ಪ್ರಿಯಾಂಕಾ ಧರಿಸಿದ ಈ ಹಾಟ್ ಡ್ರೆಸ್’ಗಳು ಭಾರೀ ಸುದ್ದಿಯಾಗಿದ್ದು ಯಾಕೆ ಗೊತ್ತಾ?

in ಮನರಂಜನೆ 218 views

ಕಂದು ಬಣ್ಣದ ಹುಡುಗಿ ಇಂದು ವಿಶ್ವದ ಫ್ಯಾಷನ್ ಐಕಾನ್ ಆಗುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಹೌದು, ಇಂದು ನಾವು ಮಾತನಾಡುತ್ತಿರುವುದು ಫ್ಯಾಶನ್ ಜಗತ್ತಿನಲ್ಲಿ ದೊಡ್ಡ ಹೆಸರು ಗಳಿಸಿರುವ ಪ್ರಿಯಾಂಕಾ ಚೋಪ್ರಾ ಬಗ್ಗೆ. ಆದರೆ ಪ್ರಿಯಾಂಕಾ ಅವರ ಕೆಲವು ಲುಕ್’ಗಳನ್ನು ಹಲವು ಬಾರಿ ಟ್ರೋಲ್ ಮಾಡಲಾಗಿದೆ. ಅಷ್ಟೇ ಅಲ್ಲ, ಅಂತರ್ಜಾಲದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ. ಪ್ರಿಯಾಂಕಾ ಹಾಟ್ ಲುಕ್ ಎಲ್ಲರ ಗಮನ ಸೆಳೆದಿದ್ದರೂ, ಕೆಲವು ಜನರು ಇದನ್ನು ವಿಚಿತ್ರ ಮತ್ತು ಕಳಪೆ ಫ್ಯಾಷನ್ ಎಂದು ಹೆಸರಿಸಿದ್ದಾರೆ. ಅಷ್ಟೇ ಏಕೆ, ಪ್ರಿಯಾಂಕಾ ಫ್ಯಾಷನ್ ಹಾಲಿವುಡ್ ಮತ್ತು ಬಾಲಿವುಡ್’ನ ಜನರನ್ನು ಪ್ರತಿ ಬಾರಿಯೂ ಅಚ್ಚರಿಗೊಳಿಸಿದೆ.

Advertisement

 

Advertisement


ಪ್ರಿಯಾಂಕಾ ಒಮ್ಮೆ ಗೋಲ್ಡನ್-ಗ್ಲೋಬ್ ಅವಾರ್ಡ್ ಕಾರ್ಯಕ್ರಮದಲ್ಲಿ ಗುಲಾಬಿ ಬಣ್ಣದ ನಿಲುವಂಗಿಯಲ್ಲಿ ಅಸಾಧಾರಣವಾಗಿ ಕಾಣಿಸುತ್ತಿದ್ದರು. ಈ ಕಾರ್ಯಕ್ರಮದ ನಂತರ, ಆಕೆಯನ್ನು ಮತ್ತೊಂದು ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು, ಆದರೆ ಅಲ್ಲಿ ಪ್ರಿಯಾಂಕಾ ಕಾಣಿಸಿಕೊಂಡ ರೀತಿ ನೋಡಿ ಟ್ರೋಲಿಗರ ಬಾಯಿಗೆ ಆಹಾರವಾಗಿದ್ದರು.
ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ನಮ್ಮ ದೇಸಿ ಹುಡುಗಿ ಪ್ರಿಯಾಂಕಾ ಮೆಟ್ ಗಾಲಾ 2019 ರಲ್ಲಿ ಕಾಣಿಸಿಕೊಂಡಾಗ ಆಕೆಯ ಮೇಕಪ್ ನೋಡಿ ಹಲವರು ಹಲವು ಮಾತುಗಳನ್ನು ಆಡಿದರು. ಸಾಕಷ್ಟು ನಿಂದನೆಗಳನ್ನು ಎದುರಿಸಬೇಕಾಯಿತು. ಈ ಸಮಾರಂಭದಲ್ಲಿ ಅವರ ಪತಿ ನಿಕ್ ಜೊನಸ್ ಸಹ ಜೊತೆಗಿದ್ದರು. ಆದರೆ ಪ್ರಿಯಾಂಕ ಲುಕ್ ನೋಡಿ ನೆಟ್ಟಿಗರು 2 ತಿಂಗಳ ಕಾಲ ಟ್ರೋಲ್ ಮಾಡಿದರು.

Advertisement

 

Advertisement


ಬಾಲಿವುಡ್ನ ದೇಸಿ ಹುಡುಗಿ ಪ್ರಿಯಾಂಕಾ ಚೋಪ್ರಾ ಇತ್ತೀಚೆಗೆ ಪತಿ ನಿಕ್ ಜೊನಸ್ ಅವರೊಂದಿಗೆ ಗ್ರ್ಯಾಮಿ ಅವಾರ್ಡ್ 2020 ರೆಡ್ ಕಾರ್ಪೆಟ್ ನಲ್ಲಿ ಕಾಣಿಸಿಕೊಂಡರು. ಪ್ರಿಯಾಂಕಾ ರೆಡ್ ಕಾರ್ಪೆಟ್ ಮೇಲೆ ಬೋಲ್ಡ್ ಲುಕ್’ನಲ್ಲಿ ಕಾಣಿಸಿಕೊಂಡರು. ಕಾರ್ಯಕ್ರಮದಲ್ಲಿ ಪ್ರಿಯಾಂಕಾ ಡೀಪ್ ನೆಕ್ಲೈನ್ ಇರುವ ಬಿಳಿ ನಿಲುವಂಗಿಯನ್ನು ಧರಿಸಿ, ತಮ್ಮಎದೆಯ ಭಾಗವನ್ನು ಪ್ರದರ್ಶನ ಮಾಡಿದ್ದರು. ಕೆಲವರು ಪ್ರಿಯಾಂಕ ಡ್ರೆಸ್ಸಿಂಗ್ ಪ್ರಜ್ಞೆಯನ್ನು ಟೀಕಿಸುತ್ತಿದರೆ, ಇನ್ನು ಕೆಲವರು ಪ್ರಿಯಾಂಕಾ ಭಾರತವನ್ನು ಪ್ರತಿನಿಧಿಸುವ ವಿವಾಹಿತ ಮಹಿಳೆ, ಸಾರ್ವಜನಿಕ ಪ್ರದರ್ಶನಗಳಲ್ಲಿ ಹೆಚ್ಚು ಜವಾಬ್ದಾರರಾಗಿರಬೇಕು ಎಂದು ಹೇಳಿದ್ದರು.

 


ಪ್ರಿಯಾಂಕಾ ಮೆಟ್ ಗಾಲಾ 2018 ಕಾರ್ಯಕ್ರಮದಲ್ಲಿ ಸುಂದರವಾದ ಉಡುಪನ್ನು ಧರಿಸಿದ್ದರು. ಆದರೂ ಈ ಉಡುಪು ಸಾಕಷ್ಟು ಚರ್ಚೆಗೊಳಾಯಿತು. ಡ್ರೆಸ್ ಜೊತೆಗೆ ಹ್ಯಾಂಡ್ ಮೇಯ್ಡ್ ಧರಿಸಿದ್ದ ಪ್ರಿಯಾಂಕಾ ಅವರ ಈ ದಿರಿಸನ್ನು ತಯಾರಿಸಲು ಸುಮಾರು 250 ಗಂಟೆಗಳು ಬೇಕಾಯಿತು ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ಪ್ರಿಯಾಂಕಾ ಸೀರೆಯ ಬ್ಲೌಸ್ ಹಲವು ಬಾರಿ ಟ್ರೋಲ್’ಗೆ ಗುರಿಯಾಗಿದೆ.

 


ಒಮ್ಮೆ ಪ್ರಿಯಾಂಕಾ ಕುಖಾರೆವಾ ಅವರ ಪಾರದರ್ಶಕ ಉಡುಗೆ ಧರಿಸಿದಾಗ ಆ ಉಡುಪಿನ ಬಗ್ಗೆಯೂ ಸಾಕಷ್ಟು ಚರ್ಚೆಯಾಯಿತು. ಕೆಲವರು ಮದುವೆಯ ನಂತರ ಪ್ರಿಯಾಂಕಾ ಡ್ರೆಸ್ಸಿಂಗ್ ಪ್ರಜ್ಞೆ ಹದಗೆಟ್ಟಿದೆ ಎಂದು ಕಮೆಂಟ್ ಮಾಡಿದ್ದರು. ಪ್ರಿಯಾಂಕಾ ಬಳಿ ಸಾಕಷ್ಟು ಉಡುಪುಗಳಿದ್ದು, ಅವರನ್ನು ಒಂದಲ್ಲಾ ಒಂದು ಕಾರಣಕ್ಕೆ ಟ್ರೋಲ್ ಮಾಡಲಾಗಿದೆ. ಆದರೆ ಪ್ರತಿ ಬಾರಿಯೂ ಪ್ರಿಯಾಂಕಾ ಯಾವುದನ್ನೂ ತಲೆಕೆಡಿಸಿಕೊಳ್ಳದೆ ಆತ್ಮವಿಶ್ವಾಸವನ್ನು ಹೊಂದಿರುತ್ತಾರೆ. ಹಾಗೆಯೇ ಎಲ್ಲಾ ಟ್ರೋಲ್’ಗಳನ್ನು ಎದುರಿಸುತ್ತಾರೆ.

Advertisement
Share this on...