ಪವಿತ್ರ ಲೋಕೇಶ್ ತಮಗೆ ಬಂದ ಕಷ್ಟವನ್ನು ಗೆದ್ದದ್ದು ಹೇಗೆ ಗೊತ್ತಾ ?

in ಮನರಂಜನೆ 973 views

ಸಿನಿಮಾ ಎಂದ  ಕೂಡಲೇ ನಮಗೆಲ್ಲ ನೆನಪಾಗುವುದು ಬಣ್ಣ ಬಣ್ಣದ ಕಲ್ಪನೆ . ಅದರ ಕಷ್ಟ ಸುಖಗಳು ಅನುಭವಿಸಿದವರಿಗೆ ಮಾತ್ರ ಗೊತ್ತಿರುತ್ತದೆ. ಅಂತಹ ಕಲಾವಿದರಲ್ಲಿ ನಟಿ ಪವಿತ್ರಾ ಲೋಕೇಶ್ ಕೂಡ ಒಬ್ಬರು. ಅಂತಹ ಅದ್ಭುತ ನಟಿಯ ಜೀವನದಲ್ಲಿ ನಡೆದ ಘಟನೆಯನ್ನು ಕೇಳಿದರೆ ಕಣ್ಣಿನಲ್ಲಿ ನೀರು ಬರುತ್ತದೆ.  ಪವಿತ್ರ ರವರು 1979 ರಲ್ಲಿ  ಮೈಸೂರಿನಲ್ಲಿ ಜನಿಸಿದರು.  ಪವಿತ್ರರವರು  ರಂಗಭೂಮಿ ಮತ್ತು ಸಿನಿಮಾ ಕಲಾವಿದರಾದ  ಮೈಸೂರು ಲೋಕೇಶ್ ರವರ ಪುತ್ರಿ . ತಾಯಿ ಶಿಕ್ಷಕಿಯಾಗಿದ್ದರು, ಮತ್ತು ಇವರ ಕಿರಿಯ ಸಹೋದರ ನಟರಾದ ಆದಿ ಲೋಕೇಶ್. ಪವಿತ್ರ ಒಂಬತ್ತನೇ ತರಗತಿಯಲ್ಲಿ ಓದುತ್ತಿದ್ದಾಗ ತಂದೆ ಲೋಕೇಶ್ ಅವರು ನಿಧನರಾದರು. ನಟಿ ಪವಿತ್ರ ತಮ್ಮ ಹದಿನಾರನೇ ವಯಸ್ಸಿನಲ್ಲಿಯೇ ಅಭಿನಯಿಸಲು ಪ್ರಾರಂಭಿಸಿದರು.  ಕಿರುತೆರೆಯಲ್ಲಿ  ಹಲವಾರು ಧಾರಾವಾಹಿಗಳಲ್ಲಿ ನಟಿಸುವುದಲ್ಲದೆ ಬೆಳ್ಳಿತೆರೆಯಲ್ಲಿ ಕೂಡ ಅಭಿನಯಿಸಿದ್ದಾರೆ. ಇವರು ಸುಮಾರು 150 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. 2006 ರಲ್ಲಿ  ಬಿಡುಗಡೆಯಾದ “ನಾಯಿ ನೆರಳು”  ಎಂಬ ಚಿತ್ರದಲ್ಲಿನ ಅಭಿನಯಕ್ಕಾಗಿ , ಮತ್ತು ಅತ್ಯುತ್ತಮ ನಟನೆಗಾಗಿ “ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ” ಯನ್ನು ಪಡೆದುಕೊಂಡಿದ್ದಾರೆ.

Advertisement

 

Advertisement

Advertisement

 

Advertisement

ಅತಿ ಹೆಚ್ಚಿನ ಪೋಷಕ ಪಾತ್ರಗಳಲ್ಲಿ ಅಭಿನಯಿಸಿರುವ ಮತ್ತು  ಬಣ್ಣದ ಲೋಕದಲ್ಲಿ ಚಿರಪರಿಚಿತವಾಗಿರುವ ಪವಿತ್ರ ರವರು  ಚಿತ್ರರಂಗದ ಪ್ರತಿಯೊಂದು ಕಷ್ಟ ಸುಖಗಳ ಬಗ್ಗೆ ಹಂಚಿಕೊಂಡಿದ್ದಾರೆ.  ಪವಿತ್ರ  ಲೋಕೇಶ್ ಅವರು ತಮ್ಮದೇ ಆದ ಜೀವನವನ್ನು ರೂಪಿಸಿಕೊಳ್ಳಲು ಬಹಳಷ್ಟು ಶ್ರಮವನ್ನು ಪಟ್ಟಿದ್ದಾರೆ. ಚಿತ್ರರಂಗ ಕೇಳುವುದಕ್ಕೆ ನೋಡುವುದಕ್ಕೆ ವರ್ಣಮಯವಾಗಿದ್ದರೂ ಆಳದಲ್ಲಿ ತುಂಬಾ  ಏಳು ಬೀಳಿನ ತೊಂದರೆಗಳಿವೆ . ಜೀವನವನ್ನು ರೂಪಿಸಿಕೊಳ್ಳಲು ಮಂಚವನ್ನು ಹತ್ತಬೇಕಾದ ಪರಿಸ್ಥಿತಿ ಬಂದಿತ್ತು ಎಂಬುದಾಗಿ ಸಂದರ್ಶನವೊಂದರಲ್ಲಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಅದೇನೆಂದರೆ ಪ್ರತಿಯೊಬ್ಬ ಕಲಾವಿದ ಮತ್ತು  ಕಲಾವಿದೆ ತಮ್ಮ ಚಿತ್ರರಂಗದ ಜೀವನವನ್ನು ಪ್ರಾರಂಭಿಸಬೇಕಾದರೆ ಹಲವಾರು ತೊಂದರೆಗಳನ್ನು ದಾಟಿ ಬಣ್ಣದ ಲೋಕಕ್ಕೆ ಹೆಜ್ಜೆ ಇಡಬೇಕಾಗುತ್ತದೆ. ಅದರಲ್ಲಿ ಈ ತೊಂದರೆ ಕೂಡ ಒಂದು. ಅದರಲ್ಲೂ ಒಂದು ಹೆಣ್ಣಾಗಿ ಚಿತ್ರರಂಗವನ್ನು ಪ್ರವೇಶಿಸಬೇಕಾದರೆ ತಮ್ಮ ಶೀಲವನ್ನು ತ್ಯಾಗ ಮಾಡಬೇಕಾದ ಪರಿಸ್ಥಿತಿ ಎದುರಾಗುತ್ತದೆ ಎಂದು  ಪವಿತ್ರ ಲೋಕೇಶ್ ತಮ್ಮ ನೋವನ್ನು ಹೊರಹಾಕಿದ್ದಾರೆ.

 

ಇದು ಬಣ್ಣದ ಲೋಕದ ಪಿಡುಗಾಗಿದ್ದು ಇದನ್ನು ಹೋಗಲಾಡಿಸಲು ಸಾಕಷ್ಟು ಪರಿಶ್ರಮ ಬೇಕಾಗಿದೆ ಹೇಳಿಕೊಂಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ತಮಿಳು, ತೆಲುಗು,  ಮುಂತಾದ ಭಾಷೆಗಳಲ್ಲಿ ಕೂಡ ಇವರು ಅಭಿನಯಿಸಿದ್ದಾರೆ.  ಇಂದಿಗೂ ಸಕ್ರಿಯವಾಗಿ ಎಲ್ಲಾ ಭಾಷೆಗಳಲ್ಲಿ ಪೋಷಕ ಪಾತ್ರಗಳನ್ನು ಅಭಿನಯಿಸುತ್ತಿರುವ ನಟಿ ಎಂದರೆ ಅದು ಪವಿತ್ರ ಲೋಕೇಶ್ ರವರು. 2007 ರಲ್ಲಿ ಸಹ ನಟರಾದ ಸುಚೇಂದ್ರ ಪ್ರಸಾದ್ ಎಂಬುವರನ್ನು ವಿವಾಹವಾಗಿದ್ದಾರೆ.  ಇವರಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಇಷ್ಟೆಲ್ಲಾ ಕಷ್ಟಗಳನ್ನು ಎದುರಿಸಿದರು ಇಂದು  ಗಂಡ ಮತ್ತು ಮಕ್ಕಳ ಜೊತೆಗೆ ಸುಖ ಜೀವನವನ್ನು ನಡೆಸುತ್ತಿದ್ದಾರೆ.

 

ಕಷ್ಟಗಳಿಗೆ ಎದೆಗೊಂದದೆ ಧೈರ್ಯವಾಗಿ ಎದುರಿಸಿ ಇಂದು ಕೂಡ ಚಿತ್ರರಂಗದಲ್ಲಿ  ಸಕ್ರಿಯವಾಗಿ ನಟನೆಯಲ್ಲಿ ತೊಡಗಿರುವುದು ಸಣ್ಣ  ವಿಷಯವೇ ಅಲ್ಲ. ಇವರ ಮನಸ್ಥೈರ್ಯ ಮತ್ತು ದೃಢ ನಿರ್ಧಾರದಿಂದ ಮಾತ್ರ ಇದು ಸಾಧ್ಯವಾಗಿದೆ. ಪ್ರತಿಯೊಬ್ಬ ಹೆಣ್ಣು ಮಕ್ಕಳು ಕೂಡ ಧೈರ್ಯ ಮತ್ತು ದೃಢ ನಿರ್ಧಾರದಿಂದ ಬರುವಂಥ ಎಲ್ಲಾ ಕಷ್ಟಗಳನ್ನು ಎದುರಿಸಿ ಛಲದಿಂದ  ಗುರಿಯತ್ತ ಹೆಜ್ಜೆ ಇಡಬೇಕು ಆಗ ಮಾತ್ರ ಗೆಲುವು ನಿಶ್ಚಿತ.  ಪವಿತ್ರಾ ಲೋಕೇಶ್ ರವರ ಅಭಿನಯ ನಿಮಗೆ ಇಷ್ಟವಾಗಿದ್ದರೆ  ಕಮೆಂಟ್ ಮಾಡಿ.

Advertisement
Share this on...