ಟ್ರೋಲ್​​​​ ಆಯ್ತು ಫೋಟೋಶೂಟ್​​…ಜನರ ಕಮೆಂಟ್​​​​ಗಳಿಗೆ ಈ ಜೋಡಿ ನೀಡಿದ ಉತ್ತರವೇನು…?

in ಮನರಂಜನೆ 627 views

ಫೋಟೋಶೂಟ್ ಎನ್ನುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿಹೋಗಿದೆ. ಮೊದಲೆಲ್ಲಾ ಸೆಲಬ್ರಿಟಿಗಳು ಹೆಚ್ಚು ಫೋಟೋಶೂಟ್ ಮಾಡಿಸಿಕೊಳ್ಳುತ್ತಿದ್ದರು. ಆದರೆ ಇದೀಗ ಜನಸಾಮಾನ್ಯರು ಕೂಡಾ ಫೋಟೋಶೂಟ್​​​​​​ ಮಾಡಿಸಿಕೊಳ್ಳುವುದು ಟ್ರೆಂಡ್ ಆಗಿಹೋಗಿದೆ. ಮದುವೆ, ಪಾರ್ಟಿ, ನಿಶ್ಚಿತಾರ್ಥ, ನಾಮಕರಣ ಸೇರಿದಂತೆ ವಿವಿಧ ರೀತಿಯ ಸಮಾರಂಭಗಳಲ್ಲಿ ಫೋಟೋಶೂಟ್ ಮಾಡಿಸಲಾಗುತ್ತಿದೆ. ಫೋಟೋಗಳ ಬಗ್ಗೆ ಕ್ರೇಜ್ ಇರುವವರು ನಾವು ಎಲ್ಲರಿಗಿಂತ ಭಿನ್ನವಾಗಿ ಫೋಟೋಶೂಟ್ ಮಾಡಿಸಿಕೊಳ್ಳಬೇಕು. ಆ ಫೋಟೋಗಳಿಗೆ ಜನರು ಹೆಚ್ಚು ಲೈಕ್ಸ್, ಕಮೆಂಟ್ ಮಾಡಬೇಕು ಎಂಬ ಆಸೆ ಇರುತ್ತದೆ. ಆದ್ದರಿಂದ ಫೋಟೋಗ್ರಾಪರ್ ಜೊತೆ ಮಾತನಾಡಿ ಫೋಟೋ ಯಾವ ರೀತಿ ಇರಬೇಕು ಎಂಬುದನ್ನು ಪ್ಲ್ಯಾನ್ ಮಾಡುತ್ತಾರೆ. ಆದರೆ ಕೆಲವೊಮ್ಮೆ ಈ ಫೋಟೋಶೂಟ್​​​​ ಟ್ರೋಲ್ ಆಗುತ್ತದೆ. ಕೆಲವು ದಿನಗಳ ಹಿಂದೆ ಭತ್ತದ ಗದ್ದೆಯಲ್ಲಿ ಒಂದು ಜೋಡಿ ಫೋಟೋಶೂಟ್ ಮಾಡಿಸಿ ನೆಟಿಜನ್ಸ್ ಕೆಂಗಣ್ಣಿಗೆ ಗುರಿಯಾಗಿದ್ದರು. ಸಲಿಂಗಕಾಮಿಗಳ ಫೋಟೋಶೂಟ್ ಕೂಡಾ ಸುದ್ದಿಯಾಗಿತ್ತು. ಆದರೆ ಇದೀಗ ಕೇರಳಕ್ಕೆ ಸೇರಿದ ಮತ್ತೊಂದು ಜೋಡಿ ಮಾಡಿಸಿರುವ ಫೋಟೋಶೂಟ್​​​ ಕೂಡಾ ಭಾರೀ ಟ್ರೋಲ್ ಆಗಿದೆ.

Advertisement

Advertisement

ಕೇರಳಕ್ಕೆ ಸೇರಿದ ರಿಶಿ ಹಾಗೂ ಲಕ್ಷ್ಮಿ ಎಂಬ ಜೋಡಿಯೇ ಇದೀಗ ಟ್ರೋಲ್​​ಗೆ ಒಳಗಾದ ಜೋಡಿ. ಹೃಷಿ ಕಾರ್ತಿಕ್​​​​​ ಹಾಗೂ ಲಕ್ಷ್ಮಿ ಸೆಪ್ಟೆಂಬರ್ 16 ರಂದು ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ಕೊರೊನಾ ಸಮಸ್ಯೆ ಇನ್ನೂ ಕಾಡುತ್ತಿರುವುದರಿಂದ ತಾವು ಅಂದುಕೊಂಡಂತೆ ಮದುವೆ ಹಾಗೂ ಹನಿಮೂನ್ ಪ್ಲ್ಯಾನ್ ಮಾಡಲು ಈ ಜೋಡಿಗೆ ಸಾಧ್ಯವಾಗಲಿಲ್ಲ. ಆದ್ದರಿಂದ ಪೋಸ್ಟ್ ವೆಡ್ಡಿಂಗ್ ಫೋಟೋಶೂಟ್ ಮಾಡಿಸಿಕೊಳ್ಳಲು ನಿರ್ಧರಿಸಿ, ಫೋಟೋಗ್ರಾಫರ್ ಜೊತೆ ಚರ್ಚಿಸಿ ಇಡುಕ್ಕಿಯ ಸುಂದರ ಟೀ ಎಸ್ಟೇಟ್​ ನಡುವೆ ಫೋಟೋಶೂಟ್ ಮಾಡಿಸಿ ಆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್​​ಲೋಡ್ ಮಾಡಿದರು. ಈ ಫೋಟೋಗಳು ಆದರೆ ಈ ಫೋಟೋಗಳು ವೈರಲ್ ಆಗಿದ್ದೇ ತಡ ನೆಟಿಜನ್ಸ್​​​ನಿಂದ ವಿಧವಿಧವಾದ ಕಮೆಂಟ್ ಬರತೊಡಗಿತು. ಬಹಳಷ್ಟು ಜನರು ಈ ಫೋಟೋಗಳಿಗೆ ಅಶ್ಲೀಲವಾಗಿ ಕಮೆಂಟ್ ಮಾಡಿದರು.

Advertisement

Advertisement

ಹೃಷಿ ಹಾಗೂ ಲಕ್ಷ್ಮಿ ಇಬ್ಬರೂ ತಮ್ಮ ಮೈಮೇಲೆ ಬಿಳಿ ಬ್ಲಾಂಕೆಟ್​​​​ಗಳನ್ನು ಹೊದ್ದು ಬೆಡ್​​​ರೂಮ್​​​ನಲ್ಲಿ ಇರುವಂತ ಥೀಮ್​​​​​​​ ಜೊತೆ ಟೀ ಎಸ್ಟೇಟ್​ನಲ್ಲಿ ಫೋಟೋಶೂಟ್ ಮಾಡಿಸಿದ್ದರು. ಈ ಫೋಟೊಗಳನ್ನು ನೋಡುತ್ತಿದ್ದಂತೆ ಕೆಲವೇ ಕೆಲವರು ಮಾತ್ರ ವಿಭಿನ್ನ ಫೋಟೋಶೂಟ್ ಎಂದು ಇಷ್ಟಪಟ್ಟರೆ ಬಹುತೇಕ ಎಲ್ಲರೂ ಇಬ್ಬರನ್ನೂ ಬೈದು ಕಮೆಂಟ್ ಮಾಡಿದ್ದರು. ಈ ಕಮೆಂಟ್​​​​ಗಳ ಬಗ್ಗೆ ಹೃಷಿ ಹಾಗೂ ಲಕ್ಷ್ಮಿ ಬೇಸರ ವ್ಯಕ್ತಪಡಿಸಿದ್ದಾರೆ. ಸ್ವಲ್ಪ ವಿಭಿನ್ನವಾಗಿರಲಿ ಎಂಬ ಕಾರಣಕ್ಕೆ ನಾವು ಈ ಫೋಟೋಶೂಟ್ ಮಾಡಿಸಿದೆವು. ಈ ರೀತಿಯ ಫೋಟೋಶೂಟ್​​​ಗೆ ಇಬ್ಬರ ಮನೆ ಕಡೆಯಿಂದ ಕೂಡಾ ಒಪ್ಪಿಗೆ ಇತ್ತು. ಆದರೆ ಜನರು ನಮ್ಮನ್ನು ಮಾತ್ರವಲ್ಲ ನಮ್ಮ ಪೋಷಕರನ್ನು ಬೈಯ್ದು ಕಮೆಂಟ್ ಮಾಡಿದ್ದಾರೆ. ಇದರಿಂದ ನಮ್ಮ ಮನಸ್ಸಿಗೆ ಬಹಳ ನೋವಾಗಿದೆ. ಈ ರೀತಿಯ ಫೋಟೋಶೂಟ್ ಮಾಡಿಸಿದ ಮಾತ್ರಕ್ಕೆ ನಮ್ಮ ನಡತೆ ಬಗ್ಗೆ ಹೇಗೆ ನಿರ್ಧರಿಸುತ್ತೀರ..? ಎಂದು ಈ ಜೋಡಿ ಪ್ರಶ್ನಿಸಿದೆ.

 

ಫೋಟೋಶೂಟ್ ಮಾಡಿಸುವಾಗ ಇಬ್ಬರೂ ಬಟ್ಟೆ ಧರಿಸಿದ್ದೆವು. ಬಹುತೇಕ ಫೋಟೋಗಳನ್ನು ಎಡಿಟ್ ಮಾಡಲಾಗಿದೆ. ಇದರಿಂದ ನಮ್ಮ ಕುಟುಂಬಕ್ಕೆ ನೋವಾಗಿದೆ. ಆದರೂ ನಾವು ಇದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಏಕೆಂದರೆ ಯಾವುದೇ ವಿಚಾರಕ್ಕಾದರೂ ಜನರು ಪರ-ವಿರೋಧವಾಗಿ ಮಾತನಾಡುತ್ತಾರೆ. ಎಲ್ಲರನ್ನೂ ಮೆಚ್ಚಿಸಲು ಸಾಧ್ಯವಿಲ್ಲ. ಆದರೆ ನಮ್ಮ ಪರವಾಗಿ ಕೆಲವೇ ಜನರು ಇದ್ದಾರೆ ಎಂಬ ಖುಷಿ ನಮಗೆ ಇದೆ. ನೀವು ಹ್ಯಾಪಿ ಕಪಲ್ಸ್, ನಿಮಗೆ ಹೇಗೆ ಅನ್ನಿಸುತ್ತದೆಯೋ ಹಾಗೆ ಎಂಜಾಯ್ ಮಾಡಿ, ನೂರು ಕಾಲ ಒಟ್ಟಿಗೆ ಬಾಳಿ ಎಂಬ ಕಮೆಂಟ್​​ಗಳು ನಮಗೆ ಖುಷಿ ನೀಡಿವೆ ಎಂದು ಹೃಷಿ ಹಾಗೂ ಲಕ್ಷ್ಮಿ ಹೇಳುತ್ತಾರೆ.

Advertisement
Share this on...