ಪಾರು ಧಾರಾವಾಹಿಯ ದಾಮಿನಿಯ ರಿಯಲ್ ಕಥೆ ನಿಮಗೆ ಗೊತ್ತೆ ?

in ಮನರಂಜನೆ 241 views

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಪಾರು ಧಾರವಾಹಿ ಯಾರಿಗೆ ಗೊತ್ತಿಲ್ಲ ಹೇಳಿ. ಕಿರುತೆರೆ ಪ್ರಿಯರು ಬಹಳ ಇಷ್ಟಪಟ್ಟು ನೋಡುವ ಧಾರಾವಾಹಿ ಇದಾಗಿದ್ದು, ಜನಪ್ರಿಯತೆಯಲ್ಲಿ ಕೂಡ ಈ ಧಾರಾವಾಹಿ ಮಂಚೂಣಿಯಲ್ಲಿದೆ. ಪಾರು ಧಾರಾವಾಹಿಯ ಪ್ರತಿಯೊಂದು ಪಾತ್ರವು  ಜನರ ಮನಸ್ಸನ್ನು ಗೆದ್ದಿದೆ. ಇನ್ನು ಇದೇ ಧಾರಾವಾಹಿಯಲ್ಲಿ ಒಂದು ಕಡೆ ಹಾಸ್ಯವನ್ನು ಮಾಡುತ್ತ ಮತ್ತೊಂದೆಡೆ ನೆಗೆಟಿವ್ ಶೇಡ್ ನಲ್ಲೂ ಅಭಿನಯಿಸಿ , ತಮ್ಮ ಪಾತ್ರದ ಮೂಲಕ ಸಂಬಂಧಗಳ ನಡುವೆ ಕಿಚ್ಚು ಹೊತ್ತಿಸುವ ನಟನೆಯಲ್ಲಿ ಅಬ್ಬರಿಸುತ್ತಿರುವ ಪಾತ್ರ ಎಂದರೆ ಅದು ದಾಮಿನಿ. ಪಾರು ಧಾರಾವಾಹಿ ನೋಡುವವರಿಗೆ ದಾಮಿನಿ ಪಾತ್ರ ಕಾಣದಿದ್ದರೆ ಏನೋ ಕಳೆದುಕೊಂಡಂತೆ ಅನಿಸುತ್ತದೆ. ಅಷ್ಟರ ಮಟ್ಟಿಗೆ ಈ ಪಾತ್ರ ಧಾರಾವಾಹಿ ಪ್ರಿಯರ ಮನಸ್ಸಿನಲ್ಲಿ ಪ್ರಭಾವ ಬೀರಿದೆ.

Advertisement

Advertisement

ದಾಮಿನಿ ಪಾತ್ರದ ಮೂಲಕ ಕಿರುತೆರೆಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಈ ನಟಿಯ ನಿಜ ಜೀವನದ ಹೆಸರು ಸಿತಾರ ಎಂದು. ಧಾರಾವಾಹಿಯಲ್ಲಿ ಸಂಬಂಧಗಳ ನಡವೆ ಆಟವಾಡುವ ಇವರ ನಿಜ ಜೀವನವು ಅವರ ಪಾತ್ರಕ್ಕೆ ತದ್ವಿರುದ್ಧವಾಗಿದೆ. ಈ ಅಭಿನೇತ್ರಿಗೆ ಇಲ್ಲಿಯವರೆಗೆ ತನ್ನದು ಎಂದು ಹೇಳಿಕೊಳ್ಳುವ ಕುಟುಂಬವೂ ಇರಲಿಲ್ಲವಂತೆ. ಆಕೆಗೆ ತಮ್ಮ ತಂದೆ ತಾಯಿ ಯಾರು ಎಂದು ಇಂದಿಗೂ ತಿಳಿದಿಲ್ಲವಂತೆ. ಅನಾಥಾಶ್ರಮದಲ್ಲಿ ಬೆಳೆದ ಸಿತಾರ, ಶಾಲೆಯಲ್ಲಿ ತನ್ನ ಗೆಳತಿಯರ ತಂದೆ ತಾಯಿಯರನ್ನು ನೋಡಿದಾಗ ಮನಸ್ಸಲ್ಲಿ ಎಲ್ಲೋ ಒಂದೆಡೆ ಸಂಕಟ ಅನುಭವಿಸಿದ್ದರು. ಆದರೆ ಅದನ್ನೆಲ್ಲಾ ದಾಟಿ ಜೀವನದ ನೋವುಗಳನ್ನು ಎದುರಿಸಿ ದಿಟವಾಗಿ ನಿಂತ ಮಾದರಿ ಮಹಿಳೆ ಈ ದಾಮಿನಿ ಅಲಿಯಾಸ್ ಸಿತಾರ.

Advertisement

Advertisement

ಅನಾಥಾಶ್ರಮದಲ್ಲಿ ಜೀವನ ನಡೆಸುತ್ತಾ ನಟಿ ಸಿತಾರ ರಂಗಭೂಮಿ ಕಡೆ ಒಲವು ಮಾಡಿ ನಂತರ ತರಬೇತಿಯನ್ನು ಪಡೆದು, ಕೆಲವೊಂದು ನಾಟಕಗಳಲ್ಲಿ ಅಭಿನಯಿಸಿ ನಂತರ ಕಿರುತೆರೆಗೆ ಲಗ್ಗೆ ಇಟ್ಟರು. ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನ ಮಚ್ಚಿನ ಧಾರಾವಾಹಿ ಅಗ್ನಿ ಸಾಕ್ಷಿ ಧಾರಾವಾಹಿಯಲ್ಲಿ ಅಭಿನಯಿಸಿ ಜನರಲ್ಲಿ ಗುರುತಿಸಿಕೊಂಡರು. ಪಾರು ಮೂಲಕ ಜನರು ಅವರ ಅಭಿಮಾನಿಗಳಾದರು. ಒಮ್ಮೆ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಸಿತಾರ ಅವರು ತಮ್ಮ ಜೀವನದ ವಿಷಯಗಳನ್ನು ಹೇಳಿ ಭಾವುಕರಾಗುತ್ತಾರೆ. ಅಲ್ಲದೇ ಎಲ್ಲಾ ಕಲಾವಿದರೇ ನನ್ನ ಕುಟುಂಬ ಎಂದು ಕೂಡಾ ಹೇಳಿದರು. ದಾಮಿನಿ ಪಾತ್ರದಲ್ಲಿ ಜನರಿಗೆ ಮತ್ತಷ್ಟು ಹತ್ತಿರವಾದ ಈ ನಟಿ ಕಳೆದ ವರ್ಷ ಆಗಸ್ಟ್ ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

 

ತಂದೆ ತಾಯಿ ಯಾರು ಎಂದು ಗೊತ್ತಿರದೇ ಅನಾಥಶ್ರಮದಲ್ಲಿ ಬೆಳೆದ ಸಿತಾರ ಅವರಿಗೆ ಇದೀಗ ಅವರದ್ದೇ ಆದ ಕುಟುಂಬವಿದೆ. ಅವರದ್ದೇ ಆದ ಅಭಿಮಾನಿ ಬಳಗವಿದೆ. ಕಷ್ಟಗಳನ್ನು ದಾಟಿ ಬಂದು, ಇಂದು ಒಳ್ಳೆಯ ಸ್ಥಾನವನ್ನು ಅಲಂಕರಿಸಿ, ತನ್ನದೇ ಆದ ಗುರುತನ್ನು ಪಡೆದುಕೊಂಡಿದ್ದಾರೆ. ಅವರ ಜೀವನ ಸುಖಮಯವಾಗಿರಲಿ, ಇನ್ನಷ್ಟು ಯಶಸ್ಸು  ದೊರೆಯಲಿ ಎಂದು ನಾವೆಲ್ಲರೂ ಹಾರೈಸೋಣ.‌

Advertisement
Share this on...