ಪಾರ್ವತಮ್ಮ ರಾಜ್ ಕುಮಾರ್ ಅವರು ಕಂಡಿದ್ದ ಆ ಕನಸು ಕೊನೆಗೂ ನನಸಾಗುತ್ತಿದೆ !

in ಮನರಂಜನೆ/ಸಿನಿಮಾ 265 views

ಪ್ರತಿಯೊಂದು ಗಂಡಸಿನ ಯಶಸ್ಸಿನ ಹಿಂದೆ ಓರ್ವ ಹೆಣ್ಣಿರುತ್ತಾಳೆ ಎಂಬ  ಮಾತನ್ನು ಹಿರಿಯರು ಹೇಳಿದ್ದನ್ನು ನಾವು  ಕೇಳಿರುತ್ತೀವಿ. ಆದರೆ ಅದನ್ನು ಪ್ರತ್ಯಕ್ಷವಾಗಿ ನೋಡಿದ್ದು, ಕನ್ನಡದ ಮೇರು ನಟ, ಕನ್ನಡಿಗರ ಧ್ವನಿ, ಗಾನ ಗಂಧರ್ವ  ಸುವಾರ್ಣಕ್ಷರಗಳಲ್ಲಿ ಬರೆಯಬೇಕಾದ ಡಾಕ್ಟರ್ ರಾಜ್ ಕುಮಾರ್ ಅವರ ಯಶಸ್ಸಿಗೆ  ಬಹಳಷ್ಟು ಕಾರಣವಾದವರು, ಅವರ ಪ್ರೀತಿಯ ಮಡದಿ ಪಾರ್ವತಮ್ಮ ರಾಜ್‍ಕುಮಾರ್ ! ಪಾರ್ವತಮ್ಮ ರಾಜ್ ಕುಮಾರ್ ಅವರು ಜನಿಸಿದ್ದು   ಡಿಸೆಂಬರ್ 6, 1939 ರಂದು ಮೈಸೂರು ಬಳಿಯ ಶ್ರೀ ನಂಜುಂಡೇಶ್ವರ ನೆಲೆಸಿರುವ ನಂಜನಗೂಡಿನಲ್ಲಿ. ಆದರೆ ಬೆಳೆದಿದ್ದು ಮೈಸೂರು ಬಳಿಯ ಪುಟ್ಟ ಗ್ರಾಮವಾದ ಸಾಲಿಗ್ರಾಮದಲ್ಲಿ. ಅಪ್ಪಾಜಿಗೌಡ ಮತ್ತು ಲಕ್ಷ್ಮಮ್ಮ  ಅವರ ಕುಟುಂಬದಲ್ಲಿ ಹಿರಿಯ ಮಗಳಾಗಿ ಜನಿಸಿದರು. ಅಪ್ಪಾಜಿ ಗೌಡರು ಸಂಗೀತ ಶಿಕ್ಷಕರಾಗಿದ್ದರು. ಪಾರ್ವತಮ್ಮನವರು ಜನಿಸಿದಾಗಲೇ ಅವರ ಸೋದರ ಮಾವ ಸಂಬಂಧಿ ನಟಭಯಂಕರ ಎಂದು ಖ್ಯಾತರಾಗಿದ್ದ ಸಿಂಗನಲ್ಲೂರು ಪುಟ್ಟಸ್ವಾಮಿ ಮತ್ತು ಲಕ್ಷ್ಮಮ್ಮನವರು ಪಾರ್ವತಮ್ಮನವರ ತೊಟ್ಟಿಲಲ್ಲಿ ಬೆಳ್ಳಿ ನಾಣ್ಯವೊಂದನ್ನು ಇರಿಸಿ, ಅವಳನ್ನು ತನ್ನ  ಸೊಸೆಯನ್ನಾಗಿ ಮಾಡುವುದಾಗಿ ಪ್ರತಿಜ್ಞೆ ಮಾಡಿದ್ದರು. ಅಂತೆಯೇ ತಾವು 14 ವರ್ಷದವರಿದ್ದಾಗಲೇ, ಹುಟ್ಟೂರಾದ ನಂಜನಗೂಡಿನ ರಾಣಪ್ಪನ ಮದುವೆ ಮಂಟಪದಲ್ಲಿ ಮತ್ತುರಾಜ್ ಅವರನ್ನು ವಿವಾಹವಾಗುತ್ತಾರೆ.

Advertisement

Advertisement

ಇನ್ನು ನಟಸಾರ್ವಭೌಮ  ಡಾ.ರಾಜ್ ಕುಮಾರ್ ಅವರ ಸಿನಿಮಾಗಳು ಕುಟುಂಬ ಸಹಿತ ಕುಳಿತು ನೋಡುವ ಸದಭಿರುಚಿಯ ಸಿ‌ನಿಮಾಗಳು. ಈಗಲೂ ಕೂಡ ಅವರು ನಟಿಸಿದ್ದಂತಹ  ಕಪ್ಪು ಬಿಳುಪು ಚಿತ್ರಗಳು ಮತ್ತೆ  ಕಲರ್ ಆಗಿ ಬಂದಾಗ ಮತ್ತೊಮ್ಮೆ ನೋಡಲೇಬೇಕು ಎನಿಸುತ್ತದೆ.  ಅಪ್ಪಾಜಿ  ಅವರ ಕಸ್ತೂರಿ ನಿವಾಸ ಸಿನಿಮಾವನ್ನು ಕನ್ನಡ ಸಿನಿಪ್ರೇಕ್ಷಕರು ಎಂದೆಂದಿಗೂ ಮರೆಯುವುದಿಲ್ಲ. ಯುಗಯುಗ ಕಳೆದರೂ ಕೂಡ ಪ್ರೇಕ್ಷಕರ ಮನಸ್ಸಲ್ಲಿ ಅಚ್ಚಳಿಯದಂತೆ ಈ ಸಿನಿಮಾ ಉಳಿದು ಬಿಟ್ಟಿದೆ. ಈ ಸಿನಿಮಾ  ಡಿಜಟಲೀಕರಣಗೊಂಡು ಮತ್ತೆ ಬಿಡುಗಡೆಯಾಗಿ ಹೊಸದೊಂದು ದಾಖಲೆಯನ್ನೆ ಬರೆದಿತ್ತು.

Advertisement

Advertisement

 

ಇದೇ ಸಂದರ್ಭದಲ್ಲಿ ನಿರ್ದೇಶಕ ಭಗವಾನ್ ಅವರು ಪಾರ್ವತಮ್ಮ ರಾಜಕುಮಾರ್ ಅವರನ್ನು ಭೇಟಿಯಾಗಲು ಹೋದಂತಹ ಸಂದರ್ಭದಲ್ಲಿ ಪಾರ್ವತಮ್ಮನವರು, ನಮ್ಮವ್ರು ಬಹಳ ಕಷ್ಟಪಟ್ಟು ಮಾಡಿದ ಸಿನಿಮಾ ಮಂತ್ರಾಲಯ ಮಹಾತ್ಮೆ, ಅದನ್ನು ಕೂಡಾ ಕಸ್ತೂರಿ ನಿವಾಸದ ರೀತಿಯಲ್ಲಿ ಮಾಡಿ ಎಂದು ಕೇಳಿದ್ದರಂತೆ. ಅವರ ಅಂದಿನ ಕೋರಿಕೆಯಂತೆ ಮಂತ್ರಾಲಯ ಮಹಾತ್ಮೆಯನ್ನು ಕಲರೀಕರಣ ಮಾಡಲಾಗುತ್ತಿದೆ ಎಂದು ಭಗವಾನ್ ಅವರು ತಿಳಿಸಿದ್ದಾರೆ.ಇನ್ನು  ಮಂತ್ರಾಲಯದ ಹಿರಿಯ ಶ್ರೀಗಳೂ ಕೂಡ  ಈ ಸಿನಿಮಾವನ್ನು ಕಲರ್ ಮಾಡಬೇಕೆಂಬ ಆಸೆಯನ್ನು ವ್ಯಕ್ತಪಡಿಸಿದ್ದರಂತೆ. ಏಕೆಂದರೆ ಈ ಸಿನಿಮಾವನ್ನು ಕಲರ್ ಮಾಡಿ ಮತ್ತೊಮ್ಮೆ ಬಿಡುಗಡೆ ಮಾಡಿದರೆ  ಜನರಿಗೆ ಸಿನಿಮಾದ ಮೂಲಕ ಮಂತ್ರಾಲಯ ಶ್ರೀ ಗುರುರಾಘವೇಂದ್ರರ ಜೀವನದ ಪರಿಚಯ ಆಗುತ್ತದೆ ಎಂಬುದು. ಇದೀಗ  ಇವರೆಲ್ಲರ ಆಸೆಗಳಿಗೆ ಜೀವ ಬಂದಿದ್ದು, ಆದಷ್ಟು ಬೇಗ ಡಾ.ರಾಜ್ ಅವರ ಅಭಿನಯದ  ಮಂತ್ರಾಲಯ ಮಹಾತ್ಮೆ ಕಲರ್ ನಲ್ಲಿ ಬರಲು ಭರದಿಂದ ಸಿದ್ಧತೆಗಳು ನಡೆಯುತ್ತಿವೆ.

ಅಪ್ಪಾಜಿ ಅವರು  ರಾಘವೇಂದ್ರ ಸ್ವಾಮಿಗಳ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದಂತೆ ನಟಿಸಿ, ಜನರನ್ನು ಭಕ್ತಿಯಲ್ಲಿ ಮುಳುಗುವಂತೆ ಮಾಡಿದ್ದರು. ಈ ಸಿನಿಮಾ 1966 ರಲ್ಲಿ ಬಿಡುಗಡೆಯಾಗಿತ್ತು.ಗುರು ರಾಯರ ಜೀವನದ ಕಥೆಯನ್ನು ತೆರೆಯ ಮೇಲೆ ಅದ್ಭುತವಾಗಿ ಮೂಡಿಸಗಿದ್ದು, ಇದೀಗ ಮತ್ತೊಮ್ಮೆ ಅದೇ ಸಿನಿಮಾ ಕಲರ್ ನಲ್ಲಿ ಈ ವರ್ಷಾಂತ್ಯದ ವೇಳೆಗೆ ಬರಲಿದೆ.

Advertisement
Share this on...