ಕರುನಾಡ ಈ ಯುವ ವಿಜ್ಞಾನಿಯ ಸಾಧನೆ ಇಡೀ ದೇಶಕ್ಕೆ ಸ್ಪೂರ್ತಿಧಾಯಕ !

in ಕನ್ನಡ ಮಾಹಿತಿ 98 views

ನಮ್ಮ ಭಾರತ ದೇಶದಲ್ಲಿ ಹೊಸತನ ಹಾಗೂ ಹೊಸ ಆವಿಷ್ಕಾರಗಳಿಗೆ ಕೊರತೆ ಎಂಬುದು ಇಲ್ಲವೇ ಇಲ್ಲ. ಇನ್ನೂ ಕೂಡ ಅದೆಷ್ಟೋ ಮಂದಿ ಪ್ರತಿಭಾವಂತರುಗಳು ಇದ್ದು, ಅವರಿಗೆ ಒಳ್ಳೆಯ ವೇದಿಕೆ ದೊರಕಿ,  ಪ್ರತಿಭೆಯ ಅನಾವರಣ ಆಗಬೇಕಾಗಿದೆ.‌ ಇನ್ನು ನಮ್ಮ ದೇಶದಲ್ಲಿ ವಿಶ್ವದರ್ಜೆಯ ಜ್ಞಾನವನ್ನು ಪಡೆಯುವ ಅವಕಾಶಗಳು ಇದೆ ಎಂಬುದು ವಾಸ್ತವ. ಇದಕ್ಕೆ ಮುಖ್ಯ ಉದಾಹರಣೆ ಸ್ವತಃ ದೇಶದ  ಪ್ರಧಾನಿಯಾದಂತಹ ನರೇಂದ್ರ ಮೋದಿಯವರು ಹೆಸರಿಸಿರುವ ನಮ್ಮ ಕರುನಾಡ ಮಂಡ್ಯದ ಯುವ ವಿಜ್ಞಾನಿ ಪ್ರತಾಪ್ ಅವರು. ಇ-ತ್ಯಾಜ್ಯವನ್ನು ಬಳಸಿ ಡ್ರೋನ್ ತಯಾರಿಸುವ ಈ ಯುವ ವಿಜ್ಞಾನಿ ಈಗಾಗಲೇ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ.ಈ ಯುವ ವಿಜ್ಞಾನಿಯ ಹೆಸರು ಪ್ರತಾಪ್. ಪ್ರತಾಪ್ ಅವರು  14 ವರ್ಷದವರಾಗಿದ್ದಾಗಲೇ ಡ್ರೋನ್‌ಗಳೊಂದಿಗೆ ಟಿಂಕರ್ ಮಾಡಲು ಪ್ರಾರಂಭಿಸುತ್ತಾರೆ. ನಂತರ 16 ನೇ ವಯಸ್ಸಿಗೆ, ಅವರು ಮೊದಲ ಬಾರಿಗೆ ತಮ್ಮ ಮೊದಲ ಡ್ರೋನ್ ಅನ್ನು ಇ-ವೇಸ್ಟ್ ನಿಂದಲೇ ಸ್ವತಃ ನಿರ್ಮಿಸುತ್ತಾರೆ. ಅದು ಹಾರುವ ಮತ್ತು ಚಿತ್ರಗಳನ್ನು ಸೆರೆ ಹಿಡಿಯುವ ಸಾಮರ್ಥ್ಯ ಹೊಂದಿತ್ತು.

Advertisement

 

Advertisement

Advertisement

ಇಲ್ಲಿಯವರೆಗೂ ಪ್ರತಾಪ್ ಅವರು ಒಟ್ಟು 600 ಡ್ರೋನ್ ಗಳನ್ನು ನಿರ್ಮಿಸಿದ್ದು, ಈಗಾಗಲೇ ಟೆಲಿಗ್ರಾಫಿ ಇನ್ ಬಾರ್ಡರ್ ಸೆಕ್ಯುರಿಟಿ, ಟ್ರಾಫಿಕ್ ಮ್ಯಾನೇಜ್‌ಮೆಂಟ್‌ಗಾಗಿ ಡ್ರೋನ್ಸ್, ಮಾನವರಹಿತ ವೈಮಾನಿಕ ವಾಹನಗಳು ಅಥವಾ ರಕ್ಷಣಾ ಕಾರ್ಯಾಚರಣೆಗಾಗಿ ಯುಎವಿಗಳು ಮತ್ತು ಸ್ವಯಂ-ಪೈಲಟ್ ಡ್ರೋನ್‌ಗಳು ಸೇರಿದಂತೆ ಆರು ಯೋಜನೆಗಳನ್ನು ಪೂರ್ಣಗೊಳಿಸಿದ್ದಾರೆ. ಈಗಾಗಲೇ ಯುವ ವಿಜ್ಞಾನಿ ಪ್ರತಾಪ್ ಅವರನ್ನು ಬರೋಬ್ಬರಿ 87 ದೇಶಗಳು  ತಮ್ಮ ಸಂಶೋಧನೆಗಳ ಬಗ್ಗೆ ತಿಳಿಸಲು ಆಹ್ವಾನವನ್ನು ನೀಡಿವೆ. ಇನ್ನು ಜರ್ಮನಿಯ ಹ್ಯಾನೋವರ್‌ನಲ್ಲಿ ನಡೆದ ಇಂಟರ್ನ್ಯಾಷನಲ್ ಡ್ರೋನ್ ಎಕ್ಸ್‌ಪೋ 2018 ನಲ್ಲಿ ಅವರಿಗೆ “ಆಲ್ಬರ್ಟ್  ಗೋಲ್ಡ್ ಮೆಡೆಲ್ ಐನ್ ಸ್ಟೈನ್ ”  ನೀಡಿ ಸನ್ಮಾನಿಸಲಾಯಿತು.

Advertisement

 

2017 ರಲ್ಲಿ ಟೋಕಿಯೊದಲ್ಲಿ ನಡೆದ ಅಂತರರಾಷ್ಟ್ರೀಯ ರೊಬೊಟಿಕ್ಸ್ ಪ್ರದರ್ಶನದಲ್ಲಿ ಅವರಿಗೆ ಚಿನ್ನ ಮತ್ತು ಬೆಳ್ಳಿ ಪದಕ ಮತ್ತು $ 10,000 ನೀಡಿ ಸತ್ಕರಿಸಿತು. ತೀವ್ರ ಪರಿಸ್ಥಿತಿಯಲ್ಲಿ ಅಥವಾ ಸನ್ನಿವೇಶದಲ್ಲಿ ಡ್ರೋನ್ ತಂತ್ರಜ್ಞಾನದ ಅನ್ವಯದ ಬಗ್ಗೆ ಮಾತನಾಡಲು ಐಐಟಿ ಬಾಂಬೆ ಮತ್ತು ಐಐಎಸ್ಸಿಯಲ್ಲಿ ಉಪನ್ಯಾಸಗಳನ್ನು ನೀಡುವಂತೆ ಕೇಳಿಕೊಳ್ಳಲಾಗಿದೆ.

ಭಾರತದ ಪ್ರಧಾನಿ  ನರೇಂದ್ರ ಮೋದಿ ಅವರು ನೇಮಕ ಮಾಡಿರುವ ಡಿಆರ್‌ಡಿಒ ವಿಜ್ಞಾನಿಯಾದ ಈ ಯುವ ವಿಜ್ಞಾನಿಗೆ ಫ್ರಾನ್ಸ್ ಸರ್ಕಾರವೂ ತಮ್ಮ ಸಂಸ್ಥೆಗೆ ಸೇರಲು ಆಹ್ವಾನಿಸಿತ್ತು. ಅಲ್ಲದೇ ಅವರಿಗೆ  ಮಾಸಿಕ 16 ಲಕ್ಷ ರೂ, 5 ಬಿಎಚ್‌ಕೆ ಮನೆ ಕೂಡಾ ನೀಡುವುದಾಗಿ ಹೇಳಿದ್ದರು. ಆದರೆ ದೇಶಕ್ಕೆ ಏನಾದರು ಮಾಡಬೇಕೆಂಬ ಆಸೆ ಇಟ್ಟಿರುವ  ಪ್ರತಾಪ್ ಅವರು ಈ ಬಿಗ್ ಆಫರ್ ಅನ್ನು ನಿರಾಕರಿಸಿದ್ದಾರೆ. ಇದೀಗ ಪ್ರತಾಪ್ ಅವರು  ಪ್ರಸ್ತುತ ನಿರ್ಣಾಯಕ ರಾಷ್ಟ್ರೀಯ ಯೋಜನೆಗಳಲ್ಲಿ ಡ್ರೋನ್ ಅನ್ವಯಿಕೆಗಾಗಿ ಭಾರತದ ಡಿಆರ್‌ಡಿಒ  ಯೊಂದಿಗೆ ಕೆಲಸ ಮಾಡುತ್ತಿದ್ದಾರೆ. ಈ ಯುವ ವಿಜ್ಞಾನಿ ನಮ್ಮ ದೇಶದ ಸ್ಪೂರ್ತಿ ಎಂದರೆ ತಪ್ಪಾಗಲಾರದು.

Advertisement
Share this on...