ಧ್ರುವ ಸರ್ಜಾ ನಟನೆಯ ಪೊಗರು ಚಿತ್ರದ ‘ಕರಾಬು’ ಹಾಡಿಗೆ ಭಾರೀ ಬೇಡಿಕೆ

in ಸಿನಿಮಾ 278 views

ಬಹುಶಃ ಪೊಗರು ಚಿತ್ರದ ‘ಕರಾಬು’ ಹಾಡನ್ನು ಕೇಳದ ಕನ್ನಡಿಗರೇ ಇಲ್ಲವೇನೋ. ಏಕೆಂದರೆ ಅಷ್ಟರ ಮಟ್ಟಿಗೆ ಹಾಡು ಯುಟ್ಯೂಬ್’ನಲ್ಲಿ 10 ಮಿಲಿಯನ್ ಕ್ಕೂ ಹೆಚ್ಚು ವೀಕ್ಷಣೆ ಪಡೆದು ಮುನ್ನುಗ್ಗುತ್ತಿದೆ. ಇತ್ತೀಚೆಗಂತೂ ಹಾಡಿಗೆ ಸಖತ್ ಬೇಡಿಕೆ ಬರುತ್ತಿದ್ದು, ವೀಕ್ಷಕರು ಪುಂಖಾನುಪುಂಖವಾಗಿ ಕಮೆಂಟ್’ಗಳ ಸುರಿಮಳೆಯನ್ನೇ ಹರಿಸುತ್ತಿದ್ದಾರೆ.

Advertisement

 

Advertisement

Advertisement

 

Advertisement

ಒಂದೊಂದು ಮಿಲಿಯನ್ ಹೆಚ್ಚಿದ ಹಾಗೆ ಲೈಕ್ಸ್, ಕಮೆಂಟ್’ಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ‘ಕರಾಬು’ ಹಾಡು ಹೊಸ ದಾಖಲೆ ಬರೆಯುವ ಎಲ್ಲಾ ಸೂಚನೆಗಳು ಕಾಣಿಸುತ್ತಿವೆ. ಅಷ್ಟೇ ಅಲ್ಲ, ಸುದೀಪ್, ದರ್ಶನ್, ಅಪ್ಪು, ಶಿವಣ್ಣ, ಉಪೇಂದ್ರ, ರಕ್ಷಿತ್ ಶೆಟ್ಟಿ ಹೀಗೆ ಕನ್ನಡದ ಎಲ್ಲಾ ಸ್ಟಾರ್ ನಟರ ಅಭಿಮಾನಿಗಳು ಈ ಚಿತ್ರವನ್ನು ಬೆಂಬಲಿಸುತ್ತಿರುವುದನ್ನು ನೋಡಿದರೆ ನಿಮಗೆ ಗೊತ್ತಾಗುತ್ತದೆ ಸಾಂಗ್ ಮೇಕಿಂಗ್ ಹೇಗಿದೆಯೆಂದು.

 

 

ಕೆಲವರು “ಮೂರು ವರ್ಷ ಬರೋದು ಲೇಟ್ ಆದರೂ, ನೂರು ವರ್ಷ ಆಗೋ ತನಕ ರೆಕಾರ್ಡ್ ಮಾಡ್ತಿವಿ ಜೈ DS.. ಜೈ ಆಂಜನೇಯ..” ಎಂದರೆ, ಇನ್ನು ಕೆಲವರು “ಸಾಂಗ್ ಮಾತ್ರ ಛಿಂದಿ ಗುರು ಇದ್ರೆ ಇಂಗೆ ಇರ್ಬೇಕು”, “ಏನಿಲ್ಲ ಅಂದ್ರೂ ದಿನಕ್ಕೆ 20+ ಸಲ ನೋಡೇ ನೊಡ್ತೀನಿ” ಎಂದೆಲ್ಲಾ ಕಮೆಂಟ್ ಮಾಡಿದ್ದಾರೆ.

 

ಸ್ಯಾಂಡಲ್ ವುಡ್ ನ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಈಗಾಗಲೇ ಮೂರು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿ, ಹ್ಯಾಟ್ರಿಕ್ ಸ್ಥಾನ ಪಡೆದಿದ್ದಾರೆ. ಆದ್ದರಿಂದ ‘ಪೊಗರು’ ಚಿತ್ರದ ಮೇಲೆ ಧ್ರುವ ಅಭಿಮಾನಿಗಳ ನಿರೀಕ್ಷೆ ತುಸು ಹೆಚ್ಚಾಗಿದೆ. ಸದ್ಯ ರಿಲೀಸ್ ಆಗಿರುವ ಪೊಗರು ಡೈಲಾಗ್ ಟ್ರೈಲರ್ , ಕರಾಬು ಸಾಂಗು ಸಿಕ್ಕಾಪಟ್ಟೆ ಕ್ರೇಜ್ ಹುಟ್ಟುಹಾಕಿದ್ದು, ಸಿನಿಮಾದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಿಸಿದೆ.

 

 

 

ಈ ಚಿತ್ರವನ್ನು ನಿರ್ದೇಶಕ ನಂದ ಕಿಶೋರ್ ನಿರ್ದೇಶಿಸಿದ್ದು, ಚಿತ್ರಕ್ಕೆ ಚಂದನ್ ಶೆಟ್ಟಿ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.  ಚಿತ್ರದುದ್ದಕ್ಕೂ ಧ್ರುವ ಖಡಕ್ ಲುಕ್’ನಲ್ಲಿ ಕಾಣಿಸಿಕೊಂಡಿದ್ದು, ಪೊಗರು ತೋರಿಸಲು ಧ್ರುವ ಸರ್ಜಾ ಜೊತೆ ಡಾಲಿ ಧನಂಜಯ್, ತೆಲುಗಿನ ಸ್ವಾರ್ ನಟ ಜಗಪತಿಬಾಬು, ಸಾನ್ವಿ, ರಶ್ಮಿಕಾ ಮಂದಣ್ಣ, ಆರ್ಮಗಂ ರವಿಶಂಕರ್ ಸೇರಿದಂತೆ ದೊಡ್ಡ ತಾರಾಗಣವೇ ಇದರಲ್ಲಿದೆ.  ಅಂದಹಾಗೆ ನಿಮಗೂ ಕರಾಬು…ಹಾಡು ಇಷ್ಟವಾದರೆ ಕೆಳಗಿನ ಕಾಮೆಂಟ್ಸ್ ಬಾಕ್ಸ್’ಗಳಲ್ಲಿ ನಿಮ್ಮ ಅಭಿಪ್ರಾಯ ತಿಳಿಸಿ.

 

Advertisement
Share this on...