ಆನ್ ಲೈನ್ ಕ್ಲಾಸ್ ಗಳ ಅದ್ವಾನದ ಹಾವಳಿಯಲ್ಲಿ ಮಾನಸಿಕ ಹಾಗೂ ದೈಹಿಕವಾಗಿ ಕುಗ್ಗಿದ ಮಕ್ಕಳು

in ಕನ್ನಡ ಮಾಹಿತಿ/ರಾಜಕೀಯ 132 views

ಕರೋನಾ ಕಾರಣದಿಂದ ಈ ವರ್ಷದ ಶೈಕ್ಷಣಿಕ ವ್ಯವಸ್ಥೆ ಅತ್ಯಂತ ಗೊಂದಲಮಯವಾಗಿದೆ .ಆನ್ ಲೈನ್ ಕ್ಲಾಸ್ ಗಳ ಹಾವಳಿಯಲ್ಲಿ ಮಕ್ಕಳು ಮಾನಸಿಕ ಹಾಗೂ ದೈಹಿಕವಾಗಿ ಕುಗ್ಗಿದ್ದಾರೆ .ಇಂಟರ್ ನೆಟ್ ಕಂಪನಿಗಳು ಲಾಬಿಗೆ ಇಳಿದಿವೆ ,ಕೊನೆಗೂ ಇಲ್ಲಿ ಬಲಿಪಶು ಸಾಮಾನ್ಯ ನಾಗರಿಕ .ಶಾಲೆ ಶುರು ಮಾಡಲು ಕೆಲವೊಂದು ಷರತ್ತುಗಳೊಂದಿಗೆ ಶಿಕ್ಷಣ ತಜ್ಞರು ಹಾಗೂ ವೈದ್ಯರು ವರದಿ ನೀಡಿದರೂ ಸರ್ಕಾರ ಹಿಂದೇಟು ಹಾಕುತ್ತಿದೆ .ಇನ್ನೂ ವಿರೋಧ ಪಕ್ಷದ ಹಿರಿಯ ರಾಜಕಾರಣಿಗಳ ಬೇಜವಾಬ್ದಾರಿ ಹೇಳಿಕೆಗಳು ಮಕ್ಕಳ ಮನಸ್ಸಿನಲ್ಲಿ ಪ್ರಶ್ನೆಗಳನ್ನು ಉಂಟು ಮಾಡುತ್ತಿವೆ .ಇತ್ತೀಚೆಗೆ ಸಿದ್ಧರಾಮಯ್ಯನವರು ಎಲ್ಲರನ್ನೂ ಹಾಗೆ ಪಾಸ್ ಮಾಡಿದರೆ ಏನ್ ಮುಳುಗಿ ಹೋಗುತ್ತೆ .ಅನ್ನೋ ಮಾತಿಗೆ , ಕರೋನಾ ಪಾಸ್ ಸ್ಟೂಡೆಂಟ್ಸ್ ಅನ್ನೋ ಹಣೆಪಟ್ಟಿ ನಮಗೆ ಬೇಡ ,ನಮಗೆ ಪರೀಕ್ಷೆ ಬೇಕು. ಈ ರಾಜಕಾರಣಿಗಳಿಗೆ ಚುನಾವಣೆಗಳ ಪ್ರಚಾರದಲ್ಲಿ ಕರೋನಾ ಸಮಸ್ಯೆ ಇರಲ್ವಾ? ಪ್ರಚಾರ ಮುಗಿಸಿ ಮನೆಗೆ ಹೋದವರ ಮನೆಯಲ್ಲಿ ಮಕ್ಕಳಿಲ್ವಾ ?ಅನ್ನೋ ಪ್ರಶ್ನೆ ಮಕ್ಕಳದ್ದು.

Advertisement

Advertisement

ನಾವು ವಿದ್ಯಾರ್ಥಿಗಳಿಗೆ ಯಾವುದೇ ವಿಷಯದಲ್ಲಾಗಲಿ ಸ್ವಯಂ ರಕ್ಷಣೆ ,ಸಾಮಾಜಿಕ ಜವಾಬ್ದಾರಿ ಕಲಿಸಲು ಇದೊಂದು ಒಳ್ಳೆ ಅವಕಾಶ ಅನ್ನಿಸ್ತಾ ಇದೆ.ಪ್ರೌಢಶಾಲಾ ನಂತರದ ತರಗತಿಗಳನ್ನು ಪ್ರಾರಂಭ ಮಾಡಲಿ ಎನ್ನುವುದು ಎಷ್ಟೋ ಪೋಷಕರ ಅಭಿಪ್ರಾಯ .ಆಯಾ ಶಾಲೆಗಳೇ ಪೋಷಕರ ಸಭೆ ಮಾಡಿ ಅದರ ವರದಿಯನ್ನು ಕೊಡುವಂತೆ ಶಿಕ್ಷಣ ಸಚಿವರು ಕ್ರಮ ಕೈಗೊಂಡರೆ ಮಕ್ಕಳ ಮೊಬೈಲ್ ಗೀಳು ಕಣ್ಣಿನ ತೊಂದರೆ ಅದರಿಂದಾಗುವ ಮಾನಸಿಕ ಖಿನ್ನತೆಗಳಿಗೆ ಮುಕ್ತಿ ದೊರೆಯುತ್ತದೆ.ಈಗಾಗಲೇ ಕರೋನಾ ಆರ್ಥಿಕ ಸಂಕಷ್ಟದ ಹೊಡೆತಕ್ಕೆ ಸಿಕ್ಕಿರುವ ಪೋಷಕರು ಈಗ ಮನೆಯಲ್ಲೇ ಮಕ್ಕಳಿಗೆ ಕಾವಲುಗಾರರಾಗಿ ದುಡಿಮೆಯಿಲ್ಲದ ಇಲ್ಲದಂತಾಗಿದ್ದಾರೆ .

Advertisement

ಯುವಜನತೆ ದಾರಿ ತಪ್ಪಲು ನಾವೇ ಅವಕಾಶ ಮಾಡಿಕೊಡುವಂತಾಗಿದೆ ಈ ಆನ್ ಲೈನ್ ಶಿಕ್ಷಣ.ಅರುವತ್ತು ವರ್ಷ ಮೇಲ್ಪಟ್ಟ,ಉಸಿರಾಟ ,ತೀವ್ರ ಹೃದಯ ಸಂಬಂಧಿ ಕಾಯಿಲೆ ಇರುವ ರಾಜಕಾರಣಿಗಳಿಗೆ ಈ ಕರೋನಾ ನೀತಿಸಂಹಿತೆ ಅನ್ವಯಿಸುವುದಿಲ್ಲವೇ ?ಭಾವಿ ಭಾರತದ ಪ್ರಜೆಗಳ ಭವಿಷ್ಯದ ಜೊತೆ ಆಟ ಆಡುವುದು ಬಿಟ್ಟು ಎಲ್ಲಾ ರಾಜಕಾರಣಿಗಳು ಉತ್ತಮ ನಿರ್ಧಾರ ಕೈಗೊಳ್ಳಬೇಕಾಗಿದೆ.ಆನ್ ಲೈನ್ ಶಿಕ್ಷಣಕ್ಕೆ ವ್ಯವಸ್ಥೆ ಮಾಡಿಕೊಡಲು ಸಾಧ್ಯವಾಗದೆ ಎಷ್ಟೋ ಪೋಷಕರು ಕಂಗಾಲಾಗಿದ್ದಾರೆ , ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ , ಮಾನಸಿಕವಾಗಿ ಕುಗ್ಗಿದ್ದಾರೆ . ಅನಾವಶ್ಯಕವಾಗಿ ಚುನಾವನೆಗಲಿಗೆಸುರಿಯುವ ಹಣದಲ್ಲಿ ವಿದ್ಯಾರ್ಥಿಗಳಿಗೆ ಎಲ್ಲ ಸುರಕ್ಷಾ ಕ್ರಮಗಳನ್ನು ಕೈಗೊಂಡು ದಯವಿಟ್ಟು ಶಾಲೆ ಕಾಲೇಜುಗಳನ್ನು ಪ್ರಾರಂಭಿಸಿ .

Advertisement

ಸಿಂಹಿಣಿ.

Advertisement
Share this on...