school reopens

ನವೆಂಬರ್‌ನಿಂದ ಪದವಿ ಕಾಲೇಜು ಆರಂಭಕ್ಕೆ ಸಿದ್ದತೆ !

in ಕನ್ನಡ ಮಾಹಿತಿ 566 views

ಮೈಸೂರು: ನವೆಂಬರ್‌ನಿಂದ ಆಫ್‌ ಲೈನ್ ನಲ್ಲಿ ಪದವಿ ತರಗತಿಗಳನ್ನು ಆರಂಭಿಸಲು ಸರಕಾರ ತಯಾರಿ ಮಾಡಿಕೊಳ್ಳುತ್ತಿದೆ.  ಈ ಬಗ್ಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ, ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು. ಮೈಸೂರಿನಲ್ಲಿ ಸೋಮವಾರದಂದು ಮೈಸೂರು ವಿವಿಯ 100ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಮಾತನಾಡಿದ ಅವರು, ಎಲ್ಲ ಕಾಲೇಜುಗಳಲ್ಲಿ ಆನ್‌ಲೈನ್‌ ತರಗತಿಗಳು ಉತ್ತಮವಾಗಿ ನಡೆಯುತ್ತಿವೆ. ಡಿಜಿಟಲ್‌ ಕಲಿಕೆ ಮತ್ತು ಬೋಧನೆ ನಿರೀಕ್ಷೆಗೂ ಮೀರಿ ಉತ್ತಮವಾಗಿ ನಡೆಯುತ್ತಿದೆ. ವಿದ್ಯಾರ್ಥಿಗಳು ಇದೇ ಅವಕಾಶವನ್ನು ಸದ್ಭಳಕೆ ಮಾಡಿಕೊಂಡು ತಯಾರಿ ಮಾಡಿಕೊಳ್ಳಬೇಕು  ಎಂದ ಅವರು, ಈಗಾಗಲೇ ಯುಜಿಸಿಯಿಂದ ಕಾಲೇಜು ಆರಂಭಕ್ಕೆ ಸೂಕ್ತ ಮಾಹಿತಿ, ಮಾರ್ಗಸೂಚಿ ಬಂದಿದೆ. ಅದರನ್ವಯ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಶೀಘ್ರವೇ ಈ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಕಾಲೇಜು ಆರಂಭದ ದಿನವನ್ನು ಪ್ರಕಟಿಸಲಾಗುವುದು ಎಂದರು.

Advertisement

Advertisement

ಕೋವಿಡ್‌ ಸಂಕಷ್ಟ ಕಾಲದಲ್ಲಿ ಶಾಲಾ- ಕಾಲೇಜುಗಳನ್ನು ಆರಂಭಿಸುವುದಕ್ಕೂ ಸಿನಿಮಾ ಟಾಕೀಸ್‌ಗಳನ್ನು ತೆರೆಯುವುದಕ್ಕೂ ಪರಸ್ಪರ ಹೋಲಿಸುವುದು ಸರಿಯಲ್ಲ. ಪದವಿ ಕಾಲೇಜುಗಳ ಬಗ್ಗೆ ಹೇಳುವುದಾದರೆ, ತರಗತಿ ನಡೆಯುವ ಕೋಣೆಗಳನ್ನು ನಿರಂತರವಾಗಿ ಸ್ಯಾನಿಟೈಸ್‌ ಮಾಡುತ್ತಿರಬೇಕು. ವಿದ್ಯಾರ್ಥಿಗಳ ಥರ್ಮಲ್‌ ಸ್ಕ್ರೀನಿಂಗ್‌ ಮಾಡುತ್ತಲೇ ಇರಬೇಕು. ಪ್ರತಿಕ್ಷಣವೂ ಎಚ್ಚರ ತಪ್ಪುವಂತಿಲ್ಲ. ವಿದ್ಯಾರ್ಥಿಗಳು ಮತ್ತು ಬೋಧಕರು, ಮತ್ತಿತರೆ ಸಿಬ್ಬಂದಿಯ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಸುಲಭವಲ್ಲ. ಮುಖ್ಯವಾಗಿ ವೈರಸ್‌ ನಮ್ಮ ನಡುವೆಯೇ ಜೀವಂತವಾಗಿ ಓಡಾಡಿಕೊಂಡಿದೆ. ಹೀಗಾಗಿ ಪರಿಸ್ಥಿತಿ ನೋಡಿಕೊಂಡು ಕಾಲೇಜು ಆರಂಭಿಸುತ್ತೇವೆ. ಈ ವಿಷಯದಲ್ಲಿ ಆತುರ ಸಲ್ಲ ಎಂದು ತಿಳಿಸಿದರು.

Advertisement

ನೂತನ ಶಿಕ್ಷಣ ನೀತಿ ಜಾರಿಗೆ ಎಲ್ಲ ಕ್ರಮ

Advertisement

ಕೇಂದ್ರ ಸರಕಾರ ರೂಪಿಸಿರುವ ನೂತನ ಶಿಕ್ಷಣ ನೀತಿ ಜಾರಿಗೆ ಸರಕಾರ ಎಲ್ಲ ತಯಾರಿ ಮಾಡಿಕೊಳ್ಳುತ್ತಿದೆ. ಈಗಾಗಲೇ ನೀತಿಯ ಅನುಷ್ಟಾನಕ್ಕಾಗಿ ರೂಪಿಸಲಾಗಿರುವ ಕಾರ್ಯಪಡೆ ಮೊದಲ ವರದಿಯನ್ನು ನೀಡಿದೆ. ಈ ವರ್ಷ ಎಲ್ಲ ಸಿದ್ಧತೆಗಳನ್ನು ಪರಿಣಾಮಕಾರಿಯಾಗಿ ಮಾಡಿಕೊಂಡು 2021ನೇ ಸಾಲಿನಿಂದ ನೂತನ ಶಿಕ್ಷಣ ನೀತಿಯನ್ನು ಹಂತಹಂತವಾಗಿ ಜಾರಿ ಮಾಡಲಾಗುವುದು. ಘಟಿಕೋತ್ಸವ ಕಾರ್ಯಕ್ರದಲ್ಲಿ ದಿಲ್ಲಿಯಿಂದಲೇ ಆಲ್‌ಲೈನ್‌ ಭಾಷಣ ಮಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೂಡ ಶಿಕ್ಷಣ ನೀತಿಯ ಮಹತ್ವದ ಬಗ್ಗೆ ಒತ್ತಿ ಹೇಳಿದರು. ಹೀಗಾಗಿ, ಕಳೆದ ಎಂಟು ತಿಂಗಳಿಂದಲೇ ರಾಜ್ಯ ಸರಕಾರ ಈ ನಿಟ್ಟಿನಲ್ಲಿ ತಯಾರಿ ಮಾಡಿಕೊಂಡಿದೆ ಎಂದು ತಿಳಿಸಿದರು.

ನೆರೆ ಪರಿಹಾರದಲ್ಲಿ ತಾರತಮ್ಯವಿಲ್ಲ

ಉತ್ತರ ಕರ್ನಾಟಕ ಭಾಗದಲ್ಲಿ ಮತ್ತೆ ನೆರೆ ಬಂದಿದ್ದು, ಪರಿಹಾರ ನೀಡಿಕೆಯಲ್ಲಿ ವಿಳಂಬ ಹಾಗೂ ತಾರತಮ್ಯ ಎಸಗಲಾಗತ್ತಿದೆ ಎಂಬ ಸುದ್ದಿಗಾರರ ಪ್ರಶ್ನೆಯನ್ನು ತಳ್ಳಿಹಾಕಿದ ಡಿಸಿಎಂ, ಪ್ರತಿಪಕ್ಷಗಳು ಸೂಕ್ತ ಮಾಹಿತಿ ಇಲ್ಲದೆ ಅನಗತ್ಯವಾಗಿ ಹುಯಿಲೆಬ್ಬಿಸುತ್ತಿವೆ. ರಾಷ್ಟ್ರೀಯ ವಿಪತ್ತಿನ ನಿರ್ವಹಣಾ ನಿಧಿಯ ಮಾರ್ಗಸೂಚಿಯಂತೆಯೇ ಸರಕಾರ ಪರಿಹಾರ ನೀಡುತ್ತಿದೆ. ಇನ್ನು ಕೇಂದ್ರ ಸಕಾಲಕ್ಕೆ ಎಲ್ಲ ನೆರವನ್ನೂ ನೀಡುತ್ತಿದೆ. ಯಾವುದೇ ವಿಳಂಬ ಆಗಿಲ್ಲ. ಹಿಂದಿನ ಯುಪಿಎ ಸರಕಾರಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಎನ್‌ಡಿಎ ಸರಕಾರವೂ ರಾಜ್ಯಕ್ಕೆ ನೆರವು ನೀಡಿದೆ ಎಂದು ಅವರು ಮಾಹಿತಿ ನೀಡಿದರು.

ನೆರೆಯಂಥ ಸೂಕ್ಷ್ಮ ವಿಚಾರದಲ್ಲಿ ರಾಜಕೀಯ ಮಾಡೋದು ಬೇಡ ಎಂದು ನಾನು ಪ್ರತಿಪಕ್ಷಗಳನ್ನು ಮತ್ತೊಮ್ಮೆ ವಿನಂತಿ ಮಾಡಿಕೊಳ್ಳುತ್ತೇನೆ. ಈ ವರ್ಷ ಎಲ್ಲ ರೀತಿಯಲ್ಲೂ ಸರಕಾರ ಗಂಭೀರ ಸವಾಲುಗಳನ್ನೇ ಎದುರಿಸಿದೆ. ನಮ್ಮ ಸರಕಾರ ಬಂದ ಕೂಡಲೇ ಪ್ರವಾಹ ಬಂತು. ಅದು ಹತೋಟಿಗೆ ಬಂದ ಕೂಡಲೇ ಕೋವಿಡ್‌ ಬಂತು. ಮತ್ತೆ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ನೆರೆ ಬಂತು. ಈಗ ಮತ್ತೆ ಉತ್ತರ ಕರ್ನಾಟಕದಲ್ಲಿ ನೆರೆ ಬಂದಿದೆ. ಬಿಕ್ಕಟ್ಟು ಬಂದಾಗ ಎಲ್ಲರೂ ಒಟ್ಟಾಗಿ ನೊಂದ ಜನರ ನೆರವಿಗೆ ಧಾವಿಸಬೇಕು. ರಾಜಕೀಯ ಮಾತನಾಡುವುದು ಅಕ್ಷಮ್ಯ ಎಂದು ಡಿಸಿಎಂ ಹೇಳಿದರು..!

Advertisement
Share this on...