ಪಾರು ಸೀರಿಯಲ್ ನ ಧಾಮಿನಿ ಬಿಚ್ಚಿಟ್ಟ ಸೀಕ್ರೇಟ್ ಏನು ಗೊತ್ತಾ ?

in Uncategorized 439 views

ಇತ್ತೀಚೆಗಿನ ದಿನಗಳಲ್ಲಿ ಸಿನಿಮಾಗಳಿಗಿಂತ ಧಾರಾವಾಹಿಗಳನ್ನು ನೋಡುವವರ ಸಂಖ್ಯೆಯೇ ಹೆಚ್ಚಾಗಿದೆ. ಖಾಸಗಿ ವಾಹಿನಿ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಪಾರು ಧಾರಾವಾಹಿ ಸಿಕ್ಕಾಪಟ್ಟೆ ಫೇಮಸ್ ಆಗುತ್ತಾ ಟಾಪ್ ಒನ್‌  ಧಾರಾವಾಹಿ ಎನ್ನಿಸಿಕೊಂಡಿದೆ. ಈ ಧಾರಾವಾಹಿಯನ್ನು ನೋಡುವವರಿಗೆ ವಿಲನ್ ಆಗಿ ಕಾಣಿಸಿಕೊಂಡಿರುವ ದಾಮಿನಿ ಅವರ ಪರಿಚಯ ಎಲ್ಲರಿಗೂ ಕೂಡ ಇದೆ. ಈಕೆ ಅಭಿನಯಿಸುವ ಪಾತ್ರಕ್ಕೂ ಅವರ ನಿಜವಾದ ಜೀವನಕ್ಕೂ ತುಂಬ  ವ್ಯತ್ಯಾಸವಿದೆ. ಇವರು ನಿಜ ಜೀವನದಲ್ಲಿ ಬಹಳಷ್ಟು ಮೃದು ಸ್ವಭಾವದ ಯಾರಿಗೂ ಕೇಡು ಬಯಸದ ಎಲ್ಲರೊಂದಿಗೂ ಬೇಗ ಹೊಂದಿಕೊಳ್ಳುವ ಸ್ನೇಹ ಜೀವಿ. ಹರಳು ಉರಿದಂತೆ ಮಾತನಾಡುವ ದಾಮಿನಿ ಪಾತ್ರಧಾರಿಯ ನಿಜವಾದ ಹೆಸರು ಸಿತಾರ. ವಿಲನ್ ಎಂದರೆ ಹೀಗೆ ಇರಬೇಕು ಎಂದೆನಿಸುವ ಅದ್ಭುತ ಕಲಾವಿದೆ ಈಕೆ. ಸಿತಾರರವರು ತಮ್ಮ ಫ್ಯಾಮಿಲಿಯ ಬಗ್ಗೆ ಕಣ್ಣೀರಿಡುತ್ತಾ ಈ ರೀತಿಯಾಗಿ ಹೇಳಿಕೊಂಡಿದ್ದಾರೆ. ನನಗೆ ಕುಟುಂಬವೇ ಇಲ್ಲ ನನಗೆ ತಂದೆ ತಾಯಿ ಯಾರು ಎಂದು ಗೊತ್ತಿಲ್ಲ ನಾನು  ಬೆಳೆದಿದ್ದೆಲ್ಲಾ ಅನಾಥಾಶ್ರಮದಲ್ಲಿ. ಶಾಲೆಗೆ ಹೋಗುವಾಗ ಫ್ರೆಂಡ್ಸ್ ಗಳಿಂದ ಅಪ್ಪ ಅಮ್ಮನ ಸಂಬಂಧದ ಬಗ್ಗೆ ನನಗೆ ಗೊತ್ತಾಯಿತು. ನಾನು ನನ್ನ ಫ್ರೆಂಡ್ಸ್ ಗಳ ಮನೆಯಲ್ಲಿ ಬೆಳೆದೆ ಎಂದು ಹೇಳಿಕೊಳ್ಳುತ್ತಾ ಕಣ್ಣೀರಿಡುತ್ತಾರೆ.

Advertisement

Advertisement

ಅಪ್ಪ ಅಮ್ಮ ಇಲ್ಲದೆ ಕಷ್ಟಪಟ್ಟು ಅನಾಥಾಶ್ರಮದಲ್ಲಿ ಬೆಳೆದು ಇಂದು ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ . ಅನಾಥಾಶ್ರಮದಲ್ಲಿ ಇದ್ದುಕೊಂಡೇ ರಂಗಭೂಮಿಯಲ್ಲಿ ಅಭ್ಯಾಸ ಮಾಡಿ ಅನೇಕ ನಾಟಕಗಳ  ಪ್ರದರ್ಶನವನ್ನು  ನೀಡಿದ್ದಾರೆ.   ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಪ್ರಖ್ಯಾತಿಯನ್ನು ಗಳಿಸಿಕೊಂಡಿದ್ದ ಸಿತಾರ ರವರು ಅದರ ನಂತರ ಈಗ ಪ್ರಸಾರವಾಗುತ್ತಿರುವ ಪಾರು ಸೀರಿಯಲ್ನಲ್ಲಿ ದಾಮಿನಿ ಎಂಬ  ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ . ವಿಪರ್ಯಾಸ ಎಂದರೆ ಧಾರಾವಾಹಿಯಲ್ಲಿ ಸಂಬಂಧಗಳ ಮಧ್ಯೆ ತಂದಿಟ್ಟು ಕೇಡನ್ನು ಬಯಸುವ ಪಾತ್ರದಲ್ಲಿ ನಟಿಸುವ ಈಕೆ ನಿಜ ಜೀವನದಲ್ಲಿ ಇದಕ್ಕೆ ತದ್ವಿರುದ್ಧ  ಆದರೂ ಇವರ ಅಭಿನಯ  ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಅಲ್ಲದೆ ಅಪಾರ  ಅಭಿಮಾನಿಗಳ ಬಳಗವನ್ನೇ ಸೃಷ್ಟಿ ಮಾಡಿದೆ.  ಹೀಗೆ  ಕೊಟ್ಟಂತಹ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಅದ್ಭುತವಾದ ಕಲಾವಿದೆ ಸಿತಾರಾ.

Advertisement

Advertisement

2019 ಆಗಸ್ಟ್ 21 ರಂದು  ದಾಮಿನಿ ಅಲಿಯಾಸ್  ಸಿತಾರ ರವರು ರವಿರಾಜ್ ಎಂಬುವರನ್ನು ವಿವಾಹವಾಗಿದ್ದಾರೆ. ಇವರ ಮದುವೆ ತೀರ್ಥಹಳ್ಳಿಯಲ್ಲಿ ನಡೆಯಿತು ಕಿರುತೆರೆಯ ಎಲ್ಲಾ ಸಹ ಕಲಾವಿದರಿಗೂ ಕೂಡ ತಮ್ಮ ಮದುವೆಗೆ ಆಹ್ವಾನವನ್ನು ನೀಡಿದ್ದರು.  ಅನಾಥವಾಗಿ ಬೆಳೆದ ಇವರಿಗೆ ಕುಟುಂಬ ಇಲ್ಲದೇ ಇರುವುದರಿಂದ ಸಹ ಕಲಾವಿದರುಗಳನ್ನೇ ತಮ್ಮ ಕುಟುಂಬವೆಂದು ಹೇಳಿಕೊಳ್ಳುತ್ತಾರೆ ಸಿತಾರ ರವರು. ಇಬ್ಬರೂ ಮೂಲತಃ ಬೆಂಗಳೂರಿನವರು ಆಗಿದ್ದು  ಬೆಂಗಳೂರಿನಲ್ಲಿ ನೆಲೆಸಿದ್ದಾರೆ .

 

ಅಂತೂ ಇಂತೂ ಕುಟುಂಬವೇ ಇಲ್ಲದೆ ಅನಾಥವಾಗಿ ಬೆಳೆದಂತಹ ನಟಿ ಸಿತಾರಾ ಅವರಿಗೆ ಒಂದು ಕುಟುಂಬ ಸಿಕ್ಕಿ  ಸುಖವಾದ ಜೀವನವನ್ನು ನಡೆಸುತ್ತಿದ್ದಾರೆ. ಸಿತಾರಾ ಅವರು ಕುಟುಂಬದ ಜತೆ ಸುಖ ಸಂತೋಷದಿಂದ ಸದಾ ಕಾಲ ಬಾಳಲಿ ಎಂದು ನಾವೆಲ್ಲರೂ ಹಾರೈಸೋಣ. ನೀವು ಕೂಡ ಸೀರಿಯಲ್ ಪ್ರಿಯರಾಗಿದ್ದರೆ ದಾಮಿನಿ ಅವರ ಪಾತ್ರ ನಿಮಗೆ ಇಷ್ಟವಾಗಿದ್ದಲ್ಲಿ ಅದನ್ನು ಕಮೆಂಟು ಮಾಡುವ ಮೂಲಕ ವ್ಯಕ್ತಪಡಿಸಿ.

Advertisement
Share this on...