ಪದ್ಮಪ್ರಿಯಾ ಅವರ ಕಥೆ ಕೇಳಿದರೆ ಕರುಳು ಚುರುಕ್ ಎನ್ನುತ್ತದೆ !

in ಮನರಂಜನೆ/ಸಿನಿಮಾ 1,050 views

ದಕ್ಷಿಣ ಭಾರತದ ಚಿತ್ರರಂಗದಲ್ಲಿ ಹೇಮಮಾಲಿನಿ ಎಂದೇ ಖ್ಯಾತರಾಗಿದ್ದವರು ನಟಿ ಪದ್ಮಪ್ರಿಯಾ ಅವರು. ಮೂಲತಃ ಕರುನಾಡಲ್ಲಿ ಜನಿಸಿದ ಈ ನಟಿ, ತಮ್ಮ ಸಿನಿ ಜೀವನವನ್ನು ಪ್ರಾರಂಭಿಸಿದ್ದು ಮಾತ್ರ ತಮಿಳು ಚಿತ್ರರಂಗದಲ್ಲಿ. 80 ರ ದಶಕದಲ್ಲಿ ಸುಂದರ ಸ್ವುರದ್ರೂಪಿ ನಟಿಯಾಗಿ ಕನ್ನಡ , ತಮಿಳು, ತೆಲುಗು, ಮಲಯಾಳಂ ಚಿತ್ರರಂಗದಲ್ಲಿ ಸಕ್ರಿಯರಾಗಿ, ತನ್ನದೇ ಆದ ಛಾಪು ಮೂಡಿಸಿದ್ದ ಅವರು, ದಕ್ಷಿಣ ಭಾರತದ ಹೇಮಮಾಲಿನಿ ಎಂಬ ಹೆಸರಿನಿಂದ ಖ್ಯಾತಿ ಪಡೆದರು. ಆಕೆಯ ಬಾಲ್ಯದ ಹೆಸರು ಪದ್ಮಲೋಚಿನಿ ಎಂದು. ಪದ್ಮಪ್ರಿಯಾ ಅವರು 1975 ರಲ್ಲಿ ಕರೋಟ್ಟಿ ಕಣ್ಣನ್ ಎಂಬ ಸಿನಿಮಾದ ಮೂಲಕ ತಮಿಳು ಚಿತ್ರರಂಗದಲ್ಲಿ ತಮ್ಮ ಸಿನಿ ಜೀವನವನ್ನು ಪ್ರಾರಂಭಿಸಿದ ಅವರು, ಮತ್ತೆ ಹಿಂತಿರುಗಿ ನೋಡಲೇ ಇಲ್ಲ. ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡಿ 1974 ರಿಂದ 1981 ರವರೆಗೆ ತಮಿಳು ಚಿತ್ರರಂಗದ ಬೇಡಿಕೆಯ ನಟಿಯಾಗಿ ಚಿತ್ರರಂಗವನ್ನು ಆಳಿದ್ದಾರೆ. ಇನ್ನು ಕನ್ನಡದಲ್ಲಿ ಗಂಗಾಧರ ಅವರ ನಿರ್ದೇಶನದಲ್ಲಿ ವಿಷ್ಣುವರ್ಧನ್, ಅಂಬರೀಶ್, ಮಂಜುಳ ಅವರ ಜೊತೆ ಬಂಗಾರದ ಗುಡಿ ಎಂಬ ಸಿನಿಮಾದ ಮೂಲಕ ಚಂದನವನಕ್ಕೆ ಲಗ್ಗೆ ಇಟ್ಟ ಈ ನಟಿ ನಂತರ ತಾಯಿಗೆ ತಕ್ಕ ಮಗ, ಶಂಕರಗುರು, ಆಪರೇಷನ್ ಡೈಮಂಡ್ ರಾಕೆಟ್, ನಾರದ ವಿಜಯ, ಪಟ್ಟಣಕ್ಕೆ ಬಂದ ಪತ್ನಿಯರು ಮುಂತಾದ ಚಿತ್ರಗಳಲ್ಲಿ ನಟಿಸಿ ಕನ್ನಡದಲ್ಲಿಯೂ ಖ್ಯಾತಿ ಪಡೆಯುತ್ತಾರೆ.

Advertisement

Advertisement

ಚಂದನವನದ ದಿಗ್ಗಜ ನಟರಾದ ಡಾ.ರಾಜಕುಮಾರ್, ವಿಷ್ಣುವರ್ಧನ್, ಅನಂತನಾಗ್, ಶ್ರೀನಾಥ್ ಮತ್ತು ಲೋಕೇಶ್ ಜೊತೆ ನಟಿಸಿದ ಅವರು ಕನ್ನಡಿಗರ ಮನೆ ಮಗಳಾಗಿದ್ದರು. ಹಾಗೇ ತಮಿಳಿನ ದಿಗ್ಗಜ ನಟರಾದ ಎಂ.ಜಿ.ರಾಮಚಂದ್ರನ್ ಮತ್ತು ಶಿವಾಜಿ ಗಣೇಶನ್ ಜೊತೆ ಕೂಡ ನಾಯಕಿಯಾಗಿ ನಟಿಸಿದ್ದಾರೆ. ಹೀಗೆ ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಚಿತ್ರರಂಗದಲ್ಲಿ  ಬಹುತೇಕ ಎಲ್ಲಾ ಸೂಪರ್ ಸ್ಟಾರ್ ಜೊತೆ ಅಬಿನಯಿಸಿ ಟಾಪ್ ನಟಿಯಾಗಿ ಮಿಂಚುತ್ತಿರುವ ಸಂದರ್ಭದಲ್ಲೇ ತಮ್ಮ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ.

Advertisement

 

Advertisement

1983 ರಲ್ಲಿ, ನಟಿ ಪದ್ಮಪ್ರಿಯ ಅವರು ಶ್ರೀನಿವಾಸನ್ ಎಂಬುವವರ ಜೊತೆ ದಾಂಪತ್ಯ ಜೀವನಕ್ಕೆ ಹೆಜ್ಜೆ ಇಡುತ್ತಾರೆ. ದಂಪತಿಗೆ ವಸುಮತಿ ಎಂಬ ಮಗಳು ಇದ್ದಾಳೆ.ಆದರೆ ಸಿನಿಮಾದಲ್ಲಿ ಇದ್ದ ಸುಖಕರ ಜೀವನದಂತೆ ಅವರ ದಾಂಪತ್ಯ ಜೀವನ ಸುಗಮವಾಗಿರಲಿಲ್ಲ. ದಂಪತಿಗಳ ನಡುವೆ ವೈಮನಸ್ಸು ಉಂಟಾಗಿ ವಿವಾಹವಾದ ಕೇವಲ  ಒಂದೇ ವರುಷದಲ್ಲಿ ವಿಚ್ಚೇದನ ಪಡೆದುಕೊಂಡು ಶಾಶ್ವತವಾಗಿ ಬೇರ್ಪಡುತ್ತಾರೆ. ಹೀಗೆ ಗಂಡನಿಂದ ಬೇರಾದ ಮೇಲೆ ಈ ನಟಿ, ತನ್ನ ತಂದೆ ತಾಯಿಯ ಜೊತೆ ತಮಿಳುನಾಡಿನಲ್ಲಿ ವಾಸವಾಗುತ್ತಾರೆ. ಸಿನಿಮಾದಲ್ಲಿ ತಮ್ಮ ಮುದ್ದುಮುಖ ಹಾಗೂ ನಟನೆಯಿಂದ ಗಮನ ಸೆಳೆದಿದ್ದ ಇವರು, ತಮ್ಮ ದಾಂಪತ್ಯ ಜೀವನ ಹದಗೆಡುತ್ತಿದ್ದಂತೆ, ಮನಸ್ಸಿಗೆ ಬಹಳ ನೋವನ್ನುಂಟು ಮಾಡಿಕೊಂಡು ತಮ್ಮ ಆರೋಗ್ಯವನ್ನು ಹದಗೆಡಿಸಿ ಕೊಳ್ಳುತ್ತಾರೆ. ನಂತರ 1997 ರ ನವೆಂಬರ್ 16 ರಂದು ಹೃದ್ರೋಗ ಮತ್ತು ಮೂತ್ರಪಿಂಡ ವೈಫಲ್ಯದಿಂದ ನಟಿ ಪದ್ಮಪ್ರಿಯ ಅವರು ನಿಧನರಾಗಿ ಬಿಡುತ್ತಾರೆ.

 

ಪದ್ಮಪ್ರಿಯಾ ಅವರು ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡುತ್ತಿದ್ದರು ಮತ್ತು ಅವರ ಸ್ವಂತ ಧ್ವನಿಯಲ್ಲಿ ಡಬ್ ಮಾಡುತ್ತಿದ್ದರು. ಅವರು ಅಭಿನಯಿಸಿದ ಕೊನೆಯ ಚಿತ್ರ ತಮಿಳಿನ ತೋಟ ಚಿನ್ನುಂಗಿ. ಈ ಚಿತ್ರದಲ್ಲಿ ಅವರು ತಾಯಿಯ ಪಾತ್ರದಲ್ಲಿ ಅಭಿನಯಿಸಿದ್ದರು.ಅವರ ಮರಣದ ನಂತರ ಆಕೆಯ ಪುತ್ರಿ ವಸುಮತಿ ಅವರು ಚಲನಚಿತ್ರದ್ಯಮದಲ್ಲಿ ಒಂದು ಪ್ರಯತ್ನವನ್ನು ಮಾಡುತ್ತಾರೆ, ಆದರೆ ಅದು ವಿಫಲವಾಗಿ ಬಿಡುತ್ತದೆ. ನಂತರ ವಿವಾಹವಾಗಿ ಯುನೈಟೆಡ್ ಕಿಂಗ್‌ಡಂನಲ್ಲಿ ನೆಲೆಸಿದ್ದಾರೆ .

Advertisement