ಪೈಪ್​​ ಒಳಗೆ ಸಿಲುಕಿ ಒದ್ದಾಡಿದ ಕೊರೊನಾ…ಸುರಕ್ಷಿತವಾಗಿ ಹೊರ ತೆಗೆದ ಅಗ್ನಿಶಾಮಕ ಸಿಬ್ಬಂದಿ…!

in ಮನರಂಜನೆ 26 views

ವಿಶ್ವವೇ ಕೊರೊನಾ ವೈರಸ್​​​​ನಿಂದ ನಲುಗುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಕೊರೊನಾ ಕಡಿಮೆಯಾಗಲಿದೆ ಎಂದು ಬಹಳಷ್ಟು ದಿನಗಳಿಂದ ಹೇಳುತ್ತಾ ಬರಲಾಗಿದೆ. ಆದರೆ ದಿನದಿಂದ ದಿನಕ್ಕೆ ಕೊರೊನಾ ಹೆಚ್ಚುತ್ತಿದೆಯೇ ಹೊರತು ಕಡಿಮೆಯಾಗುತ್ತಿಲ್ಲ. ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ 5921 ಕ್ಕೆ ಬಂದು ತಲುಪಿದೆ.ಪರಿಸ್ಥಿತಿ ಹೀಗಿರುವಾಗ ಕೇರಳದ ಪಾಲಕ್ಕಾಡ್​​ ಜಿಲ್ಲೆಯ ಕೊಲ್ಲಂಗೋಟ್​​ನ ಮನೆಯೊಂದರಲ್ಲಿ ಕೊರೊನಾ ಪೈಪ್​​​​​​ಗೆ ಸಿಕ್ಕಿಬಿದ್ದಿದೆ. ವಿಷಯ ತಿಳಿದ ಅಗ್ನಿಶಾಮಕ ಸಿಬ್ಬಂದಿ ಪೈಪ್​​ನಿಂದ ಕೊರೊನಾವನ್ನು ರಕ್ಷಿಸಿ ಹೊರಗೆ ತೆಗೆದಿದ್ದಾರೆ. ಅರೆ ಇದೇನಿದು ಕೊರೊನಾ ಹೇಗೆ ಪೈಪ್​​​ಗೆ ಸಿಲುಕಿತು, ಅದನ್ನು ಹೇಗೆ ಹೊರಗೆ ತೆಗೆದರು ಅಂತ ನೀವು ಯೋಚನೆ ಮಾಡುತ್ತಿರಬಹುದು. ಆದರೆ ಈ ಕೊರೊನಾ ಖಂಡಿತ ವೈರಸ್ ಅಂತೂ ಅಲ್ಲ, ಇದು ಬೆಕ್ಕಿನ ಮರಿ.

Advertisement

Advertisement

ಕೊರೊನಾ ಲಾಕ್​​​ಡೌನ್ ಆರಂಭವಾದಾಗಿನಿಂದ ಮಕ್ಕಳಿಗೂ ಸ್ಯಾನಿಟೈಸರ್, ಕೋವಿಡ್, ಕೊರೊನಾ, ಲಾಕ್​ಡೌನ್ ಎಂದೆಲ್ಲಾ ಜನರು ಹೆಸರಿಟ್ಟಿದ್ದನ್ನು ನೀವು ಕೇಳಿದ್ದೀರಿ. ಅದೇ ರೀತಿ ವಿಜಯಲಕ್ಷ್ಮಿ ಎಂಬುವವರು ಸಾಕಿದ್ದ ಬೆಕ್ಕೊಂದು ಕೆಲವು ದಿನಗಳ ಹಿಂದೆ ಮೂರು ಮರಿಗಳಿಗೆ ಜನ್ಮ ನೀಡಿತ್ತು. ಈ ಬೆಕ್ಕಿನ ಮರಿಗಳಿಗೆ ವಿಜಯಲಕ್ಷ್ಮಿ ‘ಕೊರೊನಾ’, ‘ಕೋವಿಡ್’ ಹಾಗೂ ‘ನಿಫಾ’ ಎಂದು ಹೆಸರಿಟ್ಟಿದ್ದಾರೆ.

Advertisement

Advertisement

 

ಇತ್ತೀಚೆಗೆ ಮೂರು ಮರಿಗಳು ಆಟ ಆಡುವಾಗ ಆಕಸ್ಮಿಕವಾಗಿ ಕೊರೊನಾ ತಲೆ ಪೈಪ್ ಒಳಗೆ ಸಿಲುಕಿದೆ. ಹೊರಕ್ಕೆ ಬರಲು ಆಗದೆ ಒದ್ದಾಡಿದೆ. ಮನೆಯವರು ಕೊರೊನಾವನ್ನು ರಕ್ಷಿಸಲು ಎಷ್ಟೇ ಪ್ರಯತ್ನ ಪಟ್ಟರೂ ಆಗಲಿಲ್ಲ. ಕೊನೆಗೆ ಪ್ರೀತಿಯ ಕೊರೊನಾವನ್ನು ಉಳಿಸಿಕೊಳ್ಳಲು ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಸತತ ಪ್ರಯತ್ನ ಮಾಡಿ ಪೈಪ್ ಕತ್ತರಿಸಿ ಕೊರೊನಾವನ್ನು ಸುರಕ್ಷಿತವಾಗಿ ಹೊರಕ್ಕೆ ತೆಗೆದಿದ್ದಾರೆ. ಇದರಿಂದ ಮನೆಯವರೂ ಖುಷಿಯಾಗಿದ್ದಾರೆ.

Advertisement
Share this on...