ದಿಂಬು ಮಲಗಲು ಮಾತ್ರವಲ್ಲ ದೇಹ ಮುಚ್ಚಲೂ …ನಟಿಯರ ಪಿಲ್ಲೋ ಚಾಲೆಂಜ್ ವೈರಲ್ ಫೋಟೋಗಳು..!

in ಮನರಂಜನೆ 103 views

ಮನೆಯಲ್ಲಿ ಸುಮ್ಮನೆ ಕೂರಲಾರದೆ ಜನರು ಟೈಂ ಪಾಸ್​​​ಗಾಗಿ ಏನೇನೋ ದಾರಿ ಹುಡುಕುತ್ತಿದ್ದಾರೆ. ಕೆಲವರು ಫ್ಯಾಮಿಲಿ ಟಿಕ್​​ಟಾಕ್ ಮಾಡಿದರೆ ಮತ್ತೆ ಕೆಲವರು ತಮ್ಮ ಹಳೆಯ ಫೋಟೋಗಳನ್ನು ಹುಡುಕಿ ಸೋಷಿಯಲ್ ಮೀಡಿಯಾದಲ್ಲಿ ಅಪ್​​ಲೋಡ್ ಮಾಡುತ್ತಿದ್ದಾರೆ. ಕೆಲವರು ಹೊಸ ಹೊಸ ಅಡುಗೆಗಳನ್ನು ಟ್ರೈ ಮಾಡಿದರೆ, ಮತ್ತೆ ಕೆಲವರು ಸ್ನೇಹಿತರಿಗೆ ಗ್ರೂಪ್ ವಿಡಿಯೋ ಕಾಲ್ ಮಾಡಿ ಹರಟುತ್ತಿದ್ದಾರೆ. ಸೆಲಬ್ರಿಟಿಗಳು ಒಬ್ಬರಿಗೊಬ್ಬರು #BeTheRealMan ಟಾಸ್ಕ್​ ನೀಡುತ್ತಾ ಟೈಂ ಪಾಸ್ ಮಾಡುತ್ತಿದ್ದಾರೆ.ಇದೀಗ ನಟಿಯರು #pillowchallenge ಎಂಬ ಹೊಸ ಚಾಲೆಂಜ್ ಶುರು ಮಾಡಿದ್ದಾರೆ. ಒಂದು ದಿಂಬಿನಿಂದ ಇಡೀ ದೇಹವನ್ನು ಮುಚ್ಚಿಕೊಳ್ಳುವ ಚಾಲೆಂಜ್ ಇದು. ಮನೆಯಲ್ಲಿ ಮಾಡಲು ಹೆಚ್ಚಿಗೆ ಕೆಲಸವಿಲ್ಲ, ಮೊದಲಿನಂತೆ ಶೂಟಿಂಗ್ ಕೂಡಾ ಇಲ್ಲ, ಅದಕ್ಕೆ ಈ ಹೊಸ ಹೊಸ ಚಾಲೆಂಜ್​​​​​ಗಳು ಹುಟ್ಟಿಕೊಳ್ಳುತ್ತಿವೆ. ಈ ಚಾಲೆಂಜನ್ನು ಮೊದಲು ಹಾಲಿವುಡ್ ನಟಿಯೊಬ್ಬರು ಆರಂಭಿಸಿದರು. ನಂತರ ಈ ಚಾಲೆಂಜ್ ಬಾಲಿವುಡ್​​ಗೆ ಕಾಲಿಡ್ತು. ಕ್ರಮೇಣ ದಕ್ಷಿಣ ಭಾರತಕ್ಕೂ ಕಾಲಿಟ್ಟಿದೆ.

Advertisement

 

Advertisement

 

Advertisement

Advertisement

 

ಈಗಾಗಲೇ ಪಾರುಲ್ ಯಾದವ್, ಸುರಭಿ, ಪಾಯಲ್ ರಜಪೂತ್ ಹಾಗೂ ಇನ್ನಿತರ ನಟಿಯರು ಈ ಚಾಲೆಂಜ್ ಸ್ವೀಕರಿಸಿದ್ದಾರೆ. ಇದೀಗ ಟಾಲಿವುಡ್ ಬ್ಯೂಟಿ ತಮನ್ನಾ ಭಾಟಿಯಾ ಕೂಡಾ ಈ ಚಾಲೆಂಜ್ ಸ್ವೀಕರಿಸಿದ್ದಾರೆ. ಇದರ ಪ್ರಕಾರ ನಟಿಯರು ಇಡೀ ದೇಹವನ್ನು ದಿಂಬಿನಿಂದ ಮುಚ್ಚಿ, ಆ ಫೋಟೋ ಕ್ಲಿಕ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಅಪ್​ಲೋಡ್ ಮಾಡಬೇಕು. ನಂತರ ಇತರ ನಟಿಯರಿಗೆ ಈ ಚಾಲೆಂಜ್ ನೀಡಬೇಕು. ಅದೇ ರೀತಿ ಮಿಲ್ಕಿ ಬ್ಯೂಟಿ ಒಂದು ದಿಂಬಿನಿಂದ ತಮ್ಮ ದೇಹವನ್ನು ಮುಚ್ಚಿ ಫೋಟೋಗೆ ಹಾಟ್ ಪೋಸ್ ​​​ ನೀಡಿದ್ದಾರೆ. ತಮನ್ನಾ ಅವರ ಹಾಟ್ ಲುಕ್ ನೋಡಿ ಹುಡುಗರು ಫಿದಾ ಆಗಿದ್ದಾರೆ. ಮುಂದೆ ಇನ್ನಾವ ನಟಿಯರು ಈ ಚಾಲೆಂಜ್ ಸ್ವೀಕರಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕು.

 

ತಮನ್ನಾ ಕೂಡಾ ಮನೆಯಲ್ಲಿ ಹೊಸ ರೆಸಿಪಿ, ವರ್ಕೌಟ್​​​​ ಮಾಡುವ ಮೂಲಕ ಮನೆಯವರೊಂದಿಗೆ ಕಾಲ ಕಳೆಯುತ್ತಿದ್ದಾರೆ. ತೆಲಂಗಾಣ ಸಿಎಂ ಪರಿಹಾರ ನಿಧಿಗೆ ತಮ್ಮನಾ ಕೂಡಾ ಹಣ ದೇಣಿಗೆ ನೀಡಿದ್ದಾರೆ. ಜೊತೆಗೆ ಸೋಷಿಯಲ್ ಮೀಡಿಯಾ ಮೂಲಕವೇ ಜನರಿಗೆ ಕೊರೊನಾ ಬಗ್ಗೆ ಅರಿವು ಮೂಡಿಸಲು ಯತ್ನಿಸುತ್ತಿದ್ದಾರೆ.

Advertisement
Share this on...