ಪ್ರಿಯಾಮಣಿ ಜನ್ಮ ದಿನದಂದೇ ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಔಟ್ !

in ಸಿನಿಮಾ 252 views

ಪ್ರತಿಭಾನ್ವಿತ ನಟಿ ಪ್ರಿಯಾಮಣಿ ಇಂದು ತಮ್ಮ 36 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಮದುವೆಯಾದ ನಂತರವೂ ಸಿನಿ ಕ್ಷೇತ್ರದಲ್ಲಿ ಬ್ಯೂಸಿಯಾಗಿರುವ ಪ್ರಿಯಾಮಣಿ ಸದ್ಯ ಶ್ರೀಕಾಂತ್ ಅಡ್ಡಲ ನಿರ್ದೇಶನದ, ವಿಕ್ಟರಿ ವೆಂಕಟೇಶ್ ಅವರ ಮುಂಬರುವ ಚಿತ್ರ ‘ನಾರಪ್ಪ’ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರವು ಧನುಷ್ ಅಭಿನಯದ, ವೆಟ್ರಿಮರನ್ ನಿರ್ದೇಶನದ ತಮಿಳಿನ ಸೂಪರ್ ಹಿಟ್ ಚಿತ್ರ ‘ಅಸುರನ್’ ಚಿತ್ರದ ರಿಮೇಕ್. ಪ್ರಿಯಾಮಣಿ ಅವರ ಜನ್ಮದಿನದಂದು ‘ನಾರಪ್ಪ’ ತಂಡವು ಪ್ರಿಯಾಮಣಿಯ ಫಸ್ಟ್ ಲುಕ್ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದು, ಅವರಿಗೆ ಶುಭ ಹಾರೈಸಿದೆ. ಪೋಸ್ಟರ್’ನಲ್ಲಿ ಪ್ರಿಯಾಮಣಿ ನಸು ನಗುವಿನೊಂದಿಗೆ ಕಾಣಿಸಿಕೊಂಡಿದ್ದು, ಬಂಡಿಯ ಮೇಲೆ ಕುಳಿತಿದ್ದಾಳೆ. ತನ್ನ ಕುಟುಂಬವನ್ನು ನೋಡಿಕೊಳ್ಳುವ ಹಳ್ಳಿ ಮಹಿಳೆಯ ಪಾತ್ರವನ್ನು ನಿರ್ವಹಿಸುತ್ತಿರುವುದರಿಂದ ಅವರ ಉಡುಗೆ ಮತ್ತು ಮೇಕ್ಅಪ್ ಎಲ್ಲಾ ಟ್ರಡಿಶನಲ್ ಆಗಿದೆ.

Advertisement

 

Advertisement

Advertisement

ಸುರೇಶ್ ಬಾಬು ಮತ್ತು ಕಲೈಪುಲಿ ಎಸ್ ಥಾನು ನಿರ್ಮಿಸಿರುವ ‘ನಾರಪ್ಪ’, ಚಿತ್ರದ ಮೂಲಕ್ಕೆ, ಸತ್ಯಾಸತ್ಯತೆಗೆ ಪ್ರಾಮುಖ್ಯತೆ ನೀಡುತ್ತಿದೆ ಎಂದು ಪೋಸ್ಟರ್ ನೋಡಿದರೆ ಗೊತ್ತಾಗುತ್ತದೆ. ರಾಣಾ, ಸಾಯಿ ಪಲ್ಲವಿ ನಟನೆಯ ‘ವಿರಾಟ ಪರ್ವಂ’ ಚಿತ್ರದಲ್ಲಿಯೂ ಕನ್ನಡದ ಬೆಡಗಿ ಪ್ರಿಯಾಮಣಿ ನಟಿಸುತ್ತಿದ್ದು, ಚಿತ್ರದಲ್ಲಿ ಪ್ರಿಯಾಮಣಿ ಪಾತ್ರದ ಬಗ್ಗೆ ಬಹಳಷ್ಟು ಜನರಿಗೆ ಕೂತುಹಲವಿದೆ.  ಇತ್ತೀಚಿನ ಸಂದರ್ಶನವೊಂದರಲ್ಲಿ, ಪ್ರಿಯಾಮಣಿ ಅವರಿಗೆ ‘ವಿರಾಟ ಪರ್ವಂ’ ಚಿತ್ರದಲ್ಲಿನ ತಮ್ಮ ಪಾತ್ರದ ಬಗ್ಗೆ ಕೇಳಿದಾಗ, ಈ ಚಿತ್ರದಲ್ಲಿ ನಾನು ನಕ್ಸಲೈಟ್ ಪಾತ್ರವನ್ನು ನಿರ್ವಹಿಸುತ್ತಿರುವುದಾಗಿ ರಿವೀಲ್ ಮಾಡಿದ್ದಾರೆ. ಅಷ್ಟೇ ಅಲ್ಲ, ಚಿತ್ರದಲ್ಲಿ ತನ್ನ ಭಾಗವನ್ನು ಪೂರ್ಣಗೊಳಿಸಿಲ್ಲ. ಲಾಕ್ ಡೌನ್ ಕಾರಣದಿಂದಾಗಿ ತಯಾರಕರು ಚಿತ್ರೀಕರಣದ ಮರು-ವೇಳಾಪಟ್ಟಿಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.

Advertisement

 


‘ವಿರಾಟ ಪರ್ವಂ’ನಲ್ಲಿ ತುರ್ತುಪರಿಸ್ಥಿತಿ ಹಿನ್ನೆಲೆಯ ಕಥೆಯನ್ನು ಇಟ್ಟುಕೊಂಡು ಚಿತ್ರ ನಿರ್ಮಿಸಲಾಗುತ್ತಿದ್ದು, ಚಿತ್ರ ರಾಜಕೀಯ ವಸ್ತುವನ್ನು ಹೊಂದಿದೆ. ‘ನೀದಿ ನಾದಿ ಓಕೆ ಕಥಾ’ ಚಿತ್ರವನ್ನು ನಿರ್ದೇಶಿಸಿದ್ದ ನಿರ್ದೇಶಕ ವೇಣು ಉಡುಗಲ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಅಷ್ಟೇ ಅಲ್ಲ, ಹಿಂದಿಯಲ್ಲಿ ಅಜಯ್ ದೇವಗನ್ ಜೊತೆಗೆ ಮೈದಾನ್ ಸಿನಿಮಾಗಳಲ್ಲೂ ಅಭಿನಯಿಸುತ್ತಿದ್ದಾರೆ ಪ್ರಿಯಾಮಣಿ.

Advertisement
Share this on...