ಮುಂದಿನ ವರ್ಷಕ್ಕೆ ಪೋಸ್ಟ್ ಪೋನ್ ಆಯ್ತು ಕನ್ನಡತಿಯ ಬಾಲಿವುಡ್ ಚಿತ್ರ !

in ಮನರಂಜನೆ/ಸಿನಿಮಾ 41 views

ಪ್ರತಿಭಾನ್ವಿತ ನಟಿ ಪ್ರಿಯಾಮಣಿ ನಟನೆಯ ಇತ್ತೀಚಿನ ಬಾಲಿವುಡ್ ಚಿತ್ರ ‘ಮೈದಾನ್’ ಒಂದು ಕ್ರೀಡಾ ಆಧಾರಿತ ಸಿನಿಮಾವಾಗಿದ್ದು, ಅಜಯ್ ದೇವ್ಗನ್ ಇದರಲ್ಲಿ ಮುಖ್ಯ ಪಾತ್ರದಲ್ಲಿದ್ದಾರೆ. ಈ ಚಿತ್ರವು ನವೆಂಬರ್ 27, 2020 ರಂದು ಬಿಡುಗಡೆಯಾಗಬೇಕಿತ್ತು. ಆದರೆ ಈಗ ಇದು ಸಿಕ್ಕಾಪಟ್ಟೆ ಮುಂದಕ್ಕೆ ಪೋಸ್ಟ್ ಪೋನ್ ಆಗಿದೆ. ಅಂದರೆ ಚಿತ್ರವನ್ನು 2021, ಆಗಸ್ಟ್ 13 ರಂದು ಬಿಡುಗಡೆ ಮಾಡುವುದಾಗಿ ತಯಾರಕರು ಘೋಷಿಸಿದ್ದಾರೆ. ಅಂದರೆ ಕೊರೊನಾ ಏಕಾಏಕಿ ಬಂದ ಕಾರಣ ಚಲನಚಿತ್ರವನ್ನು ಒಂದು ವರ್ಷ ಮುಂದೂಡಲಾಗಿದೆ. ಭಾರತೀಯ ಫುಟ್ಬಾಲ್ನ ಸುವರ್ಣ ವರ್ಷಗಳನ್ನು ಆಧರಿಸಿದ ಈ ಚಿತ್ರವನ್ನು ಬಾದೈ ಹೋ ಚಿತ್ರದ ಖ್ಯಾತಿ ಅಮಿತ್ ರವೀಂದರ್ನಾಥ್ ಶರ್ಮಾ ನಿರ್ದೇಶಿಸುತ್ತಿದ್ದಾರೆ.1950 ರಿಂದ 1963 ರವರೆಗೂ ಭಾರತೀಯ ಫುಟ್ಬಾಲ್ ತಂಡದ ಕೋಚ್ ಮತ್ತು ಮ್ಯಾನೇಜರ್ ಆಗಿ ಸೇವೆ ಸಲ್ಲಿಸಿದ್ದ ಸೈಯದ್ ಅಬ್ದುಲ್ ರಹೀಂ ಅವರ ಪಾತ್ರದಲ್ಲಿ ಅಜಯ್ ದೇವ್ಗನ್ ಕಾಣಿಸಿಕೊಳ್ಳಲಿದ್ದಾರೆ.

Advertisement

Advertisement

ಮದುವೆಯಾದ ನಂತರವೂ ಸಿನಿ ಕ್ಷೇತ್ರದಲ್ಲಿ ಬ್ಯೂಸಿಯಾಗಿರುವ ಪ್ರಿಯಾಮಣಿ ಸದ್ಯ ಶ್ರೀಕಾಂತ್ ಅಡ್ಡಲ ನಿರ್ದೇಶನದ, ವಿಕ್ಟರಿ ವೆಂಕಟೇಶ್ ಅವರ ಮುಂಬರುವ ಚಿತ್ರ ‘ನಾರಪ್ಪ’ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರವು ಧನುಷ್ ಅಭಿನಯದ, ವೆಟ್ರಿಮರನ್ ನಿರ್ದೇಶನದ ತಮಿಳಿನ ಸೂಪರ್ ಹಿಟ್ ಚಿತ್ರ ‘ಅಸುರನ್’ ಚಿತ್ರದ ರಿಮೇಕ್.
ಪ್ರಿಯಾಮಣಿ ಅವರ ಜನ್ಮದಿನದಂದು ‘ನರಪ್ಪ’ ತಂಡವು ಪ್ರಿಯಾಮಣಿಯ ಫಸ್ಟ್ ಲುಕ್ ಪೋಸ್ಟರ್ ಅನ್ನು ಬಿಡುಗಡೆ ಮಾಡಿತ್ತು. ಸುರೇಶ್ ಬಾಬು ಮತ್ತು ಕಲೈಪುಲಿ ಎಸ್ ಥಾನು ನಿರ್ಮಿಸಿರುವ ‘ನಾರಪ್ಪ’, ಚಿತ್ರದ ಮೂಲಕ್ಕೆ, ಸತ್ಯಾಸತ್ಯತೆಗೆ ಪ್ರಾಮುಖ್ಯತೆ ನೀಡುತ್ತಿದೆ ಎಂದು ಪೋಸ್ಟರ್ ನೋಡಿದರೆ ಗೊತ್ತಾಗುತ್ತದೆ. ರಾಣಾ, ಸಾಯಿ ಪಲ್ಲವಿ ನಟನೆಯ ‘ವಿರಾಟ ಪರ್ವಂ’ ಚಿತ್ರದಲ್ಲಿಯೂ ಕನ್ನಡದ ಬೆಡಗಿ ಪ್ರಿಯಾಮಣಿ ನಟಿಸುತ್ತಿದ್ದು, ಚಿತ್ರದಲ್ಲಿ ಪ್ರಿಯಾಮಣಿ ಪಾತ್ರದ ಬಗ್ಗೆ ಬಹಳಷ್ಟು ಜನರಿಗೆ ಕೂತುಹಲವಿದೆ.

Advertisement


ಇತ್ತೀಚಿನ ಸಂದರ್ಶನವೊಂದರಲ್ಲಿ, ಪ್ರಿಯಾಮಣಿ ಅವರಿಗೆ ‘ವಿರಾಟ ಪರ್ವಂ’ ಚಿತ್ರದಲ್ಲಿನ ತಮ್ಮ ಪಾತ್ರದ ಬಗ್ಗೆ ಕೇಳಿದಾಗ, ಈ ಚಿತ್ರದಲ್ಲಿ ನಾನು ನಕ್ಸಲೈಟ್ ಪಾತ್ರವನ್ನು ನಿರ್ವಹಿಸುತ್ತಿರುವುದಾಗಿ ರಿವೀಲ್ ಮಾಡಿದ್ದಾರೆ. ಅಷ್ಟೇ ಅಲ್ಲ, ಚಿತ್ರದಲ್ಲಿ ತನ್ನ ಭಾಗವನ್ನು ಪೂರ್ಣಗೊಳಿಸಿಲ್ಲ. ಲಾಕ್ ಡೌನ್ ಕಾರಣದಿಂದಾಗಿ ತಯಾರಕರು ಚಿತ್ರೀಕರಣದ ಮರು-ವೇಳಾಪಟ್ಟಿಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ. ‘ವಿರಾಟ ಪರ್ವಂ’ನಲ್ಲಿ ತುರ್ತುಪರಿಸ್ಥಿತಿ ಹಿನ್ನೆಲೆಯ ಕಥೆಯನ್ನು ಇಟ್ಟುಕೊಂಡು ಚಿತ್ರ ನಿರ್ಮಿಸಲಾಗುತ್ತಿದ್ದು, ಚಿತ್ರ ರಾಜಕೀಯ ವಸ್ತುವನ್ನು ಹೊಂದಿದೆ. ‘ನೀದಿ ನಾದಿ ಓಕೆ ಕಥಾ’ ಚಿತ್ರವನ್ನು ನಿರ್ದೇಶಿಸಿದ್ದ ನಿರ್ದೇಶಕ ವೇಣು ಉಡುಗಲ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ.

Advertisement

Advertisement
Share this on...