priyanka

ಸಾಲು ಸಾಲು ಚಿತ್ರಗಳಲ್ಲಿ ಪ್ರಿಯಾಂಕ ಬ್ಯುಸಿ…ದೇವಕಿ ನಂತರ ಮತ್ತೊಂದು ಥ್ರಿಲ್ಲರ್ ಚಿತ್ರದಲ್ಲಿ ಆ್ಯಕ್ಟಿಂಗ್​

in ಮನರಂಜನೆ/ಸಿನಿಮಾ 301 views

ನಾಯಕಿಯರಿಗೆ ಮದುವೆಯಾದ ನಂತರ ಚಿತ್ರಗಳಲ್ಲಿ ಮೊದಲಿನಂತೆ ಅವಕಾಶ ದೊರೆಯುವುದು ಕಡಿಮೆ ಎಂದೇ ಹೇಳಬಹುದು. ಆದರೆ ಕೆಲವೇ ಕೆಲವು ನಾಯಕಿಯರು ಮಾತ್ರ ಮದುವೆ ನಂತರವೂ ಮೊದಲಿನಷ್ಟೇ ಗ್ಲ್ಯಾಮರ್ ಉಳಿಸಿಕೊಂಡು ಮೊದಲಿನಂತೆ ಬೇಡಿಕೆ ಉಳಿಸಿಕೊಂಡಿರುತ್ತಾರೆ. ಅಂತವರಲ್ಲಿ ಪ್ರಿಯಾಂಕ ಉಪೇಂದ್ರ ಕೂಡಾ ಒಬ್ಬರು. ಕೋಟಿಗೊಬ್ಬ ಚಿತ್ರದಲ್ಲಿ ಡಾ. ವಿಷ್ಣುವರ್ಧನ್ ಜೊತೆ ನಾಯಕಿಯಾಗಿ ಅಭಿನಯಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದ ಪ್ರಿಯಾಂಕ ನಂತರ ಹೆಚ್​ಟುಒ ಚಿತ್ರದಲ್ಲಿ ಉಪೇಂದ್ರ ಜೊತೆ ನಟಿಸಿದರು. ನಂತರ ಉಪೇಂದ್ರ ಅವರನ್ನು ಪ್ರೀತಿಸಿ ಕರ್ನಾಟಕದ ಸೊಸೆ ಆದ ಪ್ರಿಯಾಂಕ ಮದುವೆಯಾದ ನಂತರ ಕೂಡಾ ಅನೇಕ ಸಿನಿಮಾಗಳಲ್ಲಿ ನಟಿಸಿದರು. ಎರಡು ಮಕ್ಕಳ ತಾಯಿ ಆದ ನಂತರ ಕೂಡಾ ಪ್ರಿಯಾಂಕ ಮೊದಲಿನಂತೆ ಬೇಡಿಕೆ ಉಳಿಸಿಕೊಂಡಿದ್ದಾರೆ. ಈಗಂತೂ ಅವರು ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಲಾಕ್​ಡೌನ್ ಸಮಯದಲ್ಲಿ ವರ್ಕೌಟ್ ಮಾಡಿ ಇನ್ನಷ್ಟು ಫಿಟ್ ಹಾಗೂ ಸ್ಲಿಮ್ ಆಗಿರುವ ಪ್ರಿಯಾಂಕ ಇದೀಗ ಹೊಸ ಹೊಸ ಚಿತ್ರಗಳಿಗೆ ಸಹಿ ಹಾಕಿದ್ದಾರೆ. ಉಗ್ರಾವತಾರ ಚಿತ್ರದಲ್ಲಿ ಪ್ರಿಯಾಂಕ ಉಪೇಂದ್ರ ನಟಿಸುತ್ತಿದ್ದಾರೆ. ಸೆಕೆಂಡ್ ಹಾಫ್ ಚಿತ್ರದಲ್ಲಿ ಪೊಲೀಸ್ ಕಾನ್ಸ್​ಟೇಬಲ್ ಆಗಿ ನಟಿಸಿದ್ದ ಪ್ರಿಯಾಂಕ ಉಗ್ರಾವತಾರ ಚಿತ್ರದಲ್ಲಿ ಪೊಲೀಸ್ ಇನ್ಸ್​ಪೆಕ್ಟರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.

Advertisement

Advertisement

ಲೈಫ್ ಇಸ್ ಬ್ಯೂಟಿಫುಲ್ ಚಿತ್ರದಲ್ಲಿ ಪ್ರಿಯಾಂಕ , ದಿಯಾ ಖ್ಯಾತಿಯ ಪೃಥ್ವಿ ಅಂಬರ್ ಜೊತೆ ನಟಿಸುತ್ತಿದ್ದಾರೆ. ಆದರೆ ಚಿತ್ರದಲ್ಲಿ ಇಬ್ಬರ ಪಾತ್ರ ಏನು ಎಂಬುದು ತಿಳಿದುಬಂದಿಲ್ಲ. ಲೈಫ್ ಇಸ್ ಬ್ಯೂಟಿಫುಲ್ ಹಾಗೂ ಉಗ್ರಾವತಾರ ಚಿತ್ರಗಳ ಜೊತೆಗೆ ಇದೀಗ ಪ್ರಿಯಾಂಕ ಮತ್ತೊಂದು ಹೊಸ ಚಿತ್ರವನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಇದೊಂದು ಸಸ್ಪೆನ್ಸ್, ಥ್ರಿಲ್ಲರ್ ಚಿತ್ರವಾಗಿದ್ದು ಚಿತ್ರಕ್ಕೆ 1980 ಎಂದು ಹೆಸರಿಡಲಾಗಿದೆ ಎನ್ನಲಾಗಿದೆ. ಚಿತ್ರದ ಹೆಸರೇ ಸೂಚಿಸಿರುವಂತೆ ಇದು 1980 ಸಮಯದಲ್ಲಿ ನಡೆಯುವ ಕಥೆ ಎಂದು ಚಿತ್ರತಂಡ ಹೇಳಿದೆ. ಈ ಚಿತ್ರಕ್ಕೆ ವಿಜಯದಶಮಿಯಂದು ಮುಹೂರ್ತ ನೆರವೇರಿಸಿ ಚಿಕ್ಕಮಗಳೂರು, ಕೊಡಗು ಹಾಗೂ ಇನ್ನಿತರ ಕಡೆಗಳಲ್ಲಿ ಚಿತ್ರೀಕರಣ ಮಾಡಲಾಗುವುದು ಎನ್ನಲಾಗುತ್ತಿದೆ.

Advertisement

1980 ಚಿತ್ರವನ್ನು ರಾಜ್ ಕಿರಣ್ ಎಂಬುವವರು ನಿರ್ದೇಶಿಸುತ್ತಿದ್ದಾರೆ. ರಾಜ್​ಕಿರಣ್ ಇದಕ್ಕೂ ಮುನ್ನ ಮಿಸ್ಡ್​ ಕಾಲ್, ಸವಾರಿ -2 ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಇದೀಗ 1980 ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕನಾಗುತ್ತಿದ್ದಾರೆ. ಚಿತ್ರದಲ್ಲಿ ಅರವಿಂದ್ ರಾವ್, ಮುರಳಿ ಶರ್ಮ, ಶ್ರೀಧರ್ ಹಾಗೂ ಇನ್ನಿತರರು ನಟಿಸುತ್ತಿದ್ದಾರೆ. ಲಾಕ್​ಡೌನ್ ಸಮಯದಲ್ಲಿ ಮಕ್ಕಳಿಗೆ ಮನೆ ಕೆಲಸ ಹೇಳಿಕೊಡುತ್ತಾ ಸಮಯ ಕಳೆಯುತ್ತಿದ್ದ ಪ್ರಿಯಾಂಕ ಪಕ್ಕಾ ಗೃಹಿಣಿಯಾಗಿದ್ದರು. ಮನೆ, ಮಕ್ಕಳು, ಶೂಟಿಂಗ್ ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುತ್ತಿರುವ ಪ್ರಿಯಾಂಕ ಉಪೇಂದ್ರಗೆ ದಿನೇ ದಿನೆ ಅಭಿಮಾನಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ.

Advertisement

1980 ಸಿನಿಮಾ ಸಂಪೂರ್ಣ ರೆಟ್ರೋ ಶೈಲಿಯಲ್ಲಿ ಮೂಡಿ ಬರಲಿದೆಯಂತೆ. ಈ ಚಿತ್ರದಲ್ಲಿ ಪ್ರಿಯಾಂಕ ಹೇಗೆ ಕಾಣಿಸಲಿದ್ದಾರೆ..? ಚಿತ್ರ ಹೇಗಿರಲಿದೆ ಎಂದು ಈಗಾಗಲೇ ಅಭಿಮಾನಿಗಳಿಗೆ ಕುತೂಹಲ ಆರಂಭವಾಗಿದೆ.

Advertisement
Share this on...