ಮದ್ದೂರಿನ ತಮ್ಮ ಜಮೀನಿನಲ್ಲಿ ಭೂಮಿ ಉಳುತ್ತಿರುವ ನಿರ್ದೇಶಕ ಪ್ರೇಮ್ !

in ಮನರಂಜನೆ/ಸಿನಿಮಾ 455 views

ಕೊರೊನಾದಿಂದ ಎಷ್ಟೋ ಸಾ’ವು ನೋ’ವುಗಳಾಗಿದ್ದರೆ , ಜನರ ಜೀವನವನ್ನು ಸಾಕಷ್ಟು ಬದಲಿಸಿದೆ. ಲಾಕ್​​​​​ ಡೌನ್​​​​​​​ನಿಂದ ಎಷ್ಟೋ ಜನರು ಡಿ’ಪ್ರೆ’ಷನ್​​​​ಗೆ ಒಳಗಾಗಿದ್ದರು. ಕೊರೊನಾ ಪ್ರತಿದಿನ ಹೆಚ್ಚುತ್ತಿದ್ದರೂ ಜನರು ಮಾತ್ರ ಮೊದಲಿನಂತೆ ಜೀವನ ಆರಂಭಿಸಿದ್ದಾರೆ. ಇನ್ನೂ ಕೆಲವೆಡೆ ಜನರು ಕೆಲಸ ಮಾಡುತ್ತಿದ್ದ ಸ್ಥಳವನ್ನು ಬಿಟ್ಟು ಊರು ಸೇರಿಕೊಂಡಿದ್ದುಂಟು. ಸೆಲಬ್ರಿಟಿಗಳು ಕೂಡಾ ಇಂತಹ ಪರಿಸ್ಥಿತಿ ಎದುರಿಸಿದ್ದಾರೆ. ಸದಾ ಶೂಟಿಂಗ್ ಎಂದು ಬ್ಯುಸಿ ಇರುತ್ತಿದ್ದ ಸಿನಿಮಾ ನಟ-ನಟಿಯರು ಲಾಕ್​​ಡೌನ್​​​ನಲ್ಲಿ ಮನೆಯಲ್ಲೇ ಲಾಕ್ ಆಗಿದ್ದರು. ಈ ವೇಳೆ ಸಂಗೀತ ನಿರ್ದೇಶಕ ರವಿ ಬಸ್ರೂರು ತಮ್ಮ ಸ್ವಂತ ಊರಿಗೆ ಹೋಗಿ ತಂದೆಯ ಅಕ್ಕಸಾಲೆಯಲ್ಲಿ ಕೆಲಸ ಮಾಡಿದರೆ ನಿರ್ದೇಶಕ ರಿಷಭ್ ಶೆಟ್ಟಿ ಮಗನಿಗೆ ಎಣ್ಣೆ ಸ್ನಾನ ಮಾಡಿಸುವ ಮೂಲಕ ಎಂಜಾಯ್ ಮಾಡಿದ್ದರು. ರಿಯಲ್ ಸ್ಟಾರ್ ಉಪೇಂದ್ರ ತಮ್ಮ ಜಮೀನಿನಲ್ಲಿ ಸಾವಯವ ಕೃಷಿ ಆರಂಭಿಸಿದ್ದರು. ತಮ್ಮ ಮಗ ಆಯುಷ್​ಗೂ ವ್ಯವಸಾಯ ಹೇಳಿಕೊಟ್ಟಿದ್ದರು. ಇನ್ನು ಪ್ರಿಯಾಂಕ ಮನೆಯಲ್ಲಿ ಪುತ್ರಿಗೆ ಅಡುಗೆ ಮಾಡುವುದು, ಪಾತ್ರೆ ತೊಳೆಯುವುದನ್ನು ಹೇಳಿಕೊಟ್ಟಿದ್ದರು.

Advertisement

Advertisement

ಇದೀಗ ನಿರ್ದೇಶಕ ಪ್ರೇಮ್ ಕೂಡಾ ತಮ್ಮ ಜಮೀನಿನನ್ನು ಟ್ರ್ಯಾಕ್ಟರ್​​ನಲ್ಲಿ ಉಳುತ್ತಿದ್ದಾರೆ. ಇತ್ತೀಚೆಗಷ್ಟೇ ಪ್ರೇಮ್ ಪತ್ನಿ ರಕ್ಷಿತ, ಪುತ್ರ ಸೂರ್ಯ ಹಾಗೂ ಕುಟುಂಬದೊಂದಿಗೆ ಚುಂಚನಗಿರಿಗೆ ತೆರಳಿ ಶ್ರೀಕಾಲ ಭೈರವೇಶ್ವರ ಸ್ವಾಮಿಯ ದರ್ಶನ ಪಡೆದಿದ್ದರು. ಮಂಡ್ಯ ಜಿಲ್ಲೆಯ ಮದ್ದೂರಿನ ಬೆಸಗರಹಳ್ಳಿಯವರಾದ ಪ್ರೇಮ್ ಇದೀಗ ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದೇ ಭೂಮಿಯಲ್ಲಿ ಪ್ರೇಮ್ ತಾಯಿ ಭಾಗ್ಯಮ್ಮ ಕೂಡಾ ವ್ಯವಸಾಯ ಮಾಡುತ್ತಿದ್ದರಂತೆ.

Advertisement

ಪ್ರೇಮ್ ತನ್ನ ಬಾಮೈದ ರಾಣಾಗಾಗಿ ‘ಏಕ್ ಲವ್ ಯಾ’ ಚಿತ್ರ ಮಾಡುತ್ತಿದ್ದು ಸದ್ಯಕ್ಕೆ ಚಿತ್ರೀಕರಣ ಸ್ಥಗಿತಗೊಂಡಿದೆ. ಶೂಟಿಂಗ್ ಇಲ್ಲದ ಕಾರಣ ಬಿಡುವಿನಲ್ಲಿರುವ ಪ್ರೇಮ್ ಟ್ರ್ಯಾಕ್ಟರ್ ಏರಿ ಅಕ್ಕ ಪಕ್ಕದಲ್ಲಿ ತಮ್ಮ ಸ್ನೇಹಿತರನ್ನು ಕೂರಿಸಿಕೊಂಡು ಭೂಮಿ ಉಳುತ್ತಿದ್ದಾರೆ. ಅಷ್ಟೇ ಅಲ್ಲ, ಪ್ರೇಮ್ ರೈತರ ಬಗ್ಗೆ ಕಾಳಜಿಯ ಮಾತುಗಳನ್ನು ಆಡಿದ್ದಾರೆ. ಭೂ ಸುಧಾರಣೆ ಹಾಗೂ ಎಪಿಎಂಸಿ ತಿದ್ದುಪಡಿ ಕಾಯ್ದೆ ತಿದ್ದುಪಡಿ ಬಗ್ಗೆ ಮಾತನಾಡಿರುವ ಪ್ರೇಮ್, ರೈತರು ಮಳೆ, ಬಿಸಿಲು ಎಂದು ಲೆಕ್ಕಿಸದೆ ಭೂಮಿಯಲ್ಲಿ ದುಡಿಮೆ ಮಾಡುತ್ತಾರೆ. ಅಂತವರನ್ನು ಬೀದಿಯಲ್ಲಿ ನಿಲ್ಲಿಸಬೇಡಿ. ರೈತರ ಹೆಸರಿನಲ್ಲಿ ರಾಜಕೀಯ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.

Advertisement

ತಮ್ಮ ವಿಡಿಯೋಗೆ ‘ನೇಗಿಲ ಹಿಡಿದ ಹೊಲದೊಳು ಹಾಡುತ ಉಳುವಾ ಯೋಗಿಯ ನೋಡಲ್ಲಿ….’ಹಾಡನ್ನು ಸೇರಿಸಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಪ್​​​ಲೋಡ್ ಮಾಡಿರುವ ಪ್ರೇಮ್, ‘ಅಮ್ಮನ ತೋಟದಲ್ಲಿ ಜೋರು ಮಳೆ ಬಂದು ನಿಂತಾಗ ಜೋಳ ಬಿತ್ತನೆ ಮಾಡ್ತಿದ್ವಿ. ಆಗ ಸಿ. ಅಶ್ವತ್ಥ್​​​​ ಅವರು ಹಾಡಿದ ಈ ಹಾಡು ನೆನಪಾಯ್ತು’ ಎಂದು ಬರೆದುಕೊಂಡಿದ್ದಾರೆ.

ಓಂ ಶ್ರೀ ವಿದ್ಯಾ ಚೌಡೇಶ್ವರಿ ಜ್ಯೋತಿಷ್ಯ ಫಲ ದ ಪ್ರಸಿದ್ಧ ಜ್ಯೋತಿಷಿಗಳಾದ ಶ್ರೀ ಪಂಡಿತ್ ಬ್ರಹ್ಮನಂದ ಭಟ್ ರವರು ನಿಮ್ಮ ಸಮಸ್ಯೆ ಏನೇ ಇರಲಿ,  ಎಷ್ಟೇ ಕಠಿಣ ವಾಗಿರಲಿ , ನಿಮ್ಮ ಗುಪ್ತ ಸಮಸ್ಯೆಗಳು ಹಾಗೂ ನಿಮ್ಮ ಕಠಿಣ ಸಮಸ್ಯೆಗಳಿಗೆ ಪರಿಹಾರ ಒಂದೇ ನಿಮಿಷದಲ್ಲಿ ಒಂದು ಕರೆಯಲ್ಲಿ ಸೂಚಿಸುತ್ತಾರೆ. ಒಮ್ಮೆ ಕರೆ ಮಾಡಿ 7618717450 ಎಷ್ಟೋ ಜ್ಯೋತಿಷಿಗಳ ಬಳಿ ಹೋಗಿ ಜ್ಯೋತಿಷ್ಯ ಕೇಳಿ ನಿಮಗೆ ಪರಿಹಾರ ಸಿಗದೇ ಹೋಗಿದ್ದರೆ ಇಲ್ಲಿ ಪರಿಹಾರ ಖಂಡಿತ.

Advertisement