ಪತ್ನಿಯನ್ನೂ ಚಿತ್ರರಂಗಕ್ಕೆ ಕರೆತಂದ ಪ್ರಜ್ವಲ್ ದೇವರಾಜ್​​….ಯಾವ ಸಿನಿಮಾ ಗೊತ್ತಾ…?

in ಮನರಂಜನೆ/ಸಿನಿಮಾ 282 views

ಕನ್ನಡ ಚಿತ್ರರಂಗದಲ್ಲಿ ಒಂದು ಕುಟುಂಬದಿಂದ ಒಂದಕ್ಕಿಂತ ಹೆಚ್ಚು ಮಂದಿ ಸಿನಿಮಾಗಳಲ್ಲಿ ತೊಡಗಿಸಿಕೊಂಡಿರುವ ಬಹಳಷ್ಟು ಉದಾಹರಣೆಗಳಿವೆ. ಅಪ್ಪ-ಮಗ, ಮಗ-ಮಗಳು, ಅಪ್ಪ-ಮಗಳು ಹೀಗೆ ಸಾಕಷ್ಟು ಕಲಾವಿದರು ಚಿತ್ರರಂಗದಲ್ಲಿದ್ದಾರೆಇದೀಗ ಡೈನಾಮಿಕ್ ಸ್ಟಾರ್ ದೇವರಾಜ್​ ಅವರ ಕುಟುಂಬದಿಂದ ಮತ್ತೊಬ್ಬರು ಚಿತ್ರರಂಗಕ್ಕೆ ಬಂದಿದ್ದಾರೆ. ಅವರೇ ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಚಂದ್ರನ್​. ರಾಗಿಣಿ ಸಾಕಷ್ಟು ಟಿವಿ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಅವರ ಜುಂಬಾ ಡ್ಯಾನ್ಸ್ ಕ್ಲಾಸ್​​​​​ ಕೂಡಾ ನಡೆಸುತ್ತಿದ್ದಾರೆ. ಇದೀಗ ನಟನೆಗೂ ಕೂಡಾಕಾಲಿಟ್ಟಿದ್ದು ಪುನೀತ್ ರಾಜ್​ಕುಮಾರ್ ಅವರ ಪಿಆರ್​ಕೆ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ತಯಾರಾದ ‘ಲಾ’ ಸಿನಿಮಾದಲ್ಲಿ ರಾಗಿಣಿ ನಟಿಸಿದ್ದಾರೆ.

Advertisement

Advertisement

ಕ್ರೈಂ, ಥ್ರಿಲ್ಲರ್ ಕಥೆ ಹೊಂದಿರುವ ‘ಲಾ’ ಸಿನಿಮಾ ಕಥೆ ನಂದಿನಿ ಎಂಬ ಹುಡುಗಿಯ ಸುತ್ತ ಸುತ್ತುತ್ತದೆ. ಈ ಸಿನಿಮಾದಲ್ಲಿ ನಟಿಸಲು ಅವಕಾಶ ದೊರೆತಾಗ ಆರಂಭದಲ್ಲಿ ಅಷ್ಟು ಆಸಕ್ತಿ ಇರಲಿಲ್ಲ. ಆದರೆ ಸ್ಕ್ರಿಪ್ಟ್ ನನಗೆ ಬಹಳ ಇಷ್ಟವಾಯಿತು. ಆದ್ದರಿಂದ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡೆ. ನಟಿಸಲು ಆಸಕ್ತಿ ಇತ್ತು. ಆದರೆ ಒಳ್ಳೆಯ ಸ್ಕ್ರಿಪ್ಟ್​​​ಗಾಗಿ ಕಾಯುತ್ತಿದ್ದೆ. ರೊಮ್ಯಾಟಿಂಗ್, ಲವ್ ಸಬ್ಜೆಕ್ಟ್​​​​​ ಚಿತ್ರಗಳಲ್ಲಿ ಅಷ್ಟು ಆಸ್ಕತಿ ಇರಲಿಲ್ಲ. ‘ಲಾ’ ಸಿನಿಮಾ ಪಾತ್ರ ನಿಜಕ್ಕೂ ನನಗೆ ಚಾಲೆಂಜಿಂಗ್ ಆಗಿದೆ ಎನ್ನುತ್ತಾರೆ ರಾಗಿಣಿ.

Advertisement

Advertisement

ಅಶ್ವಿನಿ ಪುನೀತ್ ರಾಜ್​ಕುಮಾರ್ ಹಾಗೂ ಎಂ. ಗೋವಿಂದ್​​​​​ ನಿರ್ಮಾಣದ ‘ಲಾ’ ಚಿತ್ರವನ್ನು ರಘು ಸಮರ್ಥ್ ನಿರ್ದೇಶಿಸಿದ್ದಾರೆ. ಆದರೆ ಈ ಸಿನಿಮಾ ಓಟಿಟಿ ಪ್ಲಾಟ್​​​​ಫಾರ್ಮ್​ನಲ್ಲಿ ಬಿಡುಗಡೆಯಾಗುತ್ತಿದೆ. ಜುಲೈ 17 ರಂದು ಅಮೆಜಾನ್ ಪ್ರೈಂನಲ್ಲಿ ಭಾರತ ಸೇರಿ ಇತರ ದೇಶಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಮುಖ್ಯಮಂತ್ರಿ ಚಂದ್ರು, ಅಚ್ಯುತ್‌ ಕುಮಾರ್‌, ಸುಧಾರಾಣಿ ಹಾಗೂ ಇನ್ನಿತರರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

Advertisement
Share this on...