ಈರುಳ್ಳಿಯನ್ನು ತಿಂಗಳುಗಟ್ಟಲೆ, ವರ್ಷಗಟ್ಟಲೆ ಸಂಗ್ರಹಿಸಿಡಲು ಈ ರೀತಿ ಮಾಡಿ !

in ಕನ್ನಡ ಮಾಹಿತಿ 36 views

ಈರುಳ್ಳಿಯನ್ನು ಬಹಳ ದಿನಗಳವರೆಗೆ ಅಥವಾ  ತಿಂಗಳುಗಳ ಗಟ್ಟಲೆ, ವರ್ಷಗಳ ಗಟ್ಟಲೆ ಸಂಗ್ರಹಿಸಿಡಲು ವಿವಿಧ ರೀತಿಯ ಟಿಪ್ಸ್ ಗಳನ್ನು ಇಲ್ಲಿ ನಾವು ತಿಳಿಸಿ ಕೊಡುತ್ತಿದ್ದೇವೆ . ಈರುಳ್ಳಿಯ ಬೆಲೆ ಕೆಲವೊಮ್ಮೆ ಕಡಿಮೆ ಇರುತ್ತದೆ ಮತ್ತೆ ಕೆಲವೊಮ್ಮೆ ದುಬಾರಿಯಾಗುತ್ತದೆ. ಆದ್ದರಿಂದ ಬೆಲೆ ಕಡಿಮೆ ಇರುವಾಗ ಈರುಳ್ಳಿಯನ್ನು ಹೆಚ್ಚು ಹೆಚ್ಚು ಸಂಗ್ರಹಿಸಿ ಇಡುವುದು ಒಳ್ಳೆಯದು. ಈರುಳ್ಳಿಯನ್ನು ತೆಗೆದುಕೊಳ್ಳುವಾಗ ದಪ್ಪದಾದ ಲೈಟ್ ಪಿಂಕ್ ಕಲರ್ ಇರುವ ಈರುಳ್ಳಿಯನ್ನು ಆರಿಸಿಕೊಳ್ಳಿ . ಗಾಢವಾದ ಪಿಂಕ್ ಕಲರ್ ಇರುವ ಈರುಳ್ಳಿಯೂ ಚಳಿಗಾಲದಲ್ಲಿ ಸಾಮಾನ್ಯವಾಗಿ ಬರುತ್ತದೆ.  ಈ  ಈರುಳ್ಳಿ ಸರಿಯಾಗಿ ಒಣಗಿರುವುದಿಲ್ಲ ಆದ್ದರಿಂದ ಈರುಳ್ಳಿಗಳು ಕೊಳೆತು ಹಾಳಾಗುತ್ತವೆ.

Advertisement

 

Advertisement

Advertisement

ಈರುಳ್ಳಿಗಳಲ್ಲಿ ಬಹಳ ವಿಧವಾದ ಈರುಳ್ಳಿ ಗಳಿರುತ್ತವೆ ದೊಡ್ಡದಾದ, ಚಿಕ್ಕದಾದ, ಅಗಲವಾದ ಚಿಕ್ಕ ತೊಟ್ಟಿರುವ ,ಮತ್ತು ಬುಗುರಿ  ಆಕಾರದ, ಈರುಳ್ಳಿಗಳು ಇರುತ್ತವೆ. ಅಗಲವಾದ ಹಿಂದುಗಡೆ  ಚಿಕ್ಕ ತೊಟ್ಟು ಇರುವ ಈರುಳ್ಳಿಗಳು  ಸಂಗ್ರಹಿಸಿ ಇಡಲು ಉತ್ತಮವಾದುದು.  ಈರುಳ್ಳಿಗಳನ್ನು ಅಂಗಡಿಯಿಂದ ತೆಗೆದುಕೊಂಡು ಬಂದ ಮೇಲೆ ಎರಡು ದಿನಗಳ ಕಾಲ ನೆರಳಿನಲ್ಲಿ ಒಣಗಿಸಿ . ಬಿಸಿಲಿನಲ್ಲಿ ಒಣಗಿಸಿದರೆ ಈರುಳ್ಳಿಗಳು ಸ್ವಲ್ಪ  ಕಹಿ ಬರುತ್ತವೆ. ನೆರಳಿನಲ್ಲಿ ಒಣಗಿಸಿದ ಈ ಈರುಳ್ಳಿಗಳನ್ನು ನೆಟ್ ಕವರ್ ಗಳಲ್ಲಿ  ಸಂಗ್ರಹಿಸಿಡಬಹುದು  ಅಥವಾ ಬಿದಿರಿನ ಬುಟ್ಟಿಗಳಲ್ಲಿ ಸಂಗ್ರಹಿಸಿ ಇಡಬಹುದು. ಈ ಈರುಳ್ಳಿಗಳನ್ನು ಬೆಳಕಿನ ಪ್ರದೇಶದಲ್ಲಿ ಇಡುವ ಅವಶ್ಯಕತೆ ಇಲ್ಲ. ಆದರೆ ಗಾಳಿ ಆಡುವಂತಿರಬೇಕು.‍ ಅಲ್ಲದೆ ಈ ಬುಟ್ಟಿಯಲ್ಲಿರುವ ಈರುಳ್ಳಿಗಳನ್ನು ಹದಿನೈದು ದಿನಗಳಿಗೊಮ್ಮೆ ಮೇಲೆ ಕೆಳಗೆ  ಬದಲಾಯಿಸುತ್ತಿರಬೇಕು.

Advertisement

 

ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಚೀಲಗಳಲ್ಲಿ ಅಥವಾ ಪ್ಲಾಸ್ಟಿಕ್ ಬಕೆಟ್ ಗಳಲ್ಲಾಗಲಿ ಈರುಳ್ಳಿಗಳನ್ನು ಸಂಗ್ರಹಿಸಿ ಇಡಬೇಡಿ ಇದರಿಂದ ಸರಿಯಾಗಿ ಗಾಳಿಯಾಡದೆ ಈರುಳ್ಳಿಗಳು ಹಾಳಾಗುತ್ತವೆ.  ಈ ಈರುಳ್ಳಿಗಳನ್ನು ಸಣ್ಣ ಸಣ್ಣದಾಗಿ ಕತ್ತರಿಸಿ ಕಡಿಮೆ ಉರಿಯಲ್ಲಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ ಎಣ್ಣೆಯನ್ನು ಶೋಧಿಸಿ  ಟಿಶ್ಯೂ ಪೇಪರ್ ಮೇಲೆ ಹರಡಿ ಆನಂತರ ಒಂದು ಗಾಜಿನ ಬಾಟಲ್ ನಲ್ಲಿ ಹಾಕಿ ಶೇಖರಿಸಿ ಫ್ರಿಡ್ಜ್ನಲ್ಲಿ ಇಡಿ. ಫ್ರೈ ಮಾಡಿದ ಈ ಈರುಳ್ಳಿಗಳನ್ನು ಸುಮಾರು ಆರು ತಿಂಗಳವರೆಗೆ ಉಪಯೋಗಿಸಬಹುದು.  ಬಿರಿಯಾನಿಗೆ,  ಮಸಾಲೆ ರುಬ್ಬಲು ಮುಂತಾದ ಅಡುಗೆಗಳಿಗೆ ಬಳಸಬಹುದು.


ಈರುಳ್ಳಿ ಮತ್ತು ಆಲೂಗಡ್ಡೆ ಎರಡನ್ನು ಜತೆಯಾಗಿ ಸಂಗ್ರಹಿಸಿ ಇಡಬಾರದು ಇದರಿಂದ ಎರಡು ಬೇಗ ಹಾಳಾಗುತ್ತದೆ . ಈರುಳ್ಳಿಯನ್ನು ಪೇಪರ್ ಬ್ಯಾಗ್ನಲ್ಲಿ ಸಂಗ್ರಹಿಸಿ ಇಡುವುದಾದರೆ ಗಾಳಿಯಾಡುವಂತೆ  ಅದರಲ್ಲಿ ಸಣ್ಣ ಸಣ್ಣ ಹೋಲುಗಳನ್ನು  ಮಾಡಿ ಇಡಿ. ಈರುಳ್ಳಿಯನ್ನು ಸಣ್ಣದಾಗಿ ಸ್ಲೈಸ್ ಮಾಡಿ ಒಂದು ಸ್ಟೀಲ್ ತಟ್ಟೆಯ ಮೇಲೆ ಹರಡಿ ಬಿಸಿಲಿನಲ್ಲಿ ಎರಡು ದಿನ  ಒಣಗಿಸಿ ನಂತರ ಪುಡಿ ಮಾಡಿ ಅದನ್ನು ಪಲ್ಯ ಸಾಂಬಾರ್ ಮಸಾಲೆ ಮುಂತಾದವುಗಳಿಗೆ ಬಳಸಿಕೊಳ್ಳಬಹುದು. ಈ ಪುಡಿಯನ್ನು ಸುಮಾರು ಎರಡು ವರ್ಷಗಳ ಕಾಲ ಸಂಗ್ರಹಿಸಿ ಇಡಬಹುದು. ಹೀಗೆ ಈ ಎಲ್ಲ ವಿಧಾನಗಳ ಮೂಲಕ ಈರುಳ್ಳಿಯನ್ನು  ಸುಲಭವಾಗಿ ಸಂಗ್ರಹಿಸಿ ಮನೆಯಲ್ಲಿ ಇಟ್ಟುಕೊಳ್ಳಬಹುದು.

Advertisement
Share this on...