ಸೂಪರ್ ಹಿಟ್ ಸಿನಿಮಾದಲ್ಲಿ ನಟಿಸಿದ್ದ ಈ ನಟ ಇದೀಗ ದೇವಸ್ಥಾನದ ಮುಂದೆ ಮಾಡುತ್ತಿರುವುದು ಏನು ಗೊತ್ತಾ ?

in ಕನ್ನಡ ಮಾಹಿತಿ 42 views

ಸಿನಿಮಾಲೋಕ ಎಂಬುದೆ ಹಾಗೇ, ಅದೊಂದು ಮಾಯಾದಲೋಕ. ಈ ಬಣ್ಣ ಲೋಕದ ಮಾಯಾ ಜಗತ್ತಿಗೆ ಆಕರ್ಷಿತರಾಗಿ ಅದೆಷ್ಟೋ ಯುವಕರು ತಮ್ಮ ಶಿಕ್ಷಣವನ್ನು ಬಿಟ್ಟು ತಮ್ಮ ಮುಂದಿನ ಜೀವನದ ಬಗ್ಗೆ ಯೋಚನೆಯನ್ನು ಸಹ ಮಾಡದೆ ನಾನೊಬ್ಬ ಸ್ಟಾರ್ ಆಗಬೇಕು, ಎಲ್ಲರು ನನ್ನನ್ನು ಗುರುತಿಸಬೇಕು ಎಂದು ಈ ಬಣ್ಣದ ಲೋಕಕ್ಕೆ ಕಾಲಿಡುತ್ತಾರೆ. ಆದರೆ ಅದೃಷ್ಟ ಲಕ್ಷ್ಮಿ ಎಲ್ಲರಿಗೂ ಒಲಿಯುವುದಿಲ್ಲ. ಚಿಕ್ಕ ವಯಸ್ಸಿನಿಂದಲೇ ಕಲೆ ಮತ್ತು ನಟನೆಯ ಮೇಲೆ ಅಪಾರ ಆಸಕ್ತಿಯನ್ನಿಟ್ಟು ಬಣ್ಣದ ಲೋಕಕ್ಕೆ ಕಾಲಿಟ್ಟು ಕಲಾವಿದನಾದವರಿಗಿಂತ ಏನೂ ಸಿಗದೆ ತಮ್ಮ ಜೀವನವನ್ನು ನಾಶ ಮಾಡಿಕೊಂಡ ಯುವಕರೆ ಹೆಚ್ಚು. ಈ ರೀತಿಯಾದ ಅದೆಷ್ಟೋ ಯುವಕರನ್ನು ನಾವು ನೋಡಿರುತ್ತೇವೆ. ಇದೇ ರೀತಿಯಾದ ಘಟನೆ ತಮಿಳು ಚಿತ್ರರಂಗದ ನಟನ ಜೀವನದಲ್ಲಿ ನಡೆದಿದ್ದು, ಇದೀಗ ಆ ನಟ ದೇವಸ್ಥಾನದಲ್ಲಿ ಏನು ಮಾಡುತ್ತಿದ್ದಾನೆ ಗೊತ್ತಾ ಮುಂದೆ ಓದಿ ..

Advertisement

 

Advertisement

 

Advertisement

Advertisement

ತಮ್ಮೆಲ್ಲರಿಗೂ ಎಸ್ ನಾರಾಯಣ್ ನಿರ್ದೇಶನದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಅಮೂಲ್ಯ ಅಭಿನಸಿದ್ದ ಚೆಲುವಿನ ಚಿತ್ತಾರ ಸಿನಿಮಾ ನೆನಪಿದೆ ಅಲ್ಲವೇ? ಈ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಶತದಿನೋತ್ಸವವನ್ನು ಪೂರೈಸಿದ್ದು ದೊಡ್ಡ ಸಂಚಲನವನ್ನೇ ಸೃಷ್ಟಿ ಮಾಡಿತ್ತು.ಶಾಲಾ ವಿದ್ಯಾರ್ಥಿನಿ ಹೇಗೆ ಒಬ್ಬ ಮೆಕಾನಿಕ್ ಯುವಕನನ್ನು ಪ್ರೀತಿ ಮಾಡುತ್ತಾಳೆ. ನಂತರ ಅವರಿಬ್ಬರ ಜೀವನದಲ್ಲಿ ಏನು ನಡೆಯುತ್ತದೆ ಎಂಬುದು ಈ ಚಿತ್ರದ ಕಥಾ ಹಂದರ. ೨೦೦೯ ರಲ್ಲಿ ಬಿಡುಗಡೆಯಾಗಿದ್ದ ಈ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿತ್ತು. ಆದರೂ ಕೂಡ ಅದೆಷ್ಟೋ ಪೋಷಕರು ಸಿನಿಮಾ ವಿರುದ್ಧ ಕಿಡಿ ಕಾರಿದ್ದರು.

 

ಇನ್ನು ಈ ಚೆಲುವಿನ ಚಿತ್ತಾರ ಸಿನಿಮಾ ತಮಿಳಿನ ಕಾದಲ್ ಎಂಬ ಸಿನಿಮಾದ ರಿಮೇಕ್ ಎಂಬುದು ಅದೆಷ್ಟೋ ಜನರಿಗೆ ತಿಳಿದಿರುವುದಿಲ್ಲ. ಕಾದಲ್ ಸಿನಿಮಾ ತಮಿಳು ಚಿತ್ರರಂಗದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿ ಮಾಡಿದ್ದು, ದೊಡ್ಡ ದಾಖಲೆಯನ್ನೇ ಬರೆದಿತ್ತು. ಇನ್ನು ಈ ಸಿನಿಮಾದಲ್ಲಿ ಸಿನಿಮಾ ಅವಕಾಶಗಳನ್ನು ಹುಡುಕಿಕೊಂಡು ಚೆನ್ನೈಗೆ ಬಂದ ಹುಡುಗನ ಪಾತ್ರದಲ್ಲಿ ಪಲ್ಲು ಬಾಬು ಎಂಬ ನಟ ಅಭಿನಯಿಸಿದ್ದರು. ಕಾದಲ್ ಸಿನಿಮಾದಲ್ಲಿ ಪಲ್ಲು ಬಾಬು ಅವರ ನಟನೆ ಮತ್ತು ಸಂಭಾಷಣೆ ಪ್ರೇಕ್ಷಕರಿಗೆ ಮಸ್ತ್ ಮಜಾ ನೀಡಿತ್ತು. ಸಿನಿಮಾ ಸೂಪರ್ ಹಿಟ್ ಆಗುತ್ತಿದ್ದಂತೆ ಪಲ್ಲು ಬಾಬು ಅವರು ನನಗೆ ಮುಂದೆ ದೊಡ್ಡ ಅವಕಾಶಗಳು ಸಿಗುತ್ತದೆ ಎಂದು ಕಾದು ಕುಳಿತ್ತಿದ್ದರು.ಆದರೆ ಅವರು ಅಂದುಕೊಂಡಿದ್ದೇ ಒಂದು ಆಗಿದ್ದೇ ಒಂದು.

 

ಕಾದಲ್ ಸಿನಿಮಾದ ಬಳಿಕ ಈ ನಟನಿಗೆ ಅಲ್ಲೊಂದು ಇಲ್ಲೊಂದು ಚಿಕ್ಕಪುಟ್ಟ ಪಾತ್ರಗಳು ಸಿಕ್ಕಿದ್ದಾದರೂ ಅವು ಯಾವು ಕೂಡ ಪಲ್ಲು ಬಾಬು ಅವರಿಗೆ ಕೈ ಹಿಡಿಯಲಿಲ್ಲ.ಬಳಿಕ ಸಿನಿಮಾದಲ್ಲಿ ಅವಕಾಶಗಳು ಸಿಗಲೇ ಇಲ್ಲ. ಪ್ರತಿನಿತ್ಯ ನಿರ್ದೇಶಕ ನಿರ್ಮಾಪಕರ ಬಳಿ ಅಲೆದು ಅಲೆದು ಪಲ್ಲು ಬಾಬು ಅವರ ಚಪ್ಪಲಿ ಸವದಿತ್ತು. ಇತ್ತ ಬಡತನದಲ್ಲಿ ಬೆಂದು ಹೋಗಿದ್ದ ಈ ನಟನ ತಂದೆ ತಾಯಿ ಅನಾರೋಗ್ಯದಿಂದ ಮರಣವನ್ನು ಹೊಂದು ಬಿಡುತ್ತಾರೆ. ವ್ಯಾಸಾಂಗ ಮಾಡುವ ಸಂದರ್ಭದಲ್ಲಿ ನಟನೆಯ ಕಡೆ ಆಕರ್ಷಿತಗೊಂಡು ಶಾಲೆಯನ್ನು ಅರ್ಧದಲ್ಲೇ ಬಿಟ್ಟ ಪಲ್ಲು ಬಾಬು ಅವರ ಕೈಯಲ್ಲಿ ವಿದ್ಯೆ ಇಲ್ಲದ ಕಾರಣ ನಗರದಲ್ಲಿ ಯಾವುದೇ ಕೆಲಸ ಕೂಡ ಸಿಗಲಿಲ್ಲ .

 

ಒಂದು ಕಡೆ ಹೆತ್ತ ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಲು ಸಾಧ್ಯವಾಗಲಿಲ್ಲ ಅವರನ್ನು ಕಾಪಾಡಲು ಆಗಲೇ ಇಲ್ಲ ಎಂಬ ನೋವು, ಮತ್ತೊಂದು ಕಡೆ ಕೈಯಲ್ಲಿ ಕೆಲಸವಿಲ್ಲ. ಇದರಿಂದ ಮಾನಸಿಕವಾಗಿ ನೊಂದ ಪಲ್ಲು ಬಾಬು ಹೊಟ್ಟೆ ಪಾಡಿಗಾಗಿ ಸಮೀಪದ ದೇವಸ್ಥಾನದಲ್ಲಿ ಒಂದು ದಿನ ಭಿಕ್ಷೆಯನ್ನು ಬೀಳಲು ಕೂರುತ್ತಾರೆ ನಂತರ ಅದೇ ಈ ನಟನ ಕೆಲಸವಾಗಿ ಮಾರ್ಪಡುತ್ತದೆ.

 

ತಾನೊಬ್ಬ ಸ್ಟಾರ್ ಆಗಬೇಕು ಎಂದು ಅದೆಷ್ಟೋ ಯುವಕರು ಮನೆ ಬಿಟ್ಟು ಮಾಯಾ ನಗರಿಗಳಿಗೆ ಬರುತ್ತಾರೆ . ಅದರಲ್ಲಿ ಕೆಲವರಿಗೆ ಮಾತ್ರ ಗಟ್ಟಿಯಾಗಿ ನಿಲ್ಲಲು ಸಾಧ್ಯವಾಗುತ್ತದೆ. ಇನ್ನುಳಿದವರಿಗೆ ಬಂದ ದಾರಿಗೆ ಸುಂಕವಿಲ್ಲ ಎಂದು ವಾಪಸ್ಸು ಹೋಗಿ ಬಿಡುತ್ತಾರೆ. ನಟ ಪಲ್ಲು ಬಾಬು ಅವರ ಸ್ಥಿತಿಯನ್ನು ನೋಡಿದ ಕೆಲವು ಕಲಾವಿದರು ಸಹಾಯದ ಹಸ್ತವನ್ನು ಚಾಚಿದ್ದಾರೆ. ಇನ್ಮುಂದೆಯಾದರೂ ಇವರ ಜೀವನದಲ್ಲಿ ಹೊಸ ಬೆಳಕು ಮೂಡಲಿ ಎಂದು ಹಾರೈಸೋಣ

Advertisement
Share this on...