ಪಾರ್ಕಿಂಗ್ ಪ್ಲೇಸ್’ನಲ್ಲಿ ಬಹಿರಂಗವಾಗಿ ಕಿಸ್ ಮಾಡಿದ ಸೆಲೆಬ್ರಿಟಿ ಜೋಡಿ

in ಮನರಂಜನೆ 93 views

ಬಾಲಿವುಡ್ನ ದೇಸಿ ಹುಡುಗಿ ಪ್ರಿಯಾಂಕಾ ಚೋಪ್ರಾ ಮದುವೆಯಾದಾಗಿನಿಂದಲೂ ಪತಿ ನಿಕ್ ಜೊನಸ್ ಅವರೊಂದಿಗೆ ವಿದೇಶದಲ್ಲಿ ಮೋಜು-ಮಸ್ತಿ ಮಾಡುತ್ತಲೇ ಇದ್ದಾರೆ. ಈ ಮಧ್ಯೆ ನಿಕ್ -ಪ್ರಿಯಾಂಕಾ ಅವರ ಫೋಟೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ಈ ಫೋಟೋದಲ್ಲಿ ನಿಕ್ ಮತ್ತು ಪ್ರಿಯಾಂಕಾ ಚೋಪ್ರಾ ಪರಸ್ಪರ ಚುಂಬಿಸುತ್ತಿರುವುದು ಕಂಡುಬರುತ್ತದೆ. ಅದು ಅವರ ಪರ್ಸನಲ್ ವಿಷಯ, ಇದರಲ್ಲೇನಿದೆ ವೈರಲ್ ವಿಷಯ ಎಂದು ನಿಮಗನಿಸಬಹುದು. ಆದರೆ ವಿಷಯವಿರುವುದೇ ಅಲ್ಲಿ. ನಿಕ್ -ಪ್ರಿಯಾಂಕಾ ಚುಂಬಿಸುತ್ತಿರುವುದೇನೋ ನಿಜ. ಆದರೆ ಎಲ್ಲಿ ಗೊತ್ತಾ?. ಅಷ್ಟಕ್ಕೂ ಈ ವೈರಲ್ ಫೋಟೋ ಎಲ್ಲಿಯದ್ದು ಮುಂತಾದ ಮಾಹಿತಿಗೆ ಮುಂದೆ ಓದಿ…
ಈ ಚಿತ್ರ ವೈರಲ್ ಆಗುತ್ತಿರುವುದು ಇನ್ಸ್ಟಾಗ್ರಾಂನಲ್ಲಿ. ಪ್ರಿಯಾಂಕಾ ಮತ್ತು ನಿಕ್ ಅವರ ಈ ಫೋಟೋವನ್ನು ಫೆಬ್ರವರಿ 21 ರಂದು ತೆಗೆದದ್ದು ಎಂದು ಹೇಳಲಾಗುತ್ತಿದೆ. ಶೀರ್ಷಿಕೆ ಪ್ರಕಾರ ಪ್ರಿಯಾಂಕಾ ಮತ್ತು ನಿಕ್ ಅವರ ಈ ಫೋಟೋ ಬೆವರ್ಲಿ ಹಿಲ್ಸ್ ಕಟ್ಟಡದ ಪಾರ್ಕಿಂಗ್ ಸ್ಥಳದ್ದು ಎಂದು ತಿಳಿದುಬಂದಿದ್ದು, ಪ್ರಿಯಾಂಕಾ ಮತ್ತು ನಿಕ್ ಈ ಕಟ್ಟಡದ ಪಾರ್ಕಿಂಗ್ ಸ್ಥಳದಲ್ಲಿ ಪರಸ್ಪರ ಚುಂಬಿಸುತ್ತಿರುವುದನ್ನು ಕಾಣಬಹುದು.

Advertisement

 

Advertisement

Advertisement

ಈ ವೈರಲ್ ಫೋಟೋದಲ್ಲಿ ಪ್ರಿಯಾಂಕಾ ಮತ್ತು ನಿಕ್ ಅವರು ಪಾರ್ಕಿಂಗ್ ಪ್ರದೇಶದಲ್ಲಿ ಪರಸ್ಪರ ಮಾತನಾಡುತ್ತಿದ್ದಂತೆ ಚುಂಬಿಸುತ್ತಿದ್ದು, ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಪ್ರತಿಯೊಬ್ಬರು ಬೆರಗಾಗುವಂತೆ ಮಾಡಿದೆ. ಈ ಸಂದರ್ಭ ಏಕೆ ಬಂತು, ಅದು, ಇದು ಏನೇ ಇರಲಿ, ಒಟ್ಟಿನಲ್ಲಿ ಪ್ರಿಯಾಂಕಾ ಚೋಪ್ರಾ ಆಗಾಗ್ಗೆ ಚರ್ಚೆಯಲ್ಲಿರುತ್ತಾರೆ. ಅವರ ಅಭಿಮಾನಿಗಳು ಸಹ ಅವರಿಬ್ಬರನ್ನೂ ಒಟ್ಟಿಗೆ ನೋಡಿದಾಗ ತುಂಬಾ ಸಂತೋಷಪಡುತ್ತಾರೆ, ನಿಮ್ಮಿಬ್ಬರ ಪ್ರೀತಿ ಹೀಗೆ ಇರಲಿ ಎಂದು ಆಶಿಸುತ್ತಾರೆ.
ಈ ಚುಂಬನದ ಫೋಟೋ ಮಾತ್ರವಲ್ಲ, ಮತ್ತೊಂದು ವಿಷಯಕ್ಕೂ ಪ್ರಿಯಾಂಕಾ ಈಗ ಸುದ್ದಿಯಲ್ಲಿದ್ದಾರೆ. ಅಮೆರಿಕದ ದಕ್ಷಿಣ ಪ್ಲೋರಿಡಾ ಮೂಲದವರಾದ ಬ್ರೆಂಡಮ್ ಚಸ್ಟರ್ ಎಂಬಾತ ತನ್ನ ಟ್ವಿಟ್ಟರ್ ಖಾತೆಯಲ್ಲಿ ಪ್ರಿಯಾಂಕಾ ಜೊತೆಗಿನ ಫೋಟೋವೊಂದನ್ನು ಹಾಕುವ ಮೂಲಕ ನಾನು ಪ್ರಿಯಾಂಕಾ ಅವರನ್ನು ಮದುವೆ ಆಗಿದ್ದೇನೆ ಎಂದು ಹೇಳಿದ್ದಾರೆ.

Advertisement

 

ವಕೀಲ ವೃತಿಯನ್ನು ಮಾಡುತ್ತಿರುವ ಬ್ರೆಂಡಮ್ ಚಸ್ಟರ್ 2014ರಲ್ಲಿ ಪ್ರಿಯಾಂಕಾ ಚೋಪ್ರಾರನ್ನು ಭೇಟಿಯಾಗಿದ್ದರು. ಭಾರತೀಯ ಸಂಪ್ರದಾಯದಂತೆ ಪ್ರಿಯಾಂಕಾ ಅವರಿಗೆ ಹೂವಿನ ಮಾಲೆ ಕೂಡ ಹಾಕಿದ್ದರಂತೆ. ಜೊತೆಗೊಂದು ಫೋಟೋ ಸಹ ಕ್ಲಿಕ್ಕಿಸಿಕೊಂಡಿದ್ದಾರೆ. ಇದೀಗ ಆರು ವರ್ಷದ ಹಿಂದಿನ ಫೋಟೋವನ್ನು ಬ್ರೆಂಡಮ್ ತನ್ನ ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡುವ ಮೂಲಕ 2014ರಲ್ಲೇ ನಾನು ಪ್ರಿಯಾಂಕಾ ಅವರನ್ನು ಮದುವೆಯಾಗಿದ್ದೆ ಎಂದು ಹೇಳಿದ್ದಾರೆ.
ಈ ಪೋಸ್ಟ್ ನೋಡಿ ಅನೇಕರು ಕಾಮೆಂಟ್ ಮಾಡಿದ್ದು, ಒಂದು ನಿಮಿಷದಲ್ಲಿ ನೀನು ಫೇಮಸ್ ಆಗಬೇಕೆಂದು ಹೀಗೆ ಮಾಡುತ್ತಿದ್ದೀಯಾ? ನಿಕ್ ಸ್ಥಿತಿ ಏನಾಗಬೇಡ ಎಂದು ಒಬ್ಬರು ಕಾಮೆಂಟ್ ಬರೆದರೆ, ಮತ್ತೊಬ್ಬರು ನಿಕ್ಗೆ ಇದು ಶಾಕಿಂಗ್ ವಿಚಾರ ಎಂದು ಬರೆದಿದ್ದಾರೆ.

Advertisement
Share this on...