ಟಾಲಿವುಡ್’ನ ಮೋಸ್ಟ್ ಬ್ಯಾಚುಲರ್ ಹೀರೋ ಜೊತೆ ಪೂಜಾ ಹೆಗ್ಡೆ ಡೇಟಿಂಗ್?

in ಮನರಂಜನೆ 100 views

ಚಿತ್ರರಂಗದಲ್ಲಿ ಡೇಟಿಂಗ್ ಮತ್ತು ರಿಲೇಶನ್ಶಿಪ್ ಸಾಮಾನ್ಯವಾಗಿದೆ. ಇಂತಹ ಅನೇಕ ಕಥೆಗಳು ಆಗಾಗ ಹೊರಬರುತ್ತಿರುತ್ತವೆ. ಅವುಗಳಲ್ಲಿ ಕೆಲವು ನಿಜವಾಗಿದ್ದರೆ, ಕೆಲವು ಕೇವಲ ವದಂತಿಯಾಗಿರುತ್ತವೆ. ಈಗ ಟಾಲಿವುಡ್’ನಲ್ಲಿ ಸ್ಟಾರ್ ಹೀರೋ ಮತ್ತು ಸ್ಟಾರ್ ಹೀರೋಯಿನ್ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ.  ಹೌದು, ಇತ್ತೀಚಿನ ವರದಿಗಳ ಪ್ರಕಾರ, ನಟಿ ಪೂಜಾ ಹೆಗ್ಡೆ ಟಾಲಿವುಡ್ನ ಮೋಸ್ಟ್ ಬ್ಯಾಚುಲರ್ ಹೀರೋ ರೆಬೆಲ್ ಸ್ಟಾರ್ ಪ್ರಭಾಸ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಜಿಲ್ ಖ್ಯಾತಿಯ ರಾಧಾಕೃಷ್ಣ ನಿರ್ದೇಶನದ ಮುಂಬರುವ ಚಿತ್ರದಲ್ಲಿ ಪೂಜಾ ಹೆಗ್ಡೆ ಮತ್ತು ಪ್ರಭಾಸ್ ನಟಿಸುತ್ತಿದ್ದು, ಈ ಜೋಡಿ ಬಹಳ ಸಮಯದಿಂದ ಸಂಪರ್ಕದಲ್ಲಿದೆಯಂತೆ. ಪರಸ್ಪರರನ್ನು ನೋಡಲು ನಿರ್ಧರಿಸಿದಾಗ ಈ ಸುದ್ದಿ ತಿಳಿದು ಬಂದಿದೆ ಎಂದು ವರದಿಗಳು ತಿಳಿಸಿವೆ.

Advertisement

Advertisement

ಈ ಹಿಂದೆ ಪೂಜಾ ಹೆಗ್ಡೆ ಹೆಸರು ಬಾಲಿವುಡ್ ಸ್ಟಾರ್’ಗಳಾದ ಹೃತಿಕ್ ರೋಷನ್ ಮತ್ತು ರೋಹನ್ ಮೆಹ್ರಾ ಜೊತೆ ಕೇಳಿಬಂದಿತ್ತು. ಬಾಲಿವುಡ್ನಲ್ಲಿ ಡೇಟಿಂಗ್ ಸಾಮಾನ್ಯ. ಆದರೆ ಟಾಲಿವುಡ್ನ ಅಭಿಮಾನಿಗಳು ಈ ವದಂತಿಗಳ ಹಿಂದಿನ ಸತ್ಯವನ್ನು ಬಿಚ್ಚಿಡಲು ಹೆಚ್ಚು ಉತ್ಸುಕರಾಗುತ್ತಾರೆ. ಆದರೆ ಈ ಡೇಟಿಂಗ್ ಕಥೆಯಲ್ಲಿ ಎಷ್ಟು ಸತ್ಯವಿದೆ, ಎಷ್ಟು ಸುಳ್ಳಿದೆ ಎಂಬುದನ್ನು ಕಾದು ನೋಡಬೇಕು.  ಪ್ರಭಾಸ್ ಅವರ ಬಗ್ಗೆ ವದಂತಿಗಳು ಕೇಳಿ ಬರುತ್ತಿರುವುದು ಇಂದು, ನಿನ್ನೆಯಿಂದಲ್ಲ. ಯಾವಾಗ ಪ್ರಭಾಸ್ ‘ಬಾಹುಬಲಿ’ ಚಿತ್ರದಲ್ಲಿ ನಟಿಸಿ ವಿಶ್ವದ ಗಮನಸೆಳೆದರೋ, ಅಂದಿನಿಂದ ನಟಿ ಅನುಷ್ಕಾ ಶೆಟ್ಟಿಯೊಂದಿಗೆ ಇವರ ಹೆಸರು ಕೇಳಬರತೊಡಗಿತು. ಈ ಬಗ್ಗೆ ಅನುಷ್ಕಾ ಮತ್ತು ಪ್ರಭಾಸ್ ಅವರಿಗೆ ಕೇಳಿದಾಗ ಇದೆಲ್ಲಾ ಸುಳ್ಳು, ನಾವಿಬ್ಬರೂ ಒಳ್ಳೆಯ ಸ್ನೇಹಿತರು ಎಂದು ವದಂತಿಗಳಿಗೆ ತೆರೆ ಎಳೆದರು.

Advertisement

 

Advertisement


ಇದಾಗಿ ಕೆಲವು ದಿನಗಳು ಕಳೆಯುವುದರೊಳಗೆ ಮತ್ತೋರ್ವ ತೆಲುಗು ನಟಿ, ಮೆಗಾಸ್ಟಾರ್ ಚಿರಂಜೀವಿ ಸಹೋದರ ನಾಗಬಾಬು ಪುತ್ರಿ ನಿಹಾರಿಕಾ ಜೊತೆ ಪ್ರಭಾಸ್ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಕೇಳಿಬಂದಿತ್ತು. ಅದಕ್ಕೂ ಮೊದಲು ಪ್ರಭಾಸ್ ಅವರ ಚಿಕ್ಕಪ್ಪ ಕೃಷ್ಣಂ ರಾಜು ಅವರು ಪ್ರಭಾಸ್ ಸದ್ಯದಲ್ಲೇ ಮದುವೆಯಾಗಲಿದ್ದಾರೆ ಎಂಬ ಹೇಳಿಕೆ ನೀಡಿದ್ದರು. ಕಳೆದ ವರ್ಷ ಆಕ್ಷನ್ ಥ್ರಿಲ್ಲರ್ ‘ಸಾಹೋ’ದಲ್ಲಿ ಬಾಲಿವುಡ್ ಬೆಡಗಿ ಶ್ರದ್ಧಾ ಕಪೂರ್ ಜೊತೆ ಪರದೆ ಹಂಚಿಕೊಂಡಿದ್ದ ಪ್ರಭಾಸ್, ಪ್ರಸ್ತುತ ಪೂಜಾ ಹೆಗ್ಡೆ ಜೊತೆ ‘ಒ ಡಿಯರ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ.

Advertisement
Share this on...