ಈರುಳ್ಳಿ ಸಿಪ್ಪೆಗಳನ್ನು ಬಿಸಾಡುವ ಬದಲು ಈ ರೀತಿಯಾಗಿ ಉಪಯೋಗಿಸಿ ಲಾಭ ಪಡೆದುಕೊಳ್ಳಿ !

in ಕನ್ನಡ ಮಾಹಿತಿ 87 views

ನಾವು ದಿನಾಲು ಈರುಳ್ಳಿಯನ್ನು ಬಳಸೇ ಬಳಸುತ್ತೇವೆ ಅದರ ಸಿಪ್ಪೆಗಳನ್ನು ಬಿಸಾಡುತ್ತೇವೆ. ಈರುಳ್ಳಿಯ ಸಿಪ್ಪೆಗಳಲ್ಲಿ ಹಲವಾರು ಆರೋಗ್ಯಕ್ಕೆ ಸಂಬಂಧಪಟ್ಟಂತೆ ಟಿಪ್ಸ್ ಗಳಿವೆ. ಗಿಡಗಳಿಗೂ ಕೂಡ ಇದು ತುಂಬಾ ಉಪಯೋಗಕಾರಿ. ಹಾಗಾದ್ರೆ ಈ ಈರುಳ್ಳಿಯ ಬಗೆಗಿನ ಮಾಹಿತಿಯನ್ನು ನಿಮಗೆ ತಿಳಿಸಿಕೊಡ್ತೀವಿ. ಈ ಈರುಳ್ಳಿಯಲ್ಲಿ ಅಡಗಿ ಇರುವಂತಹ ಆರು ರಹಸ್ಯಗಳು ಮತ್ತು ಉಪಯುಕ್ತ ಟಿಪ್ಸ್ ಗಳ ಬಗ್ಗೆ ತಿಳಿಯೋಣ .ಗಿಡಗಳನ್ನು ಬೆಳೆಸುವುದರಲ್ಲಿ ಈ ಈರುಳ್ಳಿ ಸಿಪ್ಪೆಯನ್ನು ಯಾವ ರೀತಿಯಲ್ಲಿ ಉಪಯೋಗಿಸಿಕೊಳ್ಳಬಹುದು ಎಂಬುದನ್ನು ಇಲ್ಲಿ ತಿಳಿಸಿ ಕೊಡುತ್ತಿದ್ದೇನೆ ಈರುಳ್ಳಿಯ ಸಿಪ್ಪೆಗಳು ಗಿಡಗಳ ಬೆಳವಣಿಗೆಯಲ್ಲಿ ಗೊಬ್ಬರವಾಗಿ ಕಾರ್ಯವನ್ನುನಿರ್ವಹಿಸುತ್ತದೆ .ಯಾವುದಾದರೂ ಒಂದು ಹಳೆಯ ಪಾತ್ರೆಯಲ್ಲಿ ನೀರನ್ನು ತೆಗೆದುಕೊಂಡು ಅದರಲ್ಲಿ ಈರುಳ್ಳಿ ಸಿಪ್ಪೆಗಳನ್ನು ಹಾಕಿ ಇಡೀ ಒಂದು ದಿನ ನೆನೆಸಿ. ಒಂದು ದಿನ ಆದ ಮೇಲೆ ಆ ನೀರಿನ ಬಣ್ಣ ಚೇಂಜ್ ಆಗಿರತ್ತೆ ಅದನ್ನು ನೀವು ನೋಡಬಹುದು .

Advertisement

 

Advertisement

Advertisement

ಆ ನೀರನ್ನು ಎಲ್ಲ ಗಿಡಗಳ ಬುಡಕ್ಕೆ ಹಾಕಿ. ಒಂದು ಗಿಡಕ್ಕೆ ಒಂದು ಗ್ಲಾಸ್ ಈರುಳ್ಳಿ ನೀರು ಹಾಕಿದರೆ ಸಾಕಾಗುತ್ತದೆ.ವಾರದಲ್ಲಿ ಈ ರೀತಿ ಒಂದು ಬಾರಿ ಮಾಡಿದರೆ ಸಾಕು .ನಾವೆಲ್ಲರೂ ಅಡುಗೆ ಮಾಡುವ ಮೊದಲು ಈರುಳ್ಳಿಯನ್ನು ಕತ್ತರಿಸಿ ಕೊಳ್ಳುತ್ತೇವೆ. ಈರುಳ್ಳಿಯ ಸಿಪ್ಪೆಗಳನ್ನು ನಾವು ಅಡುಗೆಯಲ್ಲಿ ಯಾವ ರೀತಿ ಬಳಸಿಕೊಳ್ಳಬಹುದು ಅಂದ್ರೆ ಈರುಳ್ಳಿಯ ಸಿಪ್ಪೆಗಳನ್ನು ತೊಳೆದು ಸ್ವಲ್ಪ ನೀರಿನಲ್ಲಿ ಒಂದು ಹತ್ತು ನಿಮಿಷ ನೆನೆಸಿ ಆ ನೀರನ್ನು ಅಡುಗೆಯಲ್ಲಿ  ಉಪಯೋಗಿಸಿಕೊಳ್ಳಬಹುದು. ಈ ಈರುಳ್ಳಿಯ ನೀರನ್ನು ಸಾಂಬಾರ್ ಪಲ್ಯ ಸೂಪ್ ಮುಂತಾದ ಅಡುಗೆಗಳಲ್ಲಿ ಬಳಸಿಕೊಳ್ಳಬಹುದು ಇದರಿಂದ ಅಡುಗೆ ರುಚಿ ಕೂಡ ಹೆಚ್ಚುತ್ತದೆ.ಈ ರೀತಿಯಾಗಿ ಅಡಿಗೆಯಲ್ಲಿ ಈರುಳ್ಳಿ ಸಿಪ್ಪೆಗಳನ್ನು ಬಳಸಿಕೊಳ್ಳಬಹುದು

Advertisement

 

ಗಂಟಲಿನಲ್ಲಿ ಕಿರಿಕಿರಿ ಅಥವಾ ಇನ್ಫೆಕ್ಷನ್ ಏನಾದರೂ ಆಗಿದ್ದರೆ ಈರುಳ್ಳಿಯ ಸಿಪ್ಪೆಗಳನ್ನು ಈ ರೀತಿ ಉಪಯೋಗಿಸಿಕೊಳ್ಳಬಹುದು ಒಂದು ಗ್ಲಾಸಿನಲ್ಲಿ ಬಿಸಿ ನೀರನ್ನು ತೆಗೆದುಕೊಂಡು ಅದಕ್ಕೆ ತೊಳೆದಂತೆ ಈರುಳ್ಳಿ ಸಿಪ್ಪೆಯನ್ನು ಹಾಕಿ ಹತ್ತು ನಿಮಿಷ ನೆನೆಸಿಡಿ ಆ ನೀರನ್ನು ಸಿಪ್ ಬೈ ಸಿಪ್ ಕುಡಿಯಬಹುದು ಅಥವಾ ಅದಕ್ಕೆ ಜೇನುತುಪ್ಪವನ್ನು ಸೇರಿಸಿ ಕೂಡ ಕುಡಿಯಬಹುದು , ಗಾರ್ಗಲ್ ಕೂಡ ಮಾಡಬಹುದು ಇದರಿಂದ ಗಂಟಲಿನ ಕಿರಿಕಿರಿ ನವೆ ಎಲ್ಲ ನಿವಾರಣೆಯಾಗುತ್ತದೆ.ಕಾಲುಗಳಲ್ಲಿ ನವೆ ಆಗುತ್ತಿದ್ದರೆ ಅಥವಾ ಕಾಲುಗಳಲ್ಲಿ  ಸೆಳೆತ ವಾಗುತ್ತಿದ್ದರೆ ನಾವು ಈರುಳ್ಳಿ ಸಿಪ್ಪೆಗಳನ್ನು ಈ ರೀತಿಯಾಗಿ ಉಪಯೋಗಿಸಿಕೊಳ್ಳಬಹುದು . ಒಂದು ಪಾತ್ರೆಯಲ್ಲಿ ನೀರನ್ನು ತೆಗೆದುಕೊಂಡು ಬಿಸಿಮಾಡಲು ಇಡಿ ಅದಕ್ಕೆ ತೊಳೆದಂತೆ ಈರುಳ್ಳಿ ಸಿಪ್ಪೆಗಳನ್ನು ಹಾಕಿ ಹತ್ತರಿಂದ ಹದಿನೈದು ನಿಮಿಷಗಳ ಕಾಲ ಚೆನ್ನಾಗಿ ಕುದಿಸಿ ಈ ನೀರನ್ನು ಶೋಧಿಸಿ ದಿನಕ್ಕೆ ಎರಡು ಬಾರಿ ಸೇವಿಸುವುದರಿಂದ ಕಾಲುಗಳಲ್ಲಿ ಸೆಳೆತ ಮತ್ತು ನೋವುಗಳಿದ್ದರೂ ಅದು ಕ್ರಮೇಣವಾಗಿ ಕಡಿಮೆಯಾಗುತ್ತದೆ .

 

ಇನ್ನು ಮನೆಗಳಲ್ಲಿ ಹೊಸದಾಗಿ ಪೇಯಿಂಟ್ ಮಾಡಿದ್ದರೆ ಪೇಯಿಂಟ್ ಸ್ಮೈಲ್ ತುಂಬಾ ಬರುತ್ತಾ ಇರುತ್ತದೆ. ಈ ಸ್ಮೆಲ್ ಕೆಲವರಿಗೆ ಇಷ್ಟವಾಗುತ್ತದೆ ಮತ್ತೆ ಕೆಲವರಿಗೆ ಇಷ್ಟವಾಗುವುದಿಲ್ಲ ಈ ಪೇಂಟ್ ಸ್ಮೆಲ್ ಕೆಲವರಿಗೆ ಅಲರ್ಜಿ ಕೂಡ ಆಗುತ್ತದೆ.ಅಂಥವರು ಒಂದು ಗ್ಲಾಸ್ ನೀರಿಗೆ ಈರುಳ್ಳಿ ಸಿಪ್ಪೆ ಸ್ವಲ್ಪ ಈರುಳ್ಳಿಯನ್ನು ಹಾಕಿ ಮನೆಯಲ್ಲಿ ಇಡುವುದರಿಂದ ಆ ಪೇಯಿಂಟ್ ನ ಸ್ಮೆಲ್ ಬರುವುದಿಲ್ಲ. ಆ ಸ್ಮೆಲ್ ನ್ನು ಈರುಳ್ಳಿ ಮತ್ತು ಈರುಳ್ಳಿ ಸಿಪ್ಪೆ ಹೀರಿಕೊಳ್ಳುತ್ತದೆ.ಜೊತೆಗೆ ಮನೆಗಳಲ್ಲಿ ಬರುವಂತಹ ಇರುವೆಗಳನ್ನು ಅವೈಡ್ ಮಾಡಲು ಕೂಡ ಈ ಟಿಪ್ಸ್ ಅನ್ನು ಫಾಲೋ ಮಾಡಬಹುದು.

 

ಸ್ಟೀಲ್ ಸ್ಪೂನ್  ಪ್ಲೇಟ್ ಮುಂತಾದ ಅವುಗಳು ದಿನ ಬಳಕೆ ಮಾಡುತ್ತಿದ್ದಂತೆ ಅವುಗಳ ಹೊಳಪು ಕಡಿಮೆಯಾಗುತ್ತದೆ. ಆಗ ಈರುಳ್ಳಿ ನೆನೆಸಿದ ನೀರಿನಿಂದ ಈ ಪಾತ್ರೆಗಳನ್ನು ತೊಳೆಯುವುದರಿಂದ ಅವುಗಳಿಗೆ  ಹೊಳಪು ಬರುತ್ತದೆ. ಈರುಳ್ಳಿ ಸಿಪ್ಪೆಗಳನ್ನು ಬಿಸಾಡುವ ಬದಲು ಈ ರೀತಿಯಾಗಿ  ಸಿಪ್ಪೆಯ ಉಪಯೋಗವನ್ನು ಪಡೆದುಕೊಳ್ಳಿ.

Advertisement
Share this on...