ಪ್ರಿಯಾ ವಾರಿಯರ್ ಅವರನ್ನು ತನ್ನ ಮನೆಯಲ್ಲಿ ಬಂದಿಸಿದ್ದರಾ ಪೋಷಕರು !?

in ಮನರಂಜನೆ/ಸಿನಿಮಾ 314 views

ಈ ಸಾಮಾಜಿಕ ಜಾಲತಾಣದಿಂದ ಯಾರು,  ಹೇಗೆ, ಯಾವಾಗ ಫೇಮಸ್ ಆಗುತ್ತಾರೆ ಎಂಬುದು ಹೇಳುವುದಕ್ಕೆ ಆಗುವುದಿಲ್ಲ. ರಾತ್ರಿ ಕಳೆದು ಹಗಲು ಮೂಡುವಷ್ಟರಲ್ಲಿ ಸೆಲೆಬ್ರಿಟಿಗಳಾಗಿ ಲಕ್ಷಲಕ್ಷ ಫಾಲೋವರ್ಸ್ ಅನ್ನು ಪಡೆದು  ಸಾಮಾಜಿಕ ಜಾಲತಾಣದ ರಾಣಿಯಾಗಿ ಬಿಡುತ್ತಾರೆ. ಹೀಗೆ ಕೇವಲ ತನ್ನ ಕಣ್ಸನ್ನೆಯಿಂದ ಅಂತರ್ಜಾಲದಲ್ಲಿ ದೊಡ್ಡ ಸಂಚಲನವನ್ನು ಮಾಡಿದ್ದವರು ಪ್ರಿಯಾ ವಾರಿಯರ್ ಅವರು. ಸಿನಿಮಾ ರಂಗದಲ್ಲಿ ಏನಾದರು ಸಾಧನೆ ಮಾಡಬೇಕು, ದೊಡ್ಡ ಕಲಾವಿದೆಯಾಗಬೇಕು ಎಂದು ಅದೆಷ್ಟೋ ಜನ ವರ್ಷಾನುವರ್ಷದಿಂದ ಕಷ್ಟ ಪಡುತ್ತಲೇ ಇರುತ್ತಾರೆ. ಆದರೆ ಈ ಪ್ರಿಯಾ ಕೇವಲ ಮೂರ್ನಾಲ್ಕು ಸೆಕೆಂಡ್ ನಲ್ಲಿ ತನ್ನ ಕಣ್ಣಿನ ಚಮತ್ಕಾರದಿಂದ ದೊಡ್ಡ ನಟಿಯಾಗಿ ಬಿಟ್ಟಿದ್ದಾರೆ. ಜೊತೆಗೆ ಸಾಲುಸಾಲು ಸಿನಿಮಾ ಅವರ ಮುಂದಿದೆ. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಅವರು ಮಾಡುವ ಒಂದು ಪೋಸ್ಟ್ ಗೆ ಲಕ್ಷಲಕ್ಷ ಹಣ ಗಳಿಸುತ್ತಿದ್ದಾರೆ.ಇನ್ನು ಈ ಕಣ್ಸನ್ನೆ ಬೆಡಗಿಯ ವಿಡಿಯೋ ದೊಡ್ಡ ಮಟ್ಟದಲ್ಲಿ ವೈರಲ್ ಆಗುತ್ತಿದ್ದಂತೆ ನನ್ನ ಕುಟುಂಬದವರು ಅಕೆಯನ್ನು ಗೃಹಬಂಧನದಲ್ಲಿಟ್ಟಿದ್ದರಂತೆ ಹೀಗೆಂದು ಸ್ವತಃ ಪ್ರಿಯಾ ವಾರಿಯರ್ ಅವರೇ ಹೇಳಿಕೊಂಡಿದ್ದಾರೆ.

Advertisement

Advertisement

ಒಮ್ಮೆ ಮಾಧ್ಯಮದ ಸಂದರ್ಶನದಲ್ಲಿ ಮಾತನಾಡಿದ ಪ್ರಿಯಾ ವಾರಿಯರ್, ತಾವು ನಟಿಸಿದ್ದ ‘ಒರು ಅಡಾರ್ ಲವ್’ ಎಂಬ ಚಿತ್ರದ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದು, ಇದು ಶಾಲಾ ಜೀವನದ ಕತೆ ಎಂದು ತಿಳಿಸಿದ್ದರು. ಇದರ ಜೊತೆಗೆ ತಮ್ಮ ಕುಟುಂಬದ ಬಗ್ಗೆ ಮಾತನಾಡಿದ್ದ ಅವರು, ತನ್ನ ಕಣ್ಸನ್ನೆ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಪ್ರಿಯಾ ಹಾಗೂ ಅವರ ಕುಟುಂಬದವರು ಎಲ್ಲರೂ ಒಟ್ಟಿಗೆ ಸೇರಿ ಅಭಿಮಾನಿಗಳನ್ನು ನಿಭಾಯಿಸುವುದು ಬಹಳ ಕಷ್ಟವಾಗುತ್ತಿತ್ತಂತೆ. ಏಕೆಂದರೆ ಇದು ನನಗೆ ಹಾಗೂ ನನ್ನ ಕುಟುಂಬಕ್ಕೆ ತುಂಬಾ ಹೊಸದು. ಯಾಕೆಂದರೆ ಆ ಸಮಯದಲ್ಲಿ ಕುಟುಂಬದವರು ಆಕೆಗೆ ಮೊಬೈಲ್ ನೀಡುತ್ತಿರಲಿಲ್ಲ. ಕೆಲವು ದಿನಗಳವರೆಗೆ ಪ್ರಿಯಾ ಅವರನ್ನು ಮನೆಯಲ್ಲಿ ಬಂಧಿ ಮಾಡಿದ್ದರಂತೆ.

Advertisement

Advertisement

ಇದರ ಜೊತೆಗೆ ಪ್ರಿಯಾ ಅವರ ಪೋಷಕರು, ಆಕೆಯನ್ನು ಹೊರಗೆ ಹೋಗಲು ಬಿಡುತ್ತಿರಲಿಲ್ಲವಂತೆ. ಇನ್ನು ಸಾಕಷ್ಟು ಮಾಧ್ಯಮದವರು ಇವರಿಗ್ಯಾರಿಗೂ ಮಾಹಿತಿ ನೀಡದೆ ಮನೆ ಮುಂದೆ ಬರುತ್ತಿದ್ದರಂತೆ. ಈ ಸಮಯದಲ್ಲಿ ಬೇರೆ ದಾರಿಯಿಲ್ಲದೆ ಪ್ರಿಯಾ, ಕಾಲೇಜು ಮುಗಿಸಿ ಬರುತ್ತಿದ್ದಂತೆಯೇ ಯೂನಿಫಾರಂನಲ್ಲೇ ಮಾಧ್ಯಮದವರಿಗೆ ಸಂದರ್ಶನ ನೀಡುತ್ತಿದ್ದರು. ಕೆಲ ಅಭಿಮಾನಿಗಳು ಕೂಡ ಪ್ರಿಯಾ ಅವರ ಮನೆಗೆ ಬಂದು ಇದು ಪ್ರಿಯಾ ವಾರಿಯರ್ ಮನೆನಾ? ಮತ್ತು ನಾವು ಅವರನ್ನು ನೋಡಬಹುದಾ? ಎಂದು ಕೇಳುತ್ತಿದ್ದರಂತೆ. ಎಲ್ಲರನ್ನು ನಿಭಾಯಿಸಲು ಆಕೆಯ ತಂದೆಯಿಂದ ಸಾಧ್ಯವಾಗದೆ ಅವರು ಮನೆಯಲ್ಲಿ ಇಲ್ಲ. ಹಾಸ್ಟಲ್‍ನಲ್ಲಿ ಇದ್ದಾಳೆ ಎಂದು ನೆಪ ಹೇಳಿ ಅಭಿಮಾನಿಗಳನ್ನು ವಾಪಸ್ ಕಳುಹಿಸುತ್ತಿದ್ದರಂತೆ.

 


ಇನ್ನು ಒರು ಅಡಾರ್ ಲವ್ ಚಿತ್ರ ಹೈಸ್ಕೂಲ್ ರೊಮ್ಯಾಂಟಿಕ್ ಸಿನಿಮಾ ಮಲಯಾಳಂ ಹಾಗೂ ತೆಲುಗಿನಲ್ಲಿ ಬಿಡುಗಡೆಯಾಗಿ ದೊಡ್ಡ ಸಕ್ಸಸ್ ಕಂಡಿತ್ತು. ಇದರ ಜೊತೆ ಕಿರಿಕ್ ಲವ್ ಸ್ಟೋರಿ ಎಂಬ ಹೆಸರಿನಲ್ಲಿ ಕನ್ನಡದಲ್ಲೂ ಕೂಡ ಬಿಡುಗಡೆಯಾಗಿತ್ತು. ಒಟ್ಟಾರೆ ಅಂತರ್ಜಾಲದಿಂದ ಜಗತ್ತಿಗೆ ಪರಿಚಯವಾದ ಪ್ರಿಯಾ ಇದೀಗ ದಕ್ಷಿಣ ಭಾರತದ ಬೇಡಿಕೆ ನಟಿಯಾಗಿರುವುದಂತು ಸತ್ಯ!

Advertisement
Share this on...