ಊಜಾ ಬೋರ್ಡ್ ಇದರಿಂದ ಆದ ಅನಾಹುತಗಳು ಎಷ್ಟು ಗೊತ್ತಾ..?

in ಕನ್ನಡ ಮಾಹಿತಿ/ಕ್ರೀಡೆ 206 views

ಸಾಕಷ್ಟು ಜನರಿಗೆ ಊಜಾ ಬೋರ್ಡ್ ಬಗ್ಗೆ ತಿಳಿದಿದೆ. ಇದೊಂದು ಅರೆ ಸಾಮಾನ್ಯ ಸಂಗತಿಗಳಿಗೆ ಅಂದರೆ ಪ್ಯಾರಾನಾರ್ಮಲ್ ಸಂಗತಿಗಳಿಗೆ ಬಳಕೆಯಾಗುವ ಸಮ್ಮೋಹನ ಸಾಧನವಾಗಿದ್ದು ಇದನ್ನ ಸ್ಪಿರಿಟ್ ಬೋರ್ಡ್ ಹಾಗೂ ಟಾಕಿಂಗ್ ಬೋರ್ಡ್ ಅಂದರೆ ಮಾತನಾಡುವ ಹಲಗೆ ಅಂತಲೂ ಕರೆಯಲಾಗುತ್ತದೆ. ಇದು ಮರದಿಂದ ಮಾಡಿದ ಹಲಗೆಯಾಗಿದ್ದು ಇದರಲ್ಲಿ ಇಂಗ್ಲಿಷ್ ಭಾಷೆಯ ಎಲ್ಲಾ ಅಕ್ಷರಗಳು ಹಾಗೂ 0 ಯಿಂದ 9 ವರೆಗೆ ಸಂಖ್ಯೆಗಳು ನಮೂದಾಗಿದ್ದು ಈ ಬೋರ್ಡ್ ನ ಎರಡು ಬದಿಗಳಲ್ಲಿ Yes ಹಾಗೂ No ಎಂಬ ಎರಡು ಪದಗಳಿದ್ದು ಕೆಳಗೆ ಸಂಖ್ಯೆಗಳ ಅಡಿಯಲ್ಲಿ ಗುಡ್ ಬಾಯ್ ಎಂಬ ಪದ ನಮೂದಾಗಿರುತ್ತದೆ. ಇದು ಭೂಗತ ಲೋಕವನ್ನ ವಾಸ್ತವ ಲೋಕದೊಂದಿಗೆ ಬೆಸೆಯುವ ಸಾಧನವಾಗಿದ್ದು ಸತ್ತ ಆತ್ಮಗಳನ್ನು ಸಹ ಬಡಿದೆಚ್ಚರಿಸಿ ಮಾತನಾಡಿಸುವ ಶಕ್ತಿ ಹೊಂದಿರುವ ಹಲಗೆ ಎಂದು ನಂಬಲಾಗಿದೆ. ಇದು ವಿಶಿಷ್ಟ ಬಗೆಯ ಆಟಗಳನ್ನ ಒಳಗೊಂಡಿದ್ದು ಇದರ ಸುತ್ತ ಕೂರುವ 3-4 ಆಟಗಾರರು ಇದರಲ್ಲಿನ ಹೃದಯಕಾರದಲ್ಲಿರುವ ಪ್ಲಾಸ್ಟಿಕ್ ಅಥವಾ ಮರದಿಂದ ಮಾಡಿದ ಡೈ ಅನ್ನ ಇದರ ನಿಯಮಾನುಸಾರ ಬಳಸಿದರೆ ಹಲಗೆಯಿಂದ ಅಶರೀರ ವಾಣಿಗಳು ಹೊರಡುತ್ತವೆ ಎಂಬ ನಂಬಿಕೆಯಿದೆ. ಇಂತಹದನ್ನ ನೀವು ಸಾಕಷ್ಟು ಹಾಲಿವುಡ್ ಹಾಗೂ ಬಾಲಿವುಡ್ ಸಿನಿಮಾಗಳಲ್ಲೂ ಕೂಡ ನೋಡಿರುತ್ತೀರಾ. ಇದು ನಿಜಾನಾ? ಈ ಹಲಗೆ ಅಂತಹ ವಿಶಿಷ್ಟ ಶಕ್ತಿಯನ್ನ ಹೊಂದಿದೆಯಾ? ಊಜಾ ಬೋರ್ಡ್ ನ ಸತ್ಯಾಸತ್ಯತೆಗಳೆನ್ನು?

Advertisement

Advertisement

ಊಜಾ ಬೋರ್ಡ್ ನ ಚರಿತ್ರೆ ಮೊಟ್ಟಮೊದಲು ಪ್ರಾರಂಭವಾಗಿದ್ದು ಕ್ರಿ.ಶ 11 ನೇ ಶತಮಾನದ ಚೀನಾ ದೇಶದ ಸ್ಯಾಂಗ್ ಮನೆತನದ ಅರಸರಲ್ಲಿ. ಈ ಹಲಗೆಯ ಕಲೆ ಶೂಜಿ ಎಂಬ ಹೆಸರಿನಿಂದ ರೂಢಿಯಲ್ಲಿದ್ದ ಬಗ್ಗೆ ದಾಖಲೆಗಳಿವೆ. ಇದನ್ನ ಅಂದಿನ ಕ್ವಾನ್ ಸೇನ್ ಶಾಲೆಯಲ್ಲಿ ಆತ್ಮಗಳೊಟ್ಟಿಗೆ ಮಾತನಾಡಲು ಮೊಟ್ಟ ಮೊದಲು ಬಳಸಿದ ಉಲ್ಲೇಖಗಳಿವೆ. ಇದು ಕ್ರಮೇಣ ನಕಾರಾತ್ಮಕ ಇಲ್ಲವೇ ದುಷ್ಟಶಕ್ತಿಗಳ ದಂದೆಯ ಪ್ರಮುಖ ಸಾಧನವಾಗಿ ಬೆಳೆಯುತ್ತಾ ಹೊದರಿಂದ 17ನೇ ಶತಮಾನದ ಚೀನಾದ ಕಿಂಗ್ ಮನೆತನದ ಅರಸರು ಈ ಹಲಗೆಯ ಬಳಕೆಯನ್ನ ನಿಷೇಧ ಮಾಡಿದ್ದರು. ಪ್ರಾಚೀನ ಅಥವಾ ಮಧ್ಯಯುಗದ ಚೀನಾದ ದವಜಾ಼ನ ಎಂಬ ತಾವೋವಾದಿ ಬರಹಗಳಲ್ಲಿ ಹೇಗೊ ಈ ಒಂದು ಬೋರ್ಡ್ ಅಲ್ಲಿನ ಕರಾಳ ಲೋಕದ ನಿಗೂಢ ಚಟುವಟಿಕೆಗಳ ಪ್ರಮುಖ ತಾಣವಾಗಿ ಬಳಕೆಯಾಗಿದ್ದು ಅಂತ ಸಾಕಷ್ಟು ವಿವರ ಇದೆ. ಈ ಸಾಧನಕ್ಕೆ ಊಜಾ ಎಂಬ ಹೆಸರಿಟ್ಟು ಎಲಿಜಾ ಪಾಂಡೆ 1890 ರ ಸಮಯದಲ್ಲಿ ಈ ಹಲಗೆಯ ಪೇಟೆಂಟ್ ಹಕ್ಕುಗಳನ್ನ ತಾನೇ ಪಡೆದು ಇದರ ಅಧಿಕೃತ ಓನರ್ ಆಗುತ್ತಾನೆ.

Advertisement

ಮುಂದೆ 1901ರ ವೇಳೆಗೆ ಅವನ ಕಂಪನಿಯಿಂದ ಈ ಹಲಗೆ ಹಲವು ಮಾರ್ಪಡುಗಳ ಮೂಲಕ ಹೊಸ ರೂಪದಲ್ಲಿ ಅಮೆರಿಕಾದ ಮಾರುಕಟ್ಟೆಗೆ ಲಗ್ಗೆ ಇಡುತ್ತದೆ. ಇದರಿಂದ ನೂರಾರು ವಿಚಿತ್ರ ಘಟನೆಗಳು ಈ ಹಲಗೆಯ ಸುತ್ತ ಅಮೆರಿಕಾ ವಲಯದಲ್ಲಿ ನಡೆದಿವೆ. ಅಂತಹ ಒಂದು ಉದಾಹರಣೆಯಲ್ಲಿ ಸಾರಾ ಎಲಿಸಾ ಎಂಬ ಟೆಕ್ಸಿಸ್ಟ್ ನ ಯುವತಿಯ ಪ್ರಕರಣ ತುಸು ಗಂಭೀರವಾದದ್ದು. ಆಕೆ ಒಂದು ಮನೆಯಲ್ಲಿ ಊಜಾ ಹಲಗೆ ತಯಾರಿಸಿ ತನ್ನ ಎರಡು ಗೆಳತಿಯರನ್ನ ಮನೆಗೆ ಆಹ್ವಾನಿಸಿ ರಾತ್ರಿ ವೇಳೆ ಮೊಂಬತ್ತಿ ಹಚ್ಚಿ ಊಜಾದ ಪ್ಲಾಂಚೆಟ್ ಅನ್ನ ಚಲಾಯಿಸುತ್ತಾರೆ. ಅವರ ಉದ್ದೇಶ ಇದ್ದದ್ದು ಯಾವುದಾದರೂ ಆತ್ಮದ ಇರುವಿಕೆಯನ್ನ ಸಾಬೀತು ಪಡಿಸುವುದಕ್ಕೆ. ಕೆಲ ಹೊತ್ತಲ್ಲೇ ಆಕೆ ಚಲಾಯಿಸಿದ ಪ್ಲಾಂಚೆಟ್ ಒಂದು ಸಂಖ್ಯೆಯ ಬಳಿ ಬಂದು ನಿಲ್ಲುತ್ತೆ. ಅಶರೀರ ವಾಣಿಯ ಸದ್ದುಗಳು ಹಲಗೆಯಿಂದ ಹೊರಟಾಗ ಆಕೆಯ ಗೆಳತಿಯರು ತುಸು ಗಾಬರಿ ಆಗುತ್ತಾರೆ.

Advertisement

ಆದರೆ ಸಾರಾ ಈ ಹಲಗೆಯ ಬಗ್ಗೆ ಹಾಗೂ ಆ ಧ್ವನಿಗಳ ಬಗ್ಗೆ ತಮಾಷೆ ಮಾಡುತ್ತಾ ಗೇಲಿ ಮಾಡುತ್ತಾಳೆ. ಆದರೆ ತಕ್ಷಣ ಆಕೆ ವಿಚಿತ್ರವಾಗಿ ವರ್ತಿಸುವುದಕ್ಕೆ ಆರಂಭಿಸುತ್ತಾಳೆ. ಆಕೆಯ ಧ್ವನಿ ಬದಲಾಗಿ ಆಕೆಯ ಕಣ್ಣುಗುಡ್ಡೆಗಳು ಎತ್ತೆತ್ತಲೋ ತಿರುಗುತ್ತವೆ. ಆಕೆಯ ದೇಹ ಭೂಕಂಪಕ್ಕೆ ಒಳಗಾದ ಹಾಗೆ ಜೋರಾಗಿ ಕಂಪಿಸಲು ಆರಂಭಿಸುತ್ತದೆ. ಆಕೆ ನಡುಗುವ ದೇಹವನ್ನ ನಿಯಂತ್ರಿಸಲಾಗದ ಆಕೆಯ ಸ್ನೇಹಿತರು ಭಯಭೀತರಾಗುತ್ತಾರೆ. ಎಷ್ಟೋ ಹೊತ್ತಿನ ಈ ವಿಚಿತ್ರ ಅನುಭವಗಳ ಬಳಿಕ ಸಾರಾ ಸಹಜ ಸ್ಥಿತಿಗೆ ಮರಳುತ್ತಾಳೆ. ಆಕೆಯ ಬಾಯಿಂದ ರಕ್ತ ಹರಿದಿರುತ್ತದೆ. ಇಂತಹ ಅನೇಕ ವಿಚಿತ್ರ ಘಟನೆಗಳು ವರದಿಗಳು ಊಜಾ ಹಲಗೆ ಬಗ್ಗೆ ನಮಗೆ ಸಿಗುತ್ತದೆ.

ಎಷ್ಟೋ ಜನ ಇದರ ಪ್ರಭಾವದಿಂದ ಮಾನಸಿಕ ಸ್ಥಿಮಿತತೆಯನ್ನು ಕಳೆದುಕೊಂಡಿದ್ದಾರೆ. ಜೀವಕ್ಕೂ ಅಪಾಯ ತಂದುಕೊಂಡವರ ಕತೆಯೂ ಇದೆ. ಆದರೆ ಮನಶಾಸ್ತ್ರ, ವಿಜ್ಞಾನವು ಈ ಬೋರ್ಡ್ ನ ನಿಗೂಢ ಶಕ್ತಿಯನ್ನ ತಳ್ಳಿಹಾಕುತ್ತದೆ. ಇದು ದುರ್ಬಲ ಮನಸ್ಸಿನವರ ಮೇಲೆ ನಡೆಯುವ ಡಾಮಿನೆನ್ಸಿ ಅಷ್ಟೇ ಎಂದು ಮನಶಾಸ್ತ್ರ ತಜ್ಞರ ವಾದ. ಆದರೆ ಆಧ್ಯಾತ್ಮಿಕ ಹಾಗೂ ಕೆಲ ಸ್ಪಿರಿಚ್ಯೂಯಾಲಿಸ್ಟ್ ಗಳು ಈ ಹಲಗೆಯ ವೈಚಿತ್ರದ ಹಿಂದಿರುವ ಶಕ್ತಿಯ ಬಗ್ಗೆ ನಂಬಿಕೆ ಇಡುತ್ತಾರೆ. 2014ರಲ್ಲಿ ಒಮ್ಮೆ ಓರ್ವ ಮನೆ ಯಜಮಾನ ಊಜಾ ಹಲಗೆಯ ಆದೇಶದಂತೆ ತನ್ನ ಮನೆಯ ನಾಯಿಯನ್ನ ತಾನೆ ಕೊಂದಿದ್ದ. ಇಂತಹ ಅನೇಕ ಪ್ರಕರಣಗಳಲ್ಲಿ ಈ ಊಜಾ ಹಲಗೆ ಒಬ್ಬ ಸೈಲೆಂಟ್ ಕಿಲ್ಲರ್ ನ ಸ್ಥಾನದಲ್ಲಿ ನಿಂತಿದೆ

ಇಲ್ಲಿ ತಪ್ಪು ನಿರ್ಜೀವ ಹಲಗೆಯದ್ದೋ ಅಥವಾ ಗೊಂದಲಮಯ ಮನಸ್ಸುಗಳದ್ದೊ ತಿಳಿಯದು. ಇದು ಐಡಿಯೋ ಮೀಟರ್ ಎಫೇಕ್ಟ್ ನ ಒಂದು ಆಟೋಮೆಟಿಕ್ ತಂತ್ರಗಾರಿಕೆ ಅಷ್ಟೇ ಎಂದು ಆಧುನಿಕ ಸುಡೋ ವಿಜ್ಞಾನ ತನ್ನ ವಾದವನ್ನ ಸಮರ್ಥಿಸುತ್ತಾರೆ. ಈ ಹಲಗೆಯ ಸತ್ಯವನ್ನ ವಿಜ್ಞಾನವು ಸಹ ನಿಖರವಾಗಿ ಬಗೆಹರಿಸಲು ಆಗಿಲ್ಲ. ವಿಡಿಯೋ ಮೀಟರ್ ಎಫೆಕ್ಟ್ ಅಂದರೆ ಸೂಕ್ತ ಮನಸ್ಸಿನ ಸಂದೇಶ ಅಥವಾ ಮಾತುಗಳು ಅನಿಸಿಕೆಗಳು ಭ್ರಮಾದಿನ ಮನಸ್ಸುಗಳಿಗೆ ಕೇಳಿಬರುವುದು. ಹೀಗೆ ಕೇಳಿ ಬಂದ ಮಾತುಗಳನ್ನೇ ಮನಸ್ಸು ಯಾರದೋ ಎಂದು ನಂಬುವುದು. ಆದರೆ ಈ ಒಂದು ಹಲಗೆಯಿಂದ ಪ್ರಭಾವಿತರಾದ ಎಲ್ಲರೂ ಭ್ರಮಾದೀನರು ಎನ್ನಬಾರದು. ಹೀಗೆ ಕೆಲವು ವಿಚಿತ್ರಗಳು ಈ ಹಲಗೆಯ ಸುತ್ತ ಇನ್ನೂ ಬಗೆ ಹರಿಯದೆ ಹಾಗೆಯೇ ಉಳಿದಿದೆ.

– ಸುಷ್ಮಿತಾ

Advertisement
Share this on...