ಸಮಂತ ಜೊತೆ ನಟಿಸದಿರಲು ಕಾರಣ ಬಿಚ್ಚಿಟ್ಟ ಪ್ರಭಾಸ್….!

in ಸಿನಿಮಾ 40 views

ಬಾಲಿವುಡ್ ಸೇರಿದಂತೆ ದಕ್ಷಿಣ ಭಾರತದ ಪ್ರಮುಖ ನಾಯಕ ನಟರಲ್ಲಿ ಪ್ರಭಾಸ್ ಸಹ ಒಬ್ಬರು. ಬಾಹುಬಲಿ ಸಿನಿಮಾ ಮೂಲಕ ಇಡೀ ದೇಶದಲ್ಲಿಯೇ ಅಭಿಮಾನಿ ಬಳಗವನ್ನ ಪ್ರಭಾಸ್ ಹೊಂದಿದ್ದಾರೆ. ಅದೇ ರೀತಿ ಅನುಷ್ಕಾ ಶೆಟ್ಟಿ, ನಯನತಾರ, ತಮನ್ನಾ, ಶ್ರದ್ಧಾ ಕಪೂರ್ ಟಾಪ್ ನಟಿಯರ ಜೊತೆ ತೆರೆ ಹಂಚಿಕೊಂಡಿದ್ದಾರೆ. ಆದರೆ ಟಾಲಿವುಡ್ ನ ಬಹು ಬೇಡಿಕೆಯ ನಟಿಯಾಗಿರುವ ಸಮಂತಾ ಜೊತೆ ಮಾತ್ರ ಬಾಹುಬಲಿ ಸ್ಕ್ರೀನ್ ಶೇರ್ ಮಾಡಿಲ್ಲ. ದಕ್ಷಿಣ ಭಾರತದ ಟಾಪ್ ನಟಿ ಸಮಂತಾ ಅಕ್ಕಿನೇನಿ ಜೊತೆ ಯಾಕೆ ನಟಿಸಲ್ಲ ಎಂಬ ಪ್ರಶ್ನೆಗೆ ಬಾಹುಬಲಿ ಪ್ರಭಾಸ್ ಉತ್ತರ ನೀಡಿದ್ದಾರೆ.

Advertisement

 

Advertisement

Advertisement

 

Advertisement

ಪ್ರಭಾಸ್ ಮತ್ತು ಸಮಂತಾ ಅಕ್ಕಿನೇನಿ ಚಿತ್ರರಂಗಕ್ಕೆ ಕಾಲಿಟ್ಟು ಹಲವು ವರ್ಷಗಳೇ ಕಳೆದಿದೆ. ಇಬ್ಬರು ಅನೇಕ ಸೂಪರ್ ಹಿಟ್ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಭಾರತ ಮಾತ್ರವಲ್ಲದೆ ವಿದೇಶದಲ್ಲೂ ಈ ಸ್ಟಾರ್ ಕಲಾವಿದರಿಗೆ ಫ್ಯಾನ್ಸ್ ಇದ್ದಾರೆ. ಆದರೆ ಇವರಿಬ್ಬರು ತೆರೆ ಮೇಲೆ ಒಂದಾಗಿ ನಟಿಸಬೇಕು ಎಂಬುದು ಅಭಿಮಾನಿಗಳ ಆಸೆ. ಆದರೆ ಅದು ಇಂದಿಗೂ ಸಾಧ್ಯವಾಗಿಲ್ಲ. ನಟಿ ಸಮಂತಾ ಟಾಲಿವುಡ್ ನ ಅನೇಕ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ಮಹೇಶ್ ಬಾಬು, ಜ್ಯೂನಿಯರ್ ಎನ್ ಟಿ ಆರ್, ನಾನಿ, ನಾಗಾರ್ಜುನ, ಅಲ್ಲು ಅರ್ಜುನ್ ಸೇರಿದಂತೆ ಟಾಲಿವುಡ್ ನ ನಟರೊಂದಿಗೆ ನಟಿಸಿದ್ದಾರೆ. ಆದರೆ ಸಮಂತಾ ಇಲ್ಲಿಯವರೆಗೂ ಡಾರ್ಲಿಂಗ್ ಪ್ರಭಾಸ್ ಜೊತೆ ಮಾತ್ರ ನಟಿಸಿಲ್ಲ. ಪ್ರಭಾಸ್ ಹಾಗೂ ಸಮಂತಾ ಒಟ್ಟಿಗೆ ಅಭಿನಯಿಸದಿರಲು ಕಾರಣ ಇದೆ. ಆ ಕಾರಣ ಏನೆಂದು ಪ್ರಭಾಸ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

 

 

ಸಂದರ್ಶನವೊಂದರಲ್ಲಿ ಪ್ರಭಾಸ್ ಅವರನ್ನ ಈ ಕುರಿತು ಕೇಳಿದಾಗ ನಮ್ಮಿಬ್ಬರ ಎತ್ತರ ಹೊಂದಾಣಿಕೆ ಆಗಲ್ಲ. ಹೀಗಾಗಿ ಒಟ್ಟಿಗೆ ಅಭಿನಯಿಸಲು ಸಾಧ್ಯವಾಗಿಲ್ಲ ಎಂದು ಹೇಳಿ ನಕ್ಕಿದ್ದಾರೆ. ಪ್ರಭಾಸ್ 1.83 ಮೀಟರ್ ಎತ್ತರವಿದ್ದು ಸಮಂತಾ 1.58 ಮೀಟರ್ ಇದ್ದಾರೆ. ಅಂದರೆ ಪ್ರಭಾಸ್ 6 ಅಡಿ 2.5 ಇಂಚು ಎತ್ತರವಿದ್ದಾರೆ. ಇನ್ನು ಸಮಂತಾ 5 ಅಡಿ 5 ಇಂಚು ಎತ್ತರವಿದ್ದಾರೆ. ಹೀಗಾಗಿ ಹೈಟ್ ಸಮಸ್ಯೆಯಿಂದ ಪ್ರಭಾಸ್ ಮತ್ತು ಸಮಂತಾ ಒಟ್ಟಾಗಿ ಅಭಿನಯಿಸಿಲ್ಲ ಎಂದು ಹೇಳಲಾಗುತ್ತಿದೆ. ಸಾಹೋ ಸಿನಿಮಾ ಸೆಟ್ಟೇರಿದಾಗ ಪ್ರಭಾಸ್ ಗೆ ನಾಯಕಿಯಾಗಿ ಸಮಂತಾ ನಟಿಸುತ್ತಾರೆ ಎಂದು ಹೇಳಲಾಗುತ್ತಿತ್ತು. ಕೊನೆ ಕ್ಷಣದಲ್ಲಿ ಸಾಹೋ ಗೆ ಶ್ರದ್ಧಾ ಕಪೂರ್ ಜೊತೆಯಾಗಿದ್ದರು.

 

 

ಸದ್ಯ ಪ್ರಭಾಸ್ ರಾಧಾಕೃಷ್ಣ ಕುಮಾರ್ ನಿರ್ದೇಶನ ಮಾಡುತ್ತಿರುವಂತಹ ಹೊಸ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಇದರಲ್ಲಿ ಅವರಿಗೆ ಜೋಡಿಯಾಗಿ ಪೂಜಾ ಹೆಗ್ಗಡೆ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದ ಬಹುತೇಕ ಶೂಟಿಂಗ್ ವಿದೇಶದಲ್ಲಿ ನಡೆಯಲಿದೆ. ಆದರೆ ಕೊರೋನಾ ವೈರಸ್ ನಿಂದಾಗಿ ಇಡೀ ದೇಶವೇ ಲಾಕ್ ಡೌನ್ ಆಗಿದೆ. ಹೀಗಾಗಿ ಸಿನಿಮಾ ಕೆಲಸಗಳಿಗೆ ಬ್ರೇಕ್ ಬಿದ್ದಿದೆ.

– ಸುಷ್ಮಿತಾ

Advertisement
Share this on...