ಸಾಮಾಜಿಕ ಜಾಲತಾಣದ ಇತಿಹಾಸದಲ್ಲೇ ದಾಖಲೆ ಬರೆದ ಪ್ರಿಯಾ ವಾರಿಯರ್ !

in ಮನರಂಜನೆ 40 views

ಅಂತರ್ಜಾಲದ ಜಗತ್ತಿನಲ್ಲೇ ತನ್ನ ಕಣ್ಸನ್ನೆ ಮೂಲಕ ದೊಡ್ಡ ಸಂಚಲನ ಸೃಷ್ಟಿ ಮಾಡಿದವರು ನಟಿ ಪ್ರಿಯಾ ವಾರಿಯರ್. ಇದೀಗ ಕನ್ನಡ ಸೇರಿದಂತೆ ಬಹು ಬಾಷೆಯಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಈ ನಯನ ಮನೋಹರ ಬೆಡಗಿಗೆ ಅದೃಷ್ಟದ ಮೇಲೆ ಅದೃಷ್ಟ ಖುಲಾಯಿಸುತ್ತಿದೆ. ಸದ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಪ್ರಿಯಾ ವಾರಿಯರ್ ಅವರು ರಾಣಿಯಾಗಿ ಮಿಂಚುತ್ತಿದ್ದಾರೆ.ಇದೀಗ ಸಾಮಾಜಿಕ ಜಾಲತಾಣದ ಇನ್ ಸ್ಟಾಗ್ರಾಮ್ ಖಾತೆಯ ಇತಿಹಾಸದಲ್ಲೇ ನಟಿ ಪ್ರಿಯಾ ವಾರಿಯರ್ ಅವರು ಭಾರತ ಪರ ಹೊಸ ದಾಖಲೆಯನ್ನು ಬರೆದಿದ್ದು, ಒಂದು ಪೋಸ್ಟ್ ಗೆ ಬರೋಬ್ಬರಿ 8 ಲಕ್ಷ ರೂ. ಸಂಭಾವನೆಯನ್ನು ಪಡೆಯುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ತಿಳಿಸಿವೆ.ಸಾಧಾರಣವಾಗಿ ಚಿತ್ರರಂಗದ ಸೆಲಬ್ರಿಟಿಗಳು ಸಾಮಾಜಿಕ ಜಾಲತಾಣದಲ್ಲಿ ವಿವಿಧ ಕಂಪೆನಿಗಳ ಪೋಸ್ಟ್ ಗಳನ್ನು ಪ್ರಚಾರ ಮಾಡುತ್ತಾರೆ. ಆದರೆ ಅವರು ಯಾರು ಇಷ್ಟೊಂದು ಮೊತ್ತವನ್ನು ಪಡೆಯುವುದಿಲ್ಲ ಎಂಬುದು ತಿಳಿದುಬಂದಿದೆ.

Advertisement

 

Advertisement

Advertisement

ಪ್ರಿಯಾ ವಾರಿಯರ್ ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲ 8 ಲಕ್ಷ ರೂ ಸಂಭಾವನೆ ಪಡೆಯುತ್ತಿರುವಾಗ, ಫೇಸ್ ಬುಕ್ ಮತ್ತು ಟ್ವಿಟ್ಟರ್ ನಿಂದ ಎಷ್ಟು ಸಂಭಾವನೆ ಪಡೆಯಬಹುದು ಎಂದು ಅಭಿಮಾನಿಗಳು ಲೆಕ್ಕಾಚಾರ ಹಾಕುತ್ತಿದ್ದಾರೆ.ಪ್ರಿಯಾ ವಾರಿಯರ್ ಜನಪ್ರಿಯತೆ ಎಷ್ಟಿದೆ ಅಂದರೆ ಇನ್ ಸ್ಟಾಗ್ರಾಮ್ ನಲ್ಲಿ ಫೇಸ್ ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ ಬರ್ಗ್ ಅವರನ್ನೇ ಹಿಂದಿಕ್ಕಿದ್ದಾರೆ. 51 ಲಕ್ಷ ಮಂದಿ ಫಾಲೋವರ್ ಗಳನ್ನು ಪ್ರಿಯಾ ಹೊಂದಿದ್ದರೆ, 41 ಲಕ್ಷ ಮಂದಿ ಜುಕರ್ ಬರ್ಗ್ ಅವರನ್ನು ಫಾಲೋ ಮಾಡುತ್ತಿದ್ದಾರೆ.

Advertisement

Advertisement
Share this on...