ಇವರೆಲ್ಲಾ ಪಿಲ್ಲೊ ಚಾಲೆಂಜ್ ಮಾಡಿದ್ರೆ, ಈ ಕಡೆ ನೆಟ್ಟಿಗರು ಏನಂದ್ರು ಗೊತ್ತಾ?

in ಮನರಂಜನೆ 45 views

ಲಾಕ್ ಡೌನ್ ನಡುವೆಯೂ ನಟಿಯರು ತಮ್ಮ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರಲು ಸೋಶಿಯಲ್ ಮೀಡಿಯಾಗಳನ್ನು ಬಳಸಿಕೊಳ್ಳುತ್ತಿರುವುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರವೇ. ಕೆಲವು ನಟಿಯರು ತಮ್ಮ ಇನ್ಸ್ಟಾಗ್ರಾಂ ಮತ್ತು ಫೇಸ್ಬುಕ್ನಲ್ಲಿ ಹೆಚ್ಚಾಗಿ ಯೋಗ, ಒಳಾಂಗಣದಲ್ಲಿ ವ್ಯಾಯಾಮ ಮಾಡುತ್ತಿರುವ ವಿಡಿಯೋಗಳನ್ನು ಹಂಚಿಕೊಂಡರೆ, ಮತ್ತೆ ಕೆಲವರು ಅಡುಗೆ ಮಾಡಲು ಪ್ರಯತ್ನಿಸುತ್ತಿರುವ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. ಆದರೆ ಕಳೆದ ಒಂದು ವಾರದಿಂದ ಮಾತ್ರ ಟಾಪಿಕ್ ಬದಲಾಗಿದ್ದು, ಕೆಲವು ನಟಿಯರು ಸಾಮಾಜಿಕ ಮಾಧ್ಯಮಗಳಲ್ಲಿ ಪಿಲ್ಲೊ ಚಾಲೆಂಜ್ ಮಾಡಲು ಶುರುವಿಟ್ಟುಕೊಂಡಿದ್ದಾರೆ. ಇದನ್ನೆಲ್ಲಾ ಗಮನಿಸಿದ ಅಭಿಮಾನಿಗಳು ಈಗ ಬೇಸರಗೊಂಡಿದ್ದಾರೆ. ಇದು ಪಿಲ್ಲೊ ಚಾಲೆಂಜ್ ಅಲ್ಲ, ಕೇವಲ ಸ್ಕಿನ್ ಶೋ ಆಗಿದೆ. ಇದರ ಬದಲು ಅಗತ್ಯವಿರುವವರಿಗೆ ಹಣ ಮತ್ತು ಆಹಾರವನ್ನು ದಾನ ಮಾಡುವ ಮೂಲಕ ದೇಶದ ನಾಗರಿಕರಿಗೆ ಸಹಾಯ ಮಾಡಲು ಮುಂದಾಗಿ ಎಂದು ತಮ್ಮಅನಿಸಿಕೆಯನ್ನು ಹೊರಹಾಕುತ್ತಿದ್ದಾರೆ ನೆಟ್ಟಿಗರು.

Advertisement

 

Advertisement

 

Advertisement

Advertisement

ಇದೆಲ್ಲದರ ನಡುವೆ ನಟಿ ಪ್ರಣಿತಾ ಸುಭಾಷ್ ಅಗತ್ಯವಿರುವವರಿಗೆ ಆಹಾರದ ಪ್ಯಾಕೆಟ್ಗಳನ್ನು ದಾನ ಮಾಡುವ ಮೂಲಕ ಸೋಶಿಯಲ್ ಮೀಡಿಯಾ ಮಂದಿಯನ್ನು ಮೆಚ್ಚಿಸಿದ್ದಾರೆ. ತಮ್ಮ ಹೋಟೆಲ್’ನಲ್ಲಿ ಸ್ವತಃ ಅಡುಗೆ ಮಾಡಿ, ಅಗತ್ಯವಿರುವವರಿಗೆ ಆಹಾರವನ್ನು ನೀಡಿದ್ದಾರೆ. ಇದು ನಿರ್ಗತಿಕರಿಗೆ ಸಹಾಯ ಮಾಡುವ ಸಮಯ, ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಸ್ಕಿನ್ ಶೋ ಮಾಡುವ ಸಮಯವಲ್ಲ ಎಂದು ನೆಟ್ಟಿಗರು ಗೊಣಗುತ್ತಿರುವುದಂತು ಸುಳ್ಳಲ್ಲ.
ಈ ಪಿಲ್ಲೊ ಚಾಲೆಂಜ್ ಅನ್ನು ಕೇವಲ ನಮ್ಮ ನಟಿಯರು ಮಾತ್ರವಲ್ಲ, ಹಾಲಿವುಡ್ ನಟಿಯರು ಕೂಡ ಸ್ವೀಕರಿಸಿದ್ದಾರೆ. ಟಾಲಿವುಡ್ ನಟಿ ಪಾಯಲ್ ರಾಜ್ಪೂತ್, ಬಾಲಿವುಡ್ ಗಾಯಕಿ ನೇಹಾ ಕಕ್ಕರ್ , ನಿನ್ನೆಯಷ್ಟೇ ತಮನ್ನಾ ಕೂಡ ಈ ಚಾಲೆಂಜ್ ಸ್ವೀಕರಿಸಿ, ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.
ಏನಿದು ಪಿಲ್ಲೊ ಚಾಲೆಂಜ್?

 

ಬಣ್ಣದ ಬಣ್ಣದ ದಿಂಬುಗಳನ್ನೇ ಬಟ್ಟೆಯಂತೆ ಬರೀ ಮೈಗೆ ಅಡ್ಡವಿಟ್ಟುಕೊಂಡು, ಸೊಂಟಕ್ಕೆ ಒಂದು ಬೆಲ್ಟ್ ಹಾಕಿಕೊಂಡು ಫೋಟೋಗೆ ಪೋಸ್ ಕೊಟ್ಟು ಸಾಮಾಜಿಕ ಜಾಲತಾಣಗಳಲ್ಲಿ ಅದನ್ನು ಹಂಚಿಕೊಳ್ಳುವುದಕ್ಕೇ ಪಿಲ್ಲೋ ಚಾಲೆಂಜ್ ಎನ್ನುತ್ತಾರೆ. ಮೊದ ಮೊದಲು ಈ ಚಾಲೆಂಜ್ ಅನ್ನು ಹೆಣ್ಣು ಮಕ್ಕಳು ಮಾಡುತ್ತಿದ್ದರು, ಆದರೆ ಲಾಕ್ಡೌನ್ ಎಫೆಕ್ಟ್ ನಿಂದ ಮನೆಯಲ್ಲೇ ಕೂತು ಬೋರ್ ಆಗಿರುವ ಪುರುಷರೂ ಕೂಡ ಚಾಲೆಂಜ್ ಸ್ವೀಕರಿಸಿ ನಾವೂ ಯಾರಿಗೂ ಕಮ್ಮಿ ಇಲ್ಲ ಎನ್ನುತ್ತಿದ್ದಾರೆ. ಈ ಪಿಲ್ಲೋ ಚಾಲೆಂಜ್ ಫೋಟೋವನ್ನು ಇನ್ಸ್ಟಾಗ್ರಾಮ್, ಟ್ವಿಟ್ಟರ್, ಫೇಸ್ಬುಕ್ನಲ್ಲಿ ಹಂಚಿಕೊಂಡು ಎಂಜಾಯ್ ಮಾಡುತ್ತಿದ್ದಾರೆ.

Advertisement
Share this on...