ಪತ್ನಿ ಮಾಡಿದ ಆ ತಪ್ಪಿಗೆ ನೋವಿನಿಂದಲೇ ಸಿನಿಮಾದಿಂದ ದೂರವಾದ್ರು ಈ ನಟ !

in ಮನರಂಜನೆ 21 views

ಜೀವನದಲ್ಲಿ ಮದುವೆ ಎಂಬುದು ಕೂಡಾ ಒಂದು ಪ್ರಮುಖ ಘಟ್ಟ. ಹುಡುಗನಾಗಲೀ, ಹುಡುಗಿಯಾಗಲೀ ತನ್ನ ಜೀವನ ಸಂಗಾತಿ ಬಗ್ಗೆ ನೂರಾರು ಕನಸು ಕಾಣುತ್ತಾರೆ. ಅದರಂತೆ ಅವರಿಗೆ ಪ್ರೀತಿಸುವ, ಕಾಳಜಿ ತೋರುವ ಸಂಗಾತಿ ದೊರೆತರೆ ಆ ಸಂಬಂಧ ಕೊನೆಯವರೆಗೂ ಗಟ್ಟಿಯಾಗಿರುತ್ತದೆ. ಇಲ್ಲವಾದಲ್ಲಿ ಕಂಡ ಕನಸು ನುಚ್ಚುನೂರಾಗುತ್ತದೆ. ಯಾಕಾದರೂ ಮದುವೆಯಾದೆನೋ, ಮದುವೆ ಮುಂಚಿನ ಜೀವನವೇ ಬಹಳ ಚೆನ್ನಾಗಿತ್ತು ಎಂದು ಆ ಸಮಯದಲ್ಲಿ ವ್ಯಥೆ ಪಡುವವರೂ ಇದ್ದಾರೆ.

Advertisement

 

Advertisement

Advertisement

ಸಾಮಾನ್ಯ ಜನರ ಜೀವನದಲ್ಲಿ ಮಾತ್ರವಲ್ಲ, ಬಹಳಷ್ಟು ಸೆಲಬ್ರಿಟಿಗಳ ಜೀವನದಲ್ಲಿ ಕೂಡಾ ಈ ಕಹಿ ಘಟನೆ ಸಂಭವಿಸಿದೆ. ವಿಶ್ವಸುಂದರಿ ಐಶ್ವರ್ಯ ರೈ ಜೊತೆ ‘ಜೀನ್ಸ್’ ಚಿತ್ರದಲ್ಲಿ ಫ್ಲೈಟ್ ಮೇಲೆ ಹಾಡಿ ಕುಣಿದ ನಟ ಪ್ರಶಾಂತ್ ನಿಮಗೆ ನೆನಪಿರಬಹುದು. ಪ್ರಶಾಂತ್ ತಮಿಳು ಚಿತ್ರದ ನಟ, ಇವರ ತಂದೆ ತ್ಯಾಗರಾಜನ್​ ಶಿವಾನಂದಂ ಸಿಬಿಐ ಶಿವ, ಮರಣ ಮೃದಂಗ, ಪೊಲೀಸ್ ಲಾಕಪ್​, ಸಂಘರ್ಷ, ರವಿವರ್ಮ, ವಿಶ್ವ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಪ್ರಶಾಂತ್ ಸಿನಿಮಾ ಜೀವನ ಕೂಡಾ ಉತ್ತುಂಗದಲ್ಲಿತ್ತು. ಆದರೆ ಅವರ ಜೀವನದಲ್ಲಿ ನಡೆದ ಕಹಿ ಘಟನೆಯೊಂದರಿಂದ ಪ್ರಶಾಂತ್ ಚಿತ್ರರಂಗದಿಂದ ದೂರ ಉಳಿಯುವಂತಾಯ್ತು.

Advertisement

 

ಗೃಹಲಕ್ಷ್ಮಿ ಎಂಬುವವರನ್ನು ಪ್ರಶಾಂತ್ 2005 ರಲ್ಲಿ ಮದುವೆಯಾದರು. ಮರುವರ್ಷವೇ ಈ ದಂಪತಿಗೆ ಮಗ ಕೂಡಾ ಜನಿಸಿದ. ಆದರೆ ಕೆಲವೇ ದಿನಗಳಲ್ಲಿ ಈ ದಂಪತಿ ಜೀವನದಲ್ಲಿ ಬಿರುಗಾಳಿ ಎದ್ದಿತು. ಗೃಹಲಕ್ಷ್ಮಿ, ಪ್ರಶಾಂತ್ ಮೇಲೆ ವರದಕ್ಷಿಣೆ ಕೇಸ್ ದಾಖಲಿಸಿದರು. ಆದರೆ ತಾನು ಮಾಡದ ತಪ್ಪಿಗೆ ಪ್ರಶಾಂತ್ ಪರಿತಪಿಸುವಂತಾಯ್ತು. ಗೃಹಲಕ್ಷ್ಮಿಗೆ 1998 ರಲ್ಲೇ ಮೊದಲ ಮದುವೆ ಆಗಿದ್ದು ಈ ವಿಚಾರವನ್ನು ಆಕೆ ಮುಚ್ಚಿಟ್ಟಿರುವುದು ಪ್ರಶಾಂತ್​​ಗೆ ತಿಳಿದುಬಂದಿದೆ. ಅಲ್ಲದೆ ಪ್ರಶಾಂತ್ ಅವರೊಂದಿಗೆ ಮದುವೆಯಾದ ನಂತರ ಕೂಡಾ ಪುರುಷರ ವಿಚಾರದಲ್ಲಿ ಗೃಹಲಕ್ಷ್ಮಿ ಅವರ ವರ್ತನೆ ಸರಿ ಇಲ್ಲ ಎಂಬುದು ಪ್ರಶಾಂತ್​ಗೆ ತಿಳಿದುಬಂದಿದೆ.

 

ಕೌಟುಂಬಿಕ ನ್ಯಾಯಾಲದಯಲ್ಲಿ ಎಲ್ಲಾ ಸಾಕ್ಷಿಗಳೊಂದಿಗೆ ಪ್ರಶಾಂತ್​​ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದಾರೆ. ಕೊನೆಗೂ ಈ ಮದುವೆಯಿಂದ ಅವರಿಗೆ ಬಿಡುಗಡೆ ದೊರೆತಿದೆ. ಈ ನೋವಿನಿಂದಲೇ ಪ್ರಶಾಂತ್ ಸಿನಿಮಾದಿಂದ ದೂರವಾದರು. ಹೀರೋ ಆಗಿ ಚಿತ್ರರಂಗದಲ್ಲಿ ಉತ್ತುಂಗದಲ್ಲಿದ್ದ ಪ್ರಶಾಂತ್, ಮಾಡದ ತಪ್ಪಿಗೆ ಸಿನಿಮಾ ಕರಿಯರ್ ಹಾಳುಮಾಡಿಕೊಂಡರು. ಕೆಲವು ವರ್ಷಗಳ ನಂತರ ಮತ್ತೆ ಚಿತ್ರರಂಗಕ್ಕೆ ಬಂದ ಅವರು ಅಪರೂಪಕ್ಕೆ ಎನ್ನುವಂತೆ ಕೆಲವೊಂದು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

Advertisement
Share this on...