ಈ ವ್ಯಕ್ತಿ ಪಾನಿ ಪೂರಿ ಮಾರುವ ರೀತಿ ನೋಡಿ ಫಿದಾ ಆದ ಜನರು…!

in ಕನ್ನಡ ಮಾಹಿತಿ/ಮನರಂಜನೆ 173 views

ಪ್ರಸ್ತುತ ಪ್ರಪಂಚದಾದ್ಯಂತ ಜನರು ಕೊರೊನಾ ವೈರಸ್’ನಿಂದ ಬಳಲುತ್ತಿದ್ದಾರೆ. ಈ ಮಧ್ಯೆ ಬಹುತೇಕ ಜನರು ಮನೆಯಿಂದ ಹೊರಬರಲು ಭಯಪಡುತ್ತಿದ್ದಾರೆ. ಇದರ ನಡುವೆಯೇ ಸ್ಟ್ರೀಟ್ ಫುಡ್ ತಿನ್ನಲು ಹಲವರು ಹಂಬಲಿಸುತ್ತಿದ್ದಾರೆ. ಹೌದು ಕೊರೊನಾವನ್ನು ನಿರ್ಲಕ್ಷಿಸಿ ಸ್ಟ್ರೀಟ್ ಫುಡ್ ಅನ್ನು ವಿನೋದದಿಂದ ಆನಂದಿಸುತ್ತಿರುವ ಅನೇಕ ಜನರಿದ್ದಾರೆ. ಹಾಗೆಯೇ ಕೆಲವರು ಅದನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ವಿಶೇಷವಾಗಿ ಪಾನಿ ಪೂರಿ ತಿನ್ನಲು ಜನರು ಹಂಬಲಿಸುತ್ತಿದ್ದಾರೆ. ಪಾನಿ ಪೂರಿ ಇಲ್ಲದೇ ಬದುಕಲು ಸಾಧ್ಯವೇ ಇಲ್ಲ ಎನ್ನುವವರು ನಮ್ಮ ನಡುವೆ ಇದ್ದಾರೆ. ಒಟ್ಟಿನಲ್ಲಿ ಭಾರತದಲ್ಲಿ ಪಾನಿ ಪೂರಿಗೆ ಬಹಳಷ್ಟು ಅಭಿಮಾನಿಗಳಿದ್ದಾರೆ. ಅದಕ್ಕೆ ಬಹಳಷ್ಟು ಜನ ಗೃಹಿಣಿಯರು ಲಾಕ್ ಡೌನ್ ಸಮಯದಲ್ಲಿ ಮನೆಯಲ್ಲಿಯೇ ಪಾನಿ ಪೂರಿ ಮಾಡಿಕೊಂಡು ಸವಿದು, ಅದನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿ ಎಂಜಾಯ್ ಮಾಡಿದ್ದನ್ನು ನೀವು ನೋಡಿರಬಹುದು. ಅದೆಲ್ಲ ಸರಿ, ಈಗೇಕೆ ಪಾನಿ ಪೂರಿ ಬಗ್ಗೆ ಇಷ್ಟೆಲ್ಲಾ ಹೇಳುತ್ತೀರಿ ಎಂದು ನೀವು ಕೇಳಬಹುದು. ಆದರೆ ಅದಕ್ಕೂ ಕಾರಣವಿದೆ.

Advertisement

Advertisement

ಇತ್ತೀಚೆಗೆ ಛತ್ತೀಸ್ಗಢದ ಪಾನಿಪುರಿ ಮಾರುವವನ ವಿಡಿಯೋ ವೈರಲ್ ಆಗುತ್ತಿದೆ. ಹೌದು, ಈ ಕೊರೊನಾ ಯುಗದಲ್ಲಿ ಅವರು ಪಾನಿ ಪೂರಿಯನ್ನು ಅದ್ಭುತವಾಗಿ ಮಾರಾಟ ಮಾಡುತ್ತಿದ್ದಾರೆ. ಒಂದು ವೇಳೆ ನೀವೂ ಈ ವಿಡಿಯೋ ನೋಡಿದರೆ ನಿಮ್ಮ ಮುಖದಲ್ಲಿ ಮಂದಹಾಸ ಮೂಡುವುದು ಗ್ಯಾರಂಟಿ. ಹೌದು, ಈ ವಿಡಿಯೋದಲ್ಲಿ ಪಾನಿಪೂರಿ ಮಾರುವ ವ್ಯಕ್ತಿಯು ಅಂಗಡಿಯಲ್ಲಿ ಸ್ವಯಂಚಾಲಿತ ಪಾನಿಪುರಿ ಯಂತ್ರವನ್ನು ಇಟ್ಟಿದ್ದು, ಈ ಮೂಲಕ ಗ್ರಾಹಕರು ಯಾವುದೇ ದೈಹಿಕ ಸಂಪರ್ಕವಿಲ್ಲದೆ ಸುಲಭವಾಗಿ ಪಾನಿ ಪೂರಿಯನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಈ ವಿಡಿಯೋವನ್ನು ಐಎಎಸ್ ಅಧಿಕಾರಿ ಅನೀಶ್ ಶರಣ್ ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ, ವಿಡಿಯೋ ಕೆಳಗಡೆ “ತೆಲಿಬಂಧ ರಾಯ್ಪುರದ ಸ್ವಯಂಚಾಲಿತ ಪಾನಿ ಪೂರಿ. ಗಜಾಬ್ ಕಾ ಜುಗಾಡ್ “ ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ. ಇದು ನಿಜಕ್ಕೂ ಅದ್ಭುತವಾಗಿದೆ”.

Advertisement

ವಿಡಿಯೋದಲ್ಲಿ ಪಾನಿ ಪೂರಿ ಮಾರುವ ವ್ಯಕ್ತಿ ಯಂತ್ರದ ಮೂಲಕ ಪಾನಿಯನ್ನು ತೆಗೆದುಕೊಳ್ಳುವಂತೆ ಜನರಿಗೆ ಸೂಚಿಸುವುದನ್ನು ನೀವು ನೋಡಬಹುದು. ಅಷ್ಟೇ ಅಲ್ಲ, ಗ್ರಾಹಕರು ತಮ್ಮ ನೆಚ್ಚಿನ ಪಾನಿಯನ್ನು ಪೂರಿಯಲ್ಲಿ ಸುಲಭವಾಗಿ ತೆಗೆದುಕೊಳ್ಳಬಹುದು. ಪಾನಿಪೂರಿ ಮಾರುವವನು ಇಂತಹ ಸಮಯದಲ್ಲಿ ಈ ಒಂದು ಅದ್ಭುತ ಮೆಶಿನ್ ಅನ್ನು ತಂದಿಟ್ಟುಕೊಂಡಿರುವುದನ್ನು ನೋಡಿ ಅನೇಕ ಜನರು ಇದನ್ನು ‘ಅತ್ಯುತ್ತಮ ಭಾರತೀಯ ಜುಗಾಡ್’ ಎಂದು ಬಣ್ಣಿಸಿದ್ದಾರೆ. ಪ್ರತಿಯೊಬ್ಬರು ಪಾನಿಪೂರಿ ಮಾರುವವನ ಈ ಅದ್ಭುತ ಕಲ್ಪನೆ ನೋಡಿ ಸಂತೋಷ ವ್ಯಕ್ತಪಡಿಸಿದ್ದಾರೆ. ಗ್ರಾಹಕರು ಪಾನಿ ಪೂರಿ ಮಾರುವವನ ಹೆಸರನ್ನು ಕೇಳಿದಾಗ ಅವರು ತಮ್ಮ ಹೆಸರನ್ನು ಸ್ವಾಮಿ ಎಂದು ತಿಳಿಸಿದ್ದಾರೆ.

ಓಂ ಶ್ರೀ ವಿದ್ಯಾ ಚೌಡೇಶ್ವರಿ ಜ್ಯೋತಿಷ್ಯ ಫಲ ದ ಪ್ರಸಿದ್ಧ ಜ್ಯೋತಿಷಿಗಳಾದ ಶ್ರೀ ಪಂಡಿತ್ ಬ್ರಹ್ಮನಂದ ಭಟ್ ರವರು ನಿಮ್ಮ ಸಮಸ್ಯೆ ಏನೇ ಇರಲಿ,  ಎಷ್ಟೇ ಕಠಿಣ ವಾಗಿರಲಿ , ನಿಮ್ಮ ಗುಪ್ತ ಸಮಸ್ಯೆಗಳು ಹಾಗೂ ನಿಮ್ಮ ಕಠಿಣ ಸಮಸ್ಯೆಗಳಿಗೆ ಪರಿಹಾರ ಒಂದೇ ನಿಮಿಷದಲ್ಲಿ ಒಂದು ಕರೆಯಲ್ಲಿ ಸೂಚಿಸುತ್ತಾರೆ. ಒಮ್ಮೆ ಕರೆ ಮಾಡಿ 7618717450 ಎಷ್ಟೋ ಜ್ಯೋತಿಷಿಗಳ ಬಳಿ ಹೋಗಿ ಜ್ಯೋತಿಷ್ಯ ಕೇಳಿ ನಿಮಗೆ ಪರಿಹಾರ ಸಿಗದೇ ಹೋಗಿದ್ದರೆ ಇಲ್ಲಿ ಪರಿಹಾರ ಖಂಡಿತ.

Advertisement
Share this on...