡೆಯಾಯ್ತು. ನಂತರ ನಡೆದದ್ದು ಇತಿಹಾಸ. ಚಿತ್ರ ಸಿನಿಪ್ರಿಯರಿಗೆ ಮಾತ್ರವಲ್ಲ ಭೂಗತ ಲೋಕಕ್ಕೆ ಕೂಡಾ ಇಷ್ಟವಾಗಿತ್ತು. ಚಿತ್ರ ಕರ್ನಾಟಕ ಮಾತ್ರವಲ್ಲ ರಾಷ್ಟ್ರಮಟ್ಟದಲ್ಲಿ ಕೂಡಾ ಹೆಸರು ಮಾಡಿತ್ತು. ಏಕೆಂದರೆ ಈ ಚಿತ್ರ ತೆಲುಗು ಹಾಗೂ ಹಿಂದಿಗೆ ಕೂಡಾ ರೀಮೇಕ್ ಆಗಿತ್ತು.

Advertisement

ಈ ಚಿತ್ರದ ಕಥೆಯನ್ನು ಉಪೇಂದ್ರ ತಾವು ಕಾಲೇಜಿನಲ್ಲಿ ಓದುವಾಗಲೇ ಬರೆದಿದ್ದರಂತೆ. ಚಿತ್ರದಲ್ಲಿ ಮೊದಲು ‘ಶ್’ ಚಿತ್ರದಲ್ಲಿ ನಟಿಸಿದ್ದ ಕುಮಾರ್ ಗೋವಿಂದ್ ಹಾಗೂ ಜೂಹಿಚಾವ್ಲಾ ನಟಿಸಬೇಕಿತ್ತಂತೆ. ಆದರೆ ನಂತರ ಶಿವರಾಜ್​ಕುಮಾರ್ ಹಾಗೂ ಕೊಡಗಿನ ಸುಂದರಿ ಪ್ರೇಮಾ ಈ ಚಿತ್ರಕ್ಕೆ ಆಯ್ಕೆಯಾದರು. ಇದು ಉಪೇಂದ್ರ ಅವರ 3ನೇ ನಿರ್ದೇಶನದ ಸಿನಿಮಾ. ಈ ಚಿತ್ರ ಉಪೇಂದ್ರ ಅವರಿಗೆ ಒಳ್ಳೆ ಹೆಸರು ತಂದುಕೊಡ್ತು. ಚಿತ್ರದ ಎಲ್ಲಾ ಹಾಡುಗಳು ಇಂದಿಗೂ ಬಹಳ ಫೇಮಸ್. ನಾದಬ್ರಹ್ಮ ಹಂಸಲೇಖ ಚಿತ್ರಕ್ಕೆ ಸಂಗೀತ ನೀಡಿದ್ದರು. ರಕ್ಷಿತ ತಂದೆ ಬಿ.ಸಿ. ಗೌರಿಶಂಕರ್ ಚಿತ್ರಕ್ಕೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದರು. ಪಾರ್ವತಮ್ಮ ರಾಜ್​​ಕುಮಾರ್ ಚಿತ್ರಕ್ಕೆ ಬಂಡವಾಳ ಹೂಡಿದ್ದರು.

 

ಶಿವರಾಜ್​ಕುಮಾರ್, ಪ್ರೇಮ ಜೊತೆಗೆ ಜಿ.ವಿ. ಶಿವಾನಂದ್, ಶ್ರೀಶಾಂತಿ, ಉಪಾಸನೆ ಸೀತಾರಾಂ, ಸಾಧುಕೋಕಿಲ, ಹೊನ್ನವಳ್ಳಿ ಕೃಷ್ಣ, ವಿ. ಮನೋಹರ್, ಮೈಕಲ್ ಮಧು ಹಾಗೂ ಇನ್ನಿತರರು ಚಿತ್ರದಲ್ಲಿ ನಟಿಸಿದ್ದರು. ಒಟ್ಟಿನಲ್ಲಿ ‘ಓಂ’ ಸಿನಿಮಾ ಚಿತ್ರರಂಗದಲ್ಲಿ ದೊಡ್ಡ ದಾಖಲೆ ಮಾಡಿರುವುದಂತೂ ನಿಜ.

Advertisement
Share this on...