ನಾನು ಪಬ್ಲಿಸಿಟಿ ಇಷ್ಟ ಪಡಲ್ಲ ಎಂದು ಪ್ರಣಿತಾ ಹೇಳಿದ್ದೇಕೆ?

in ಮನರಂಜನೆ 40 views

ಪ್ರಣಿತಾ ದಕ್ಷಿಣ ಭಾರತದ ಸಾಕಷ್ಟು ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡದಲ್ಲಿ ದರ್ಶನ್ ನಟನೆಯ ‘ಪೊರ್ಕಿ’ ಚಿತ್ರದ ಮೂಲಕ ಸ್ಯಾಂಡಲ್’ವುಡ್’ಗೆ ಕಾಲಿಟ್ಟ ಪ್ರಣಿತಾ, ಆ ನಂತರ ಅನೇಕ ಯಶಸ್ವಿ ಚಿತ್ರಗಳಲ್ಲಿ ನಟಿಸಿದರು. ಟಾಲಿವುಡ್’ನಲ್ಲಿಯೂ ಅನೇಕ ಚಿತ್ರಗಳಲ್ಲಿ ನಟಿಸಿರುವ ಪ್ರಣಿತಾ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ ‘ಅತ್ತಾರಿಂಟಿಕಿ ದಾರೇದಿ’ ಚಿತ್ರದಲ್ಲಿ ಎರಡನೇ ನಾಯಕಿಯಾಗಿ ನಟಿಸಿ ಸಾಕಷ್ಟು ಖ್ಯಾತಿಯನ್ನು ಗಳಿಸಿದರು. ಈಗ ಕೊರೊನಾ ಕಾರಣದಿಂದಾಗಿ ಲಾಕ್ ಡೌನ್ ಆಗಿದ್ದು, ಈ ಸಮಯದಲ್ಲಿಯೂ ಪ್ರಣಿತಾ ಸುಮ್ಮನೆ ಕುಳಿತಿಲ್ಲ. ಬಡವರಿಗೆ ಸಾಕಷ್ಟು ಸಹಾಯ ಮಾಡುತ್ತಿದ್ದಾರೆ. ತಾನು ನಟನೆಗೆ ಮಾತ್ರವಲ್ಲ, ಸಾಮಾಜಿಕ ಸೇವೆಗೂ ಸೈ ಎಂಬುದನ್ನು ತೋರಿಸಿದ್ದಾರೆ.

Advertisement

 

Advertisement


ಪ್ರಣಿತಾ ಆರಂಭದಲ್ಲಿ 50 ಕುಟುಂಬಗಳ ಹಸಿವನ್ನು ನೀಗಿಸಲು ಒಂದು ಲಕ್ಷ ದೇಣಿಗೆ ನೀಡಿದರು. ನಂತರ ಅವರು ಬಡವರಿಗೆ ಮತ್ತು ಕಾರ್ಮಿಕ ವರ್ಗಕ್ಕೆ ವೈಯಕ್ತಿಕವಾಗಿ ಆಹಾರ ಪ್ಯಾಕೆಟ್ಗಳು ಮತ್ತು ಇತರ ಸಾಮಗ್ರಿಗಳನ್ನು ನೀಡುವ ಮೂಲಕ ಸಹಾಯ ಮಾಡುತ್ತಿದ್ದಾರೆ. ಅವರ ಈ ಕಾರ್ಯವು ಅನೇಕ ಜನರ ಹೃದಯವನ್ನು ಗೆದ್ದಿದೆ.
ಇದೀಗ ಬಾಲಿವುಡ್ ಪ್ರವೇಶಕ್ಕೆ ಸಜ್ಜಾಗಿರುವ ಪ್ರಣಿತಾ, ‘ಹಂಗಮಾ 2’ ಚಿತ್ರದಲ್ಲಿ ಪ್ರಮುಖ ನಟಿಯಾಗಿ ನಟಿಸುತ್ತಿದ್ದಾರೆ. ಜೊತೆಗೆ ‘ಭುಜ್: ದಿ ಪ್ರೈಡ್ ಆಫ್ ಇಂಡಿಯಾ’ ಎಂಬ ಹಿಂದಿ ಚಿತ್ರದಲ್ಲಿಯೂ ನಟಿಸುತ್ತಿದ್ದಾರೆ. ಈ ಚಿತ್ರವು ಚಿತ್ರೀಕರಣದ ಹಂತದಲ್ಲಿದೆ. ಅಂದಹಾಗೆ ಇತ್ತೀಚಿನ ಸಂದರ್ಶನವೊಂದರಲ್ಲಿ ಪ್ರಣಿತಾ “ನಾನು ಪ್ರಚಾರವನ್ನು ಇಷ್ಟಪಡುವುದಿಲ್ಲ” ಎಂದು ಹೇಳಿದ್ದಾರೆ. ನಾವು ಮಾಡುವ ಸಮಾಜ ಸೇವೆ ಗೌಪ್ಯವಾಗಿಡಬೇಕು ಎಂದು ಬಯಸುವ ಪ್ರಣಿತಾ ಪೋಷಕರು ವೈದ್ಯರಾಗಿದ್ದು, ಅವರಿಂದ ಈ ಸಹಾಯ ಮಾಡುವ ಪ್ರವೃತ್ತಿಯನ್ನು ಕಲಿತಿರುವುದಾಗಿ ಹೇಳಿದರು. ಪ್ರಣಿತಾ ಇಲ್ಲಿಯವರೆಗೆ ಎರಡು ಶಾಲೆಗಳನ್ನು ದತ್ತು ಪಡೆದಿದ್ದು, ಸುಮಾರು 8 ಲಕ್ಷ ಹಣವನ್ನು ಸಂಗ್ರಹಿಸಿದ್ದಾರೆ.

Advertisement

Advertisement

ಟಾಲಿವುಡ್’ಗೆ ಹೋಲಿಸಿದರೆ ಪ್ರಣಿತಾಗೆ ತಮಿಳು ಮತ್ತು ಕನ್ನಡದಲ್ಲಿ ಹೆಚ್ಚಿನ ಅವಕಾಶಗಳು ದೊರೆತಿರುವುದರಿಂದ ‘ಅತ್ತಾರಿಂಟಿಕಿ ದಾರೆದಿ’ ಚಿತ್ರದ ನಂತರ ತೆಲುಗಿನಲ್ಲಿ ಹೆಚ್ಚು ನಟಿಸಲು ಸಾಧ್ಯವಿಲ್ಲ ಎಂದು ಪ್ರಣಿತಾ ಹೇಳಿದ್ದಾರೆ. ಪವನ್ ಕಲ್ಯಾಣ್ ಬಗ್ಗೆ ಮಾತನಾಡಿದ ಅವರು, ಪವನ್ ಅವರ ಹಾಸ್ಯಪ್ರಜ್ಞೆಯನ್ನು ಇಷ್ಟಪಡುತ್ತೇನೆ. ಅವರ ಎನ್ಟಿಆರ್ ಸಂಭಾಷಣೆ ನನ್ನನ್ನು ಬೆರಗುಗೊಳಿಸಿದೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು.

Advertisement
Share this on...