ಮರಿ ಟೈಗರ್ ಜೊತೆ ಪಾರು…!

in ಸಿನಿಮಾ 261 views

ಸ್ಯಾಂಡಲ್ ವುಡ್ ನಲ್ಲಿ ಮರಿ ಟೈಗರ್ ಎಂದೇ ಗುರುತಿಸಿಕೊಂಡಿರುವ ನಟ ವಿನೋದ್ ಪ್ರಭಾಕರ್ ಇತ್ತೀಚೆಗೆ ಹಲವು ಸಿನಿಮಾಗಳಲ್ಲಿ ಬಿಜಿ಼ಯಾಗಿದ್ದು ರಾಬರ್ಟ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲದೆ ತಮ್ಮ ಕೆಲ ಸಿನಿಮಾಗಳಿಗೂ ಸಹ ಸಹಿ ಹಾಕಿದ್ದಾರೆ.

Advertisement

 

Advertisement

Advertisement

 

Advertisement

ಸದ್ಯ ಇದೀಗ ವಿನೋದ್ ಪ್ರಭಾಕರ್ ಬಳಿ ಸಿನಿಮಾವೊಂದರ ಆಫರ್ ಬಂದಿದ್ದು ಫೈನಲ್ ಸಹ ಆಗಿದೆ. ಕೋರೋನಾ ವೈರಸ್ ಹಿನ್ನೆಲೆಯಲ್ಲಿ ದೇಶದಲ್ಲೆಡೆ ಲಾಕ್ ಡೌನ್ ಜಾರಿಯಲ್ಲಿದ್ದು ಈ ಹಿನ್ನೆಲೆಯಲ್ಲಿ ಚಿತ್ರೀಕರಣ ಸ್ವಲ್ಪ ತಡವಾಗಿ ಆರಂಭವಾಗಲಿದೆ. ಆದರೆ ಈ ಸಮಯದಲ್ಲಿ ಸಿನಿಮಾದ ಇತರ ಕೆಲಸಗಳಲ್ಲಿ ಚಿತ್ರತಂಡ ಬಿಜಿ಼ಯಾಗಿದ್ದು ತಾರಾಗಣದ ಆಯ್ಕೆ ಪ್ರಕ್ರಿಯೆಯಲ್ಲಿ ತೊಡಗಿದೆ.

 

 

ಕೆ.ಎಂ.ಎಸ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಹೇಮಾವತಿ ಮುನಿಸ್ವಾಮಿಯವರು ಈ ಚಿತ್ರವನ್ನ ನಿರ್ಮಿಸುತ್ತಿದ್ದು ಮರಿಟೈಗರ್ ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ. ಈ ಚಿತ್ರಕ್ಕೆ ಶೀರ್ಷಿಕೆ ಇನ್ನೂ ಅಂತಿಮವಾಗಿಲ್ಲ. ಆದರೆ ತಾರಾಗಣದ ಆಯ್ಕೆ ಪ್ರಕ್ರಿಯೆ ನಡಿತಾ ಇದೆ. ಈಗಾಗಲೇ ಹೀರೋಯಿನ್ ಆಯ್ಕೆ ಮಾಡಲಾಗಿದ್ದು ವಿನೋದ್ ಗೆ ಜೋಡಿಯಾಗಿ ಪಾರ್ವತಿ ಅರುಣ್ ಅಭಿನಯಿಸಲಿದ್ದಾರೆ.

 

 

ಮೂಲತಃ ಮಾಲಿವುಡ್ ನವರಾದ ಪಾರ್ವತಿ ಹಿಂದೆ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಗೀತಾ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇದೀಗ ವಿನೋದ್ ಪ್ರಭಾಕರ್ ಜೊತೆ ರೊಮ್ಯಾನ್ಸ್ ಮಾಡಲು ಸಿದ್ಧತೆ ನಡೆಸಿದ್ದಾರೆ. ವಿನೋದ್ ಪ್ರಭಾಕರ್ ಟೈಸನ್, ಮರಿ ಟೈಗರ್, ರಗಡ್ ಸಿನಿಮಾಗಳಲ್ಲಿ ನಟಿಸಿದ್ದು ಪ್ರಸ್ತುತ ಡಿ ಬಾಸ್ ಅಭಿನಯದ ರಾಬರ್ಟ್ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರೊಂದಿಗೆ ಹಲವು ಪ್ರಾಜೆಕ್ಟ್’ಗಳ ಕುರಿತು ಸಹ ಚಿಂತನೆ ನಡೆಸುತ್ತಿದ್ದಾರೆ. ಚಿತ್ರೀಕರಣವಷ್ಟೇ ಆರಂಭವಾಗಬೇಕಾಗಿದ್ದು ಲಾಕ್ ಡೌನ್ ಪರಿಸ್ಥಿತಿ ತಿಳಿಯಾದ ಬಳಿಕ ಶುರುವಾಗಲಿದೆ.

 

 

ಸಿನಿಮಾ ಟೈಟಲ್ ಕೂಡ ಆಗಲೇ ತಿಳಿಯಲಿದೆ. ಪ್ರಸ್ತುತ ಫೋಟೋ ಶೂಟ್ ನಡೆಯುತ್ತಿದೆಯಂತೆ. ಪ್ರಮೋದ್ ಕುಮಾರ್ ರವರು ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಈ ಸಿನಿಮಾ ಲವ್ ಹಾಗೂ ಥ್ರಿಲ್ಲರ್ ಕಥಾಹಂದರವನ್ನು ಹೊಂದಿದೆ. ಈ ಮೂಲಕ ಬೆಳ್ಳಿಪರದೆಯ ಮೇಲೆ ಮೋಡಿ ಮಾಡಲು ವಿನೋದ್ ಪ್ರಭಾಕರ್ ತಯಾರಿ ನಡೆಸಿದ್ದಾರೆ.

– ಸುಷ್ಮಿತಾ

Advertisement
Share this on...